ಸತತ ನಾಲ್ಕನೇ ಸೋಲು ಕಂಡ ಆರ್‌ಸಿಬಿ – ಸ್ಮೃತಿ ಮಂಧಾನ ಪ್ರತಿಕ್ರಿಯೆಗೆ ಫ್ಯಾನ್ಸ್ ಶಾಕ್

ಸತತ ನಾಲ್ಕನೇ ಸೋಲು ಕಂಡ ಆರ್‌ಸಿಬಿ – ಸ್ಮೃತಿ ಮಂಧಾನ ಪ್ರತಿಕ್ರಿಯೆಗೆ ಫ್ಯಾನ್ಸ್ ಶಾಕ್

ಚೊಚ್ಚಲ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ ಸತತ ನಾಲ್ಕನೇ ಬಾರಿ ಆರ್‌ಸಿಬಿ ಸೋಲು ಕಂಡಿದೆ. ಯುಪಿ ವಾರಿಯರ್ಸ್ ವಿರುದ್ಧ ಬೌಲರ್‌ಗಳಂತೂ ಅದೇ ವೈಫಲ್ಯ ಅನುಭವಿಸಿದ್ದಾರೆ. ಸತತ ನಾಲ್ಕನೇ ಬಾರಿ ಬೌಲರ್‌ಗಳು ಕಳಪೆ ಆಟ ಮುಂದುವರೆಸಿದ್ದು, ಗೆಲುವಿನ ಖಾತೆ ತೆರೆಯುವಲ್ಲಿ ಆರ್‌ಸಿಬಿ ವಿಫಲವಾಗಿದೆ. ಮುಂಬೈನ ಬ್ರಬೋರ್ನ್ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ಯುಪಿ ವಾರಿಯರ್ಸ್ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ತಂಡ ಆರಂಭದಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರೂ ಕೂಡಾ ನಂತರದಲ್ಲಿ ದಿಢೀರ್ ಕುಸಿತ ಕಂಡಿತು. ಬೌಲರ್‌ಗಳಿಗೂ ಎದುರಾಳಿಯ ಒಂದೇ ಒಂದೂ ವಿಕೆಟ್ ಕೀಳಲು ಸಾಧ್ಯವಾಗಲಿಲ್ಲ.

ಇದನ್ನೂ ಓದಿ:  ಆರ್‌ಸಿಬಿಗೆ ಹ್ಯಾಟ್ರಿಕ್ ಸೋಲು -ಬೌಲಿಂಗ್ ಸಮಸ್ಯೆಯಿಂದ ಟೀಮ್ ಕ್ಯಾಪ್ಟನ್ ಕಂಗಾಲು

ಪಂದ್ಯ ಮುಗಿದ ಬಳಿಕ ಮಾತನಾಡಿದ ಆರ್‌ಸಿಬಿ ನಾಯಕಿ ಸ್ಮೃತಿ ಮಂಧಾನ ಶಾಕಿಂಗ್ ಹೇಳಿಕೆ ನೀಡಿದ್ದಾರೆ. ತಂಡದ ಸೋಲಿಗೆ ನಾನೇ ಕಾರಣ ಎಂದಿರುವ ಮಂಧಾನ ಇದರ ಹೊಣೆಯನ್ನು ನಾನೇ ಹೊರುತ್ತೇನೆ ಎಂದು ಹೇಳಿದ್ದಾರೆ. ಕಳೆದ ನಾಲ್ಕು ಪಂದ್ಯಗಳಲ್ಲಿ ನಮ್ಮ ತಂಡದಿಂದ ಇದೇ ಪ್ರದರ್ಶನ ಬರುತ್ತಿದೆ. ನಾವು ಉತ್ತಮ ಆರಂಭ ಪಡೆದುಕೊಳ್ಳುತ್ತೇವೆ. ಆದರೆ, ನಂತರ ದಿಢೀರ್ ವಿಕೆಟ್ಗಳು ಪತನಗೊಳುತ್ತವೆ. ಈ ಸೋಲಿನ ಹೊಣೆಯನ್ನು ನಾನು ತೆಗೆದುಕೊಳ್ಳುತ್ತೇನೆ. ನಮ್ಮ ಬೌಲರ್‌ಗಳು ಏನಾದರು ಮಾಡಬೇಕು ಎಂದರೆ ನಾವು ಮೊದಲಿಗೆ ರನ್ ಗಳಿಸಬೇಕು. ಆದರೆ, ಅದು ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾರೆ. ಪಂದ್ಯ ಆರಂಭಕ್ಕೂ ಮುನ್ನ ಕೆಲ ಯೋಜನೆ ಹಾಕಿಕೊಂಡಿದ್ದೆವು. 7 ರಿಂದ 15 ಓವರ್ ವರೆಗೆ ಪ್ರತಿ ಓವರ್ನಲ್ಲಿ 7 ರಿಂದ 8 ರನ್ ಹೊಡೆಯುವ ಬಗ್ಗೆ ಚರ್ಚೆಸಿದ್ದೆವು. ಆದರೆ, ಈ ಪ್ಲಾನ್ ವರ್ಕ್ ಆಗಲಿಲ್ಲ. ಇದು ಯಾವರೀತಿ ಸಾಗುತ್ತದೆ ಎಂಬುದನ್ನು ನೋಡಬೇಕಿದೆ. ತಂಡದ ಎಲ್ಲ ಆಟಗಾರ್ತಿಯರ ಜೊತೆ ಈ ಬಗ್ಗೆ ನಾನು ಮಾತನಾಡುತ್ತೇನೆ ಎಂದು ಸ್ಮೃತಿ ಮಂಧಾನ ಹೇಳಿದ್ದಾರೆ.

suddiyaana