RCB ಟೀಮ್ ಗೆ ಫ್ಯಾನ್ಸ್ 5 ಪ್ರಶ್ನೆ! – ಆರ್ಸಿಬಿ ಫ್ಯಾನ್ಸ್ ಸಿಟ್ಟಿಗೆ ಕಾರಣಗಳೇನು..?
ಒಂದು ಸೋಲಾದ್ರೆ ಸುಮ್ಮನಾಗಬಹುದು.. ಎರಡು ಸೋಲಾದ್ರೆ ಸಹಿಸಿಕೊಳ್ಳಬಹುದು.. ಆದ್ರೆ ಒಂದು, ಎರಡು, ಮೂರು, ನಾಲ್ಕು ಅಂತಾ ಮುಗ್ಗರಿಸುತ್ತಲೇ ಹೋದ್ರೆ ಮನ್ನಿಸೋದಾದ್ರೂ ಹೇಗೆ ಹೇಳಿ. ಆರ್ಸಿಬಿ, ಆರ್ಸಿಬಿ ಅಂತಾ ಜೀವ ಬಿಡೋ ಫ್ಯಾನ್ಸ್ ಇದ್ರೂ ಪ್ಲೇಯರ್ಸ್ ಮಾತ್ರ ಅಟ್ಟರ್ಫ್ಲಾಪ್ ಫರ್ಮಾಮೆನ್ಸ್ ನೀಡ್ತಿದ್ದಾರೆ. ಇವತ್ತು ಗೆಲ್ತಾರೇನೋ, ಇವತ್ತು ಗೆಲ್ತಾರೇನೋ ಅಂತಾ ಕಾಯೋ ಅಭಿಮಾನಿಗಳು ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಸಿಡಿದೆದ್ದಿದ್ದಾರೆ. ಕ್ಯಾಪ್ಟನ್ ಆದ್ರೂ ಫ್ಲಾಪ್ ಶೋ ಕೊಡ್ತಿರೋ ಫಾಪ್ ವಿರುದ್ಧ ಕಿಡಿ ಕಾರಿದ್ದಾರೆ. ಮ್ಯಾನೇಜ್ಮೆಂಟ್ ಗೆ ಸಾಲು ಸಾಲು ಪ್ರಶ್ನೆಗಳನ್ನ ಮುಂದಿಟ್ಟಿದ್ದಾರೆ. ಆರ್ಸಿಬಿ ಫ್ಯಾನ್ಸ್ ಸಿಟ್ಟಿಗೆ ಕಾರಣಗಳೇನು..? ಆರ್ಸಿಬಿ ಫ್ರಾಂಚೈಸಿಗೆ ಕೇಳಿರೋ ಪ್ರಶ್ನೆಗಳೇನು..? ಕ್ಯಾಪ್ಟನ್ ಚೇಂಜ್ ಮಾಡ್ತಾರಾ..? ಕೊಹ್ಲಿ ಮುನಿಸಿಕೊಂಡು ಟೀಂ ಬಿಟ್ಟು ಹೋದ್ರಾ..? ಈ ಬಗ್ಗೆ ಮಾಹಿತಿ ಇಲ್ಲಿದೆ..
ಇದನ್ನೂ ಓದಿ: 3 ರನ್ ಗೆ ಧೋನಿ ಬಂದಿದ್ದೇಕೆ? – ಜಡ್ಡುಗೆ ಕ್ರಿಕೆಟ್ ತಲಪತಿ ಎಂದಿದ್ಯಾರು?- ರುತುರಾಜ್ ಲೆಕ್ಕಕ್ಕಷ್ಟೇ ನಾಯಕನಾ?
ಕಳೆದ 16 ಸೀಸನ್ಗಳಲ್ಲೂ ಆರ್ಸಿಬಿ ಒಂದೇ ಒಂದು ಕಪ್ ಗೆದ್ದಿಲ್ಲ. ಹೋಗ್ಲಿ ಈ ಸಲನಾದ್ರೂ ಚೆನ್ನಾಗಿ ಆಡ್ತಾರೆ ಅಂದ್ರೆ ಆರಂಭದಲ್ಲೇ ಆಡಿರೋ ನಾಲ್ಕು ಮ್ಯಾಚ್ಗಳಲ್ಲಿ 3ರಲ್ಲಿ ಸೋತು ಸುಣ್ಣವಾಗಿದ್ದಾರೆ. ವಿರಾಟ್ ಕೊಹ್ಲಿ ಮತ್ತು ದಿನೇಶ್ ಕಾರ್ತಿಕ್ ಬಿಟ್ರೆ ಬೇರೆ ಆಟಗಾರರಿಗೆ ಗೆಲುವು ಲೆಕ್ಕಕ್ಕೇ ಇಲ್ಲ ಎನ್ನುವಂತಾಗಿದೆ. ಆರ್ಸಿಬಿ ಆಟಗಾರರ ಈ ಕೆಟ್ಟ ಪ್ರದರ್ಶನದಿಂದ ಲಾಯಲ್ ಫ್ಯಾನ್ಸ್ ತಾಳ್ಮೆಯ ಕಟ್ಟೆಯೊಡೆದಿದೆ. ರೊಚ್ಚಿಗೆದ್ದಿರುವ ಅಭಿಮಾನಿಗಳು ಪ್ರಶ್ನೆಗಳ ಮೇಲೆ ಪ್ರಶ್ನೆ ಕೇಳ್ತಿದ್ದಾರೆ. ಇಷ್ಟು ವರ್ಷ ಆರ್ಸಿಬಿ ಕಪ್ ಗೆಲ್ಲದಿದ್ರೂ ಅಟ್ಲೀಸ್ಟ್ ಅಫ್ ಫೈಟ್ ಕೊಡ್ಬೇಕು ಅನ್ನೋ ಮನಸ್ಥಿತಿನಾದ್ರೂ ಇತ್ತು. ಆದ್ರೆ ಈ ಸಲ ಹೊಸ ಅಧ್ಯಾಯ ಅಂತಾ ಸೀಸನ್ ಆರಂಭಿಸಿದ್ರೂ ಹಿಂದೆಂದಿಗಿಂತಲೂ ಹೀನಾಯ ಪ್ರದರ್ಶನ ನೀಡ್ತಿದೆ. ಆರ್ಸಿಬಿ ಹ್ಯಾಟ್ರಿಕ್ ಸೋಲಿನ ಬಳಿಕ ಅಭಿಮಾನಿಗಳಿಗೆ ಸಾಲು ಸಾಲು ಪ್ರಶ್ನೆಗಳು ಕಾಡ್ತಿವೆ.
ಪ್ರಶ್ನೆ 1 : ಮ್ಯಾಕ್ಸ್ ವೆಲ್ ನ ಕೈ ಬಿಟ್ಟಿಲ್ಲ ಏಕೆ?
ಗ್ಲೆನ್ ಮ್ಯಾಕ್ಸ್ವೆಕ್.. ಅಬ್ಬಬ್ಬಾ.. ಒಂದು ಕಾಲದಲ್ಲಿ ಮ್ಯಾಕ್ಸಿ ಗ್ರೌಂಡ್ಗೆ ಬಂದ್ರು ಅಂದ್ರೆ ಸಿಕ್ಸ್, ಫೋರ್ ಅಂತಾ ಬೌಲರ್ಗಳ ಬೆವರಿಳಿಸಿತ್ತಿದ್ರು. ಎದುರಾಳಿ ಆಟಗಾರರನ್ನ ಫೀಲ್ಡ್ ತುಂಬಾ ಓಡಾಡಿಸ್ತಿದ್ರು. ಆದ್ರೆ ಈ ಸಲ ಅದೇನ್ ಆಗಿದ್ಯೋ ಏನೋ. ಕ್ರಿಕೆಟ್ ಗಂಧ ಗಾಳಿಯೇ ಗೊತ್ತಿಲ್ಲದವ್ರಂತೆ ಆಟ ಆಡ್ತಿದ್ದಾರೆ. ಬಹುಶಃ ಔಟಾಗೋಕೆ ಕ್ರೀಸ್ಗೆ ಬಂದವ್ರಂತೆ ಅಷ್ಟೇ ಅರ್ಜೆಂಟ್ನಲ್ಲಿ ಪೆವಿಲಿಯನ್ ಸೇರ್ತಿದ್ದಾರೆ. ಇದೇ ಇಂಡಿಯನ್ ಪಿಚ್ಗಳಲ್ಲಿ ಆಸ್ಟ್ರೇಲಿಯಾ ಪರ ವರ್ಲ್ಡ್ ಕಪ್ನಲ್ಲಿ ಧೂಳೆಬ್ಬಿಸಿದ್ದ ಮ್ಯಾಕ್ಸಿ ಈಗ ಆರ್ಸಿಬಿ ಪರ ಅಟ್ಟರ್ಫ್ಲಾಪ್ ಆಗಿದ್ದಾರೆ. ಆಡಿರೋ ಐದು ಮ್ಯಾಚ್ಗಳನ್ನೂ ಸೇರಿ ಜಸ್ಟ್ 32 ರನ್ ಹೊಡೆದಿದ್ದಾರೆ. ಬಹುಶಃ ನಮ್ಮ ಗಲ್ಲಿ ಕ್ರಿಕೆಟರ್ಸ್ ಗೇನಾದ್ರೂ ಚಾನ್ಸ್ ಕೊಟ್ಟಿದ್ರೆ ಒಂದೇ ಮ್ಯಾಚ್ನಲ್ಲಿ ಇದಕ್ಕಿಂತ ಜಾಸ್ತಿನೇ ರನ್ ಬಾರಿಸ್ತಿದ್ರು. ಅಷ್ಟು ಹೀನಾಯ ರೀತಿಯಲ್ಲಿ ಮ್ಯಾಕ್ಸಿ ವಿಕೆಟ್ ಒಪ್ಪಿಸಿದ್ದಾರೆ. ಆದ್ರೂ ಪ್ಲೇಯಿಂಗ್ ಇಲೆವೆನ್ನಲ್ಲಿ ಚಾನ್ಸ್ ಸಿಗ್ತಿರೋದ್ಯಾಕೆ ಅನ್ನೋದೆ ಅರ್ಥವಾಗ್ತಿಲ್ಲ. ಮೊದ್ಲು ಈ ಮ್ಯಾಕ್ಸಿನ ಟೀಂನಿಂದ ಹೊರಗಿಡಿ ಎಂದು ಫ್ಯಾನ್ಸ್ ರೊಚ್ಚಿಗೆದ್ದಿದ್ದಾರೆ.
ಪ್ರಶ್ನೆ 2 : ಕ್ಯಾಮರೂನ್ ಗ್ರೀನ್ ಗೆ ಯಾಕಿಷ್ಟು ಚಾನ್ಸ್?
ಒಂದಲ್ಲ ಎರಡಲ್ಲ.. ಬರೋಬ್ಬರಿ 18.5 ಕೋಟಿಗೆ ಆರ್ಸಿಬಿ ಸೇರಿದ ಕ್ಯಾಮರೂನ್ ಗ್ರೀನ್ ಬ್ಯಾಟಿಂಗ್ನಲ್ಲೂ ಇಲ್ಲ. ಬೌಲಿಂಗ್ನಲ್ಲೂ ಇಲ್ಲ. ಆದ್ರೂ ಪ್ಲೇಯಿಂಗ್ XIನಲ್ಲಿ ಮಾತ್ರ ಸ್ಥಾನ ಫಿಕ್ಸ್ ಆಗಿದೆ. ಆಡಿರೋ ಐದು ಪಂದ್ಯಗಳಿಂದ 68 ರನ್ಗಳಿಸಿರೋ ಗ್ರೀನ್, ಬೌಲಿಂಗ್ನಲ್ಲಿ 9.40ರ ಎಕಾನಮಿಯಲ್ಲಿ ಉದಾರವಾಗಿ ರನ್ ಬಿಟ್ಟು ಕೊಡ್ತಿದ್ದಾರೆ. ಆದ್ರೂ, ಆರ್ಸಿಬಿ ಮ್ಯಾನೇಜ್ಮೆಂಟ್ ಗ್ರೀನ್ ಗೆ ಚಾನ್ಸ್ ಕೊಡ್ತಿರೋದೇಕೆ ಅನ್ನೋದೇ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.
ಪ್ರಶ್ನೆ 3 : ವೈಶಾಕ್ ವಿಜಯ್ ಕುಮಾರ್ ಚೆನ್ನಾಗಿ ಆಡಿದ್ದೇ ತಪ್ಪಾ?
ಆರ್ಸಿಬಿ ತಂಡ ಮೊದ್ಲಿಂದಲೂ ಕನ್ನಡಿಗರಿಗೆ ಚಾನ್ಸ್ ಕೊಡಲ್ಲ ಅನ್ನೋ ಕುಖ್ಯಾತಿ ಪಡೆದಿದೆ. ನಮ್ಮ ಕನ್ನಡಿಗರು ಬೇರೆ ಬೇರೆ ಟೀಮ್ಗಳಲ್ಲಿ ಧೂಳೆಬ್ಬಿಸಿ ಟ್ರೋಫಿ ತಂದು ಕೊಟ್ರೂ ಆರ್ಸಿಬಿಯಲ್ಲಿ ಮಾತ್ರ ಚಾನ್ಸ್ ಕೊಡಲ್ಲ. ಈ ಸೀಸನ್ನಲ್ಲಿ ಬೆಂಗಳೂರು ತಂಡದಲ್ಲಿರೋ ಕನ್ನಡಿಗ ವೈಶಾಕ್ ವಿಜಯ್ಕುಮಾರ್ ಸಿಕ್ಕ ಒಂದು ಅವಕಾಶದಲ್ಲಿ ಎಕಾನಮಿಕಲ್ ಪರ್ಫಾಮೆನ್ಸ್ ನೀಡಿದ್ರು. 4 ಓವರ್ಗಳಲ್ಲಿ 23 ರನ್ ಕೊಟ್ಟು, 1 ವಿಕೆಟ್ ಕೂಡ ಉರುಳಿಸಿದ್ರು. ಆದ್ರೆ, ಆ ಬಳಿಕ ವೈಶಾಕ್ಗೆ ಅವಕಾಶ ಸಿಕ್ಕೇ ಇಲ್ಲ.. MOSTLY ವೈಶಾಕ್ ಉತ್ತಮ ಪ್ರದರ್ಶನ ನೀಡಿದ್ದೇ ತಪ್ಪಾಯ್ತು ಅನ್ಸುತ್ತೆ. ವೈಶಾಕ್ಗೆ ಚಾನ್ಸ್ ಕೊಟ್ಟು ಮ್ಯಾಚ್ ಗೆಲ್ಲಿಸಿಬಿಟ್ರೆ ಆರ್ಸಿಬಿ ಪ್ಲೇಆಫ್ಗೆ ಹೋಗ್ಬೇಕಾಗುತ್ತೆ. ಮತ್ತೆ ಎಕ್ಸ್ಟ್ರಾ ಮ್ಯಾಚ್ ಆಡ್ಬೇಕಾಗುತ್ತೆ ಅನ್ನೋ ಭಯ ಕಾಡ್ತಿರಬಹುದು ಎಂದು ಅಭಿಮಾನಿಗಳು ಮ್ಯಾನೇಜ್ಮೆಂಟ್ ಕಾಲೆಳೆಯುತ್ತಿದ್ದಾರೆ..
ಪ್ರಶ್ನೆ 4 : ವಿಲ್ ಜಾಕ್ಸ್, ಕರಣ್ ಶರ್ಮಾ ಬೆಂಚ್ ಗೆ ಸೀಮಿತನಾ?
ಸದ್ಯ ಆರ್ಸಿಬಿ ಅಭಿಮಾನಿಗಳನ್ನ ಕಾಡ್ತಿರೋ ಪ್ರಮುಖವಾದ ಪ್ರಶ್ನೆಯಿದು. 2023ರಿಂದ 55 ಟಿ20 ಮ್ಯಾಚ್ ಆಡಿರೋ ವಿಲ್ ಜಾಕ್ಸ್, 165.93ರ ಸ್ಟ್ರೈಕ್ರೇಟ್ನಲ್ಲಿ 1,598 ರನ್ ಚಚ್ಚಿದ್ದಾರೆ. 2 ಸೆಂಚುರಿ, 10 ಹಾಫ್ ಸೆಂಚುರಿ ಹೊಡೆದಿದ್ದಾರೆ. ಇಂತಾ ಸಾಲಿಡ್ ರೆಕಾರ್ಡ್ ಹೊಂದಿರೋ ಆಟಗಾರನನ್ನ ಆರ್ಸಿಬಿ ಮ್ಯಾನೇಜ್ಮೆಂಟ್ ಬೆಂಚ್ ಸೀಮಿತ ಮಾಡಿದೆ. ಹಾಗೇ ಉಳಿದೆಲ್ಲಾ ತಂಡದ ಸ್ಪಿನ್ನರ್ಸ್ ಐಪಿಎಲ್ ಅಖಾಡದಲ್ಲಿ ವಿಕೆಟ್ ಬೇಟೆಯಾಡ್ತಿದ್ದಾರೆ. ನಮ್ಮ ಆರ್ಸಿಬಿಯಲ್ಲಿ ವರ್ಲ್ಡ್ ಕ್ಲಾಸ್ ಸ್ಪಿನ್ನರ್ ಇಲ್ಲ. ಇರೋದ್ರಲ್ಲಿ ಅನುಭವಿ ಕರಣ್ ಶರ್ಮಾ ಬೆಸ್ಟ್. ಕಳೆದ ಸೀಸನ್ನಲ್ಲಿ ಡಿಸೆಂಟ್ ಪರ್ಫಾಮೆನ್ಸ್ ಕೂಡ ನೀಡಿದ್ರು. ಆದ್ರೂ ಈ ಸೀಸನ್ನಲ್ಲಿ ಒಂದೇ ಪಂದ್ಯಕ್ಕೆ ಸೀಮಿತವಾಗಿದ್ದಾರೆ.
ಪ್ರಶ್ನೆ 5 : ಫಾಫ್ ಡು ಪ್ಲೆಸ್ಸಿಸ್ ಕ್ಯಾಪ್ಟನ್ಸಿ ಬೇಕಾ..?
ಈ ಫಾಫ್ ಡುಪ್ಲೆಸ್ಸಿಸ್ ಕಥೆಯಂತೂ ಹೇಳೋದೇ ಬೇಡ. ಅದ್ಯಾವ ಸೀಮೆ ಕ್ಯಾಪ್ಟನ್ನೋ ಅಭಿಮಾನಿಗಳಿಗೆ ಅರ್ಥನೇ ಆಗ್ತಿಲ್ಲ. ಹೊಡಿಬಡಿ ಎನ್ನುವಂತೆ ಬ್ಯಾಟಿಂಗ್ನೂ ಮಾಡ್ತಿಲ್ಲ. ಯಾವ ಓವರ್ಗೆ ಯಾವ ಬೌಲರ್ನ ಕಳಿಸ್ಬೇಕು ಅನ್ನೋ ಐಸಿಯಾನೇ ಇಲ್ಲ. ರಾಜಸ್ತಾನ ಮತ್ತು ಕೆಕೆಆರ್ ವಿರುದ್ಧದ ಮ್ಯಾಚ್ಗಳಲ್ಲಂತೂ ಆರಂಭದಲ್ಲೇ ಆರ್ಸಿಬಿ ಬೌಲರ್ಗಳು ಚಚ್ಚಿಸಿಕೊಳ್ತಿದ್ರೂ ಯಾವ ಸ್ಟ್ರಾಟಜಿಯನ್ನೂ ಮಾಡೋ ಗೋಜಿಗೇ ಹೋಗ್ಲಿಲ್ಲ. ಇನ್ನು ಫೀಲ್ಡಿಂಗ್ ಸೆಟ್ ಮಾಡೋದ್ರಲ್ಲೂ ಎಡವುತ್ತಿದ್ದಾರೆ. ಇದೇ ಕಾರಣಕ್ಕೆ ರಾಜಸ್ತಾನ ವಿರುದ್ಧದ ಪಂದ್ಯದಲ್ಲಿ ಕಿಂಗ್ ಕೊಹ್ಲಿ ಮತ್ತು ಫಾಫ್ ನಡುವೆ ಫೀಲ್ಡ್ನಲ್ಲೇ ಕಿರಿಕ್ ಆಗಿತ್ತು. ಕೊಹ್ಲಿ ಎಷ್ಟೇ ಹೇಳಿದ್ರೂ ತಮ್ಮ ನಿರ್ಧಾರದಲ್ಲಿ ಬದಲಾವಣೆ ಮಾಡಿರಲಿಲ್ಲ. ಇದ್ರಿಂದ ಕೊಹ್ಲಿ ಕೂಡ ಕ್ಯಾಪ್ಟನ್ ವಿರುದ್ಧ ಗರಂ ಆದವರಂತೆ ಕಂಡು ಬಂದಿದ್ರು.
ಈಗಾಗ್ಲೇ 5ರಲ್ಲಿ 4 ಪಂದ್ಯ ಸೋತಿರುವ ಆರ್ಸಿಬಿಗೆ ಮುಂದಿನ 9 ಪಂದ್ಯಗಳೂ, ನಾಕೌಟ್ನಂತೆಯೇ ಇದೆ. ಘಟಾನುಘಟಿ ತಂಡಗಳಾದ ಮುಂಬೈ ಇಂಡಿಯನ್ಸ್, ಸನ್ ರೈಸರ್ಸ್ ಹೈದ್ರಾಬಾದ್, ಕೊಲ್ಕತ್ತಾ ನೈಟ್ ರೈಡರ್ಸ್, ಚೆನ್ನೈ ಸೂಪರ್ ಕಿಂಗ್ಸ್, ಡೆಲ್ಲಿ, ಗುಜರಾತ್ ಎದುರು ಹೋರಾಟ ನಡೆಸಬೇಕಿದೆ. ಇದೇ ಥರ ಆಟ ಮುಂದುವರಿಸಿದ್ರೆ ಆರ್ಸಿಬಿ ಖೇಲ್ ಖತಂ ಗ್ಯಾರಂಟಿ. ಹಾಗಂತ ಪ್ಲೇಆಫ್ ಕನಸನ್ನೂ ಕಂಪ್ಲೀಟ್ ಕೈ ಬಿಡುವ ಅವಶ್ಯಕತೆಯೂ ಇಲ್ಲ. ನಥಿಂಗ್ ಇಂಪಾಸಿಬಲ್ ಅನ್ನೋದನ್ನ ಮರೆಯುವಂತಿಲ್ಲ. ಯಾಕಂದ್ರೆ, ಇಲ್ಲಿ ಸತತ 5 ಪಂದ್ಯ ಸೋತು ಚಾಂಪಿಯನ್ ಪಟ್ಟಕ್ಕೇರಿದ ಎಕ್ಸಾಂಪಲ್ಸ್ ಇವೆ. ಇದಕ್ಕಾಗಿ ಆರ್ಸಿಬಿ ಒಗ್ಗಟ್ಟಿನ ಹೋರಾಟ ನಡೆಸಬೇಕಷ್ಟೇ.. ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ನಲ್ಲಿ ಅಗ್ರೆಸ್ಸಿವ್ ಆಟ ಆಡಿದಾಗ ಪ್ಲೇ ಆಫ್ ತಲುವುಪೋದು ಕಷ್ಟವೇನೂ ಅಲ್ಲ. ಆದ್ರೆ ಸದ್ಯಕ್ಕಂತೂ ವಿರಾಟ್ ಕೊಹ್ಲಿ ಒಬ್ರೇ ಆರ್ಸಿಬಿಗಾಗಿ ಲಾಯಲ್ ಆಗಿ ಆಡ್ತಿದ್ದಾರೆ. ರಾಜಸ್ತಾನ ವಿರುದ್ಧ ಶತಕವನ್ನೂ ಬಾರಿಸಿದ್ರು. ಆದ್ರೂ ಟೀಂ ಗೆಲ್ಲಲಿಲ್ಲ. ಬಳಿಕ ತುಂಬಾ ಅಭಿಮಾನಿಗಳು ವಿರಾಟ್ ಕೊಹ್ಲಿಯವ್ರಿಗೆ ಆರ್ಸಿಬಿ ಟೀಂ ಬಿಡುವಂತೆ ಸಲಹೆ ನೀಡಿದ್ದರು. ನೀವು ಎಷ್ಟೇ ಹೋರಾಟ ಮಾಡಿದ್ರೂ ಟೀಂ ಪ್ಲೇಯರ್ಸ್ ಸಪೋರ್ಟ್ ಸಿಗಲ್ಲ. ಸೆಂಚುರಿ ಹೊಡೆದ್ರೂ ಟೀಂ ಗೆದ್ದಿಲ್ಲ ಅಂದ್ರೆ ಪ್ರಯೋಜನ ಇಲ್ಲ. ಮುಂದಿನ ಸೀಸನ್ನಿಂದ ಬೇರೆ ಟೀಮ್ಗೆ ಆಡಿ ಅಂತಾ ಸಜೇಷನ್ಸ್ ನೀಡಿದ್ರು. ಒಟ್ಟಿನಲ್ಲಿ, ಇಷ್ಟು ದಿನ ಇದ್ದ ಲಾಯಲ್ ಅಭಿಮಾನಿಗಳ ಪ್ರೀತಿ, ಅಭಿಮಾನ.. ಹ್ಯಾಟ್ರಿಕ್ ಸೋಲಿನ ಬಳಿಕ ಆಕ್ರೋಶವಾಗಿ ಬದಲಾಗಿದೆ. ಟೀಮ್ನಲ್ಲಿ ಬದಲಾವಣೆ ಮಾಡುವಂತೆ ಸಲಹೆ ನೀಡುತ್ತಿದ್ದಾರೆ. ಆದ್ರೆ ಇನ್ನಾದ್ರೂ ಆರ್ಸಿಬಿ ಮ್ಯಾನೇಜ್ಮೆಂಟ್ ಎಚ್ಚೆತ್ತುಕೊಳ್ಳುತ್ತೋ ಇಲ್ಲ ಮತ್ತದೇ ಬಂದ ಪುಟ್ಟ ಹೋದ ಪುಟ್ಟ ಅಂತಾ ಪ್ಲೇಯರ್ಸ್ ಕ್ರೀಸ್ ಟು ಪೆವಿಲಿಯನ್ ಪರೇಡ್ ನಡೆಸ್ತಾರೋ ನೊಡ್ಬೇಕು.