ಬೇಟೆಗಾರರಲ್ಲ ರಣಬೇಟೆಗಾರರು – TEAM GAME ಮಂತ್ರ ಸಕ್ಸಸ್
RCB ತಂತ್ರಕ್ಕೆ ಕ್ರಿಕೆಟ್ ದೇವರು ಫಿದಾ

ಬೇಟೆಗಾರರಲ್ಲ ರಣಬೇಟೆಗಾರರು – TEAM GAME ಮಂತ್ರ ಸಕ್ಸಸ್RCB ತಂತ್ರಕ್ಕೆ ಕ್ರಿಕೆಟ್ ದೇವರು ಫಿದಾ

18 ವರ್ಷ.. 0 ಕಪ್.. 1 ವರ್ಷ 2 ಕಪ್.. ಐಪಿಎಲ್​ನಲ್ಲಿ ಆರ್​ಸಿಬಿ ಈಗ ನಡೆದಿದ್ದೇ ದಾರಿ. ಆದ್ರೆ ಅತಿರಥ ಮಹಾರಥ ಅನ್ನೋ ಹಾಗೇ ವಿಶ್ವಕ್ರಿಕೆಟ್​ನ ದಿಗ್ಗಜರೇ ರೆಡ್ ಆರ್ಮಿಯಲ್ಲಿದ್ರೂ ಕಪ್ ಗೆಲ್ಲೋಕೆ ಯಾಕೆ 18 ವರ್ಷ ಬೇಕಾಯ್ತು ಅಂದ್ರೆ ಅದಕ್ಕೆ ಕಾರಣವೂ ಇದೆ.

ಇದನ್ನೂ ಓದಿ : RCBಗೆ ಸ್ಟ್ರೈಕ್ ರೇಟ್.. GTಗೆ ರನ್ಸ್ – GAME CHANGERS ಕೈಯಲ್ಲಿ ಕಪ್!

ಆರ್​ಸಿಬಿ ಸತತ 2 ಕಪ್ ಗೆದ್ದಿದ್ದಕ್ಕೆ ಕ್ರಿಕೆಟ್ ಲೋಕವೇ ವಿಶ್ ಮಾಡ್ತಿದೆ. ಇನ್ನೊಂದಷ್ಟು ಜನ ಫಾರ್ಮಲಿಟೀಸ್​ಗೋಸ್ಕರ ವಿಶ್ ಮಾಡಿರ್ಬೋದು. ಅದು ಬೇರೆ ಪ್ರಶ್ನೆ. ಹಿಂದೆಲ್ಲಾ ಬೆಂಗಳೂರು ತಂಡ ದಾಖಲೆಗಳ ಮೇಲೆ ದಾಖಲೆ ಬರೆದ್ರೂ ಕಪ್ ಮಾತ್ರ ಯಾಕೆ ಗೆಲ್ತಾ ಇರ್ಲಿಲ್ಲ ಅಂದ್ರೆ ಅದಕ್ಕೆ ಕಾರಣ ಟೀಂ ಬ್ಯಾಲೆನ್ಸ್ ಇಲ್ಲದೇ ಇರೋದು. ಆದ್ರೀಗ ಟಾಪ್ ಟು ಬಾಟಮ್ ಫೈರ್ ಬ್ರ್ಯಾಂಡ್ ಪ್ಲೇಯರ್​ಗಳೇ ಇದ್ದಾರೆ. ನೀನು ಆಡಿಲ್ಲ ಅಂದ್ರೆ ನಾನು ಆಡ್ತೀನಿ ಗುರು ಅಂತಾ ರೆಸ್ಪಾನ್ಸಿಬಿಲಿಟಿ ತಗೊಳ್ತಿದ್ದಾರೆ.

ಆರ್ ಸಿಬಿಯಲ್ಲಿ ಈಗ ಬೇಟೆಗಾರರಲ್ಲ ರಣಬೇಟೆಗಾರರು ದಂಡು!

ಐಪಿಎಲ್​ನಲ್ಲಿ ಈಗ ಮೋಸ್ಟ್ ಡೇಂಜರಸ್ ಟೀಂ ಅಂದ್ರೆ ಅದು ಆರ್​ಸಿಬಿ. ಫಸ್ಟ್ ಮ್ಯಾಚ್​ನಿಂದ ಹಿಡ್ದು ಫೈನಲ್​ ಮ್ಯಾಚ್​ವರೆಗೂ ಕಂಪ್ಲೀಟ್ ಡಾಮಿನೇಷನ್. ಬ್ಯಾಟಿಂಗ್ ಬೌಲಿಂಗ್ ಎಲ್ಲದ್ರಲ್ಲೂ ಪ್ರತೀ ಪ್ಲೇಯರ್ ಬಿಗ್ ಇಂಪ್ಯಾಕ್ಟ್ ಮಾಡಿದ್ದರಿಂದಳೇ ಆರ್​ಸಿಬಿ ಈಗ ಚಾಂಪಿಯನ್ಸ್ ಆಗಿದ್ದಾರೆ.

ರೆಡ್ ಆರ್ಮಿಯ ರಣಬೇಟೆಗಾರರು!

ಬ್ಯಾಟಿಂಗ್ ಹಾಗೂ ಬೌಲಿಂಗ್ ನಲ್ಲಿ ತಂಡದ ಬ್ಯಾಲೆನ್ಸ್

ಪ್ರತಿಯೊಬ್ಬ ಆಟಗಾರನೂ ಜವಾಬ್ದಾರಿಯುತ ಪ್ರದರ್ಶನ

16 ಪಂದ್ಯ.. 11 ಗೆಲುವು.. 9 ಆಟಗಾರರು ಪಂದ್ಯಶ್ರೇಷ್ಠ

ಕೂಲ್ ಆಗಿರುವ ರಜತ್.. ಲೀಡ್ ಮಾಡ್ತಿರೋ ವಿರಾಟ್

ಫ್ಲವರ್, ಕೊಹ್ಲಿ, ರಜತ್, ಡಿಕೆ ಎಲ್ಲರೂ ಫ್ರೆಂಡ್ಲಿ ಬಾಂಡಿಂಗ್

ವಿದೇಶಿ ಆಟಗಾರರು ಕೂಡ ತಂಡದ ಜೊತೆ ಎಮೋಷನಲ್

ಹೀಗೆ ಬೆಂಗಳೂರು ಒಬ್ಬರು ಇಬ್ಬರ ಮೇಲೆ ಡಿಪೆಂಡ್ ಆಗದೇ ಇಡೀ ತಂಡದ ಆಟಗಾರರೆಲ್ಲರೂ ಸಪೋರ್ಟ್ ಮಾಡ್ತಾ ಇರೋದಕ್ಕೆ ಬ್ಯಾಕ್ ಟು ಬ್ಯಾಕ್ ಕಪ್ ಗೆದ್ದಿದ್ದಾರೆ. ಆರ್​ಸಿಬಿಯ ಈ ಟೀಮ್ ಗೇಮ್ ನೋಡಿ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಕೂಡ ಫಿದಾ ಆಗಿದ್ದಾರೆ. ಅದ್ರಲ್ಲೂ ಫೈನಲ್ ಪಂದ್ಯದಲ್ಲಿ ಭುವನೇಶ್ವರ್ ಕುಮಾರ ಮತ್ತು ಕೃನಾಲ್ ಪಾಂಡ್ಯ ಅವ್ರ ಬೌಲಿಂಗ್ ಸ್ಕಿಲ್ ಬಗ್ಗೆ ಹಾಡಿ ಹೊಗಳಿದ್ದಾರೆ. ಒಟ್ನಲ್ಲಿ ಆರ್​ಸಿಬಿ ಈಗ ಮುಟ್ಟಿದ್ದೆಲ್ಲಾ ಚಿನ್ನ. ಚಾಂಪಿಯನ್ಸ್ ಆಟಕ್ಕೆ ಮತ್ತೊಂದು ಕಿರೀಟ ಸಿಕ್ಕಿದ್ದು  ಎಲ್ರೂ ಸೆಲೆಬ್ರೇಷನ್ ಮೂಡ್​ನಲ್ಲಿದ್ದಾರೆ. ನೆಕ್ಸ್​ಟ್ ಐಪಿಎಲ್​ವರೆಗೂ ಫ್ಯಾನ್ಸ್ ಅಂತೂ ಫುಲ್ ಖುಷ್.

Shantha Kumari

Leave a Reply

Your email address will not be published. Required fields are marked *