MIಗೆ ನೀರು ಕುಡಿಸಿದ SALT – ಕೃನಾಲ್ ಬೌನ್ಸ್ ಗೆ ಗೆದ್ದು ಬೀಗಿದ RCB
ಬೆಂಗಳೂರು DOMINATION ಮತ್ತೆ ಶುರು!

MIಗೆ ನೀರು ಕುಡಿಸಿದ SALT – ಕೃನಾಲ್ ಬೌನ್ಸ್ ಗೆ ಗೆದ್ದು ಬೀಗಿದ RCBಬೆಂಗಳೂರು DOMINATION ಮತ್ತೆ ಶುರು!

ಒನ್ಸ್ ಅಗೇನ್ ಆರ್​ಸಿಬಿ ಡಾಮಿನೇಷನ್ ಸ್ಟಾರ್ಟ್ ಆಯ್ತು. ರಾಜಸ್ಥಾನ ವಿರುದ್ಧ ಸೋತ್ರೂ ಮುಂಬೈ ವಿರುದ್ಧ ಭರ್ಜರಿಯಾಗೇ ಗೆದ್ದು ಕಂ ಬ್ಯಾಕ್ ಮಾಡಿದ್ದಾರೆ. ಡಿಫಡಿಂಗ್ ಚಾಂಪಿಯನ್ಸ್ ಆರ್ಭಟಕ್ಕೆ ಬಲಿಷ್ಟ ಎಂಐ ಪಡೆ ಕೂಡ ಸೋತು ಶರಣಾಗಬೇಕಾಯ್ತು.

ಇದನ್ನೂ ಓದಿ : ಗೆಲುವಿನ ಟ್ರ್ಯಾಕ್ RCBಗೋ.. MIಗೋ? – 4ನೇ ಮ್ಯಾಚಲ್ಲೂ ಬರುತ್ತಾ 200+ ರನ್ಸ್?

ವಾಂಖೆಡೆ ಮೈದಾನದಲ್ಲಿ ನಡೆದ ಮುಂಬೈ ವರ್ಸಸ್ ಬೆಂಗಳುರು ನಡುವಿನ ಮ್ಯಾಚಲ್ಲಿ ಬೆಂಗಳೂರು ಸಖತ್ತಾಗೇ ವಿನ್ ಆಗಿದೆ. ಟಾಸ್ ಸೋತು ಫಸ್ಟ್ ಬ್ಯಾಟಿಂಗ್​ಗೆ ಬಂದ ಆರ್​ಸಿಬಿ ಪರ ರನ್​ಗಳ ಮಳೆ ಸುರಿಸಿದ ಬ್ಯಾಟರ್ಸ್ ಮುಂಬೈ ಬೌಲರ್​ಗಳನ್ನ ಅಟ್ಟಾಡಿಸಿ ಹೊಡೆದ್ರು. ಆರ್​ಸಿಬಿ ಪರ ಮೂವರ ಅರ್ಧಶತಕದ ನೆರವಿನಿಂದ 240 ರನ್ಸ್ ಸ್ಕೋರ್ ಮಾಡಿ 241 ರನ್​ಗಳ ಟಾರ್ಗೆಟ್ ಸೆಟ್ ಮಾಡಿದ್ರು. ಈ ಗುರಿ ಬೆನ್ನಟ್ಟಿದ ಮುಂಬೈ 222 ರನ್ ಕಲೆಹಾಕಲಷ್ಟೇ ಸಾಧ್ಯವಾಯ್ತು. ಅಂತಿಮವಾಗಿ 18 ರನ್​ಗಳಿಂದ ಸೋಲಬೇಕಾಯ್ತು. ಈ ಸೋಲು ಮುಂಬೈಗೆ ಹ್ಯಾಟ್ರಿಕ್ ಸೋಲು. ಮೊದಲ ಮ್ಯಾಚಲ್ಲಿ ಕೊಲ್ಕತ್ತಾ ವಿರುದ್ಧ ಗೆದ್ದಿದ್ದು ಬಿಟ್ರೆ ಮತ್ತೆ ರಿಕವರ್ ಆಗಿಲ್ಲ. ಇನ್ನು ಬೆಂಗಳೂರು ಟೀಂ 4 ಪಂದ್ಯ ಆಡಿದ್ದು ಮೂರರಲ್ಲಿ ಗೆಲುವು ಕಂಡಿದೆ. ಌಕ್ಚುಲಿ ಮುಂಬೈನ ವಾಂಖೆಡೆ ಎಂಐ ಪಾಲಿಗೆ ಭದ್ರಕೋಟೆ. ಅಲ್ಲಿ ಸತತ 10 ವರ್ಷಗಳ ಕಾಲ ಆರ್​ಸಿಬಿ ಗೆದ್ದೇ ಇರ್ಲಿಲ್ಲ. ಆದ್ರೆ ಕಳೆದ ವರ್ಷ ಆ ದಶಕದ ಸೋಲಿನ ಸರಪಳಿ ಬ್ರೇಕ್ ಮಾಡಿದ್ದ ಬೆಂಗಳೂರು ಈಗ ಬ್ಯಾಕ್ ಟು ಬ್ಯಾಕ್ ವಾಂಖೆಡೆಯಲ್ಲೇ ಮುಂಬೈನ ವಾಂಚಿದ್ದಾರೆ. ಅದ್ರಲ್ಲೂ ನಿನ್ನೆಯ ಮ್ಯಾಚ್ ಅಂತೂ ಸೂಪರ್. ಫಸ್ಟ್ ಓವರ್​ನಿಂದಲೇ ಡಾಮಿನೇಷನ್ ಸ್ಟಾರ್ಟ್ ಮಾಡಿದ್ದ ಬೆಂಗಳೂರು ಲಾಸ್ಟ್ ಬಾಲ್​ವರೆಗೂ ಪಂದ್ಯವನ್ನ ಕಂಟ್ರೋಲ್​ನಲ್ಲೇ ಇಟ್ಕೊಂಡಿತ್ತು.

ಬೆಂಗಳೂರಿಗೆ ಟರ್ನಿಂಗ್ ಪಾಯಿಂಟ್ಸ್!

ಪ್ಲೇಯಿಂಗ್ 11 ಬದಲಾವಣೆ.. ರಸಿಕ್ ಸಲಾಂ ದಾರ್ ಗೆ ಚಾನ್ಸ್

ವಿರಾಟ್ ಕೊಹ್ಲಿ ಮತ್ತು ಫಿಲ್ ಸಾಲ್ಟ್ 120 ರನ್ ಗಳ ಜೊತೆಯಾಟ

ಸಾಲ್ಟ್ 78(36), ಪಾಟಿದಾರ್ 53(20) ಕೊಹ್ಲಿ 50(38) ರನ್ಸ್

ಟಿಮ್ ಡೇವಿಡ್ ಕಡೆಯಿಂದ ಒಂದೊಳ್ಳೆ ಫಿನಿಶಿಂಗ್ 34(16)

ಬ್ಯಾಟಿಂಗ್ ನಲ್ಲಿ 240 ರನ್ಸ್ ಸ್ಕೋರ್ ಮಾಡಿದ್ದೇ ಪ್ಲಸ್

1 ಓವರ್ ಗೆ 12 ರನ್ಸ್ ಬೇಕಾಗಿದ್ದರಿಂದ ಮುಂಬೈಗೆ ಪ್ರೆಶರ್

ರಸಿಕ್ ದಾರ್ & ಸುಯಾಶ್ ಕಡೆಯಿಂದ ಅದ್ಭುತ ಸ್ಪೆಲ್

4 ಓವರ್ ಲಿ 26 ರನ್ಸ್ ಅಷ್ಟೇ ಕೊಟ್ಟು ವಿಕೆಟ್ ತೆಗೆದ ಕೃನಾಲ್

ಇದೆಲ್ಲಾ ಬೆಂಗಳೂರು ಗೆಲುವಿಗೆ ಪ್ಲಸ್ ಆಯ್ತು. ಮುಂಬೈ ತಂಡವನ್ನ 200ರ ಒಳಗೆ ಕಟ್ಟಿಹಾಕೋಕೆ ಚಾನ್ಸ್ ಇತ್ತು. ರಸಿಕ್ ಸಲಾಂ ದಾರ್ ಇನ್ ಕಂಪ್ಲೀಟ್ ಮಾಡಿದ್ದ ಓವರ್​ನಲ್ಲಿ ಲಾಸ್ಟ್ ಬಾಲ್ ಹಾಕೋಕೆ ಬಂದ ರೊಮ್ಯಾರಿಯೋ ಶೆಫರ್ಡ್ ಬೌಲಿಂಗಲ್ಲಿ ಶೆರ್ಫೇನ್ ರುದರ್ಫೋರ್ಡ್ ಔಟ್ ಆಗ್ಬೇಕಿತ್ತು. ಬಟ್ ಅದು ನೋ ಬಾಲ್ ಆಗಿದ್ರಿಂದ ಬಚಾವ್ ಆದ್ರು. ಆ ನಂತ್ರ ಸಿಂಗಲ್ ಶೇರ್​ನಂತೆ ಆಡಿದ ರುದರ್ಫೋರ್ಡ್ 31 ಬಾಲಲ್ಲೇ 71 ರನ್ ಕಲೆ ಹಾಕಿದ್ರು. ಸೋ ರುದರ್ಫೋರ್ಡ್ ಬಿಟ್ರೆ ಎಂಐ ಪರ ಮತ್ಯಾರು ಎಫೆಕ್ಟೀವ್ ಅನ್ನಿಸ್ತಿಲ್ಲ. ಇನ್ನು ಜಸ್ಪ್ರೀತ್ ಬುಮ್ರಾ ಒಳ್ಳೆ ಎಕಾನಮಿ ಇದ್ರೂ ಕೂಡ ಈ ಸೀಸನ್​ನಲ್ಲಿ ಒಂದೇ ಒಂದು ವಿಕೆಟ್ ಅವ್ರ ಕಡೆಯಿಂದ ಬಂದಿಲ್ಲ. ಇದು ಕೂಡ ಮುಂಬೈಗೆ ಸ್ಟ್ರಗಲ್ ಆಗುವಂತೆ ಮಾಡಿದೆ. ಒಟ್ನಲ್ಲಿ ಆರ್​ಸಿಬಿ ಗೆದ್ದಾಯ್ತು. ಟ್ರ್ಯಾಕ್​ಗೆ ಬಂದಾಯ್ತು. ಈಗ ಮತ್ತೆ ಹೋಂ ಪಿಚ್​ನಲ್ಲಿ ಬೆಂಗಳೂರು ಫೈಟ್ಸ್ ಸ್ಟಾರ್ಟ್ ಆಗುತ್ತೆ.

Shantha Kumari