RCB Vs CSK ಬಿಗ್ ವಾರ್ ಕಳೆದ ವರ್ಷದ ರಿಸಲ್ಟ್ ರಿಪೀಟ್?
ದಾಖಲೆ ಜೊತೆ ಪ್ಲೇ ಆಫ್ ಎಂಟ್ರಿ

ಇಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹೈವೋಟೇಜ್ ಮ್ಯಾಚ್ ನಡೆಯಲಿದೆ. ಸಿಎಸ್‌ಕೆ ಮತ್ತು ಆರ್‌ಸಿಬಿ ನಡುವೆ ಬಿಗ್ ಫೈಟ್ ನಡೆಯಲಿದೆ. ಸಿಎಸ್‌ಕೆ ಈಗಾಗಲೇ ಫ್ಲೇಆಫ್‌ನಿಂದ ಹೊರ ಬಿದ್ದಿದೆ,ಆದ್ರೂ ಆರ್‌ಸಿಬಿ ಸೋಲಿಸಿ ಒಂದಷ್ಟು ಶಕ್ತಿ ಇದೆ ಅನ್ನೋದನ್ನ ತೋರಿಸೋಕೆ ಹೊರಟಿದೆ. ಆರ್‌ಸಿಬಿ ತವರಿನ ಅಂಗಳದಲ್ಲೇ ಸಿಎಸ್‌ಕೆಯನ್ನ ಸೋಲಿಸಿ ಫ್ಲೇ ಆಫ್‌ಗೆ ಎಂಟ್ರಿ ಕೊಡೋಕೆ ರೆಡಿಯಾಗಿದೆ.
ಕಳೆದ ವರ್ಷದ ಫಲಿತಾಂಶ ರಿಪೀಟ್
2024ರ ಐಪಿಎಲ್‌ನ ಕೊನೆಯ ಲೀಗ್ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಕ್ರಿಡಾಂಗಣದಲ್ಲಿ ನಡೆದಿತ್ತು. ಸಿಎಸ್‌ಕೆ ಮತ್ತು ಆರ್ ಸಿಬಿ ಪ್ಲೇಆಫ್ ಪ್ರವೇಶ ಪಡೆಯಲು ಅದು ಮಾಡು ಇಲ್ಲವೆ ಮಡಿ ಪಂದ್ಯವಾಗಿತ್ತು. ಈ ಪಂದ್ಯದಲ್ಲಿ ಸಿಎಸ್‌ಕೆ ವಿರುದ್ಧ ರೋಚಕ ಗೆಲುವು ಸಾಧಿಸಿದ್ದ ಆರ್ ಸಿಬಿ ಪ್ಲೇಆಫ್ ಪ್ರವೇಶಿಸಿತ್ತು. ಪಂದ್ಯಾವಳಿಯಿಂದಲೇ ಹೊರಬೀಳುವ ಹಂತದಿಂದ ಸತತವಾಗಿ 6 ಪಂದ್ಯ ಗೆದ್ದು ಪ್ಲೇಆಫ್‌ಗೆ ತಲುಪಿದ್ದು ದೊಡ್ಡ ಸಾಧನೆಯಾಗಿತ್ತು. ಕಳೆದ ವರ್ಷದ ಆ ಸೋಲಿನ ಬಳಿಕ ಸಿಎಸ್‌ಕೆ ಹಣೆಬರಹವೇ ಬದಲಾದಂತಿದೆ. ಈ ಆವೃತ್ತಿಯಲ್ಲಿ ಸಿಎಸ್‌ಕೆ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾಗಿದ್ದು ಸದ್ಯ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಕಳೆದ ವರ್ಷ ಆರ್ ಸಿಬಿ ಇದ್ದ ಸ್ಥಾನದಲ್ಲಿ ಈ ವರ್ಷ ಸಿಎಸ್‌ಕೆ ಇದ್ದು ಫ್ಲೇ ಆಫ್ ಕನಸು ಭಗ್ನವಾಗಿದೆ.
ದಾಖಲೆ ಬರೆಯುತ್ತಾ ಆರ್‌ಸಿಬಿ
ಇಲ್ಲಿ ತನಕ ಆರ್‌ಸಿಬಿ ಸಿಎಸ್‌ಕೆ ವಿರುದ್ದ ಎರಡು ಪಂದ್ಯಗಳನ್ನ ಒಂದೇ ಸೀಸನ್‌ನಲ್ಲಿ ಗೆದ್ದಿಲ್ಲ. ಹೀಗಾಗಿ ಕಳೆದ 18 ವರ್ಷದ ದಾಖಲೆಯನ್ನ ಮುರಿಯೋಕೆ ಆರ್‌ಸಿಬಿಗೆ ಒಳ್ಳೆಯ ಚಾನ್ಸ್ ಇದೆ. ಆರ್‌ಸಿಬಿ ಈಗ ಮೊದಲ ಪಂದ್ಯದಲ್ಲಿ ಸಿಎಸ್‌ಕೆಯನ್ನ ಅದರ ತವರು ಅಂಗಳದಲ್ಲೇ ಮಣಿಸಿ ದಾಖಲೆ ಬರೆದಿದೆ. ಹೀಗಾಗಿ 3 ರಂದು ನಡೆಯುವ ಪಂದ್ಯ ಆರ್‌ಸಿಬಿ ಅಂಗಳದಲ್ಲಿ ನಡೆಯಲಿದ್ದು, ಈ ಪಂದ್ಯ ಗೆದ್ದು ಫ್ಲೇ ಆಫ್್ಗೆ ಎಂಟ್ರಿ ಕೊಡೋಕೆ ಸಖತ್ ಪ್ಲ್ಯಾನ್ ಮಾಡಿದೆ. ಅಲ್ಲದೇ ಸಿಎಸ್‌ಕೆ ಮತ್ತು ಆರ್‌ಸಿಬಿ ಮ್ಯಾಚ್ ಅಂದ್ರೆ ಫ್ಯಾನ್ಸ್‌ಗೆ ಹಬ್ಬ.. ಎರಡು ಟೀಂಗಳು ಕೂಡ ಅತೀ ಹೆಚ್ಚು ಫ್ಯಾನ್ಸ್ ಹೊಂದಿದ್ದು, ಫ್ಯಾನ್ಸ್‌ಗಳ ವಾರ್ ಸೋಷಿಯಲ್ ಮೀಡಿಯಾದಲ್ಲಿ ನಡೆಯುತ್ತಲೇ ಇರುತ್ತೆ.. ಹೀಗಾಗಿ ಈ ಮ್ಯಾಚ್ ಸಖಥ್ ಹೈವೋಟ್ಟೇಜ್ ಪಂದ್ಯವಾಗಿದ್ದು, ಎರಡು ಟೀಂಗಳು ಗೆಲುವಿಗಾಗಿ ಸೆಣಸಾಟ ನಡೆಸಲಿದೆ. ಆರ್‌ಸಿಬಿ ಸಿಎಸ್‌ಕೆ ವಿರುದ್ಧ ಗೆದ್ದರೇ ಕಪ್ ಗೆದ್ದಷ್ಟೇ ಫ್ಯಾನ್ ಖುಷಿ ಪಡ್ತಾರೆ. ಅಷ್ಟೇರ ಮಟ್ಟಿಗೆ ಈ ಎರಡು ಟೀಂಗಳು ಕ್ರೇಜ್ ಹುಟ್ಟುಹಾಕಿವೆ.. ಹೀಗಾಗಿ ಸಿಎಸ್‌ಕೆಯನ್ನ ಸೋಲಿಸಿ ಆರ್‌ಸಿಬಿ ಫ್ಲೇ ಆಫ್‌ಗೆ ಹೋಗುತ್ತಾ? ಅಥವಾ ಆರ್‌ಸಿಬಿಯನ್ನ ಸೋಲಿಸಿ ತನ್ನ ಫ್ಯಾನ್ಸ್‌ಗೆ ಸಿಎಸ್‌ಕೆ ಖುಷಿ ನೀಡುತ್ತಾ ಅನ್ನೋದನ್ನ ಕಾದು ನೋಡಬೇಕಿದೆ.