ಕೊಹ್ಲಿಗಾಗಿ RCB ಬಿಗ್ ಬಜೆಟ್  – KING ಫಸ್ಟ್.. ₹20 ಕೋಟಿ ಫಿಕ್ಸ್
ರಾಹುಲ್ ಎಂಟ್ರಿಗೂ ಪ್ಲ್ಯಾನ್ ರೆಡಿ!

ಕೊಹ್ಲಿಗಾಗಿ RCB ಬಿಗ್ ಬಜೆಟ್  – KING ಫಸ್ಟ್.. ₹20 ಕೋಟಿ ಫಿಕ್ಸ್ರಾಹುಲ್ ಎಂಟ್ರಿಗೂ ಪ್ಲ್ಯಾನ್ ರೆಡಿ!

ಪ್ರತಿಬಾರಿ ಆರ್​ಸಿಬಿ ಮ್ಯಾನೇಜ್ಮೆಂಟ್ ಹೋಪ್ಲೆಸ್ ಬಿಡ್ಡಿಂಗ್ ಮಾಡಿದೆ ಅಂತಾನೆ ಫ್ಯಾನ್ಸ್ ಸಿಟ್ಟಾಗಿದ್ರು. ಆರ್​ಸಿಬಿ ಬ್ಯಾಟಿಂಗ್ ಲೈನ್ಅಫ್ ವಿಚಾರವಾಗಿ ಒಂದಷ್ಟು ಕಂಪ್ಲೇಂಟ್ಸ್ ಕೂಡ ಇದೆ. ಬಟ್ ಈ ಸಲ ಡೋಂಟ್ ವರಿ ಫ್ಯಾನ್ಸ್. ಈ ಬಾರಿ ಆರ್​ಸಿಬಿಯಲ್ಲಿ ಗೆ ಒಂದಷ್ಟು ಗುಡ್​​ನ್ಯೂಸ್​ ಆಗುವಂಥಾ​ ಡೆವಲಪ್​​ಮೆಂಟ್​​ಗಳಾಗಿವೆ. 17 ವರ್ಷಗಳಿಂದ ಒಂದೇ ಒಂದು ಐಪಿಎಲ್​​ ಟ್ರೋಫಿ ಗೆಲ್ಲದೆ ಪರದಾಡುತ್ತಿರುವ ಆರ್​​ಸಿಬಿ ತಂಡಕ್ಕೆ ಮೇಜರ್​ ಸರ್ಜರಿಯಾಗುತ್ತಿದೆ. ಪ್ರತಿ ಬಾರಿ ಐಪಿಎಲ್​​ ಸೋತಾಗಲು ಟೀಂ ಕೋಚಿಂಗ್​ ಸ್ಟಾಫ್​ ಬಗ್ಗೆ ದೂರುಗಳು ಕೇಳಿ ಬರ್ತಾನೆ ಇತ್ತು. ಅಭಿಮಾನಿಗಳಂತೂ ಮೊದಲು ಆರ್​​ಸಿಬಿ ಸೆಲೆಕ್ಷನ್, ಕೋಚಿಂಗ್​ ಸ್ಟಾಫ್​​​ಗಳನ್ನ ಬದಲಾಯಿಸಬೇಕು ಅಂತಾ ಗೊಣಗಾಡ್ತಿದ್ರು. ಹೀಗಾಗಿಯೇ ಆರ್‌ಸಿಬಿ ಆಲ್ ರೆಡಿ ದಿನೇಶ್ ಕಾರ್ತಿಕ್‌ರಿಗೆ ಹೊಸ ಜವಾಬ್ದಾರಿ ಕೊಟ್ಟಿದೆ. ಆರ್​​ಸಿಬಿ ತಂಡದ ಮೆಂಟರ್​ ಮತ್ತು ಬ್ಯಾಟಿಂಗ್​ ಕೋಚ್​ ಆಗಿ ದಿನೇಶ್​ ಕಾರ್ತಿಕ್​ ಅವರನ್ನು ನೇಮಿಸಿದೆ. ಇಷ್ಟೆಲ್ಲಾ ಆದ್ಮೇಲೆ ಫ್ಯಾನ್ಸ್ ಮನಸಲ್ಲಿ ಉಳಿದಿರೋದು, ನಮ್ಮ ಬೆಂಗಳೂರು ಟೀಮ್‌ನ ಮದ್ದಾನೆ, ಆರ್‌ಸಿಬಿ ಬಲ ವಿರಾಟ್ ಕೊಹ್ಲಿಯನ್ನ ಉಳಿಸಿಕೊಳ್ತಾರೋ ಇಲ್ವೋ ಅನ್ನೋದು. ಆರ್‌ಸಿಬಿಗೆ ಇಷ್ಟೆಲ್ಲಾ ಫ್ಯಾನ್ಸ್ ಕ್ರೇಜ್ ಇರೋದೇ ವಿರಾಟ್ ಕೊಹ್ಲಿಯಿಂದಾಗಿ , ಅಂದ್ಮೇಲೆ ವಿರಾಟ್ ಕೊಹ್ಲಿಯನ್ನ ಬಿಡೋ ಮಾತೇ ಇಲ್ಲ ಅಂತಾ ಆರ್‌ಸಿಬಿ ಪ್ರಾಂಚೈಸಿ ಮೆಸೇಜ್ ಕೊಟ್ಟಿದೆ. ಕೊಹ್ಲಿಗಾಗಿ ಆರ್‌ಸಿಬಿ ಕೋಟಿ ಕೋಟಿ ದುಡ್ಡನ್ನ ಸುರಿಯಲು ರೆಡಿಯಾಗಿದೆ. ಹಾಗಂತ ಕೊಹ್ಲಿ ಏನು ಸ್ಟಾರ್ ಪ್ಲೇಯರ್ ಅನ್ನೋ ಒಂದೇ ಕಾರಣಕ್ಕಲ್ಲ. ವಿರಾಟ್ ಬೆಂಗಳೂರು ತಂಡಕ್ಕೆ ಯಾಕೆ ಬೇಕು ಅನ್ನೋದಕ್ಕೆ ಸಾಲು ಸಾಲು ಕಾರಣಗಳೇ ಇವೆ.

ಇದನ್ನೂ ಓದಿ: PAKಗೆ ಕಾಲಿಡಲ್ಲ ಟೀಂ ಇಂಡಿಯಾ -BCCI ಬೆನ್ನಿಗೆ ICC.. ಹೈಬ್ರಿಡ್​ಗೆ ಅಸ್ತು?

ಆರ್​ ಸಿಬಿ ಮದ್ದಾನೆ ವಿರಾಟ್ ಕೊಹ್ಲಿ

ಕ್ರಿಕೆಟ್ ಜಗತ್ತಿನಲ್ಲಿ ಒಂದು ಮಾತಿದೆ. Come back is greater than set back. ಬಹುಶಃ ಆರ್‌ಸಿಬಿ ಕೂಡಾ ಒಂದಲ್ಲಾ ಒಂದು ದಿನ ಗ್ರೇಟ್ ಕಂಬ್ಯಾಕ್ ಮಾಡಿ ಕಪ್ ಗೆಲ್ಲೋದಂತೂ ಗ್ಯಾರಂಟಿ. ಈ ಸೀಸನ್‌ನಲ್ಲಿ ಹೇಗಾದ್ರೂ ಮಾಡಿ ಕಪ್​ ಗೆಲ್ಲಲೇಬೇಕು ಎಂದು ಜಿದ್ದಿಗೆ ಬಿದ್ದಿದೆ ಆರ್‌ಸಿಬಿ ಮ್ಯಾನೇಜ್‌ಮೆಂಟ್. ಈ ವರ್ಷದ ಕೊನೆ ಡಿಸೆಂಬರ್​ನಲ್ಲಿ 2025ರ ಐಪಿಎಲ್​​​​ ಮೆಗಾ ಆಕ್ಷನ್​ ನಡೆಯಲಿದೆ. ಕ್ವಾಲಿಟಿ ಆಟಗಾರರ ಖರೀದಿ ಮಾಡಿ ಬಲಿಷ್ಠ ತಂಡ ಕಟ್ಟುವ ಪ್ಲಾನ್​ ರೆಡಿಯಾಗಿದೆ. ಹೀಗಾಗಿ ಕೊಹ್ಲಿ ಅವರನ್ನು ರೀಟೈನ್​ ಮಾಡಿಕೊಳ್ಳಲು ಆರ್‌ಸಿಬಿ ಸಿದ್ದತೆ ನಡೆಸಿಕೊಂಡಿದೆ. ಯಾಕೆಂದರೆ, ಆರ್‌ಸಿಬಿ ಶಕ್ತಿಯೇ ವಿರಾಟ್ ಕೊಹ್ಲಿ. ಏಕಾಂಗಿಯಾಗಿ ಟೀಮ್‌ ಗೆಲ್ಲೋವರೆಗೂ ವಿರಾಟ್ ಹೋರಾಟವನ್ನು ಯಾರು ಮರೆಯಲಾರರು. ಜೊತೆಗೆ ಫೀಲ್ಡಿಂಗ್ brilliance ಮೂಲಕ ರನ್ ಉಳಿಸೋದ್ರಲ್ಲಿ ಕೊಹ್ಲಿಗೆ ಸರಿಸಮಾನರೂ ಯಾರು ಇಲ್ಲ. ಅದ್ಭುತ ಕ್ಯಾಚ್, ಮಿಂಚಿನ ಗತಿಯಲ್ಲಿ ರನೌಟ್ ಮಾಡೋದನ್ನ ನೀವೂ ನೋಡಿರ್ತೀರಿ. ಅಷ್ಟೇ ಅಲ್ಲ, ಸೋಲಿನ ಸುಳಿಯಲ್ಲಿ ಟೀಮ್ ಸಿಕ್ಕಾಗಲೂ ಪ್ರತಿ ಆಟಗಾರರಲ್ಲೂ ಹುರುಪು ತುಂಬಬಲ್ಲ ಗ್ರೇಟ್ ಮ್ಯಾನ್ ಅಂದರೆ ಅದು ವಿರಾಟ್ ಕೊಹ್ಲಿ. ಹೀಗಾಗಿ ಕೊಹ್ಲಿ ಅವರನ್ನು ರೀಟೈನ್​ ಮಾಡಿಕೊಳ್ಳಲು ಆರ್​​ಸಿಬಿ ತಂಡ ಭಾರೀ ಮೊತ್ತ ಮೀಸಲಿಟ್ಟಿದೆ. ಈ ಸಲ ಕೊಹ್ಲಿಗೆ ಕನಿಷ್ಠ 17 ಕೋಟಿ, ಗರಿಷ್ಠ 20 ಕೋಟಿಯಾದ್ರೂ ಪರ್ವಾಗಿಲ್ಲ ರೀಟೈನ್​ ಮಾಡಿಕೊಳ್ಳಲು ಆರ್​​ಸಿಬಿ ಮುಂದಾಗಿದೆ ಎಂದು ತಿಳಿದು ಬಂದಿದೆ. ಮತ್ತೊಂದೆಡೆ ಕೆ.ಎಲ್ ರಾಹುಲ್ ಕೂಡಾ ಆರ್‌ಸಿಬಿಗೆ ಜಾಯ್ನ್ ಆಗ್ತಾರೆ ಎನ್ನಲಾಗ್ತಿದೆ. ವಿರಾಟ್ ಕೊಹ್ಲಿ ಮತ್ತು ಕೆ.ಎಲ್ ಕಾಂಬೀನೇಷನ್ ಕೂಡಾ ಚೆನ್ನಾಗಿರುತ್ತೆ ಅನ್ನೋದು ಆರ್‌ಸಿಬಿ ಮ್ಯಾನೇಜ್‌ಮೆಂಟ್ ಲೆಕ್ಕಾಚಾರ.

ಇನ್ನೂ ಒಂದು ವಿಚಾರ ಎಂದ್ರೆ, ಕನ್ನಡಿಗ ಕೆ.ಎಲ್ ರಾಹುಲ್ ಕೂಡಾ ವಿರಾಟ್ ಕೊಹ್ಲಿ ಜೊತೆ ಚೆನ್ನಾಗಿ ಹೊಂದಿಕೊಳ್ತಾರೆ. ವಿರಾಟ್ ಕೊಹ್ಲಿಗೋಸ್ಕರವೇ ಆರ್‌ಸಿಬಿ ಮ್ಯಾನೇಜ್‌ಮೆಂಟ್ ಕೆ.ಎಲ್ ರನ್ನ ಟೀಮ್ಗೆ ಸೇರಿಸಿಕೊಳ್ಳಲು ತುದಿಗಾಲಲ್ಲಿ ನಿಂತಿದೆ. ಅದೇನೇ ಇರಲಿ, ವಿರಾಟ್ ಕೊಹ್ಲಿ ಆರ್‌ಸಿಬಿ ಪಾಲಿಗೆ ಬರೀ ಗ್ರೇಟ್ ಕ್ರಿಕೆಟರ್ ಅಲ್ಲ. ಗ್ರೆಟೆಸ್ಟ್ ಆಲ್ ಟೈಮ್. ಒಬ್ಬ ಶ್ರೇಷ್ಠ ಆಟಗಾರ ಆರ್‌ಸಿಬಿ ಜೊತೆಗೆ ನಿಂತಿರುವುದರಿಂದಲೇ ಫ್ಯಾನ್ಸ್ ಕೂಡಾ ಆರ್‌ಸಿಬಿ ಪರ ನಿಂತಿರೋದು ಅನ್ನೋದನ್ನ ಯಾರು ಕೂಡಾ ಮರೆಯಬಾರದು.

Shwetha M

Leave a Reply

Your email address will not be published. Required fields are marked *