ಪಂದ್ಯಕ್ಕೂ ಮುನ್ನ ಇಂಜೆಕ್ಷನ್ ತೆಗೆದುಕೊಳ್ತಿದ್ದ ಸುಯಾಶ್!‌ – RCB ಸುಯಾಶ್ ಕಣ್ಣೀರ ಕತೆ!

ಪಂದ್ಯಕ್ಕೂ ಮುನ್ನ ಇಂಜೆಕ್ಷನ್ ತೆಗೆದುಕೊಳ್ತಿದ್ದ ಸುಯಾಶ್!‌ – RCB ಸುಯಾಶ್ ಕಣ್ಣೀರ ಕತೆ!

ಸುಯಾಶ್ ಶರ್ಮಾ.. 18ನೇ ಸೀಸನ್‌ನಲ್ಲಿ ಆರ್‌ಸಿಬಿ ಟೀಂನ ಬೌಲಿಂಗ್‌ ಯುನಿಟ್‌ನಲ್ಲಿ ಕೃಣಾಲ್‌ ಪಾಂಡ್ಯ ಬಿಟ್ರೆ ಅತಿಹೆಚ್ಚು ನಂಬಿಕೆ ಉಳಿಸಿಕೊಂಡಿರುವ ಬೌಲರ್‌.. ಸದ್ಯ ಆರ್ಸಿಬಿಯಲ್ಲಿ ಸ್ಪಿನ್ನರ್ ಸುಯಾಶ್ ಶರ್ಮಾ ಮಿಂಚುತ್ತಿದ್ದಾರೆ.. ಟೀಮ್ ತಮ್ಮ ಮೇಲಿಟ್ಟಿರುವ ನಂಬಿಕೆಯನ್ನ ಉಳಿಸಿಕೊಂಡು ಬಂದಿದ್ದಾರೆ. ಇದೀಗ ಐಪಿಎಲ್ ನಲ್ಲಿ ಮಿಂಚುತ್ತಿರುವ ಯಂಗ್ ಬಾಯ್ ಸುಯಾಶ್ ಜೀವನದಲ್ಲಿ ಸಾಕಷ್ಟು ಏಳು ಬೀಳು ಕಂಡಿದ್ದಾರೆ.. ಕಳೆದ ಕೆಲ ವರ್ಷದ ಹಿಂದೆ ಸುಯಾಶ್ ಎದುರಿಸಿದ ಕಷ್ಟ ಒಂದೆರಡಲ್ಲ.. ಸುಯಾಶ್ ಜೀವನದ ಕತೆ ಕೇಳಿದ್ರೆ  ಎಂತವರಿಗೂ ಕಣ್ಣೀರು ಬರುತ್ತೆ.. ಸಣ್ಣ ವಯಸ್ಸಲ್ಲೇ ತಂದೆಯ ನಿಧನ.. ಕ್ರಿಕೆಟ್ಗೆ ಬ್ಯಾಕ್ ಬೋನ್ ಆಗಿದ್ದ ಕೋಚ್ ಸಾವು.. ಸಣ್ಣ ವಯಸ್ಸಲ್ಲೇ ಅನಾರೋಗ್ಯ.. ಅಬ್ಬಬ್ಬಾ.. ಆರ್ಸಿಬಿ ಆಟಗಾರ ಎದುರಿಸಿದ ಕಷ್ಟ ಒಂದೆರಡಲ್ಲ.. ಈ ಯಂಗ್ ಸ್ಪಿನ್ನರ್ ಕಷ್ಟಕ್ಕೆ ನೆರವಾಗಿದ್ದೇ ಆರ್ಸಿಬಿ..  ಸುಯಾಶ್ ಶರ್ಮಾ ಜೀವನದ ಏಳು ಬೀಳಿನ ಕತೆ ಇಲ್ಲಿದೆ.

ಇದನ್ನೂ ಓದಿ: RCB ಫಾರ್ಮ್ ಕಳೆದುಕೊಳ್ಳುತ್ತಾ? – ನಾಲ್ವರು ಫಾರಿನ್ ಪ್ಲೇಯರ್ಸ್ ವಾಪಸ್?

ಸುಯಾಶ್ ಶರ್ಮಾ ತಮ್ಮ ಅದ್ಭುತ ಪ್ರದರ್ಶನದೊಂದಿಗೆ ಆರ್ಸಿಬಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಸುಯಶ್ ಐಪಿಎಲ್ನಲ್ಲಿ ಇದುವರೆಗೆ 23 ಪಂದ್ಯಗಳನ್ನು ಆಡಿದ್ದು ಒಟ್ಟು 14 ವಿಕೆಟ್‌ ಕಬಳಿಸಿದ್ದಾರೆ. ಸುಯಾಶ್ ಐಪಿಎಲ್ ನಲ್ಲಿ ಮಿಂಚಿತ್ತಿದ್ದಂತೆ ಫ್ಯಾನ್ಸ್ ಅವ್ರ ಬಗ್ಗೆ ತಿಳಿದುಕೊಳ್ಳಲು ಉತ್ಸುಕರಾಗಿದ್ದಾರೆ. ಅಂದ್ಹಾಗೆ ಸುಯಾಶ್ ಕ್ರಿಕೆಟ್ ನಲ್ಲಿ ಮಿಂಚೋದಕ್ಕೂ ಮುನ್ನ ಸಾಕಷ್ಟು ಸವಾಲುಗಳನ್ನ ಎದುರಿಸಿದ್ದಾರೆ. ಸುಯಾಶ್ ಜೀವನದಲ್ಲಿ ಒಂದಾದ ಮೇಲೊಂದು ಕಷ್ಟಗಳು ಬರ್ತಾನೆ ಹೋಗಿದ್ದವು..

ಆರ್ಸಿಬಿ ಸ್ನಿನ್ನರ್ ಸುಯಾಶ್ ಶರ್ಮಾ ಹುಟ್ಟಿದ್ದು 2003 ರ ಮೇ 15 ರಂದು  ದೆಹಲಿಯ ಭಜನ್ ಪುರದಲ್ಲಿ. ಇವ್ರದ್ದು ಮಿಡಲ್ ಕ್ಲಾಸ್ ಫ್ಯಾಮಿಲಿ.. ತಾಯಿ ಟೀಚರ್.. ತಂದೆ ಒಂದು ಫ್ಯಾಕ್ಟರಿ ನಡೆಸ್ತಾ ಇದ್ರು. ಬಾಲ್ಯದಿಂದಲೂ ಸುಯಾಶ್ ಗೆ ಕ್ರಿಕೆಟ್ ಅಂದ್ರೆ ತುಂಬಾ ಇಷ್ಟ.. ಮಗನ ಕ್ರಿಕೆಟ್ ಮೇಲಿನ ಆಸಕ್ತಿ ನೋಡಿದ ಅವ್ರ ತಂದೆ ತಾಯಿ ಸುಯಾಶ್ ನ ದೆಹಲಿ ಕ್ರಿಕೆಟ್ ಅಕಾಡೆಮಿಗೆ ಸೇರಿಸ್ತಾರೆ. ಅಲ್ಲಿನ ಕೋಚ್ ಸುರೇಶ್ ಬಾತ್ರಾ ಸುಯಾಶ್ ಗೆ ಬೌಲಿಂಗ್  ಟ್ರೈನಿಂಗ್ ನೀಡ್ತಾ ಬರ್ತಾರೆ. ಅಲ್ಲಿಂದಲೇ ಸುಯಾಶ್ ಕ್ರಿಕೆಟ್ ಜರ್ನಿ ಶುರುವಾಗುತ್ತೆ. ಸುಯಾಶ್ ಆರಂಭದಲ್ಲಿ ಸ್ಥಳೀಯ ದೆಹಲಿ ಟೀಮ್ ನಲ್ಲಿ ಆಟವಾಡ್ತಾ ಇರ್ತಾರೆ. ಬಳಿಕ ಐಪಿಎಲ್‌ ಗೆ ಟ್ರೈ ಮಾಡ್ತಿರ್ತಾರೆ. 15 ವರ್ಷ ವಯಸ್ಸಿನಲ್ಲಿದ್ದಾಗಲೇ ಐಪಿಎಲ್ ಗೆ ಪಾದಾರ್ಪಣೆ ಮಾಡಲು ಟ್ರೈ ಮಾಡಿದ್ರು. ಆದ್ರೆ ಚಾನ್ಸ್ ಸಿಕ್ಕಿಲ್ಲ.. ಇದ್ರಿಂದಾಗಿ ಸಂಬಂಧಿಕರು ಸುಯಾಶ್ ನನ್ನು ಆಡಿಕೊಳ್ಳಲು ಶುರು ಮಾಡಿದ್ರು.. ಆದ್ರೆ ತಂದೆ ತಾಯಿ ಮಾತ್ರ ಮಗ ಸುಯಾಶ್  ಗೆ ಸಪೋರ್ಟಿವ್ ಆಗಿ ನಿಂತ್ರು. ಹಾಗಿರುವಾಗಲೇ ಸುಯಾಶ್ ಬಾಳಲ್ಲಿ ದುರಂತ ನಡೆದೇ ಹೋಯ್ತು.. ಮಗ ದೊಡ್ಡ ಕ್ರಿಕೆಟರ್ ಆಗ್ತಾನೆ ಅಂತಾ ಕನಸು ಕಾಣ್ತಿದ್ದ ಅಪ್ಪನಿಗೆ ಕ್ಯಾನ್ಸರ್ ಇದೆ ಅಂತಾ ಗೊತ್ತಾಗುತ್ತೆ. 2021ರಲ್ಲಿ ಸುಯಾಶ್  ತಂದೆಯನ್ನ ಕಳ್ಕೊಳ್ತಾರೆ. ಅಪ್ಪ ತೀರ್ಕೊಂಡ ನೋವಲ್ಲಿ ಇದ್ದಾಗ್ಲೇ ಮತ್ತೊಂದು ಶಾಕ್ ಕಾದಿತ್ತು. ಸುಯಾಶ್  ಬಾಲ್ಯದ ಕೋಚ್ ಕೋವಿಡ್‌ನಿಂದ ತೀರ್ಕೊಳ್ತಾರೆ. ಇದ್ರಿಂದಾಗಿ ಯುವ ಸ್ಪಿನ್ನರ್ ಕುಗ್ಗಿ ಹೋಗ್ತಾರೆ. ಈ ನೋವಲ್ಲೇ ಆಟ ಮುಂದುವರಿಸ್ತಾರೆ. ಕೋಚ್ ತೀರ್ಕೊಂಡ ಬಳಿಕ ಸುಯಾಶ್ ಸ್ನೇಹಿತ ತರಬೇತಿ ನೀಡ್ತಾರೆ. ನಿರಂತರ ಪರಿಶ್ರಮದ ಬಳಿಕ ಸುಯಾಶ್ ನ ಒಂದೊಂದೇ ಅವಕಾಶಗಳು ಹುಡುಕಿಕೊಂಡು ಬರೋಕೆ ಶುರುವಾಗುತ್ತೆ.

ಅಂದ್ಹಾಗೆ 2022 ಡಿಸೆಂಬರ್ ನಲ್ಲಿ ಸುಯಾಶ್  ಐಪಿಎಲ್ ಗೆ ಸೆಲೆಕ್ಟ್ ಆಗ್ತಾರೆ. ಕೆಕೆಆರ್ ಫ್ರಾಂಚೈಸಿ ಸುಯಾಶ್ ನ ಮೂಲ ಬೆಲೆ 20 ಲಕ್ಷ ರೂಪಾಯಿಗೆ ಖರೀದಿಸಿತ್ತೆ. 2023 ರಲ್ಲಿ ಆರ್ಸಿಬಿ  ವಿರುದ್ಧ ಚೊಚ್ಚಲ ಪಂದ್ಯ ಆಡಿದ್ರು. ಮೊದಲ ಪಂದ್ಯದಲ್ಲೇ ಸುಯಾಶ್ ಮೂರು ವಿಕೆಟ್ಗಳನ್ನು ಪಡೆದು ತಮ್ಮ ತಂಡ 81ರನ್ ಗಳ ಅಂತರದಿಂದ ಗೆಲ್ಲಲು ಕಾರಣರಾಗಿದ್ರು. ಅದೇ ವರ್ಷ 11 ಪಂದ್ಯದಲ್ಲಿ 10 ವಿಕೆಟ್ ಕಬಳಿಸಿದ್ರು. 2023 ರಲ್ಲಿ ಸುಯಾಶ್ ಗೆ ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ ಚಾನ್ಸ್ ಸಿಗುತ್ತೆ. ಡೆಲ್ಲಿ ತಂಡದ ಪರ ಆಡಲು ಅವಕಾಶ ಸಿಗುತ್ತೆ.  2024 ರಲ್ಲಿ ಕೂಡ ಸುಯಾಶ್ ಐಪಿಎಲ್ ನಲ್ಲಿ ಕೆಕೆಆರ್ ತಂಡದ ಪರವಾಗೇ ಆಟ ಆಡ್ತಿದ್ರು. ಆದ್ರೆ ಆ ವರ್ಷ ಬರೀ 2 ಮ್ಯಾಚ್ನಲ್ಲಿ ಆಡೋ ಅವಕಾಶ ಸಿಗುತ್ತೆ. ಅಷ್ಟೊತ್ತಿಗೆ ಯುವ ಸ್ಪಿನ್ನರ್ ಗೆ ಮತ್ತೊಂದು ಸಂಕಷ್ಟ ಶುರುವಾಯ್ತು.

ಹೌದು, ಕ್ರಿಕೆಟ್ ನಲ್ಲಿ ಮಿಂಚುತ್ತಿದ್ದ ಸುಯಾಶ್ ಗೆ ಅನಾರೋಗ್ಯ ಕಾಡಲು ಶುರುವಾಯ್ತು.. ತೀವ್ರ ಸ್ನಾಯು ನೋವಿನಿಂದ ಬಳಲ್ತಾ ಇದ್ರು.. ಬರು ಬರುತ್ತಾ ಅದು ಗಂಭೀರವಾಗ್ತಾ ಹೋಯ್ತು. ಎಷ್ಟರ ಮಟ್ಟಿಗೆ ಅಂದ್ರೆ ಸುಯಾಶ್ ಆಟ ಆಡ್ಬೇಕಂದ್ರೆ ಆಗಾಗ ಇಂಜೆಕ್ಷನ್ ತೆಗೆದುಕೊಳ್ಬೇಕಿತ್ತು. ಇದೇ ಹೊತ್ತಲ್ಲಿ ಸುಯಾಶ್ ಆರ್ಸಿಬಿ ಟೀಮ್ ಗೆ ಸೆಲೆಕ್ಟ್ ಆಗ್ತಾರೆ.  2025ರ ಐಪಿಎಲ್ ಮೆಗಾ ಹರಾಜಿನಲ್ಲಿ ಆರ್ ಸಿಬಿ 2.60 ಕೋಟಿ ರೂ.ಗೆ ಖರೀದಿಸಿತು. ಈ ವೇಳೆ ಸುಯಾಶ್ ಗೆ  ಆರೋಗ್ಯ ಸಮಸ್ಯೆ ಇರೋದು ಫ್ರಾಂಚೈಸಿಗೆ ಗೊತ್ತಾಯ್ತು. ಮೂರು ಹರ್ನಿಯಾಗಳಿವೆ  ಎಂದು  ವೈದ್ಯಕೀಯ ಪರೀಕ್ಷೆಯಲ್ಲಿ ಗೊತ್ತಾಯ್ತು. ಅಲ್ಲಿವರೆಗೂ ಆಟಗಾರನಿಗೆ ಏನ್ ಸಮಸ್ಯೆ ಇದೆ ಎಂದು ಗೊತ್ತಿರ್ಲಿಲ್ಲ. ಬಳಿಕ ಆರ್ಸಿಬಿ ಫ್ರಾಂಚೈಸಿ ಸುಯಾಶ್ ನನ್ನು ಲಂಡನ್ ಗೆ ಕಳುಹಿಸಿ ಶಸ್ತ್ರಚಿಕಿತ್ಸೆ ಮಾಡಿಸಿದ್ದಾರೆ. ಇದೀಗ ಕಡಿಮೆ ಅವಧಿಯಲ್ಲೇ ಸುಯಾಶ್ ಚೇತರಿಸಿಕೊಂಡಿದ್ದಾರೆ. ಈ ವರ್ಷದ ಮೊದಲ ಪಂದ್ಯದಲ್ಲೆ ಗ್ರೇಟ್ ಕಂಬ್ಯಾಕ್ ಮಾಡಿ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ. ಸುಯಾಶ್ ಆಟಕ್ಕೆ ಫ್ಯಾನ್ಸ್ ಬಹುಪರಾಕ್ ಹೇಳ್ತಿದ್ದಾರೆ. ವೈಯಕ್ತಿಕ ಜೀವನದಲ್ಲಿ ಎಷ್ಟೇ ಕಷ್ಟಗಳನ್ನ ಫೇಸ್ ಮಾಡಿದ್ರೂ ಸುಯಾಶ್ ಎಂದಿಗೂ ತನ್ನ ಗುರಿಯನ್ನ ಮರೆತಿಲ್ಲ. ಈ ಯುವ ಸ್ಪಿನ್ನರ್  ಕ್ರಿಕೆಟ್ ಜಗತ್ತಿನಲ್ಲಿ ಇನ್ನಷ್ಟು ಸಾಧನೆ ಮಾಡಲಿ ಅನ್ನೋದೇ ಎಲ್ಲರ ಆಶಯ.

Shwetha M

Leave a Reply

Your email address will not be published. Required fields are marked *