RCB ಅಸಲಿ ಆಟ ಶುರು – ಟಾಪ್-2 ಪಟ್ಟಕ್ಕೆ ಹೇಗಿದೆ ರೇಸ್?
5 ಪಂದ್ಯಗಳಲ್ಲಿ ಎಷ್ಟು ಗೆಲ್ಲಬೇಕು?

RCB ಅಸಲಿ ಆಟ ಶುರು – ಟಾಪ್-2 ಪಟ್ಟಕ್ಕೆ ಹೇಗಿದೆ ರೇಸ್?5 ಪಂದ್ಯಗಳಲ್ಲಿ ಎಷ್ಟು ಗೆಲ್ಲಬೇಕು?

ರಿವೇಂಜ್ ಮ್ಯಾಚ್​ಗಳ ಥ್ರಿಲ್ಲರ್ ಇದೇ ನೋಡಿ. ಒಂದು ತಂಡದ ಸೋಲು-ಗೆಲುವು ಪಾಯಿಂಟ್ಸ್ ಪಟ್ಟಿಯಲ್ಲಿ ಬಿಗ್ ವೇರಿಯೇಷನ್ಸ್ ಮಾಡಿ ಬಿಡುತ್ತೆ. ಪಂಜಾಬ್ ವಿರುದ್ಧ ಗೆದ್ದ ಹೈದ್ರಾಬಾದ್ ನಂಬರ್ 3ಯಿಂದ ಡೈರೆಕ್ಟ್ ನಂಬರ್ 1 ಪಟ್ಟಕ್ಕೇರಿದೆ. ನಂಬರ್​1ನಲ್ಲಿದ್ದ ಪಂಜಾಬ್ ಸೆಕೆಂಡ್ ಪ್ಲೇಸ್​ಗೆ ಬಂದಿದೆ. ಆರ್​ಸಿಬಿ ಮೂರನೇ ಸ್ಥಾನಕ್ಕೆ ಜಾರಿದೆ. ಸೋ ಇನ್ಮುಂದೆ ಒಂದೊಂದು ಪಂದ್ಯ ಮುಗಿದ್ಮೇಲೂ ಬದಲಾವಣೆ ಗ್ಯಾರಂಟಿ. ಹೀಗಾಗಿ ಆರ್​ಸಿಬಿ ಪ್ರತೀ ಪಂದ್ಯವನ್ನೂ ಮಸ್ಟ್ ವಿನ್ ಮ್ಯಾಚ್ ಥರ ಆಡ್ಬೇಕು.

ಇದನ್ನೋ ಓದಿ : ನಂಬರ್ 1 ಆಗುತ್ತಾ RCB? – ಮುಂಬೈನಿಂದ ಫ್ಲಾಪ್ ಸೂರ್ಯ OUT.. ವೈಭವ್ ಸೂರ್ಯವಂಶಿ ಬಾಲಕಾರ್ಮಿಕನಾ?

ಐಪಿಎಲ್​​ ಪ್ಲೇ ಆಫ್ ಪಂದ್ಯಗಳ ಶೆಡ್ಯೂಲ್ ಅನೌನ್ಸ್ ಆಗಿದೆ. ಮೊದಲ ಕ್ವಾಲಿಫೈಯರ್​ ಪಂದ್ಯ ಮೇ 26 ರಂದು ಧರ್ಮಶಾಲಾದಲ್ಲಿ ನಡೆದ್ರೆ ಎಲಿಮಿನೇಟರ್ ಹಾಗೂ ಕ್ವಾಲಿಫೈಯರ್​​ 2 ಪಂದ್ಯ ಮೇ 27 ಹಾಗೂ ಮೇ 29ಕ್ಕೆ ನ್ಯೂ ಚಂಡೀಗಢದ ಮೈದಾನದಲ್ಲಿ ನಡೆಯುತ್ತೆ. ಫೈನಲ್​ ಪಂದ್ಯ ಮೇ 31 ರಂದು ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಫಿಕ್ಸ್ ಆಗಿದೆ. ಸೋ ಅಲ್ಲಿಗೆ ಬಿಸಿಸಿಐ ಆಲ್ರೆಡಿ ಟಾಪ್-4 ಮ್ಯಾಚ್​ಗಳಿಗೆ ಭರ್ಜರಿಯಾಗಿ ಸಿದ್ಧವಾಗ್ತಿದೆ. ಇಂಟ್ರೆಸ್ಟಿಂಗ್ ಅಂದ್ರೆ ಈ ಆವೃತ್ತಿಯಲ್ಲಿ ಟಾಪ್-4 ಪೊಸಿಷನ್​ಗೆ ಸಿಕ್ಕಾಪಟ್ಟೆ ಫೈಟ್ ಇದೆ. ಈ ರೇಸ್​ನಲ್ಲಿರೋ ಆರ್​ಸಿಬಿ ಟಾಪ್-2 ಟಾರ್ಗೆಟ್ ಇರೋದ್ರಿಂದ ಮುಂದಿನ ಪ್ರತೀ ಪಂದ್ಯಗಳೂ ಮುಖ್ಯವಾಗುತ್ತೆ.

ಪಂಜಾಬ್ ಸೋಲಿಸಿ ನಂ.1 ಪಟ್ಟಕ್ಕೇರಿದ ಹೈದ್ರಾಬಾದ್!

ಬುಧವಾರದವರೆಗೆ ಪಾಯಿಂಟ್ಸ್ ಪಟ್ಟಿಯಲ್ಲಿ ನಂಬರ್ 3ಯಲ್ಲಿದ್ದ ಹೈದ್ರಾಬಾದ್ ರಾತ್ರಿ ಕಳೆಯೋ ಅಷ್ಟ್ರಲ್ಲೇ ನಂಬರ್ 1ಪಟ್ಟಕ್ಕೇರಿದೆ. ವಾರಗಳಿಂದ ಮೊದಲ ಸ್ಥಾನದಲ್ಲೇ ಇದ್ದ ಪಂಜಾಬ್ 2ನೇ ಸ್ಥಾನಕ್ಕೆ ಜಾರಿದೆ. ಇತ್ತ ಬೆಂಗಳೂರು 3ನೇ ಸ್ಥಾನಕ್ಕೆ ಕುಸಿದಿದೆ. ಅಂದ್ರೆ ಇಲ್ಲಿ ಒಂದು ಪಂದ್ಯದ ರಿಸಲ್ಟ್ ಅದೆಷ್ಟರ ಮಟ್ಟಿಗೆ ಎಫೆಕ್ಟ್ ಆಗುತ್ತೆ ಅನ್ನೋದು ಇಲ್ಲೇ ಗೊತ್ತಾಗ್ತಿದೆ. ಇದೇ ಬದಲಾವಣೆ ಆರ್​ಸಿಬಿಯಲ್ಲಿ ಪ್ಲೇ ಆಫ್ ಲೆಕ್ಕಾಚಾರದ ಬಗ್ಗೆ ಚರ್ಚೆಗಳನ್ನ ಹುಟ್ಟು ಹಾಕಿದೆ. ಮೊದ್ಲಿಗೆ ಯಾವ್ಯಾವ ತಂಡಗಳು ಪ್ಲೇ ಆಫ್ ರೇಸ್​ನ ಲೀಡ್​ನಲ್ಲಿವೆ ಅನ್ನೋದನ್ನ ನೋಡೋಣ.

ಪ್ಲೇ ಆಫ್ ರೇಸ್ ಟಾಪರ್ಸ್!

ತಂಡ                            ಅಂಕ(ಪಂದ್ಯ)                         ಬಾಕಿ ಪಂದ್ಯ

ಹೈದ್ರಾಬಾದ್                     14 (11)                             3

ಪಂಜಾಬ್                        13 (10)                             4

ಬೆಂಗಳೂರು                       12 (9)                              5

ರಾಜಸ್ಥಾನ                        12 (10)                             4

ಗುಜರಾತ್                       12 (10)                            4

ಚೆನ್ನೈ                             10 (10)                            4

ಡೆಲ್ಲಿ                              8 (10)                             4

ಕೊಲ್ಕತ್ತಾ                          7 (9)                             5

ಇಲ್ಲಿ 16 ಅಥವಾ ಅದಕ್ಕಿಂತ ಜಾಸ್ತಿ ಅಂಕ ಪಡೆಯೋ ಅವಕಾಶಗಳಿರೋ ತಂಡಗಳ ಬಗ್ಗೆ ಮಾತ್ರ ಹೇಳಿರುವಂಥದ್ದು. ಬಟ್ ಮುಂಬೈ ಇಂಡಿಯನ್ಸ್ ಮತ್ತು ಲಕ್ನೋ ಸೂಪರ್ ಜೇಂಟ್ಸ್ ತಂಡಗಳಿಗೆ ಇನ್ಮುಂದಿನ ಎಲ್ಲಾ ಮ್ಯಾಚ್ ಗೆದ್ರೂ 14 ಅಂಕ ಅಷ್ಟೇ ಆಗೋದು. ಜೊತೆಗೆ ನೆಟ್ ರನ್ ರೇಟ್ ಮೈನಸ್ ಇರೋದ್ರಿಂದ ಎಲ್ಲಾ ಪಂದ್ಯಗಳನ್ನ ಗೆದ್ರೂ ಪ್ಲೇ ಆಫ್ ರೇಸ್​ನಲ್ಲಿ ಇರ್ತಾರೆ ಅನ್ನೋ ಗ್ಯಾರಂಟಿ ಇಲ್ಲ. ಮ್ಯಾಥೆಮೆಟಿಕಲಿ ರೇಸ್​ನಲ್ಲಿ ಇದ್ದಾರೆ. ಬಟ್ ಈಸಿ ಇಲ್ಲ. ಹೀಗಾಗಿ ಈ ಎರಡು ತಂಡಗಳನ್ನ ಕನ್ಸಿಡರ್ ಮಾಡಿಲ್ಲ. ಸೋ ಅಲ್ಲಿಗೆ ಈಗಿರೋ ಪಾಯಿಂಟ್ಸ್ ಟೇಬಲ್​ನಲ್ಲಿ 8 ತಂಡಗಳ ಸ್ಥಾನ, ರೇಸ್ ಮತ್ತು ಬಾಕಿ ಉಳಿದಿರೋ ಪಂದ್ಯಗಳನ್ನ ಕ್ಯಾಲ್ಕುಲೇಟ್ ಮಾಡಿದ್ರೆ ಬೆಂಗಳೂರು ತಂಡಕ್ಕೆ ಬಿಗ್ ಅಡ್ವಾಂಟೇಜಸ್ ಇದೆ. ಸೋ ಏನು ಅನ್ನೋದನ್ನ ನೋಡ್ತಾ ಹೋಗೋಣ.

ಬೆಂಗಳೂರಿಗೆ ಬಂಪರ್ ಚಾನ್ಸ್!

ಟಾಪ್-1 ರೇಸ್ ಗೆ ಏರಲು ಬೆಂಗಳೂರು ತಂಡಕ್ಕೆ ಸಂಪೂರ್ಣ ಅವಕಾಶ

ಪ್ರಸ್ತುತ 12 ಅಂಕ.. ಉಳಿದಿರೋ 5 ಪಂದ್ಯ ಗೆದ್ರೆ ಟೋಟಲ್ 22 ಅಂಕ

ಆರ್ ಸಿಬಿ ಬಿಟ್ಟು ಟಾಪ್-7 ತಂಡಗಳು 10 ಅಥವಾ ಜಾಸ್ತಿ ಪಂದ್ಯ ಆಡಿದ್ದಾರೆ

ಈ ಸೀಸನ್ ನಲ್ಲಿ ಬೇರೆ ಯಾವುದೇ ತಂಡಕ್ಕೂ 22 ಅಂಕಕ್ಕೆ ಅವಕಾಶವಿಲ್ಲ

ಇಲ್ಲ ಒಂದು ಪಂದ್ಯ ಸೋತು 4ರಲ್ಲಿ ಗೆದ್ರೂ ಟಾಪ್-2 ಸ್ಥಾನ ಅಂತೂ ಫಿಕ್ಸ್

ಉಳಿದೆಲ್ಲಾ ತಂಡಗಳಿಗೆ ಹೋಲಿಸಿದ್ರೆ ಬೆಂಗಳೂರು ನೆಟ್ ರನ್ ರೇಟ್ ಫಸ್ಟ್

ಇಲ್ಲಿ ಎಲ್ಲಾ ವಿಚಾರಗಳಲ್ಲೂ ಆರ್​ಸಿಬಿಗೆ ಪಾಸಿಟಿವ್​ನೆಸ್ ಜಾಸ್ತಿ ಇದೆ. 2025ರ ಸೀಸನ್​ನಲ್ಲಿ ಲೀಗ್ ಹಂತದಲ್ಲಿ ಟಾಪ್-2 ಸ್ಥಾನದಲ್ಲಿದ್ದ ಬೆಂಗಳೂರು ಟೀಂ ಪಂಜಾಬ್ ವಿರುದ್ಧ ಕ್ವಾಲಿಫೈಯರ್​ 1ನಲ್ಲೇ ಗೆದ್ದು ಸೀದಾ ಫೈನಲ್​ಗೇರಿತ್ತು. ಌಂಡ್ ಮತ್ತೆ ಅದೇ ಪಂಜಾಬ್​ ತಂಡವನ್ನ ಸೋಲಿಸಿ ಕಪ್ ಗೆದ್ದಿದ್ರು. ಹೀಗಾಗಿ ಈ ಸಲ ಕೂಡ ನಂಬರ್ 1ಸ್ಥಾನಕ್ಕೇರಿದ್ರೆ ಕ್ವಾಲಿಫೈಯರ್ 1ನಲ್ಲೇ ಗೆದ್ದು ಮತ್ತೆ ಫೈನಲ್​ಗೆ ಹೋಗೋಕೆ ಅವಕಾಶ ಇದೆ. ಇಲ್ಲಪ್ಪ ಅವತ್ತೇನೋ ಬ್ಯಾಡ್ ಡೇ ಸೋತ್ರು ಅಂದ್ರೆ ಮತ್ತೊಂದು ಚಾನ್ಸ್ ಅಂತೂ ಇದ್ದೇ ಇದೆ. ಕ್ವಾಲಿಫೈಯರ್ 2ನಲ್ಲಿ ಆಡ್ಕೊಂಡು ಗೆದ್ದು ಫೈನಲ್​ಗೆ ಬರ್ಬೋದು.. ಹೀಗಾಗಿ ಟಾಪ್-2 ಟಾರ್ಗೆಟ್​ನಲ್ಲಿರೋ ಆರ್​ಸಿಬಿಗೆ ಇದಕ್ಕಿಂತ ಬೆಸ್ಟ್ ಸಿಚುಯೇಷನ್ ಸಿಗಲ್ಲ. ಸೋ ಇದನ್ನ ಹೇಗೆ ಎನ್​ಕ್ಯಾಶ್ ಮಾಡಿಕೊಳ್ತಾರೆ ಅನ್ನೋದೇ ಈಗಿರೋ ಪ್ರಶ್ನೆ.

Shantha Kumari