RCBಯಲ್ಲಿ ಕನ್ನಡಿಗರಿಗೆ ಚಾನ್ಸ್ ಕೊಡಿ! – ಫ್ರಾಂಚೈಸಿಗೆ ಸಿದ್ದು ಸರ್ಕಾರ ಡಿಮ್ಯಾಂಡ್
ಹರಾಜಿಗೂ ಮುನ್ನ ಯಾರೆಲ್ಲಾ ರಿಲೀಸ್?

 RCBಯಲ್ಲಿ ಕನ್ನಡಿಗರಿಗೆ ಚಾನ್ಸ್ ಕೊಡಿ! – ಫ್ರಾಂಚೈಸಿಗೆ ಸಿದ್ದು ಸರ್ಕಾರ ಡಿಮ್ಯಾಂಡ್ಹರಾಜಿಗೂ ಮುನ್ನ ಯಾರೆಲ್ಲಾ ರಿಲೀಸ್?

ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 18ರ ಆವೃತ್ತಿಗೆ ಫ್ರಾಂಚೈಸಿಗಳು ಉಳಿಸಿಕೊಳ್ಳೋ ಲಿಸ್ಟ್ ಅನೌನ್ಸ್ ಮಾಡಲು ಡೆಡ್​​ಲೈನ್ ಹತ್ತಿರವಾಗ್ತಿದೆ. ಇದೇ ತಿಂಗಳ ಅಂತ್ಯದಲ್ಲಿ ಯಾವ ಟೀಮ್​ ಯಾರನ್ನೆಲ್ಲಾ ರೀಟೇನ್ ಮಾಡಿಕೊಳ್ಳುತ್ತೆ ಅನ್ನೋದನ್ನ ಅನೌನ್ಸ್ ಮಾಡ್ಬೇಕು. ಬಟ್ ಈಗ ಇಡೀ ಕರ್ನಾಟಕವನ್ನೇ ಕಾಡ್ತಿರೋ ಪ್ರಶ್ನೆ ಅಂದ್ರೆ ಆರ್​ಸಿಬಿಯಲ್ಲಿ ಉಳ್ಕೊಳ್ಳೋರು ಯಾರು ಅನ್ನೋದು. ಕಿಂಗ್ ವಿರಾಟ್ ಕೊಹ್ಲಿ ರೀಟೇನ್ ಆಗೋದಂತೂ ಫಿಕ್ಸ್. ಅವ್ರನ್ನ ಹೊರತುಪಡಿಸಿದ್ರೆ ಸೇಫ್ ಆಗೋರು ಯಾರು ಅನ್ನೋದು. ಬಟ್ ಈಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಗೆ ಕರ್ನಾಟಕ ಸರ್ಕಾರ ಒಂದು ಡಿಮ್ಯಾಂಡ್ ಇಟ್ಟಿದೆ. ಈ ಡಿಮ್ಯಾಂಡ್ ಕನ್ನಡಿಗ ಆಟಗಾರರಿಗೆ ಗುಡ್​ನ್ಯೂಸ್ ಕೂಡ ಹೌದು. ಅಷ್ಟಕ್ಕೂ ಸರ್ಕಾರ ಇಟ್ಟಿರೋ ಬೇಡಿಕೆ ಏನು? ಕರ್ನಾಟಕದವ್ರಿಗೆ ವರದಾನವಾಗುತ್ತಾ? 2025ರ ಐಪಿಎಲ್​ಗೆ ಆರ್​ಸಿಬಿ ಟೀಂ ಕಂಪ್ಲೀಟ್ ಚೇಂಜ್ ಆಗುತ್ತಾ? ಈ ಬಗೆಗಿನ ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ.

ಇದನ್ನೂ ಓದಿ : ‌ಕುಸುಮಾ ಹಠ ಭಾಗ್ಯಗೆ ಸಂಕಟ – ಹೆಂಡ್ತಿ ಮೇಲೆ ತಾಂಡವ್‌ ಗೆ LOVE

ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಹರಾಜಿಗೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬಗ್ಗೆ ಬಿಗ್ ಅಪ್​ಡೇಟ್ ವೊಂದು ಹೊರ ಬಿದ್ದಿದೆ. ಆರ್​ಸಿಬಿ ಫ್ರಾಂಚೈಸಿ ಮೇಲೆ ಕರ್ನಾಟಕ ಸರ್ಕಾರ ಒತ್ತಡ ಹೇರುತ್ತಿದೆಯಾ ಅನ್ನೋ ಪ್ರಶ್ನೆ ಹುಟ್ಟಿಕೊಂಡಿದೆ. ಇಂತಹದೊಂದು ಪ್ರಶ್ನೆ ಕಾರಣ ಟೈಮ್ ಆಫ್ ಇಂಡಿಯಾ ಪ್ರಕಟಿಸಿರುವ ವರದಿ. ಈ ವರದಿಯ ಪ್ರಕಾರ, ಕರ್ನಾಟಕ ಸರ್ಕಾರ ಸ್ಥಳೀಯ ಆಟಗಾರರಿಗೆ ಅವಕಾಶ ನೀಡುವಂತೆ RCB ಮೇಲೆ ಒತ್ತಡ ಹೇರಿದೆ ಎನ್ನಲಾಗಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಕನ್ನಡಿಗರಿಗೆ ಅವಕಾಶ ನೀಡ್ತಿಲ್ಲ ಅನ್ನೋ ಕಂಪ್ಲೇಂಟ್ ಮೊದ್ಲಿಂದಲೂ ಇದೆ. ಟೀಕೆಗಳೂ ಕೇಳಿ ಬರ್ತಿವೆ. ಫ್ಯಾನ್ಸ್ ಆಗ್ರಹ ಕೂಡ ಅದೇ ಆಗಿದೆ. ಹೀಗಿದ್ರೂ ಸ್ಥಳೀಯ ಆಟಗಾರರಿಗೆ ಆರ್​ಸಿಬಿ ಮಣೆ ಹಾಕಿದ್ದು ಅಷ್ಟ್ರಲ್ಲೇ ಇದೆ.

ಹೆಸ್ರಿಗಷ್ಟೇ ಚಾನ್ಸ್.. ಪ್ಲೇಯಿಂಗ್ 11ನಿಂದ ಔಟ್!

ನೆಪಮಾತ್ರಕ್ಕೆ ಎನ್ನುವಂತೆ ಕೆಲ ಕನ್ನಡಿಗರಿಗೆ ತಂಡದಲ್ಲಿ ಚಾನ್ಸ್ ಕೊಟ್ರೂ ಕೂಡ ಮೈದಾನಕ್ಕೆ ಕಳಿಸೋದು ಕಡಿಮೆ.  ಕಳೆದ ಬಾರಿಯ ತಂಡದಲ್ಲಿದ್ದದ್ದು ಕರ್ನಾಟಕದ ಇಬ್ಬರು ಆಟಗಾರರು ಮಾತ್ರ. ಇವರಲ್ಲಿ ವಿಜಯಕುಮಾರ್ ವೈಶಾಕ್ 4 ಪಂದ್ಯಗಳನ್ನಾಡಿದರೆ, ಮನೋಜ್ ಭಾಂಡಗೆ ಬೆಂಚ್ ಕಾದಿದ್ದೇ ಬಂತು. ಇತ್ತ ಮಹಾರಾಜ ಟಿ20 ಟೂರ್ನಿಯಲ್ಲಿ ಭರ್ಜರಿ ಪ್ರದರ್ಶನ ನೀಡುವ ಮೂಲಕ ಭಾಂಡಗೆ ತನ್ನ ಸಾಮರ್ಥ್ಯವನ್ನು ಪ್ರೂವ್ ಮಾಡಿದ್ರು. ಯುವ ಆಟಗಾರನನ್ನು ಇಡೀ ಸೀಸನ್​ನಲ್ಲಿ ಬೆಂಚ್ ಕಾಯಿಸಿದ ಆರ್​ಸಿಬಿ ಫ್ರಾಂಚೈಸಿಯ ನಡೆಯ ಬಗ್ಗೆ ಅನೇಕರು ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ಹೊರಹಾಕಿದ್ದರು. ಇದೀಗ ಐಪಿಎಲ್​ನ 18ನೇ ಆವೃತ್ತಿಗಾಗಿ ಸಿದ್ಧತೆಗಳು ಶುರುವಾಗಿದೆ. ಈ ಸಿದ್ಧತೆಗಳ ನಡುವೆ ಸ್ಥಳೀಯ ಆಟಗಾರರಿಗೆ ಅವಕಾಶ ನೀಡುವಂತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ರಾಜ್ಯ ಸರ್ಕಾರದ ಮೂಲಗಳು ಸೂಚಿಸಿವೆ ಎಂದು ವದಿಯಾಗಿದೆ.

ಕರ್ನಾಟಕ ಕ್ರಿಕೆಟರ್ಸ್​​ಗೆ ಮಣೆ ಹಾಕುತ್ತಾ ಫ್ರಾಂಚೈಸಿ?

ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ, ಐಪಿಎಲ್ ಮೆಗಾ ಹರಾಜಿನ ರಿಟೆನ್ಷನ್​ಗೂ ಮುನ್ನ ಆರ್​ಸಿಬಿ ಫ್ರಾಂಚೈಸಿ ಸಂಕಷ್ಟಕ್ಕೆ ಸಿಲುಕಿದೆ ಎಂದು ಬರೆಯಲಾಗಿದೆ. RCB ಫ್ರಾಂಚೈಸಿ ಸರ್ಕಾರದ ಒತ್ತಡದಿಂದ ತಮ್ಮ ತಂಡದಲ್ಲಿ ಹೆಚ್ಚಿನ ಕರ್ನಾಟಕದ ಆಟಗಾರರನ್ನು ನೇಮಿಸಿಕೊಳ್ಳಬೇಕಾಗುತ್ತದೆ. ಐಪಿಎಲ್ ಇತಿಹಾಸದಲ್ಲಿ ಆರ್​ಸಿಬಿ ತಂಡವು ಎಂದಿಗೂ ಸ್ಥಳೀಯ ಪ್ರತಿಭೆಗಳನ್ನು ಗುರಿಯಾಗಿಸಿಕೊಂಡಿಲ್ಲ. ಹೀಗಾಗಿಯೇ ಬೆಂಗಳೂರು ಫ್ರಾಂಚೈಸಿ ತಂಡದಲ್ಲಿ ರಾಜ್ಯದ ಆಟಗಾರರ ಕೊರತೆ ಎದ್ದು ಕಾಣುತ್ತಿರುತ್ತದೆ. ಆದರೆ ಈ ಬಾರಿ ಆರ್​ಸಿಬಿ ಫ್ರಾಂಚೈಸಿಯ ವ್ಯವಹಾರಗಳಲ್ಲಿ ಕರ್ನಾಟಕ ಸರ್ಕಾರ ಮಧ್ಯಪ್ರವೇಶಿಸಲು ನಿರ್ಧರಿಸಿದೆ. ಇದರಿಂದ ಐಪಿಎಲ್ ಮೆಗಾ ಹರಾಜಿಗೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತನ್ನ ಕಾರ್ಯತಂತ್ರಗಳನ್ನು ಬದಲಿಸಬೇಕಾಗಬಹದು ಎಂದು ವರದಿ ಮಾಡಿದೆ.

ಅನ್ ಕ್ಯಾಪ್ಡ್ ಪ್ಲೇಯರ್ ಆಗಿ ಉಳಿಸಿಕೊಳ್ಳುತ್ತಾ ತಂಡ?

ಅಷ್ಟಕ್ಕೂ ಐಪಿಎಲ್ ರಿಟೈನ್ ನಿಯಮದ ಪ್ರಕಾರ ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಹರಾಜಿಗೂ ಮುನ್ನ ಪ್ರತಿ ಫ್ರಾಂಚೈಸಿಗಳು ಒಟ್ಟು 6 ಆಟಗಾರರನ್ನು ರಿಟೈನ್ ಮಾಡಿಕೊಳ್ಳಬಹುದು. ಹೀಗೆ ಉಳಿಸಿಕೊಂಡ 6 ಆಟಗಾರರಲ್ಲಿ ಒಬ್ಬರು ಅನ್​ಕ್ಯಾಪ್ಡ್ ಪ್ಲೇಯರ್ ಇರಲೇಬೇಕು. ಇಲ್ಲಿ ಆರ್​ಸಿಬಿ ತಂಡದಲ್ಲಿ ಅನ್​ಕ್ಯಾಪ್ಡ್ ಕನ್ನಡಿಗರಾಗಿ ವಿಜಯಕುಮಾರ್ ವೈಶಾಕ್ ಹಾಗೂ ಮನೋಜ್ ಬಾಂಢಗೆ ಇದ್ದಾರೆ. ಹೀಗಾಗಿ ಇವರಿಬ್ಬರಲ್ಲಿ ಒಬ್ಬರು ರಿಟೈನ್ ಮಾಡಿಕೊಳ್ಳೋಕೆ ಅವಕಾಶ ಇದೆ.

ಬಟ್ ಆರ್​ಸಿಬಿಗೆ 6 ಆಟಗಾರರನ್ನ ಉಳಿಸಿಕೊಳ್ಳೋಕೆ ಅವಕಾಶ ಇದ್ರೂ ಕೂಡ ಯಾರನ್ನ ಉಳಿಸಿಕೊಳ್ಬೇಕು ಅನ್ನೋದೇ ದೊಡ್ಡ ತಲೆ ನೋವಾಗಿದೆ. ತಂಡದಲ್ಲಿ ಸ್ಟಾರ್ ಆಟಗಾರರಿದ್ದರೂ, ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ. ನಾಯಕ ಫಾಫ್ ಡುಪ್ಲೆಸಿಸ್ ಉತ್ತಮ ಫಾರ್ಮ್ ಪ್ರದರ್ಶಿಸಿದರೂ ಅವರಿಗೆ ಈಗ 40 ವರ್ಷ. ಹೀಗಾಗಿ ಅವರನ್ನು ಉಳಿಸಿಕೊಳ್ಳಬೇಕೇ ಅಥವಾ ಬೇಡವೇ ಎಂಬುದೇ ಆರ್​ಸಿಬಿ ಮುಂದಿರುವ ದೊಡ್ಡ ಪ್ರಶ್ನೆ. ಗ್ಲೆನ್ ಮ್ಯಾಕ್ಸ್​ ವೆಲ್, ಮೊಹಮ್ಮದ್ ಸಿರಾಜ್, ರಜತ್ ಪಟೀದಾರ್, ಕ್ಯಾಮರೂನ್ ಗ್ರೀನ್, ವಿಲ್ ಜಾಕ್ಸ್ ಬಗ್ಗೆಯೂ ಕನ್ಫ್ಯೂಷನ್ಸ್ ಇದೆ. ವಿರಾಟ್ ಕೊಹ್ಲಿಯನ್ನ ಹೊರತುಪಡಿಸಿದ್ರೆ ಮತ್ತಿನ್ಯಾರೂ ಕೂಡ ಕಣ್ಮುಚ್ಚಿ ಆಯ್ಕೆ ಮಾಡಿಕೊಳ್ಳುವಂಥ ಪ್ಲೇಯರ್ಸ್ ಇಲ್ಲ. ಒಟ್ಟಿನಲ್ಲಿ ಆರ್​ಸಿಬಿ ತಂಡದಲ್ಲಿರುವ ಆಟಗಾರರ ಕಳಪೆ ಫಾರ್ಮ್​​ ಈಗ ರಿಟೈನ್ ಪ್ರಕ್ರಿಯೆಗೂ ದೊಡ್ಡ ಹೊಡೆತ ನೀಡ್ತಿದೆ. ಇದ್ರ ನಡುವೆ ಕರ್ನಾಟಕ ಸರ್ಕಾರ ಕನ್ನಡಿಗರಿಗೆ ಅವಕಾಶ ಕೊಡಿ ಅಂತಾ ಕೇಳಿರೋದು ಬಾರಿ ಕುತೂಹಲ ಮೂಡಿಸಿದೆ.

Shwetha M

Leave a Reply

Your email address will not be published. Required fields are marked *