RCB ಆಕ್ಷನ್ ಲಿಸ್ಟ್ ನಲ್ಲಿ ಸ್ಟಾರ್ಸ್ – ಪತಿರಾಣ Vs ಹಸರಂಗ Vs ಮಿಲ್ಲರ್!
ಫಾಸ್ಟ್ ಬೌಲರ್ ಬಂದ್ರೆ ಕಪ್ ನಮ್ದೇ

RCB ಆಕ್ಷನ್ ಲಿಸ್ಟ್ ನಲ್ಲಿ ಸ್ಟಾರ್ಸ್ – ಪತಿರಾಣ Vs ಹಸರಂಗ Vs ಮಿಲ್ಲರ್!ಫಾಸ್ಟ್ ಬೌಲರ್ ಬಂದ್ರೆ ಕಪ್ ನಮ್ದೇ

2026ರ ಐಪಿಎಲ್​ ಮಿನಿ ಆಕ್ಷನ್​ಗೆ ಕೌಂಟ್​ಡೌನ್ ಸ್ಟಾರ್ಟ್ ಆಗಿದೆ. ಡಿಸೆಂಬರ್ 16 ಅಂದ್ರೆ ಮಂಗಳವಾರ ಅಬುದಾಬಿಯಲ್ಲಿ ಮಿನಿ ಆಕ್ಷನ್ ನಡೆಯಲಿದ್ದು ಹತ್ತೂ ಫ್ರಾಂಚೈಸಿಗಳೂ ಸ್ಟಾರ್ ಆಟಗಾರರ ಮೇಲೆ ಕಣ್ಣಿಟ್ಟಿದ್ದಾರೆ. ಐಪಿಎಲ್​ನ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಬಿಗ್ ಚೇಂಜಸ್ ಅಂತಾ ಏನೂ ಇಲ್ದೇ ಇದ್ರೂ ಕ್ವಾಲಿಟಿ ಪ್ಲೇಯರ್ಸ್ ಮೇಲಂತೂ ಬಿಡ್ ಮಾಡ್ಲೇಬೇಕು. ಲಿಯಾಮ್ ಲಿವಿಂಗ್ ಸ್ಟೋನ್ ಬದಲಿಗೆ ಬೆಸ್ಟ್ ರಿಪ್ಲೇಸ್ ಮಾಡ್ಬೇಕು. ಬ್ಯಾಕಪ್ ಫಾಸ್ಟ್ ಬೌಲರ್​ ಇಟ್ಕೊಳ್ಳೋದು ಮುಖ್ಯ.

ಇದನ್ನೂ ಓದಿ : KGF- 2 ದಾಖಲೆ ಉಡೀಸ್ ಮಾಡುತ್ತಾ ಧುರಂಧರ್ ? – ಭಾನುವಾರ ಒಂದೇ ದಿನ 112 ಕೋಟಿ ಕಲೆಕ್ಷನ್‌!

19ನೇ ಸೀಸನ್ ಐಪಿಎಲ್​ಗೂ ಮುನ್ನ ಆರ್​ಸಿಬಿ ಫ್ರಾಂಚೈಸಿ ಟೋಟಲ್ಲಾಗಿ 17 ಆಟಗಾರರನ್ನ ರಿಟೇನ್ ಮಾಡ್ಕೊಂಡಿತ್ತು. ಹಾಗೇ 8 ಪ್ಲೇಯರ್ಸ್ ರಿಲೀಸ್ ಆಗಿದ್ರು. ಹೀಗಾಗಿ ಮಿನಿ ಆಕ್ಷನ್​ನಲ್ಲಿ 8 ಪ್ಲೇಯರ್ಸ್ ಖರೀದಿ ಮಾಡ್ಬೇಕು. ಇದ್ರಲ್ಲಿ 6 ಆಟ ಭಾರತೀಯರು ಹಾಗೇ ಇಬ್ಬರು ವಿದೇಶಿ ಪ್ಲೇಯರ್ಸ್ ಮೇಲೆ ಬಿಡ್ ಮಾಡ್ಬೇಕು. ಌಂಡ್ ಪರ್ಸ್ ಬ್ಯಾಲೆನ್ಸ್ 16.4 ಕೋಟಿ ಇದ್ದು ಈ ಹಣದಲ್ಲೇ ಬೆಸ್ಟ್ ಪ್ಲೇಯರ್ಸ್ ಪಿಕ್ ಮಾಡೋ ಚಾಲೆಂಜ್ ಕೂಡ ಇದೆ. ಲಿಯಾಮ್ ಲಿವಿಂಗ್ ಸ್ಟೋನ್ ರನ್ನ ಕೈಬಿಟ್ಟಿರೋದ್ರಿಂದ ಸ್ಟಾರ್ ಆಲ್ ರೌಂಡರ್ ಗಳ ಶಾರ್ಟ್ ಲಿಸ್ಟ್ ರೆಡಿಯಾಗಿದೆ.

ಫಾಸ್ಟ್ ಬೌಲರ್ ಪತಿರಾಣ ಫ್ರಾಂಚೈಸಿಗಳ ಟಾರ್ಗೆಟ್!

ಸದ್ಯ ಐಪಿಎಲ್ ಮಿನಿ ಆಕ್ಷನ್ ನಲ್ಲಿರೋ ಒನ್ ಆಫ್ ದಿ ಬೆಸ್ಟ್ ಫಾಸ್ಟ್ ಬೌಲರ್ ಮತೀಶ ಪತಿರಾಣ. 150 ಕಿಮೀ ವೇಗದ ಯಾರ್ಕರ್‌ಗಳನ್ನು ಎಸೆದು ಬ್ಯಾಟರ್​ಗಳನ್ನ ಕಾಡುವ ಸಾಮರ್ಥ್ಯ ಇದೆ. ಕಳೆದ ಐಪಿಎಲ್‌ನಲ್ಲಿ 153 ಕಿಮೀ ವೇಗದಲ್ಲಿ ಬೌಲ್ ಮಾಡಿದ್ರು. ಹೀಗಿದ್ರೂ ಕಳೆದ ಸೀಸನ್ ಗಾಯದ ಸಮಸ್ಯೆಗಳಿಂದ ಫಿಟ್ನೆಸ್ ಮತ್ತು ಪರ್ಫಾಮೆನ್ಸ್​ ಅಷ್ಟೊಂದು ಎಫೆಕ್ಟಿವ್ ಆಗಿರಲಿಲ್ಲ. ಬಟ್ ಈಗ ಮತ್ತೆ ಫಾರ್ಮ್​ನಲ್ಲಿದ್ದು ಆರ್ಸಿಬಿ ಕೂಡ ಬ್ಯಾಕಪ್ ಫಾಸ್ಟ್ ಬೌಲರ್ ಆಗಿ ಖರೀದಿ ಮಾಡಬಹುದು. ಬಟ್ ಎಕ್ಸ್​ಪೆನ್ಸಿವ್ ಪ್ಲೇಯರ್ ಆಗಿರೋದ್ರಿಂದ ಬ್ಯಾಲೆನ್ಸ್ ಬಗ್ಗೆಯೂ ಯೋಚಿಸಬೇಕಾಗುತ್ತೆ. ಹಾಗೇ ಬೇರೆ ಬೇರೆ ತಂಡಗಳೂ ಪತಿರಾಣ ಮೇಲೆ ಕಣ್ಣಿಟ್ಟಿದ್ದಾರೆ. ಸೋ ರೇಸ್ ಅಂತೂ ಇರುತ್ತೆ.

ಮಾಜಿ ಆಟಗಾರ ಗ್ರೀನ್ ಮೇಲೆ ಬಿಡ್ ಮಾಡುತ್ತಾ ಆರ್ ಸಿಬಿ?

ಆರ್ ಸಿಬಿ ತಂಡದ ಮಾಜಿ ಆಟಗಾರ ಕ್ಯಾಮೆರಾನ್ ಗ್ರೀನ್ ಸದ್ಯ ಮಿನಿ ಆಕ್ಷನ್ ನಲ್ಲಿದ್ದು ಸೆಂಟ್ರ್ ಆಫ್ ಅಟ್ರ್ಯಾಕ್ಷನ್ ಆಗಿದ್ದಾರೆ. ಹಾಗೇ ಹೈಯೆಸ್ಟ್ ಬಿಡ್ ಆಗುವಂತ ಪ್ಲೇಯರ್ ಎಂದೂ ಪ್ರೆಡಿಕ್ಟ್ ಮಾಡಲಾಗ್ತಿದೆ. 2023ರ ಐಪಿಎಲ್​ಗೂ ಮುನ್ನ ಮುಂಬೈ ತಂಡ ಬರೋಬ್ಬರಿ 17.5 ಕೋಟಿಗೆ ಖರೀದಿ ಮಾಡಿತ್ತು. ಮುಂಬೈ ಪರ ಒಂದು ಶತಕ ಸೇರಿದಂತೆ ಆ ಸೀಸನಲ್ಲಿ 452 ರನ್ಸ್ ಸ್ಕೋರ್ ಮಾಡಿದ್ರು. ಬಟ್ ನೆಕ್ಸ್​ಟ್ ಇಯರ್ ಅಂದ್ರೆ 2024ರ ಐಪಿಎಲ್​ಗೂ ಮುನ್ನ ಹಾರ್ದಿಕ್ ಪಾಂಡ್ಯರನ್ನ ಟ್ರೇಡ್ ಮಾಡಿಕೊಳ್ಳೋಕಂತ್ಲೇ ಆರ್​ಸಿಬಿಗೆ ಗ್ರೀನ್​ರನ್ನ ಬಿಟ್ಟುಕೊಟ್ಟಿತ್ತು. ಆರ್​ಸಿಬಿ ಪರ ಗ್ರೀನ್ 2024ರಲ್ಲಿ 255 ರನ್ಸ್ ಕಲೆ ಹಾಕಿದ್ರು. ಆ ನಂತ್ರ ಗ್ರೀನ್ ಗಾಯಗೊಂಡಿದ್ದು 2025 ರ ಮೆಗಾ ಹರಾಜಿನಲ್ಲಿ ಭಾಗಿಯಾಗಿರಲಿಲ್ಲ. ಬಟ್ ಈ ಸಲ ಕಂಪ್ಲೀಟ್ ರಿಕವರ್ ಆಗಿ ಮಿನಿ ಆಕ್ಷನ್ ಗೆ ಕಾಲಿಟ್ಟಿದ್ದಾರೆ. 2 ಕೋಟಿ ಮೂಲ ಬೆಲೆಯ ಗ್ರೀನ್ ಮೇಲೆ ಎಲ್ಲಾ ಫ್ರಾಂಚೈಸಿಗಳು ಕಣ್ಣಿಟ್ಟಿದ್ದು ಹೆಚ್ಚಿನ ಬಿಡ್ ಮಾಡೋ ಚಾನ್ಸಸ್ ಇದೆ.

ಬ್ಯಾಟ್ & ಬೌಲಿಂಗ್ ನಲ್ಲಿ ಬೆಸ್ಟ್ ಆಪ್ಶನ್ ಹಸರಂಗ!

ಶ್ರೀಲಂಕಾದ ಸ್ಟಾರ್ ಆಲ್​ರೌಂಡರ್ ವನಿಂದು ಹಸರಂಗ ಕೂಡ ಆಕ್ಷನ್​ನಲ್ಲಿದ್ದು 28 ವರ್ಷದ ಈ ಲೆಗ್-ಸ್ಪಿನ್ ಫೈರ್‌ಬ್ರಾಂಡ್ ಬೆಸ್ಟ್ ಆಪ್ಷನ್ ಆಗ್ತಾರೆ. ಆರ್‌ಸಿಬಿ, ಎಸ್‌ಆರ್‌ಹೆಚ್ ಮತ್ತು ರಾಜಸ್ಥಾನ್ ರಾಯಲ್ಸ್‌ ಪರ ಐಪಿಎಲ್ ಆಡಿರೋ ಹಸರಂಗ 37 ಪಂದ್ಯಗಳಲ್ಲಿ 46 ವಿಕೆಟ್‌ಗಳನ್ನು ಪಡೆದಿದ್ದಾರೆ. 2022 ರಲ್ಲಿ ಎಸ್‌ಆರ್‌ಹೆಚ್ ವಿರುದ್ಧ  18 ರನ್​ಗಳಿಗೆ 5 ವಿಕೆಟ್ ಬೇಟೆಯಾಡಿದ್ರು. ಆ ಸೀಸನ್​ನಲ್ಲಿ 26 ವಿಕೆಟ್ ಪಡೆದು ಸದ್ದು ಮಾಡಿದ್ರು.  ಹೀಗಾಗಿ ಮಾಜಿ ಆಟಗಾರನ ಮೇಲೆ ಬೆಂಗಳೂರು ತಂಡ ಕಣ್ಣಿಟ್ಟಿದೆ.

ಮಿನಿ ಹರಾಜಿನಲ್ಲಿ ಡೇವಿಡ್ ಮಿಲ್ಲರ್ ಸದ್ದು!

ಐಪಿಎಲ್ ಮಿನಿ ಹರಾಜಿನಲ್ಲಿ ಡೇವಿಡ್ ಮಿಲ್ಲರ್ ಕೂಡ ಬಹು ಬೇಡಿಕೆಯ ಆಟಗಾರ. ಬ್ಯಾಟಿಂಗ್ ಡೆಪ್ತ್ ಹೆಚ್ಚಿಸಿಕೊಳ್ಳೋಕೆ ಮಿಡಲ್ ಆರ್ಡರ್ ನಲ್ಲಿ ಫಿನಿಶಿಂಗ್ ರೋಲ್ ಪ್ಲೇ ಮಾಡುವ ಮಿಲ್ಲರ್ ಅವ್ರ ಅನುಭವ ತಂಡಕ್ಕೆ ಪ್ಲಸ್ ಆಗುತ್ತೆ. ಕ್ಲಾಸಿಕ್ ಪ್ಲೇಯರ್ ಆಗಿರೋ ಮಿಲ್ಲರ್ ಮೇಲೆ ಆರ್​ಸಿಬಿ ಬಿಡ್ ಮಾಡಬಹುದು.

ಸದ್ಯ ಇವ್ರೆಲ್ಲಾ ಆಕ್ಷನ್​ಲ್ಲಿ ಟಾಪ್ ಲಿಸ್ಟ್​ನಲ್ಲಿದ್ದಾರೆ. ಉಳಿದಂತೆ ಲಿಯಾಮ್ ಲಿವಿಂಗ್​ಸ್ಟೋನ್ ಮೇಲೆ ಆರ್​ಸಿಬಿ ಮತ್ತೆ ಇಂಟ್ರೆಸ್ಟ್ ತೋರಿಸಬಹುದು. ಅಥವಾ ರಚಿನ್ ರವೀಂದ್ರ, ಜೇಮಿ ಸ್ಮಿತ್, ಡೆವೊನ್ ಕಾನ್ವೆ, ಜೇಕ್ ಫ್ರೆಶರ್ ಮೆಕ್ ಗುರ್ಕ್, ಗಸ್ ಅಟ್ಕಿನ್ಸನ್ ಕೂಡ ರೇಸ್​ನಲ್ಲಿದ್ದಾರೆ. ಉಳಿದಂತೆ ಆರ್​​ಸಿಬಿ 6 ಭಾರತೀಯ ಆಟಗಾರರಿಗಾಗಿ ಅನ್​ಕ್ಯಾಪ್ಡ್ ಆಟಗಾರರ ಮೇಲೆ ಬಿಡ್ ಮಾಡಬಹುದು. ಒಟ್ನಲ್ಲಿ ಹಾಲಿ ಚಾಂಪಿಯನ್ ಬೆಂಗಳೂರು ತಂಡ ಸೂಪರ್ ಸ್ಟ್ರಾಂಗ್ ಆಗೇ ಇದೆ. ಒಬ್ರು ಅಥವಾ ಇಬ್ಬರು ಸ್ಟಾರ್ಸ್ ಖರೀದಿ ಮಾಡಿ ಉಳಿದಂತೆ ಬ್ಯಾಕಪ್ ಪ್ಲೇಯರ್ಸ್ ಮೇಲೆ ಇನ್ವೆಸ್ಟ್ ಮಾಡೋ ಪ್ಲ್ಯಾನ್​ ನಲ್ಲಿದೆ.

Shantha Kumari