CSKಗೆ ಇಡ್ಲಿ, ದೋಸೆ ತಿನ್ನಿಸಿದ RCB – ಟ್ರೋಲ್ ಸಿಗ್ನಲ್ ಕೊಟ್ಟ KKRಗೆ ಗುನ್ನಾ
ಕೆಣಕಿದವರ ಸೊಕ್ಕಿಳಿಸಿದ ಬೆಂಗಳೂರು!

CSKಗೆ ಇಡ್ಲಿ, ದೋಸೆ ತಿನ್ನಿಸಿದ RCB  – ಟ್ರೋಲ್ ಸಿಗ್ನಲ್ ಕೊಟ್ಟ KKRಗೆ ಗುನ್ನಾಕೆಣಕಿದವರ ಸೊಕ್ಕಿಳಿಸಿದ ಬೆಂಗಳೂರು!

ಐಪಿಎಲ್​ನಲ್ಲಿ 10 ಫ್ರಾಂಚೈಸಿಗಳ ಪೈಕಿ ಹೈಯೆಸ್ಟ್ ಫ್ಯಾನ್ ಬೇಸ್ ಇರುವಂಥದ್ದು ಬೆಂಗಳೂರು ತಂಡಕ್ಕೆ. ಟ್ರೋಫಿ ಗೆಲ್ಲೋಕೆ 18 ವರ್ಷಗಳು ಬೇಕಾದ್ರೂ ದಾಖಲೆ ಬರೆಯೋದ್ರಲ್ಲಿ ಆರ್​ಸಿಬಿಯನ್ನ ಹಿಂದಿಕ್ಕೋಕೆ ಯಾರಿಗೂ ಸಾಧ್ಯವಾಗಿಲ್ಲ. ಡಿಫೆಂಡಿಂಗ್ ಚಾಂಪಿಯನ್ಸ್ ಆಗಿರೋ ಬೆಂಗಳೂರು ಈ ಸೀಸನ್​ನಲ್ಲಿ ಪ್ಲೇಆಫ್ಸ್​ಗೆ ಸೆಲೆಕ್ಟ್ ಆದ ಫಸ್ಟ್ ಟೀಂ. ಌಂಡ್ ಕ್ವಾಲಿಫೈಯರ್ 1 ಆಡೋದೂ ಕನ್ಫರ್ಮ್. ಆದ್ರೆ ಮ್ಯಾಚಸ್ ಅಂತಾ ಬಂದಾಗ ಎದುರಾಳಿ ಫ್ರಾಂಚೈಸಿಗಳು ಆರ್​ಸಿಬಿಯನ್ನ ಟ್ರೋಲ್ ಮಾಡಿ ಹೈಪ್ ಪಡೆಯೋಕೆ ನೋಡ್ತಾರೆ. ಈ ಸೀಸನ್​ನಲ್ಲೂ ಕೆಲ ತಂಡಗಳು ಅದೇ ಫಾರ್ಮುಲಾವನ್ನ ಬಳಸಿರುವಂಥದ್ದು. ಆದ್ರೆ ಆರ್​ಸಿಬಿಗೆ ಯಾರತ್ರನೂ ತಗೊಂಡಿದ್ದನ್ನ ಇಟ್ಕೊಂಡು ಅಭ್ಯಾಸ ಇಲ್ಲ ಅನ್ನೋ ಥರದಲ್ಲೇ ವಾಪಸ್ ಕೊಟ್ಟಿದ್ದಾರೆ. ಅದ್ರಲ್ಲೂ ಸೋಶಿಯಲ್ ಮೀಡಿಯಾ ರಿವೇಂಜ್ ಅಂತೂ ಸಖತ್ತಾಗಿದೆ.

ಇದನ್ನೂ ಓದಿ : ಚೇಸ್ ಮಾಡುವಾಗ ಬೈಕ್ ಟಚ್ -ಶಿರಸಿಯಲ್ಲಿ ಗ್ಯಾಂಗ್‌ವಾರ್‌ಗೆ ಕಾರಣವಾದ ಚಿಕ್ಕ ಕಿರಿಕ್

ಕದನದೋಳ್ ಕಲಿ ಪಾರ್ಥನಂ ಕೆಣಕಿ ಉಳಿದವರಿಲ್ಲ. ರಣಭೂಮಿಯಲ್ಲಿ ಅರ್ಜುನ ಹಾಗೇ ಬಬ್ರುವಾಹನ  ಯುದ್ಧಕ್ಕೆ ನಿಂತಾಗ ಶೌರ್ಯ & ಪರಾಕ್ರಮದ ಸಂಭಾಷಣೆಯಲ್ಲಿ ಬರುವಂತ ಅಪ್ರತಿಮ ಸಾಲು ಇದು. ನಟ ಸಾರ್ವಭೌಮ ಡಾಕ್ಟರ್ ರಾಜ್ ಕುಮಾರ್ ಅವ್ರ ಬಾಯಲ್ಲಿ ಈ ಡೈಲಾಗ್ ಕೇಳೋದು ರಣರೋಚಕ ಅನುಭವ. ಕನ್ನಡಿಗರ ಮನೆ, ಮನಗಳಲ್ಲಿ ಬೆರೆತುಹೋಗಿರೋ ಇದೇ ಸಾಲು ಈಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೂ ಕರೆಕ್ಟಾಗಿ ಸೂಟ್ ಆಗ್ತಿದೆ. ಅಂದ್ರೆ ಮೈದಾನ ಅನ್ನೋ ಕದನಭೂಮಿಯಲ್ಲಿ ಆರ್​ಸಿಬಿಯನ್ನ ಕೆಣಕಿ ಉಳಿದವ್ರಿಲ್ಲಾ ಅನ್ನೋ ಅರ್ಥದಲ್ಲಿ. ಯಾಕಂದ್ರೆ ಈ ಸೀಸನ್​ನಲ್ಲಿ ಬೆಂಗಳೂರು ತಂಡವನ್ನ ಸಾಕಷ್ಟು ತಂಡಗಳು ಗೇಲಿ ಮಾಡಿದ್ರು. ಸೋಶಿಯಲ್ ಮೀಡಿಯಾದಲ್ಲಿ ವ್ಯಂಗ್ಯ ಮಾಡಿ ಪೋಸ್ಟ್​ಗಳನ್ನ ಹಾಕಿದ್ರು. ಆದ್ರೆ ಅಲ್ಲೇ ಡ್ರಾ ಅಲ್ಲೇ ಬಹುಮಾನ ಅನ್ನೋ ಥರ ಬೆಂಗಳೂರು ವಾಪಸ್ ಕೊಟ್ಟಿದೆ.

ನಂಬರ್ 1

ಬೆಂಗಳೂರು ಸೋಲಿಸಿ ಪೇಂಟಿಂಗ್ ಮಾಡಿದ್ದ ಡೆಲ್ಲಿಗೂ ಸೋಲಿನ ಪೇಂಟಿಂಗ್!

ಏಪ್ರಿಲ್ 18ರಂದು ಬೆಂಗಳೂರಿನಲ್ಲಿ ನಡೆದಿದ್ದ ಡೆಲ್ಲಿ ವರ್ಸಸ್ ಆರ್​ಸಿಬಿ ನಡುವಿನ ಮ್ಯಾಚಲ್ಲಿ ಡೆಲ್ಲಿ ತಂಡ ಇನ್ನೊಂದು ಬಾಲ್ ಇದ್ದಾಗ 6 ವಿಕೆಟ್​ಗಳಿಂದ ಗೆದ್ಕೊಂಡಿತ್ತು. ಈ ಪಂದ್ಯದ ಬಳಿಕ ಡೆಲ್ಲಿ ಫ್ರಾಂಚೈಸಿ ಅಡ್ಮಿನ್ ಸೋಶಿಯಲ್ ಮೀಡಿಯಾದಲ್ಲಿ ಬೆಂಗಳೂರು ಜಸ್ಟ್ ಹಿಟ್ಸ್ ಡಿಫರೆಂಟ್ ವೆನ್ ಇಟ್ಸ್ ಪೇಂಟೆಡ್ ಅಂತಾ ಬ್ಲೂ ಹಾರ್ಟ್ ಹಾಕಿ ಪ್ಶನ್ ಕೊಟ್ಟು ಪೋಸ್ಟ್ ಹಾಕಿದ್ರು. ಚಿನ್ನಸ್ವಾಮಿ ಸ್ಟೇಡಿಯಂ ಹೆಸ್ರನ್ನೂ ಬಳಸಿಕೊಳ್ಳಲಾಗಿತ್ತು. ಸ್ಟಬ್ಸ್ ಬೋರ್ಡ್ ಮೇಲೆ ರೋರ್ ಅಂತಾ ಬರೆಯುತ್ತಿದ್ರು. ಆದ್ರೆ ಏಪ್ರಿಲ್ 27ಕ್ಕೆ ನಡೆದ ರಿವೇಂಜ್ ಮ್ಯಾಚಲ್ಲಿ ಆರ್​ಸಿಬಿ ಇದನ್ನ ವಾಪಸ್ ಕೊಟ್ಟಿದ್ರು. 75ಕ್ಕೆ ಡೆಲ್ಲಿಯನ್ನ ಆಲೌಟ್ ಮಾಡಿದ್ದ ಬೆಂಗಳೂರು ಅದೇ ಪೇಂಟಿಂಗ್ ವಾಲ್​ನಲ್ಲಿ ಪ್ಲೇ ಬೋಲ್ಡ್ ಎಂದು ಹೇಜಲ್​ವುಡ್ ಮತ್ತು ಭುವಿ ಪೇಂಟ್ ಮಾಡೋ ಥರ ಫೋಟೋ ಹಾಕಿದ್ರು. ಌಂಡ್ ಡೆಲ್ಲಿ ಜಸ್ಟ್ ಹಿಟ್ಸ್ ಡಿಫರೆಂಟ್ ವೆನ್ ಇಟ್ಸ್ ಪೇಂಟೆಡ್ ಅಂತಾ ರೆಡ್ ಹಾರ್ಟ್ ಕ್ಯಾಪ್ಟನ್ ಹಾಕಿದ್ರು. ಅಲ್ಲಿಗೆ ಡೆಲ್ಲಿ ಲೆಕ್ಕ ಚುಕ್ತಾ ಮಾಡಿದ್ರು.

ನಂಬರ್ 2

ಚೆನ್ನೈಗೆ ಇಡ್ಲಿ, ದೋಸೆ, ಚಟ್ನಿ, ಸಾಂಬಾರ್ ತಿನ್ನಿಸಿದ್ದ ಬೆಂಗಳೂರು!

ಐಪಿಎಲ್​ನಲ್ಲಿ ಬೆಂಗಳೂರು ಹಾಗೇ ಚೆನ್ನೈ ಮ್ಯಾಚ್​ಗಳಂದ್ರೇನೇ ಗ್ರೇಟೆಸ್ಟ್ ರೈವಲ್ರಿ. ಆನ್​ಫೀಲ್ಡ್ ಅಷ್ಟೇ ಅಲ್ಲ ಆಫ್​ ದಿ ಫೀಲ್ಡ್​ನಲ್ಲೂ ಫೈಟ್ ಇರುತ್ತೆ. ಈ ಸೀಸನ್​ನಲ್ಲೂ ಅದು ಕಂಟಿನ್ಯೂ ಆಗಿತ್ತು. ದೋಸೆ, ಇಡ್ಲಿ, ಚಟ್ನಿ ಸಾಂಬರ್ ಸಾಂಬರ್ ಸಾಂಗ್ ಕಾಂಟ್ರವರ್ಸಿ ಬಿಸಿಸಿಐ ಮೆಟ್ಟಿಲೂ ಕೂಡ ಏರಿದೆ. ಆಗಿದ್ದೇನಂದ್ರೆ ಲಾಸ್ಟ್ ಸೀಸನ್​ನಲ್ಲಿ ಚೆನ್ನೈ ವಿರುದ್ಧದ ಮ್ಯಾಚ್​ಗೂ ಮುನ್ನ ಆರ್​ಸಿಬಿ ಆಟಗಾರ ಜಿತೇಶ್ ಶರ್ಮಾಗೆ ನಿಮಗೆ ಚೆನ್ನೈನಲ್ಲಿ ಯಾವ ಡಿಶ್ ಇಷ್ಟ ಎಂದು ಪ್ರಶ್ನೆ ಕೇಳಲಾಗಿತ್ತು. ಅದಕ್ ಇಡ್ಲಿ ದೋಸೆ ಅಂದಿದ್ರು. ಆದ್ರೆ ಚೆನ್ನೈ ವಿರುದ್ಧದ ಮ್ಯಾಚಲ್ಲಿ ಜಿತೇಶ್ ಔಟ್ ಆದಾಗ ಚೆಪಾಕ್ ಸ್ಟೇಡಿಯಂ ಡಿಜೆ ಇದೇ ಸಾಂಗ್ ಹಾಕಿ ಜಿತೇಶ್ ಕಾಲೆಳೆದಿದ್ರು. ಕಳೆದ ವರ್ಷದ ರಿವೇಂಜ್​ನ ಆರ್​ಸಿಬಿ ಈ ಸಲ ತೀರಿಸಿಕೊಂಡಿತ್ತು. ಬೆಂಗಳೂರಲ್ಲಿ ಮ್ಯಾಚ್ ನಡೆದಾಗ ಅದೇ ಚೆನ್ನೈ ಪ್ಲೇಯರ್ಸ್ ಔಟ್ ಆಗಿ ಪೆವಿಲಿಯನ್​ಗೆ ಹೋಗುವಾಗ ಬೆಂಗಳೂರು ಡಿಜೆ ಕೂಡ ಇದೇ ಸಾಂಗ್ ಹಾಕಿ ಟಾಂಟ್ ಕೊಟ್ಟಿದ್ರು. ಇದ್ರಿಂದ ಸಿಟ್ಟಾದ ಚೆನ್ನೈ ಫ್ರಾಂಚೈಸಿ ಬಿಸಿಸಿಐಗೂ ಕಂಪ್ಲೇಂಟ್ ನೀಡಿದೆ.

ನಂಬರ್ 3

ಟ್ರೋಲ್ ಸಿಗ್ನಲ್ ಕೊಟ್ಟಿದ್ದ ಕೊಲ್ಕತ್ತಾ ಲೆಕ್ಕ ಚುಕ್ತಾ!

ಪ್ರತೀ ಐಪಿಎಲ್ ಸ್ಟಾರ್ಟ್ ಆದಾಗ್ಲೂ ಬೆಂಗಳೂರನ್ನ ಕೆಣಕೋಕೆ ಕೆಲವ್ರು ಕಾಯ್ತಾ ಇರ್ತಾರೆ. ಮೊದ್ಲೆಲ್ಲಾ ಕಪ್ ಗೆದ್ದಿಲ್ಲ ಅಂತಾ ಗೇಲಿ ಮಾಡ್ತಿದ್ರು. ಲಾಸ್ಟ್ ಸೀಸನ್ ಕಪ್ ಗೆದ್ಮೇಲೆ ಈಗ 49ಕ್ಕೆ ಆಲೌಟ್ ಆಗಿದ್ದನ್ನೇ ಇಟ್ಕೊಂಡು ಬರ್ತಾರೆ. ಅದ್ರಲ್ಲೂ ಕೆಕೆಆರ್ ಅಂತೂ ಸೀಸನ್ ಆರಂಭಕ್ಕೂ ಮೊದ್ಲೇ ಸಿಗ್ನಲ್​ನಲ್ಲಿ 49 ಅನ್ನೋ ಸಂಖ್ಯೆಯನ್ನ ತೋರಿಸಿ ಆರ್​ಸಿಬಿ ಕಾಲೆಳೆದಿತ್ತು. 2017ರಲ್ಲಿ ಕೆಕೆಆರ್ ಆರ್​ಸಿಬಿಯನ್ನ 49ಕ್ಕೆ ಆಲೌಟ್ ಮಾಡಿದ್ವಿ ಅಂತಾ ಬಿಲ್ಡಪ್ ತಗೊಂಡಿದ್ರು. ಆದ್ರೆ ಈ ಸೀಸನ್​ನಲ್ಲಿ ಕೆಕೆಆರ್ ಸೋಲಿಸಿ ಆರ್​ಸಿಬಿ ರಿವೇಂಜ್ ತಗೊಳ್ತು. ಆ ಮ್ಯಾಚಲ್ಲಿ ಕೊಹ್ಲಿ ಶತಕ ಹೊಡೆದು ಮಿಂಚಿದ್ರು. ಮೇ 13ರಂದು ನಡೆದಿದ್ದ ಮ್ಯಾಚಲ್ಲಿ 6 ವಿಕೆಟ್​ಗಳಿಂದ ಕೆಕೆಆರ್ ಸೋಲಿಸಿದ್ದ ಆರ್​ಸಿಬಿ ಅದೇ ಸಿಗ್ನಲ್​ನಲ್ಲೇ ತಿರುಗೇಟು ಕೊಟ್ಟಿತ್ತು. RCB ವಿನ್ ಅನ್ನೋ ಪೋಸ್ಟ್ ಹಾಕಿ ಹೇಳೋಕೆ ಏನು ಇಲ್ಲ ಅಂತಾ ಕ್ಯಾಪ್ಶನ್ ಕೊಟ್ಟಿದ್ರು. ಆಮೇಲೆ ಆರ್​ಸಿಬಿ ಪ್ಲೇಯರ್ಸ್ ಟ್ರಾವೆಲ್ ಬಸ್ ಫೋಟೋ ಹಾಕಿ ಸಿಗ್ನಲ್ ನಲ್ಲಿ 16 ಪಾಯಿಂಟ್ಸ್ ಅಂತಾ ತೋರಿಸಿ ಕೆಕೆಆರ್​ಗೆ ಟಾಂಟ್ ಕೊಟ್ಟಿತ್ತು. ಪಂದ್ಯಕ್ಕೂ ಮುನ್ನ ಬೇಟೆಗೆ ಸಿದ್ಧವಾಗಿದೆ ನಮ್ಮ ಹುಲಿ ಅಂತಾ ವಿಎಫ್​ಎಕ್ಸ್ ವಿಡಿಯೋ ಹಾಕಿದ್ದ ಕೆಕೆಆರ್ ಗೆ ಅದೇ ಹುಲಿಯನ್ನ ನಮ್ಮ ಸಿಂಹ ಬೇಟೆಯಾಡಿದೆ ಅಂತಾ ಆರ್​ಸಿಬಿ ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಹಾಕಿತ್ತು. ಅಲ್ಲಿಗೆ ಕೆಕೆಆರ್ ಲೆಕ್ಕ ಕೂಡ ಚುಕ್ತಾ ಮಾಡಿದ್ರು.

ನಂಬರ್ 4

ಆರ್ ಸಿಬಿ ಕೆಣಕಿ ಗೆಲ್ಲೋದನ್ನೇ ಮರೆತ ಪಂಜಾಬ್!

ಇನ್ನು ಈ ಸೀಸನ್​ನಲ್ಲಿ ಆರ್​ಸಿಬಿಯನ್ನ ಸುಖಾಸುಮ್ಮನೆ ಕೆಣಕಿ ಕೆಟ್ಟಿದ್ದು ಪಂಜಾಬ್ ಕಿಂಗ್ಸ್.. ಫಸ್ಟ್ ಆಫ್​ನಲ್ಲಿ ಸೋಲನ್ನೇ ಕಾಣದೆ ಟೇಬಲ್ ಟಾಪರ್ ಆಗಿದ್ರು. ಎಲ್ರಿಗಿಂತ ಮೊದ್ಲೇ ಪ್ಲೇ ಆಫ್ಸ್​ಗೆ ಹೋಗ್ತಾರೆ ಅನ್ನೋದು ಎಲ್ಲರ ಲೆಕ್ಕಾಚಾರ ಆಗಿತ್ತು. ಏಪ್ರಿಲ್ 28 ರವರೆಗೆ ಲೀಗ್ ಟಾಪರ್ ಆಗಿದ್ದ ಪಂಜಾಬ್ ಏಪ್ರಿಲ್ 28 ರಂದು ರಾಜಸ್ಥಾನ ವಿರುದ್ಧ ಕಣಕ್ಕಿಳಿದಿದ್ರು. ಫಸ್ಟ್ ಬ್ಯಾಟಿಂಗ್ ಮಾಡ್ತಿದ್ರು. ಪಂದ್ಯದ ವೇಳೆ ರಾತ್ರಿ 7.54 ಕ್ಕೆ ಪಂಜಾಬ್ ಕಿಂಗ್ಸ್ ತನ್ನ ಎಕ್ಸ್ ಖಾತೆಯಲ್ಲಿ 49/1 (4.3 ಓವರ್) ಎಂದು ಬರೆದು ಒಂದು ಫೋಟೋ ಟ್ವೀಟ್ ಮಾಡಿದ್ರು. ಅಂದ್ರೆ ಆರ್​ಸಿಬಿ 49ಕ್ಕೆ ಆಲೌಟ್ ಆಗಿದ್ರು. ನಾವು ಕೇವಲ 4.3 ಓವರ್‌ಗಳಲ್ಲೇ ಆರ್‌ಸಿಬಿಯ ಒಟ್ಟು ಸ್ಕೋರ್ ದಾಟಿದ್ದೇವೆ ಅನ್ನೋ ರೀತಿಯಲ್ಲಿ ಹಾಕಿ ಅಹಂಕಾರ ತೋರಿಸಿದ್ರು. ಬ್ಯಾಡ್​ಲಕ್ ಏನಂದ್ರೆ ಅದೇ ದಿನ ರಾಜಸ್ಥಾನ ವಿರುದ್ಧ ಸೋತ ಪಂಜಾಬ್ ಸೆಕೆಂಡ್ ಆಫ್​ನಲ್ಲಿ ಸತತ ಪಂದ್ಯಗಳನ್ನ ಸೋತು ಸೋತು ಸುಣ್ಣವಾಯ್ತು. ಹೀಗೆ ಅಧಿಕಪ್ರಸಂಗ ತೋರಿದ ಅದೇ ಪಂಜಾಬ್ ವಿರುದ್ಧ ಮೇ 17ರಂದು ಗೆದ್ದ ಬೆಂಗಳೂರು ಈ ಪೋಸ್ಟ್​​ಗೆ ತಿರುಗೇಟು ಕೊಟ್ಟಿದ್ರು. ಆರ್​ಸಿಬಿ ನೀಡಿದ್ದ 223 ರನ್​ಗಳ ಟಾರ್ಗೆಟ್ ಬೆನ್ನಟ್ಟಿದ ಪಂಜಾಬ್ 6 ಓವರ್​ಗಳಲ್ಲಿ 49 ರನ್​ಗಳಿಗೆ 3 ವಿಕೆಟ್ ಕಳ್ಕೊಂಡಿದೆ ಅಂತಾ ಸೋಶಿಯಲ್ ಮೀಡಿಯಾದಲ್ಲಿ ಹಾಕಿ ಆರ್​ಸಿಬಿ ಟಾಂಟ್ ಕೊಟ್ಟಿತ್ತು.  ಹಾಗೇ ಆರ್​ಸಿಬಿ ಪ್ಲೇಯರ್ ಪಿಬಿಕೆಎಸ್ ಪ್ಲೇಯರ್ ಹೆಗಲ ಮೇಲೆ ಕೈ ಹಾಕಿರೋ ಥರ ಕಾರ್ಟೂನ್ ಇಮೇಜ್​ಹಾಕಿ ಆರ್​ಸಿಬಿ ವಿನ್ ಬೈ 23 ರನ್ಸ್.. ಇಟ್ಸ್ ಓಕೆ ಗಾಯ್ಸ್ ಬಟ್ ಡೋಂಟ್ ಡು ಇಟ್ ಎಗೇನ್ ಅಂತಾ ಕ್ಯಾಪ್ಟನ್ ಕೊಟ್ಟಿದ್ರು. ಇನ್ನೊಂದ್ಸಲ ಹೀಗೆ ಪೋಸ್ಟ್ ಹಾಕೋ ಮುನ್ನ ಹುಷಾರ್ ಅನ್ನೋ ತರದಲ್ಲಿ ಟಾಂಟ್ ಕೊಟ್ಟಿದ್ರು.

Shantha Kumari

Leave a Reply

Your email address will not be published. Required fields are marked *