RCB ಟಾಪ್-2ಗೆ 4 ಚಾಲೆಂಜ್ – MUST WIN ಟಾಸ್ಕ್ ಗೆಲ್ತಾರಾ?
ಪಾಟಿದಾರ್ ಪಡೆ ಕಾಪಾಡುತ್ತಾ NRR?

RCB ಟಾಪ್-2ಗೆ 4 ಚಾಲೆಂಜ್ – MUST WIN ಟಾಸ್ಕ್ ಗೆಲ್ತಾರಾ?ಪಾಟಿದಾರ್ ಪಡೆ ಕಾಪಾಡುತ್ತಾ NRR?

10 ಪಂದ್ಯಗಳು.. 6 ಗೆಲುವು.. 4 ಸೋಲು. ಉಳಿದಿರೋದು ನಾಲ್ಕು ಮ್ಯಾಚ್. ಇದು ಆರ್​ಸಿಬಿಯ ಸದ್ಯದ ಸ್ಥಿತಿ. ಪ್ಲೇಆಫ್ ರೇಸ್​ನ ಫೇವರೆಟ್ ಟೀಂ ಆಗಿ ಕಾಣ್ತಿದ್ರೂ ಆರ್​ಸಿಬಿಗೆ ಟಾಪ್-4 ಅನ್ನೋದಕ್ಕಿಂತ ಟಾಪ್-2 ಮೋಸ್ಟ್ ಇಂಪಾರ್ಟೆಂಟ್. ಬಟ್ ಬ್ಯಾಡ್​ಲಕ್ ಗುಜರಾತ್ ಮತ್ತು ಲಕ್ನೋ ವಿರುದ್ಧ ಬ್ಯಾಕ್ ಟು ಬ್ಯಾಕ್ ಪಂದ್ಯಗಳನ್ನ ಸೋತಾಗಿದೆ.

ಇದನ್ನೂ ಓದಿ : RCB ಅಸಲಿ ಆಟ ಶುರು – ಟಾಪ್-2 ಪಟ್ಟಕ್ಕೆ ಹೇಗಿದೆ ರೇಸ್?

ಪ್ಲೇ ಆಫ್ಸ್ ರೇಸ್ ಇನ್ಮೇಲೆ ಕ್ರೂಶಿಯಲ್ ಆಗ್ತಾ ಹೋಗುತ್ತೆ. ಈ ಸಲ ಟಾಪ್-ಆಫ್ ದಿ ಟೇಬಲ್​ನಲ್ಲಿ ಟಫ್ ಫೈಟ್ ಇದೆ. 16 ಅಂಕ ಪಡೆದ್ರೂ ಸೇಫ್ ಜೋನ್​ನಲ್ಲಿ ಇರ್ತಾರೆ ಅನ್ನೋದನ್ನ ಬಿಟ್ರೆ ಸೆಲೆಕ್ಟ್ ಆಗೇ ಆಗ್ತಾರೆ ಅನ್ನೋ ಬಗ್ಗೆ ಗ್ಯಾರಂಟಿ ಅಂತೂ ಇಲ್ಲ. ಯಾಕಂದ್ರೆ ಹೈದ್ರಾಬಾದ್, ಪಂಜಾಬ್, ರಾಜಸ್ಥಾನ, ಗುಜರಾತ್, ಚೆನ್ನೈಗೂ ತಂಡಗಳಿಗೂ 16+ ಅಂಕ ಪಡೆಯೋಕೆ ಅವಕಾಶ ಇದೆ. ಹೀಗಾಗಿ ಆರ್​ಸಿಬಿ ಇವ್ರೆಲ್ಲರ ಜೊತೆ ರೇಸ್​ಗೆದ್ದು ಮುಂದೆ ಹೋಗ್ಬೇಕು. ಹಾಗಂತ ಟಾಪ್-2 ಸಾಧ್ಯನೇ ಇಲ್ವಾ ಅಂದ್ರೆ ಖಂಡಿತ ಚಾನ್ಸ್ ಇದೆ.

ಆರ್ ಸಿಬಿಗೆ ಈಗ 4 ಚಾಲೆಂಜ್!

ದಿನಾಂಕ                                ಎದುರಾಳಿ

ಮೇ 10                                  ಮುಂಬೈ

ಮೇ 13                                 ಕೊಲ್ಕತ್ತಾ

ಮೇ 17                                 ಪಂಜಾಬ್

ಮೇ 22                                 ಹೈದರಾಬಾದ್

ಆರ್​ಸಿಬಿಗೆ ಮುಂದಿನ ನಾಲ್ಕು ಪಂದ್ಯಗಳಲ್ಲಿ ಎರಡು ರಿವೇಂಜ್ ಮ್ಯಾಚ್ ಇದೆ. ಮುಂಬೈ ಮತ್ತು ಹೈದ್ರಾಬಾದ್ ವಿರುದ್ಧ. ಆಲ್ರೆಡಿ ಇವ್ರಿಬ್ಬರ ವಿರುದ್ಧವೂ ಗೆದ್ದಿರೋದ್ರಿಂದ ಅವ್ರೂ ರಿವೇಂಜ್​ಗಾಗಿ ಕಾಯ್ತಿದ್ದಾರೆ. ಅತ್ತ ಕೊಲ್ಕತ್ತಾ ಮತ್ತು ಪಂಜಾಬ್ ತಂಡಗಳನ್ನ ಮೊದಲ ಬಾರಿಗೆ ಫೇಸ್ ಮಾಡ್ತಾರೆ. ಮುಂದಿನ ನಾಲ್ಕೂ ಪಂದ್ಯಗಳನ್ನ ಆರ್​ಸಿಬಿ ಮಸ್ಟ್ ವಿನ್ ಮ್ಯಾಚ್ ಥರನೇ ನೋಡ್ಬೇಕು.

4 ಚಾಲೆಂಜ್ ಗೆದ್ರೆ ಟಾಪ್-2 ಟಿಕೆಟ್!

ಮುಂದಿನ ನಾಲ್ಕು ಪಂದ್ಯಗಳನ್ನ ಗೆದ್ರೆ ಟಾಪ್-2 ವಿಕೆಟ್ ಪಕ್ಕಾ

ಈಗಿರುವ 12 + ಮುಂದಿನ ಪಂದ್ಯಗಳ 8 ಅಂಕ ಸೇರಿ 20 ಅಂಕ

ಪಂಜಾಬ್ ತಂಡಕ್ಕೆ ಮಾತ್ರವೇ ಎಲ್ಲಾ ಪಂದ್ಯ ಗೆದ್ರೆ 21 ಅಂಕ ಸಿಗುತ್ತೆ

ಬೇರೆ ತಂಡಗಳಿಗೆ 20 ಅಂಕ ಅವಕಾಶ ಇದ್ರೂ ಬೆಂಗಳೂರಿಗೆ ಪ್ಲಸ್

ಎಲ್ಲಾ ತಂಡಗಳಿಗಿಂತ ಹೆಚ್ಚಿನ ನೆಟ್ ರನ್ ರೇಟ್ ಇರೋದ್ರಿಂದ ಚಾನ್ಸ್

Shantha Kumari

Leave a Reply

Your email address will not be published. Required fields are marked *