IPL ಜರ್ನಿಯಲ್ಲಿ RCBಯೇ ಬಾಸ್ – ಕೊಹ್ಲಿ, ಗೇಲ್, ಎಬಿಡಿ ದಾಖಲೆಗಳೆಷ್ಟು?
ಚರಿತ್ರೆ ಸೃಷ್ಟಿಸೋ ಅವತಾರ ಯಾರದ್ದು?

ಆರ್ಸಿಬಿ ಪಂದ್ಯಗಳಂದ್ರೆ ಅದ್ರ ಕ್ರೇಜ್ ನೆಕ್ಸ್ಟ್ ಲೆವೆಲ್ನಲ್ಲಿದೆ. ಈ ಸೀಸನ್ನಲ್ಲೂ ಮೋಸ್ಟ್ ವ್ಯೂವರ್ಶಿಪ್ ಮ್ಯಾಚಸ್ ಅಂದ್ರೆ ಟಾಪ್ನಲ್ಲಿ ಆರ್ಸಿಬಿ ಪಂದ್ಯಗಳೇ ಇವೆ. ಅದಕ್ಕೆ ಕಾರಣ ಐಪಿಎಲ್ ಇತಿಹಾಸದಲ್ಲಿ ಆರ್ಸಿಬಿ ಸೃಷ್ಟಿಸಿರೋ ಚರಿತ್ರೆ.. ಸ್ಟಿಲ್ ಈವರೆಗೂ ಕೆಲವೊಂದು ರೆಕಾರ್ಡ್ಸ್ನ ಬ್ರೇಕ್ ಮಾಡೋಕೆ ಯಾರಿಂದಲೂ ಆಗಿಲ್ಲ.
ಇದನ್ನೂ ಓದಿ : ಮುಂಬೈಗೆ ಗಾಯದ ಮೇಲೆ ಬರೆ – ಮಿಚೆಲ್ ಸ್ಯಾಂಟ್ನರ್ ಔಟ್, ಕೇಶವ್ ಮಹಾರಾಜ್ ಎಂಟ್ರಿ
ಡಿಫೆಂಡಿಂಗ್ ಚಾಂಪಿಯನ್ಸ್ ಆಗಿರೋ ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ಸೀಸನ್ನಲ್ಲೂ ಚೆನ್ನಾಗಿ ಪರ್ಫಾಮ್ ಮಾಡ್ತಿದ್ದಾರೆ. ಪ್ಲೇಆಫ್ ಹೊಸ್ತಿಲಲ್ಲೇ ಇರೋ ಬೆಂಗಳೂರು ಬಾಯ್ಸ್ ಟಾಪ್ 4ಗೆ ಕಾಲಿಡೋ ಫೇವರೆಟ್ ಟೀಂ ಕೂಡ ಹೌದು. ಕೆಲವೊಂದು ಅಪ್ ಌಂಡ್ ಡೌನ್ಸ್ ಆಗಿದೆ. ಬಟ್ ನೆಕ್ಸ್ಟ್ ಅಷ್ಟೇ ಚೆನ್ನಾಗಿ ಕಂ ಬ್ಯಾಕ್ ಮಾಡಿದ್ದಾರೆ. ಈ ಆವೃತ್ತಿಯಲ್ಲಿ ಬ್ಯಾಲೆನ್ಸ್ಡ್ ಟೀಂ ಆಗಿ ಆಲ್ರೌಂಡ್ ಪ್ರದರ್ಶನ ಬರ್ತಿದೆ.
ಐಪಿಎಲ್ ನಲ್ಲಿ ಆರ್ ಸಿಬಿಯೇ ಕಿಂಗ್!
2013ರಲ್ಲಿ ಕ್ರಿಸ್ ಗೇಲ್ ಪುಣೆ ವಾರಿಯರ್ಸ್ ವಿರುದ್ಧ 175*(66)ರನ್ಸ್
ಒಂದೇ ಇನ್ನಿಂಗ್ಸ್ ನಲ್ಲಿ ಕ್ರಿಸ್ ಗೇಲ್ ಸಿಡಿಸಿದ ಅತೀ ಹೆಚ್ಚು ಸಿಕ್ಸ್ 17
2013ರಲ್ಲಿ ಪುಣೆ ವಾರಿಯರ್ಸ್ ವಿರುದ್ಧ 30 ಎಸೆತಗಳಲ್ಲಿ ಕ್ರಿಸ್ ಗೇಲ್ ವೇಗದ ಶತಕ
2016ರಲ್ಲಿ ಗುಜರಾತ್ ಲಯನ್ಸ್ ವಿರುದ್ಧ ಕೊಹ್ಲಿ-ಎಬಿಡಿ 229 ರನ್ಸ್ ಜೊತೆಯಾಟ
2016ರ ಸೀಸನ್ ನಲ್ಲಿ 16 ಪಂದ್ಯಗಳಲ್ಲಿ 973 ರನ್ ಗಳಿಸಿದ್ದ ವಿರಾಟ್ ಕೊಹ್ಲಿ
ಐಪಿಎಲ್ ನಲ್ಲಿ ಅತೀ ಹೆಚ್ಚು ಶತಕ ಕೊಹ್ಲಿ 8 ಹಾಗೂ 800ಕ್ಕೂ ಹೆಚ್ಚು ಬೌಂಡರಿ
ಐಪಿಎಲ್ ನಲ್ಲಿ ಅತೀ ಹೆಚ್ಚು ರನ್ ಗಳಿಸಿದ ಆಟಗಾರ ಕಿಂಗ್ ಕೊಹ್ಲಿ
ಆರ್ಸಿಬಿ ಐಪಿಎಲ್ ನಲ್ಲಿ ಕಪ್ ಗೆಲ್ಲೋಕೆ 18 ವರ್ಷಗಳನ್ನ ತಗೊಂಡ್ರೂ ಕೂಡ ದಾಖಲೆಗಳಲ್ಲಿ ಮಾತ್ರ ಎಲ್ಲರಿಗಿಂತ ಮುಂದಿದೆ. ಹೌದು ಕೆಕೆಆರ್ ವಿರುದ್ಧ 2017ರಲ್ಲಿ 49ಕ್ಕೆ ಆಲ್ಔಟ್ ಆಗಿದ್ದು ಐಪಿಎಲ್ ಇತಿಹಾಸದಲ್ಲೇ ಅತೀ ಕಡಿಮೆ ಮೊತ್ತಕ್ಕೆ ಔಟ್ ಆಗಿರೋ ತಂಡ ಅನ್ನೋ ಬೇಡದ ದಾಖಲೆಯೂ ಇದೆ. ಬಟ್ ಇಟ್ಸ್ ಓಕೆ. ಪಾಸಿಟಿವ್ ತಗೊಳ್ಳೋಕೆ ರೆಡಿ ಇದ್ದೇವೆ ಅಂದಾಗ ಒನ್ ಬ್ಯಾಡ್ ಡೇ ನೆಗೆಟಿವ್ ರೆಕಾರ್ಡ್ ಕೂಡ ಆಗ್ಬೋದು. ಆದ್ರೆ ಡಾಮಿನೇಷನ್ ಅಂತಾ ಬಂದಾಗ ಬೆಂಗಳೂರು ಆವತ್ತು ಇವತ್ತು ಯಾವತ್ತೂ ಟಾಪ್ನಲ್ಲೇ ಇರುತ್ತೆ ಅನ್ನೋದನ್ನ ಮರೆಯೋಕಾಗಲ್ಲ.

ನೋಡಿರಿ

