ಆರ್‌ಸಿಬಿ ಹ್ಯಾಟ್ರಿಕ್ ಗೆಲುವಿನ ಕನಸು ಭಗ್ನ – ತವರಲ್ಲೇ ಮಂಧನಾ ಪಡೆಗೆ ವೀರೋಚಿತ ಸೋಲು

ಮೂರನೇ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್ನಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಮುಂಬೈ ಸೋಲಿಣಿಸಿದೆ. ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಆರ್‌ಸಿಬಿ 4 ವಿಕೆಟ್ ಸೋಲನುಭವಿಸಿದೆ. ಇದೀಗ ಆರ್‌ಸಿಬಿಯ ಹ್ಯಾಟ್ರಿಕ್ ಗೆಲುವಿನ ಕನಸು ಭಗ್ನಗೊಂಡಿದೆ.
ಇದನ್ನೂ ಓದಿ: PAK ಜರ್ನಿ ಮುಗಿಸುತ್ತಾ ಭಾರತ? – ಸೆಮೀಸ್ ಕ್ವಾಲಿಫೈಗೆ ಇರೋ ದಾರಿ ಏನು?
ಶುಕ್ರವಾರ ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 167 ರನ್ ಕಲೆಹಾಕಿತು. ಸ್ಮೃತಿ ಮಂಧನಾ(13 ಎಸೆತಕ್ಕೆ 26) ಸ್ಫೋಟಕ ಆರಂಭ ಒದಗಿಸಿ ಔಟಾದ ಬಳಿಕ, ಎಲೈಸ್ ಪೆರ್ರಿ ಮುಂಬೈ ಬೌಲರ್‌ಗಳನ್ನು ಚೆಂಡಾಡಿದರು. ಅವರು 43 ಎಸೆತಗಳಲ್ಲಿ 11 ಬೌಂಡರಿ, 2 ಸಿಕ್ಸರ್‌ಗಳೊಂದಿಗೆ 81 ರನ್ ಸಿಡಿಸಿ, 20ನೇ ಓವರ್‌ನ 5ನೇ ಎಸೆತದಲ್ಲಿ ಔಟಾದರು. ರಿಚಾ ಘೋಷ್ 28 ರನ್ ಕೊಡುಗೆ ನೀಡಿದರು.
ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಮುಂಬೈ 19.5 ಓವರಲ್ಲಿ ಜಯಗಳಿಸಿತು. ನ್ಯಾಟ್ ಶೀವರ್ ಬ್ರಂಟ್ 21 ಎಸೆತಗಳಲ್ಲಿ 42, ಹರ್ಮನ್‌ಪ್ರೀತ್ ಕೌರ್ 38 ಎಸೆತಗಳಲ್ಲಿ 50 ರನ್ ಸಿಡಿಸಿ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ಕೊನೆಯಲ್ಲಿ ಅಮನ್‌ಜೋತ್ ಕೌರ್(34) ತಂಡವನ್ನು ಗೆಲ್ಲಿಸಿದರು.