RCBಗೆ ಬೇಕು ಫಾರಿನ್ ವೆಪನ್ – ಫಸ್ಟ್ ರೌಂಡ್ ಹರಾಜಿನಲ್ಲೇ ಬಿಗ್ ಸ್ಟಾರ್ಸ್
₹16 ಕೋಟಿ ಬ್ಯಾಲೆನ್ಸ್.. ಯಾರಿಗೆಷ್ಟು?

2026ರ ಐಪಿಎಲ್ಗೆ ಸಜ್ಜಾಗ್ತಿರೋ ಫ್ರಾಂಚೈಸಿಗಳು ಡಿಸೆಂಬರ್ 16ರಂದು ಅಬುದಾಬಿಯಲ್ಲಿ ನಡೆಯಲಿರುವ ಮಿನಿ ಆಕ್ಷನ್ನಲ್ಲಿ ಆಟಗಾರರನ್ನ ಖರೀದಿ ಮಾಡಲಿದ್ದಾರೆ. ಬಿಸಿಸಿಐ ಅಂತಿಮ ಪಟ್ಟಿಯ ಪ್ರಕಾರ 350 ಕ್ರಿಕೆಟಿಗರು ಮಾತ್ರ ಬಿಡ್ಡಿಂಗ್‌ಗೆ ಸಿದ್ಧರಿದ್ದಾರೆ. ಇವರಲ್ಲಿ 240 ಭಾರತೀಯ ಆಟಗಾರರು ಮತ್ತು 110 ವಿದೇಶಿ ಪ್ಲೇಯರ್ಸ್ ಇದ್ದಾರೆ. ಸದ್ಯ ಆರ್ಸಿಬಿ ಫ್ರಾಂಚೈಸಿ 6 ಆಟಗಾರರನ್ನ ಖರೀದಿ ಮಾಡ್ಬೇಕಿದೆ.
ಇದನ್ನೂ ಓದಿ : ಜ.6ಕ್ಕೆ ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ! – ಇಕ್ಬಾಲ್ ಹುಸೇನ್ ಸ್ಪೋಟಕ ಹೇಳಿಕೆ
10 ಐಪಿಎಲ್ ಫ್ರಾಂಚೈಸಿಗಳು 77 ಆಟಗಾರರನ್ನ ಖರೀದಿ ಮಾಡ್ಬೇಕಿದೆ. ಮೂರು ಬಾರಿ ಚಾಂಪಿಯನ್ ಆಗಿರುವ ಕೆಕೆಆರ್ ₹64.3 ಕೋಟಿ ಅತ್ಯಧಿಕ ಮೊತ್ತದೊಂದಿಗೆ ಹರಾಜಿಗೆ ಪ್ರವೇಶಿಸಲಿದೆ. ಹೈಯೆಸ್ಟ್ ಪರ್ಸ್ ಬ್ಯಾಲೆನ್ಸ್ ಕೆಕೆಆರ್ ಬಳಿಯೇ ಇದೆ. ಇನ್ನು ಆರು ವಿದೇಶಿ ಆಟಗಾರರು ಸೇರಿದಂತೆ 17 ಆಟಗಾರರನ್ನ ರಿಟೇನ್ ಮಾಡಿಕೊಂಡಿರೋ ಆರ್ಸಿಬಿ 16.40 ಕೋಟಿಯೊಂದಿಗೆ ಅಖಾಡಕ್ಕಿಳಿಯಲಿದೆ. ಇಬ್ಬರು ವಿದೇಶಿ ಆಟಗಾರರು ಸೇರಿದಂತೆ ಎಂಟು ಸ್ಥಾನಗಳನ್ನ ಭರ್ತಿ ಮಾಡ್ಬೇಕಿದೆ. ಅದ್ರಲ್ಲೂ ಲಿಯಾಮ್ ಲಿವಿಂಗ್ ಸ್ಟೋನ್ ಸ್ಥಾನಕ್ಕೆ ಒಬ್ಬ ಸಮರ್ಥ ಆಟಗಾರರನ್ನ ಖರೀದಿ ಮಾಡ್ಬೇಕಿದೆ. 350 ಆಟಗಾರರಲ್ಲಿ 7 ಪ್ಲೇಯರ್ಸ್ ಆಲ್ರೌಂಡರ್ಗಳ ಪಟ್ಟಿಯಲ್ಲಿ ಮೊದಲ ಸುತ್ತಿನಲ್ಲೇ ಹರಾಜು ನಡೆಯಲಿದೆ.
ಇಂಗ್ಲೆಂಡ್ ತಂಡದ ಆಲ್ ರೌಂಡರ್ ಗಸ್ ಅಟ್ಕಿನ್ಸನ್
ಇಂಗ್ಲೆಂಡ್ ತಂಡದ ಆಲ್ರೌಂಡರ್ ಗಸ್ ಅಟ್ಕಿನ್ಸನ್ ಈ ಬಾರಿ ಎ1 ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಈ ಹಿಂದೆ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲಿ ಕಾಣಿಸಿಕೊಂಡಿದ್ದ ಅಟ್ಕಿನ್ಸನ್ ಕಳೆದ ಸೀಸನ್ನಲ್ಲಿ ಕಣಕ್ಕಿಳಿದಿರಲಿಲ್ಲ. ಇದಾಗ್ಯೂ ಈ ಬಾರಿ 2 ಕೋಟಿ ರೂ. ಮೂಲ ಬೆಲೆಯೊಂದಿಗೆ ಮಾರ್ಕ್ಯೂ ಲಿಸ್ಟ್ನಲ್ಲಿದ್ದಾರೆ.
ಶ್ರೀಲಂಕಾ ತಂಡದ ಸ್ಪಿನ್ನರ್ ವನಿಂದು ಹಸರಂಗ
ಮಿನಿ ಆಕ್ಷನ್ ನಲ್ಲಿ ಶ್ರೀಲಂಕಾ ತಂಡದ ಸ್ಪಿನ್ನರ್ ವನಿಂದು ಹಸರಂಗ ಕಳೆದ ಸೀಸನ್ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ಕಾಣಿಸಿಕೊಂಡಿದ್ದರು. ಇದೀಗ 2 ಕೋಟಿ ರೂ. ಮೂಲ ಬೆಲೆಯೊಂದಿಗೆ ಕಾಣಿಸಿಕೊಂಡಿರುವ ಹಸರಂಗ ಮೊದಲ ಸುತ್ತಿನ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
ಸೌತ್ ಆಫ್ರಿಕಾ ತಂಡದ ಆಲ್ ರೌಂಡರ್ ವಿಯಾನ್ ಮುಲ್ಡರ್
ಸೌತ್ ಆಫ್ರಿಕಾ ತಂಡದ ಆಲ್ರೌಂಡರ್ ವಿಯಾನ್ ಮುಲ್ಡರ್ ಕಳೆದ ಸೀಸನ್ನಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡದಲ್ಲಿ ಕಾಣಿಸಿಕೊಂಡಿದ್ದರು. ಇದೀಗ 1 ಕೋಟಿ ರೂ. ಮೂಲ ಬೆಲೆ ಘೋಷಿಸಿರುವ ಮುಲ್ಡರ್ ಕೂಡ ಮೊದಲ ಸುತ್ತಿನ ಹರಾಜು ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
ನ್ಯೂಝಿಲೆಂಡ್ ನ ಯುವ ಆಲ್ ರೌಂಡರ್ ರಚಿನ್ ರವೀಂದ್ರ
ಐಪಿಎಲ್ 2025 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಆಡಿದ್ದ ನ್ಯೂಝಿಲೆಂಡ್ನ ಯುವ ಆಲ್ರೌಂಡರ್ ರಚಿನ್ ರವೀಂದ್ರ ಈ ಬಾರಿ ಹರಾಜಿನಲ್ಲಿದ್ದಾರೆ. 2 ಕೋಟಿ ರೂ. ಮೂಲ ಬೆಲೆ ಘೋಷಿಸಿರುವ ಅವರು ಕೂಡ ಮಾರ್ಕ್ಯೂ ಲಿಸ್ಟ್ನಲ್ಲಿ ಸ್ಥಾನ ಪಡೆದಿದ್ದಾರೆ.
ಇಂಗ್ಲೆಂಡ್ ಆಲ್ ರೌಂಡರ್ ಲಿಯಾಮ್ ಲಿವಿಂಗ್ ಸ್ಟೋನ್
ಇಂಗ್ಲೆಂಡ್ ಆಲ್ ರೌಂಡರ್ ಲಿಯಾಮ್ ಲಿವಿಂಗ್ ಸ್ಟೋನ್ ಮೇಲೆ ಮತ್ತೆ ಬಿಡ್ ಮಾಡೋ ಚಾನ್ಸಸ್ ಇದೆ. ಕಳೆದ ಬಾರಿ ಬೆಂಗಳೂರು ನಿರೀಕ್ಷಿತ ಪ್ರದರ್ಶನ ಬಂದಿರಲಿಲ್ಲ. ಹೀಗಾಗಿ ಈ ಸಲವೂ ಅವ್ರ ಮೇಲೆ ಕಡಿಮೆ ಮೊತ್ತಕ್ಕೆ ಬಿಡ್ ಮಾಡಬಹುದು. ಲಿವಿಂಗ್ಸ್ಟೋನ್ ಈ ಬಾರಿ 2 ಕೋಟಿ ರೂ. ಮೂಲ ಬೆಲೆಯೊಂದಿಗೆ ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ನೋಡಿರಿ

