RCB 4 ಸ್ಲಾಟ್.. ರಿಷಭ್ ಟಾರ್ಗೆಟ್ – ಪಂತ್ ಗೆ ಹರಾಜಿನಲ್ಲಿ ₹30 ಕೋಟಿ?
ಚರಿತ್ರೆ ಸೃಷ್ಟಿಸ್ತಾರಾ ವಿಕೆಟ್ ಕೀಪರ್?

RCB 4 ಸ್ಲಾಟ್.. ರಿಷಭ್ ಟಾರ್ಗೆಟ್ – ಪಂತ್ ಗೆ ಹರಾಜಿನಲ್ಲಿ ₹30 ಕೋಟಿ?ಚರಿತ್ರೆ ಸೃಷ್ಟಿಸ್ತಾರಾ ವಿಕೆಟ್ ಕೀಪರ್?

ಪಂತ್.. ಪಂತ್.. ಪಂತ್.. ರಿಷಭ್ ಪಂತ್.. ಐಪಿಎಲ್ ಮೆಗಾ ಆಕ್ಷನ್​ಗೂ ಮುನ್ನವೇ ಯಾರ ಬಾಯಲ್ಲಿ ಕೇಳಿದ್ರೂ ರಿಷಭ್ ಪಂತ್​ರದ್ದೇ ಹೆಸರು. ಒಂದು ಫ್ರಾಂಚೈಸಿಗೆ ಪಿಲ್ಲರ್ ಆಗಬಲ್ಲ ಎಲ್ಲಾ ಕ್ವಾಲಿಟೀಸ್ ಕೂಡ ಈ ಪ್ಲೇಯರ್​ಗಿದೆ. ಇದೇ ಕಾರಣಕ್ಕೆ ಪಂತ್​ರನ್ನ ತೆಕ್ಕೆಗೆ ಹಾಕಿಕೊಳ್ಳೋಕೆ ಎಲ್ಲಾ ಫ್ರಾಂಚೈಸಿಗಳ ಮಾಲೀಕರು ಕೋಟಿಗಳ ಲೆಕ್ಕದಲ್ಲಿ ಹಣವನ್ನ ಪೇರಿಸಿಕೊಳ್ತಿದ್ದಾರೆ. ಅಷ್ಟೇ ಯಾಕೆ 2025ರ ಸೀಸನ್ ಹರಾಜಿನಲ್ಲಿ ಸಂಭಾವನೆ ದಾಖಲೆಗಳನ್ನೆಲ್ಲಾ ಬ್ರೇಕ್ ಮಾಡೋದು ಇದೇ ಪಂತ್ ಅಂತಾ ಕ್ರಿಕೆಟ್ ಎಕ್ಸ್​ಪರ್ಟ್ಸ್ ಕೂಡ ಭವಿಷ್ಯ ನುಡಿತಿದ್ದಾರೆ. ಅಷ್ಟಕ್ಕೂ ಪಂತ್​ಗೆ ಯಾಕೆ ಇಷ್ಟೊಂದು ಡಿಮ್ಯಾಂಡ್? ಯಾವ್ಯಾವ ಸ್ಲಾಟ್​ಗಳು ಫಿಲ್ ಮಾಡ್ಬಹುದು ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಸಿಂಗಲ್ ಸಿಂಹ ಅಂತೆ ಚೈತ್ರಾ ಕುಂದಾಪುರ – ಮಾತಿನ ಮಲ್ಲಿಯ ಸವಾಲ್‌ಗೆ ಹೆದರಿದ್ರಾ ಐಶ್, ಶಿಶಿರ್?

ಎರಡೇ ದಿನ. ಇನ್ನ ಎರಡೇ ದಿನ. ಇದೇ ಭಾನುವಾರ ಹಾಗೇ ಸೋಮವಾರ ಸೌದಿ ಅರೇಬಿಯಾದಲ್ಲಿ 2025ರ ಐಪಿಎಲ್​ಗೆ ಮೆಗಾ ಹರಾಜು ನಡೆಯಲಿದೆ. ಈ ಸಲ ಸ್ಟಾರ್ ಆಟಗಾರರ ದಂಡೇ ಆಕ್ಷನ್​ನಲ್ಲಿ ಇರೋದ್ರಿಂದ ದಾಖಲೆ ಮಟ್ಟದಲ್ಲಿ ಬಿಡ್ ಕೂಡ ನಡೆಯಲಿದೆ. ಈ ಬಿಡ್ಡಿಂಗ್ ಲಿಸ್ಟ್​​ನಲ್ಲಿ ಮೋಸ್ಟ್ ಎಕ್ಸ್​​ಪೆನ್ಸಿವ್ ಪ್ಲೇಯರ್ ಆಗಿ ರಿಷಭ್ ಪಂತ್ ಕಾಣ್ತಿದ್ದಾರೆ. ಹರಾಜಿನಲ್ಲಿ 574 ಪ್ಲೇಯರ್ಸ್ ಇದ್ದು, ಈ ಪೈಕಿ 204 ಆಟಗಾರರನ್ನು ಮಾತ್ರ ಫ್ರಾಂಚೈಸಿಗಳು ಖರೀದಿ ಮಾಡ್ಬೇಕಿದೆ. ಇದ್ರಲ್ಲಿ 70 ವಿದೇಶಿ ಆಟಗಾರರು ಸೇರಿದ್ದಾರೆ. ಶಾರ್ಟ್ ಲಿಸ್ಟ್ ಆದವರಲ್ಲಿ 366 ಭಾರತೀಯ ಆಟಗಾರರು ಮತ್ತು 208 ವಿದೇಶಿ ಆಟಗಾರರು ಇದ್ದಾರೆ. ಬಟ್ ಈ ಎಲ್ಲಾ ಆಟಗಾರರ ಪೈಕಿ ಸೆಂಟ್ರ್ ಆಫ್ ಅಟ್ರ್ಯಾಕ್ಷನ್ ಟೀಮ್ ಇಂಡಿಯಾದ ವಿಕೆಟ್ ಕೀಪರ್ ರಿಷಬ್ ಪಂತ್.

ರಿಷಭ್ ಪಂತ್ ಗೆ 30 ಕೋಟಿ ರೂಪಾಯಿ ಬಿಡ್ ಮಾಡ್ತಾರಾ?

ಯೆಸ್. ಐಪಿಎಲ್ ಇತಿಹಾಸದಲ್ಲೇ 2024ರ ಐಪಿಎಲ್​ ಮಿನಿ ಹರಾಜಿನಲ್ಲಿ ಮಿಚೆಲ್ ಸ್ಟಾರ್ಕ್ ಅತೀ ಹೆಚ್ಚು ಸಂಭಾವನೆ ಪಡೆಯುವ ಮೂಲಕ ವಿಶ್ವಮಟ್ಟದಲ್ಲಿ ಸದ್ದು ಮಾಡಿದ್ರು. ಬಟ್ ಈ ವರ್ಷ ಅವ್ರ ರೆಕಾರ್ಡ್ ಬ್ರೇಕ್ ಮಾಡೋಕೆ ಪಂತ್​ರಿಂದ ಮಾತ್ರ ಸಾಧ್ಯ ಅನ್ನೋ ಮಾತುಗಳು ಕೇಳಿ ಬರ್ತಿವೆ. ಅದೂ ಕೂಡ 25ರಿಂದ 30 ಕೋಟಿಗೆ ಬಿಡ್ಡಿಂಗ್ ನಡೆಯುತ್ತೆ ಅನ್ನೋ ಚರ್ಚೆ ನಡೀತಿದೆ. ರಿಷಭ್ ಪಂತ್​ಗೆ ಕನಿಷ್ಠ 25 ರಿಂದ 30 ಕೋಟಿ ರೂಪಾಯಿವರೆಗೆ ಫ್ರಾಂಚೈಸಿಗಳು ಬಿಡ್ ಮಾಡುವ ಸಾಧ್ಯತೆ ಇದೆ ಅಂತಾ ಮಾಜಿ ಕ್ರಿಕೆಟರ್ ಸುರೇಶ್ ರೈನಾ ಕೂಡ ಭವಿಷ್ಯ ನುಡಿದಿದ್ದಾರೆ. ಹಿಂದಿನ ಸೀಸನ್​ಗಳಲ್ಲಿ ಆಸ್ಟ್ರೇಲಿಯಾದ ಆಟಗಾರರು ಹೆಚ್ಚಿನ ಬೆಲೆಗೆ ಮಾರಾಟವಾಗುವುದನ್ನ ನೋಡಿದ್ದೇವೆ. ಆದರೆ ಈ ಬಾರಿ ನಮ್ಮ ಆಟಗಾರರು ಅದ್ರಲ್ಲೂ ಪಂತ್ ಸಾರ್ವಕಾಲಿಕ ದಾಖಲೆಯ ಬೆಲೆಯನ್ನು ಪಡೆಯಲಿದ್ದಾರೆ ಎಂದು ರೈನಾ ಹೇಳಿದ್ದಾರೆ.

ಮೂರು ಸ್ಲಾಟ್ ನಿಭಾಯಿಸಬಲ್ಲರು ರಿಷಭ್ ಪಂತ್!

ಪಂತ್​ಗೆ ಇಷ್ಟೊಂದು ಡಿಮ್ಯಾಂಡ್ ಉಂಟಾಗೋಕೆ ಕಾರಣನೇ ಇದು. ಒಬ್ಬ ಆಟಗಾರ ಒಂದು ಸ್ಲಾಟ್​ನಲ್ಲಿ ಮಾತ್ರ ಸಾಲಿಡ್ ಪರ್ಫಾಮೆನ್ಸ್ ನೀಡ್ಬೋದು. ಬಟ್ ಪಂತ್ ವಿಚಾರದಲ್ಲಿ ಹಂಗಿಲ್ಲ. ಸ್ಫೋಟಕ ಬ್ಯಾಟರ್, ಶರವೇಗದ ವಿಕೆಟ್ ಕೀಪರ್ ಹಾಗೇ ಒಂದು ತಂಡವನ್ನ ಮುನ್ನಡೆಸೋ ಲೀಡರ್​ಶಿಪ್. ಈ ಎಲ್ಲಾ ಕ್ವಾಲಿಟೀಸ್ ಪಂತ್​ರಲ್ಲಿದೆ. ಅಲ್ದೇ 2025ರ ಐಪಿಎಲ್​ಗೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಡೆಲ್ಲಿ ಕ್ಯಾಪಿಟಲ್ಸ್, ಲಕ್ನೋ ಸೂಪರ್‌ಜೈಂಟ್ಸ್ ಮತ್ತು ಪಂಜಾಬ್ ಕಿಂಗ್ಸ್‌ನಂತಹ ಫ್ರಾಂಚೈಸಿಗಳು ಭಾರತೀಯ ನಾಯಕರಿಗಾಗಿ ಹುಡುಕಾಟ ನಡೆಸ್ತಿವೆ. ಅದ್ರಲ್ಲೂ ಪಂಜಾಬ್ ಕಿಂಗ್ ಅಂತೂ ಎಲ್ಲರಿಗಿಂತಲೂ ಹೆಚ್ಚು ಹಣ ಅಂದ್ರೆ 110.5 ಕೋಟಿ ರೂಪಾಯಿ ಬ್ಯಾಲೆನ್ಸ್ ಹೊಂದಿದೆ. ಹಾಗೇ 83 ಕೋಟಿ ರೂಪಾಯಿಗಳಿಂದ ಆರ್ ಸಿಬಿ ಕೂಡ ನಾಯಕನಿಗಾಗಿ ಲೆಕ್ಕಾಚಾರ ಹಾಕಿಕೊಳ್ತಿದೆ. ಎಲ್​ಎಸ್​ಜಿಗೂ ಸಾರಥಿ ಬೇಕಿರೋದ್ರಿಂದ ಪಂತ್ ಮೇಲೆಯೇ ಕಣ್ಣಿಟ್ಟಿದೆ. ಬಟ್ ಪಂತ್​ರನ್ನ ರಿಲೀಸ್ ಮಾಡಿರೋ ಡೆಲ್ಲಿ ಕ್ಯಾಪಿಟಲ್ಸ್ ಕೂಡ ಆರ್​ಟಿಎಂ ಕಾರ್ಡ್ ಮೂಲಕ ಮರಳಿ ಪಡೆಯಬಹುದು. ದೆಹಲಿ ತಂಡದ ಬಳಿಯೂ 73 ಕೋಟಿ ರೂಪಾಯಿ ಬ್ಯಾಲೆನ್ಸ್ ಇದೆ.

2016ರಿಂದ ಡೆಲ್ಲಿ ತಂಡದಲ್ಲೇ ಆಡ್ತಿದ್ದಾರೆ ರಿಷಭ್ ಪಂತ್!

ರಿಷಭ್ ಪಂತ್ 2016ರಲ್ಲಿ ದೆಹಲಿ ತಂಡದ ಪರ ಐಪಿಎಲ್​ಗೆ ಡೆಬ್ಯು ಮಾಡಿದ್ರು. ಅಂದಿನಿಂದ ಇಂದಿನವರೆಗೂ ಅದೇ ತಂಡದಲ್ಲೇ ಆಡಿದ್ದಾರೆ. ಬಟ್ 2023ರ ಸೀಸನ್​ನಲ್ಲಿ ಌಕ್ಸಿಡೆಂಟ್​ನಿಂದಾಗಿ ಕಣಕ್ಕಿಳಿದಿರಲಿಲ್ಲ. ಈವರೆಗೂ ಐಪಿಎಲ್‌ನಲ್ಲಿ 35.31 ಸರಾಸರಿ ಮತ್ತು 148.93 ಸ್ಟ್ರೈಕ್ ರೇಟ್‌ನಲ್ಲಿ 3284 ರನ್ ಗಳಿಸಿದ್ದಾರೆ. 2024ರ ಸೀಸನ್​ನಲ್ಲಿ 13 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದ ಪಂತ್ 40ರ ಬ್ಯಾಟಿಂಗ್ ಸರಾಸರಿಯಲ್ಲಿ 3 ಅರ್ಧಶತಕ ಸಹಿತ 446 ರನ್ ಗಳಿಸಿದ್ದರು. ಸ್ಟ್ರೈಕ್​ರೇಟ್ 155.40 ಇತ್ತು. ಆದರೆ ಅವರ ನಾಯಕತ್ವದಲ್ಲಿ ಡೆಲ್ಲಿ ಪ್ಲೇಆಫ್ ಪ್ರವೇಶಿಸುವಲ್ಲಿ ವಿಫಲವಾಗಿತ್ತು. 14 ಪಂದ್ಯಗಳಲ್ಲಿ 7 ಗೆಲುವು, 7 ಸೋಲಿನೊಂದಿಗೆ 14 ಅಂಕ ಪಡೆದು 6ನೇ ಸ್ಥಾನದಲ್ಲಿತ್ತು. ಹೀಗಿದ್ರೂ 2025ರ ಐಪಿಎಲ್​ಗೂ ಮುನ್ನ ರಿಟೇನ್ ವೇಳೆ ಫ್ರಾಂಚೈಸಿ ಮಾಲೀಕರ ನಡುವೆ ಒಮ್ಮತ ಮೂಡದ ಕಾರಣ ಪಂತ್​ರನ್ನ ರಿಟೇನ್ ಮಾಡಿಕೊಂಡಿಲ್ಲ.

2021ರಲ್ಲಿ ಡೆಲ್ಲಿ ಕ್ಯಾಪ್ಟನ್ ಆಗಿದ್ದ ಪಂತ್!

2016ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದೊಂದಿಗೆ ಐಪಿಎಲ್ ವೃತ್ತಿಜೀವನ ಆರಂಭಿಸಿದ ರಿಷಭ್, 2018 ಮತ್ತು 2022ರ ಮೆಗಾ ಹರಾಜಿನಲ್ಲಿ ಡೆಲ್ಲಿ ತಂಡ ಉಳಿಸಿಕೊಂಡಿತ್ತು. ಅಂದಿನಿಂದ 2024ರವರೆಗೂ ಕ್ಯಾಪಿಟಲ್ಸ್ ತಂಡವನ್ನು ಪ್ರತಿನಿಧಿಸಿದ್ದ ಪಂತ್ 2021ರಲ್ಲಿ ಶ್ರೇಯಸ್ ಅಯ್ಯರ್​ನಿಂದ ತೆರವಾದ ನಾಯಕತ್ವದ ಸ್ಥಾನವನ್ನು ಅಲಂಕರಿಸಿದ್ದರು. 2022ರಿಂದ ಪಂತ್ ಪ್ರತಿ ಐಪಿಎಲ್​ಗೂ 16 ಕೋಟಿ ರೂಪಾಯಿ ಪಡೆಯುತ್ತಿದ್ದರು. ಮೊದಲ ಸೀಸನ್​ ಅಂದ್ರೆ 2016ರಲ್ಲಿ 1.9 ಕೋಟಿಗೆ ದೆಹಲಿ ತಂಡ ಸೇರಿದ್ದ ಪಂತ್ 2017ರಲ್ಲೂ ಅಷ್ಟೇ ಸಂಭಾವನೆ ಪಡೆದಿದ್ರು. ಆ ಬಳಿಕ 2018, 19, 20ರಲ್ಲಿ 8 ಕೋಟಿ ಸಂಭಾವನೆ ಪಡೆದಿದ್ರು. ಇನ್ನು 2021ರಲ್ಲಿ ದೆಹಲಿ ತಂಡ 15 ಕೋಟಿ ರೂಪಾಯಿಗೆ ಸಂಭಾವನೆ ಹೆಚ್ಚಿಸಿದ್ರು. 2022ರದಲ್ಲಿ 16 ಕೋಟಿ ನೀಡಲಾಗಿತ್ತು. ಬಟ್ 2023ದಲ್ಲಿ ಅಪಘಾತದ ಕಾರಣದಿಂದ ಪಂತ್ ಮೈದಾನಕ್ಕೆ ಇಳಿದಿರಲಿಲ್ಲ. 2024ರ ಸೀಸನ್​ ವೇಳೆಗೆ ಕಂಪ್ಲೀಟ್ ರಿಕವರ್ ಆಗಿ ಮೈದಾನಕ್ಕೆ ಇಳಿದಿದ್ದ ಪಂತ್ 16 ಕೋಟಿ ವೇತನ ಪಡೆದಿದ್ರು. ಬಟ್ ಈ ಸಲ ಫುಲ್ ಡಿಮ್ಯಾಂಡ್ ಇದ್ದು, ಎಷ್ಟು ಕೋಟಿಗೆ ತಲುಪುತ್ತೆ ಅನ್ನೋ ಕ್ಯೂರಿಯಾಸಿಟಿ ಇದೆ.

ಕ್ಯಾಪ್ಟನ್ ಮೆಟೀರಿಯಲ್ ಆಗಿರೋ ರಿಷಭ್ ಪಂತ್ ಟೀಂ ಇಂಡಿಯಾ ಪರವೂ ಅತ್ಯದ್ಭುತ ಪ್ರದರ್ಶನ ನೀಡ್ತಿದ್ದಾರೆ. ವಿಕೆಟ್ ಕೀಪರ್, ಪವರ್ ಹಿಟ್ಟರ್, ಮಿಡರ್ ಆರ್ಡರ್ ಸ್ಫೋಟಕ ಬ್ಯಾಟರ್ ಆಗಿರೋದ್ರಿಂದ ಎಲ್ಲಾ ಫ್ರಾಂಚೈಸಿಗಳೂ ಪಂತ್ ಖರೀದಿಗೆ ಕಣ್ಣಿಟ್ಟಿವೆ. ಆರ್​ಸಿಬಿಗೆ ಕೂಡ ಪಂತ್ ಎಂಟ್ರಿಯಿಂದ ಒಟ್ಟಿಗೆ 4 ಸ್ಥಾನಗಳನ್ನ ಭರ್ತಿ ಮಾಡೋ ಪ್ಲ್ಯಾನ್​ನಲ್ಲಿದೆ. ಹೀಗಾಗಿ ಪಂತ್​ ಮೇಲೆ ಹೆಚ್ಚೆಚ್ಚು ಬಿಡ್ ನಡೆಯಲಿದೆ. ಹರಾಜಿನಲ್ಲಿ ರಿಷಬ್ ಪಂತ್ ಮಾತ್ರವಲ್ಲದೆ ಕೆಎಲ್ ರಾಹುಲ್ ಮತ್ತು ಶ್ರೇಯಸ್ ಅಯ್ಯರ್ ಕೂಡ ಬೃಹತ್ ಮೊತ್ತಕ್ಕೆ ಸೇಲ್ ಆಗುವ ಚಾನ್ಸಸ್ ಇದೆ. ಬ್ಯಾಟರ್, ವಿಕೆಟ್ ಕೀಪರ್, ಕ್ಯಾಪ್ಟನ್ ಆಗಿಯೂ ತಂಡವನ್ನ ಮುನ್ನಡೆಸೋ ಸಾಮರ್ಥ್ಯ ಇರೋದ್ರಿಂದ ಕೋಟಿ ಕೋಟಿ ಸುರಿಯೋಕೆ ಮಾಲೀಕರು ರೆಡಿ ಇದ್ದಾರೆ.

Shwetha M