ಕಪ್ ಗೆದ್ದಿಲ್ಲ Vs ಬ್ಯಾನ್ ಆಗಿಲ್ಲ – RCB ಸೋಲಿಗೆ CSK ಸೆಲೆಬ್ರೇಷನ್
Karma, Dhobi, Chokli ಟ್ರೆಂಡ್
Once again ಈ ಸಲ ಕಪ್ ನಮ್ದಲ್ಲ. Bad luck ರಾಯಲ್ ಚಾಲೆಂಜರ್ಸ್ ಬೆಂಗಳೂರು ಟೀಂ. ಸತತ ಆರು ಪಂದ್ಯಗಳನ್ನ ಡು ಆರ್ ಡೈ ಮ್ಯಾಚ್ ಆಗಿಯೇ ಆಡ್ಕೊಂಡ್ ಬಂದ ಆರ್‌ಸಿಬಿ ನಿರ್ಣಾಯಕ ಪಂದ್ಯದಲ್ಲೇ ಮುಗ್ಗರಿಸಿದೆ. ರಾಜಸ್ಥಾನ ವಿರುದ್ಧದ ಎಲಿಮಿನೇಟರ್ ಫೈಟ್ನಲ್ಲಿ ಸೋತು ಟೂರ್ನಿಯಿಂದಲೇ ಹೊರ ಬಿದ್ದಿದೆ. ಈ ಸೋಲು ಬೆಂಗಳೂರು ಅಭಿಮಾನಿಗಳಿಗೆ ಹೊಸದೇನೂ ಅಲ್ಲ. 16 ವರ್ಷಗಳಿಂದ ಕಪ್ ಗೆಲ್ಲದಿದ್ರೂ ಪ್ರೀತಿ, ಅಭಿಮಾನದಿಂದ ಸಪೋರ್ಟ್ ಮಾಡ್ತಾನೇ ಬಂದಿದ್ದೇವೆ. ಇನ್ನೂ 60 ವರ್ಷ ಆದ್ರೂ ಅದೇ ಬೆಂಬಲ ಕೊಡ್ತೇವೆ. ಈ ಸಲ ಅಲ್ದಿದ್ರೆ ಮುಂದಿನ ಸಲ ಕಪ್ ನಮ್ದೇ ಅಂತಾ ಮನಸ್ಸನ್ನ ಗಟ್ಟಿ ಮಾಡ್ಕೊಳ್ತೇವೆ. ಆದ್ರೆ ಒಂದಷ್ಟು ಜನ ಇದ್ದಾರೆ. ತಾವು ಸಪೋರ್ಟ್ ಮಾಡೋ ತಂಡ ಸೋತ್ರೂ ಪರ್ವಾಗಿಲ್ಲ. ಬೆಂಗಳೂರು ತಂಡ ಮಾತ್ರ ಗೆಲ್ಲಬಾರದು ಅನ್ನೋವ್ರು. ಅಂತವ್ರೆಲ್ಲಾ ಈಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸೋಲನ್ನ ಸಂಭ್ರಮಿಸ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡ್ತಾ ವಿಕೃತ ಆನಂದ ಪಡ್ತಿದ್ದಾರೆ.
ಇದನ್ನೂ ಓದಿ: CSK ವಿರುದ್ಧ ಹೀರೋ! – RR ಎದುರು ಝೀರೋ! -RCB ಮಾಡಿದ ತಪ್ಪೇನು?
2024ರ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಉಳಿದಿರೋದು ಇನ್ನು ಎರಡೇ ಪಂದ್ಯ. ಎರಡು ತಿಂಗಳಿಂದ ಕ್ರಿಕೆಟ್ ಫ್ಯಾನ್ಸ್ಗೆ ಭರ್ಜರಿ ಮನರಂಜನೆ ನೀಡಿದ್ದ ಟೂರ್ನಿಗೆ ತೆರೆ ಬೀಳಲಿದೆ. ರಾಜಸ್ಥಾನ ವಿರುದ್ದದ ಪಂದ್ಯದಲ್ಲಿ ಸೋಲಿನ ಮೂಲಕ ಬೆಂಗಳೂರು ತಂಡ ಸೀಸನ್ 17ಗೆ ವಿದಾಯ ಹೇಳಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಟ್ರೋಫಿ ಗೆಲ್ಲುವ ಕನಸು ಮತ್ತೊಮ್ಮೆ ಭಗ್ನಗೊಂಡಿದೆ. ಸತತ ಆರು ಗೆಲುವಿನ ನಂತರದ ಒಂದು ಸೋಲು ಫಾಫ್ ಪಡೆಯನ್ನು ಪಂದ್ಯಾವಳಿಯಿಂದ ಹೊರಬೀಳುವಂತೆ ಮಾಡಿತು. ವಿಶ್ವದ ಅತಿದೊಡ್ಡ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸೋಲಿಸಿತು. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 172 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ರಾಜಸ್ಥಾನ್ ಆರು ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಸೋಲಿನ ಬೆನ್ನಲ್ಲೇ ಆರ್‌ಸಿಬಿ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗಿದೆ. ಆರ್ಸಿಬಿಯ ಸೋಲನ್ನ ತುಂಬಾ ಜನ ಎಂಜಾಯ್ ಮಾಡ್ತಿದ್ದಾರೆ. ಕುಣಿದು ಕುಪ್ಪಳಿಸಿದ್ದಾರೆ.
ರಾಜಸ್ಥಾನ್ ರಾಯಲ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೋಲಿನ ಫ್ಯಾನ್ ವಾರ್ ಶುರುವಾಗಿದೆ. ಆರ್‌ಸಿಬಿ ಸೋಲನ್ನು ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಗಳು ಹಬ್ಬದಂತೆ ಸಂಭ್ರಮಿಸುತ್ತಿದ್ದಾರೆ. ಅದ್ರಲ್ಲೂ ಕರ್ನಾಟಕದ ಕೆಲವ್ರು ಬೆಂಗಳೂರು ಸೋಲಿಗೆ ಖುಷಿ ಪಡ್ತಿದ್ದಾರೆ ಅನ್ನೋದೇ ಆಘಾತಕಾರಿ ವಿಷ್ಯ. ವಿರಾಟ್ ಕೊಹ್ಲಿ ಮತ್ತು ಆರ್‌ಸಿಬಿ ತಂಡವನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿರುವ ಯಲ್ಲೋ ಆರ್ಮಿ ಫ್ಯಾನ್ಸ್ಗೆ ನಮ್ಮವರು ಕೂಡ ಸರಿಯಾಗಿ ಕೌಂಟರ್ ಕೊಟ್ಟಿದ್ದಾರೆ. ಅದ್ರಲ್ಲೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವೇಗದ ಬೌಲರ್ ತುಷಾರ್ ದೇಶಪಾಂಡೆ ಬಹಿರಂಗವಾಗೇ ತಮ್ಮ ಸಂಭ್ರಮವನ್ನ ಹಂಚಿಕೊಂಡಿದ್ದಾರೆ. ಆರ್ಆರ್ ವಿರುದ್ಧ ಆರ್‌ಸಿಬಿ ಸೋಲಿನ ಬೆನ್ನಲ್ಲೇ ತುಷಾರ್ ದೇಶಪಾಂಡೆ, ಆರ್‌ಸಿಬಿ ತಂಡವನ್ನು ಅಣಕಿಸುವ ರೀತಿ ಇನ್ಸ್ಟಾಗ್ರಾಂನಲ್ಲಿ ಸ್ಟೋರಿ ಹಾಕಿದ್ದಾರೆ. ಅದು ಕೂಡ ಬೆಂಗಳೂರು ದಂಡು ಅಂತಾ ರೈಲ್ವೇ ಸ್ಟೇಷನ್ ಫೋಟೋ ಹಂಚಿಕೊಂಡಿದ್ದಾರೆ. ನಿಲ್ದಾಣದ ಬೋರ್ಡ್ನಲ್ಲಿ ಇಂಗ್ಲೀಷ್ನಲ್ಲಿ ಬರೆದಿರುವ ಬೆಂಗಳೂರು ಕಾಂಟ್ ಅಂದ್ರೆ ಬೆಂಗಳೂರಿಗೆ ಸಾಧ್ಯವಿಲ್ಲ ಅಂತಾ ಪೋಸ್ಟ್ ಹಾಕಿದ್ದಾರೆ. ಈ ಪೋಸ್ಟ್ ಸಿಕ್ಕಾಪಟ್ಟೆ ವೈರಲ್ ಆಗಿದೆ. ಬಿಡ್ತಾರಾ ಆರ್‌ಸಿಬಿ ಫ್ಯಾನ್ಸ್. ನಾವು ಕಪ್ ಗೆಲ್ದೇ ಇರ್ಬೋದು. ಬಟ್ 2 ವರ್ಷ ಬ್ಯಾನ್ ಆಗಿಲ್ಲ. ನಿಯತ್ತಿಂದ ಆಡ್ತಿದ್ದೇವೆ ಅಂತಾ ರಿಪ್ಲೈ ಕೊಟ್ಟಿದ್ದಾರೆ. ಇದಾದ ಕೆಲವೇ ನಿಮಿಷಗಳಲ್ಲೇ ತಮ್ಮ ಪೋಸ್ಟ್ನ ಡಿಲೀಟ್ ಮಾಡಿದ್ದಾರೆ.
ಇನ್ನು ಪ್ಲೇಆಫ್ ಕ್ವಾಲಿಫೈ ಮ್ಯಾಚ್ನಲ್ಲಿ ಸಿಎಸ್ಕೆಯನ್ನ ಮನೆಗೆ ಕಳಿಸಿದ್ದ ಆರ್‌ಸಿಬಿ ವಿರುದ್ಧ ನಾಲಗೆ ಹರಿಬಿಟ್ಟಿದ್ದ ಸಿಎಸ್ಕೆ ಮಾಜಿ ಆಟಗಾರ ಕೂಡ ಬೆಂಗಳೂರು ತಂಡದ ಸೋಲಿನಿಂದ ಖುಷಿ ಪಟ್ಟಿದ್ದಾರೆ. ಸಿಎಸ್ಕೆ ಅಭಿಮಾನಿಗಳ ಸೆಲೆಬ್ರೇಷನ್ ಮೋಡ್ ಅಂತೂ ನೆಕ್ಸ್ಟ್ ಲೆವೆಲ್ನಲ್ಲಿದೆ. ಸಿಎಸ್ಕೆ ವಿರುದ್ಧ ಗೆದ್ದಾಗ ಆರ್‌ಸಿಬಿ ಫ್ಯಾನ್ಸ್ ಖುಷಿ ಪಟ್ಟಿದ್ದಕ್ಕೆ ಈಗ ಕರ್ಮ ರಿಟರ್ನ್ಸ್ ಎಂದೆಲ್ಲಾ ಪೋಸ್ಟ್ ಹಾಕಿದ್ದಾರೆ.
ಇನ್ನು ಎಲಿಮಿನೇಟರ್ ಕದನದಲ್ಲಿ ಆರ್‌ಸಿಬಿ ಸೋಲುತ್ತಿದ್ದಂತೆ ಸಿಎಸ್ಕೆ ಫ್ಯಾನ್ಸ್ ಚೋಕರ್ಸ್ ಎಂದು ಕರೆಯುತ್ತಿದ್ದಾರೆ. ಒಂದೇ ಒಂದು ಟ್ರೋಫಿ ಗೆಲ್ಲೋಕೆ ಆಗಲಿಲ್ಲ. ನಾವು ಐದು ಟ್ರೋಫಿ ಗೆದ್ದಿದ್ದೇವೆ ಅಂತಾ ಟೀಸ್ ಮಾಡ್ತಿದ್ದಾರೆ. ಅಷ್ಟಕ್ಕೂ ಇವ್ರ ಈ ಸಿಟ್ಟಿಗೆ ಕಾರಣ ಸಿಎಸ್ಕೆ ಪ್ಲೇಆಫ್ಗೆ ಹೋಗೋದನ್ನ ಆರ್‌ಸಿಬಿ ತಡೆದಿತ್ತು ಅನ್ನೋದು. ಈ ಸೋಲನ್ನ ಅರಗಿಸಿಕೊಳ್ಳಲು ಆಗದ ಯೆಲ್ಲೊ ಆರ್ಮಿ, ಕರ್ಮ ರಿಟರ್ನ್ಸ್, ನಾವೀಗ ನೆಮ್ದಿಯಾಗಿ ನಿದ್ದೆ ಮಾಡುತ್ತೇವೆ ಅಂತಾ ಟ್ರೋಲ್ ಮಾಡುತ್ತಿದ್ದಾರೆ. ಕೆಲವು ಕಡೆ ಪಟಾಕಿ ಹೊಡೆದು ಸಂಭ್ರಮಿಸಿದ್ಧಾರೆ. ಕುಣಿದು ಕುಪ್ಪಳಿಸಿದ್ದಾರೆ.
ಇನ್ನೂ ಕೆಲ ಕಿಡಿಗೇಡಿಗಳು ವಿರಾಟ್ ಕೊಹ್ಲಿಯವ್ರನ್ನೂ ಟಾರ್ಗೆಟ್ ಮಾಡ್ತಿದ್ದಾರೆ. 17 ವರ್ಷಗಳಿಂದ ಆರ್‌ಸಿಬಿ ಪರವೇ ಆಡುತ್ತಿರುವ ವಿರಾಟ್ ಕೊಹ್ಲಿ ಅವರನ್ನು ಚೋಕ್ಲಿ ಎಂದು ಟ್ರೋಲ್ ಮಾಡುತ್ತಿದ್ದಾರೆ. ಚೋಕ್ಲಿ ಸಿನ್ಸ್ 2008 ಎಂದು ಪೋಸ್ಟ್ಗಳನ್ನು ಹಾಕುತ್ತಿದ್ದಾರೆ. ಸಿಎಸ್ಕೆ ಎದುರು ಗೆದ್ದ ಆರ್‌ಸಿಬಿ, ಫೈನಲ್ ಪ್ರವೇಶಿಸುವುದಕ್ಕೂ ಮೊದಲೇ ಟ್ರೋಫಿ ಗೆದ್ದಂತೆ ಸಂಭ್ರಮಿಸಿತು ಎಂದು ಅಣಕಿಸಿದ್ದಾರೆ. ಕೆಲವೊಬ್ಬರು ವಿರಾಟ್ ಕೊಹ್ಲಿ ಭಾವುಕರಾಗಿರುವ ಚಿತ್ರದೊಂದಿಗೆ ಮುಂದಿನ ಸಲ ಕಪ್ ನಮ್ದೆ ಎಂದು ಪೋಸ್ಟ್ ಹಾಕಿದ್ದಾರೆ.
ಇನ್ನು ಚೆನ್ನೈ ಫ್ಯಾನ್ಸ್ಗೆ ತಿರುಗೇಟು ಕೊಡ್ತಿರೋ ಆರ್‌ಸಿಬಿ ಅಭಿಮಾನಿಗಳು ನಾವು ಕಪ್ ಗೆಲ್ಲದೇ ಇದ್ರೂ ಧೋಬಿಯನ್ನ ಕಣ್ಣೀರಿಡುವಂತೆ ಮಾಡಿದ್ವು. ನಾವು ಫಿಕ್ಸಿಂಗ್ ಮಾಡ್ಕೊಂಡು ಗೇಮ್ ಗೆದ್ದಿಲ್ಲ ಅಂತಾ ತಿರುಗೇಟು ಕೊಡ್ತಿದ್ದಾರೆ.
ಆರ್ಆರ್ ವಿರುದ್ಧದ ಪಂದ್ಯದಲ್ಲೂ ಬ್ಯಾಟಿಂಗ್ಗೆ ಬಂದು ಸೊನ್ನೆ ಸುತ್ತಿ ಹೋದ ಗ್ಲೆನ್ ಮ್ಯಾಕ್ಸ್ವೆಲ್ ಕೂಡ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ನಲ್ಲಿ ಇದ್ದಾರೆ. ಮ್ಯಾಚ್ ಟರ್ನಿಂಗ್ ಪಾಯಿಂಟ್. ಎದುರಾಳಿಗಳನ್ನ ಹೊಡೆಯೋದು ಬಿಟ್ಟು ತಮ್ಮವರನ್ನೇ ಹೊಡೆದ ಮ್ಯಾಕ್ಸಿ ಅಂತಾ ವ್ಯಂಗ್ಯ ಮಾಡ್ತಿದ್ದಾರೆ.
ಇನ್ನೂ ಕೆಲವ್ರು ಒಂದು ಹೆಜ್ಜೆ ಮುಂದೆ ಹೋಗಿ ಫಿನಾಲೆಗೂ ಮುನ್ನವೇ ಟ್ರೋಫಿ ಗೆದ್ದ ತಂಡ ಆರ್‌ಸಿಬಿ ಅಂತಾ ಟೀಸ್ ಮಾಡಿದ್ದಾರೆ. ಯಾಕಂದ್ರೆ ಸಿಎಸ್ಕೆ ವಿರುದ್ಧದ ಪ್ಲೇ ಆಫ್ ಪಂದ್ಯವನ್ನ ತುಂಬಾನೇ ಸೆಲೆಬ್ರೇಷನ್ ಮಾಡಿದ್ದಕ್ಕೆ ಈ ರೀತಿ ಕಾಲೆಳೆದಿದ್ದಾರೆ. ಹಾಗೇ ಕಂಗ್ರಾಜುಲೇಷನ್ಸ್ ಅಂತಾ ಲೇವಡಿ ಮಾಡಿದ್ದಾರೆ.
ಇನ್ನು ಆರ್‌ಸಿಬಿ ಫ್ಯಾನ್ಸ್ ಕೂಡ ತಿರುಗೇಟು ಕೊಡೋದ್ರಲ್ಲಿ ಎತ್ತಿದ ಕೈ. ಚೋಕರ್ಸ್ ಎಂದ ಸಿಎಸ್ಕೆ ಫ್ಯಾನ್ಸ್ಗೆ ಆರ್‌ಸಿಬಿ ಅಭಿಮಾನಿಗಳು ಸರಿಯಾಗಿ ಕೌಂಟರ್ ಕೊಟ್ಟಿದ್ದಾರೆ. ಕ್ರಿಕೆಟ್ಗೆ ಕಳಂಕ ತಂದ ಸಿಎಸ್ಕೆ ನಮಗೆ ಬುದ್ದಿ ಹೇಳೋಕೆ ಬರ್ತಿದೆ. ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡು ಎರಡು ವರ್ಷ ಬ್ಯಾನ್ ಆಗಿದ್ದು ನಾವಲ್ಲ. ಭಾರತೀಯ ಕ್ರಿಕೆಟ್ಗೆ ಸಿಎಸ್ಕೆ ದೊಡ್ಡ ಅವಮಾನ ಮಾಡಿದೆ. 5 ಕಪ್ ಗೆದ್ದರೂ ಆ ಮ್ಯಾಚ್ ಫಿಕ್ಸಿಂಗ್ ಕಳಂಕ ಅಳಿಸಲು ಸಾಧ್ಯವಿಲ್ಲ ಎಂದು ತಿರುಗೇಟು ಕೊಟ್ಟಿದ್ದಾರೆ. ಕಪ್ ಗೆದ್ದಿಲ್ಲ ಎಂದು ನಮ್ಮ ತಂಡವನ್ನು ಯಾವತ್ತೂ ಬಿಟ್ಟು ಕೊಟ್ಟವರಲ್ಲ. ನಿಯತ್ತಿಗೆ ಬ್ರಾಂಡ್ ಅಂಬಾಸಿಡರ್ ಎಂದಿದ್ದಾರೆ ಆರ್‌ಸಿಬಿ ಫ್ಯಾನ್ಸ್. ಈ ಸಿಎಸ್ಕೆ vs ಆರ್‌ಸಿಬಿ ತಂಡಗಳ ನಡುವಿನ ಕಾಳಗ ಇಂದು ನಿನ್ನೆಯದ್ದಲ್ಲ. ಐಪಿಎಲ್ ಹುಟ್ಟಿದಾಗಿನಿಂದಲೂ ಇದೆ. ಆದರೆ ಆರ್‌ಸಿಬಿ ಎಲಿಮಿನೇಟರ್ ಸೋಲನ್ನು ಕೆಲ ಅಭಿಮಾನಿಗಳು ಅತಿಯಾಗಿ ಸಂಭ್ರಮಿಸಿದ್ದಾರೆ.
17 ವರ್ಷಗಳಿಂದ ಬೆಂಗಳೂರು ತಂಡ ಟ್ರೋಫಿ ಗೆದ್ದಿಲ್ಲ ನಿಜ. ಆದ್ರೆ ಈ ಬಾರಿಯ ಟೂರ್ನಿಯ ಸೆಕೆಂಡ್ ಆಫ್ನಲ್ಲಿ ಫಿನಿಕ್ಸ್ನಂತೆ ಎದ್ದು ಬಂದಿದ್ರು. ಫಸ್ಟ್ ಎಲಿಮಿಲೇಟ್ ಆಗೋ ಟೀ ಅಂತಾನೇ ಎಲ್ರೂ ಅನ್ಕೊಂಡಿದ್ದಾಗ ಟಾಪ್ 4ಗೆ ಲಗ್ಗೆ ಇಟ್ಟಿದ್ರು. ಅವ್ರ ಅದೇ ಕಮ್ ಬ್ಯಾಕ್ ಕೋಟ್ಯಂತರ ಅಭಿಮಾನಿಗಳಿಗೆ ಭರ್ಜರಿ ಮನರಂಜನೆ ನೀಡಿದೆ. ಆಟ ಅಂದ ಮೇಲೆ ಸೋಲು ಗೆಲುವು ಇದ್ದದ್ದೇ. ಕಪ್ ಈ ಸಲ ಅಲ್ಲದೇ ಇದ್ರೂ ಮುಂದಿನ ಸಲ ಸಿಗುತ್ತೆ. ಅಂಥಾದ್ದೊಂದು ಆತ್ಮವಿಶ್ವಾಸ, ಭರವಸೆ ಫ್ಯಾನ್ಸ್ಗಿದೆ. ನಮ್ಮ ತಂಡದ ಬಗ್ಗೆ ನಮಗೆ ಹೆಮ್ಮೆ ಇದೆ. ವಿ ಪ್ರೌಡ್ ಆಫ್ ಯು ಆರ್‌ಸಿಬಿ ಟೀಂ. ಸ್ಪೆಷಲಿ ಆರೆಂಜ್ ಕ್ಯಾಪ್ ಕಿಂಗ್ ವಿರಾಟ್ ಕೊಹ್ಲಿ.