RCB ಶಕ್ತಿಯೇ ಯಂಗ್ ಸ್ಟರ್ಸ್.. 2025ಕ್ಕೆ ಅಸಲಿ ಹೊಸ ಅಧ್ಯಾಯ – ಲಕ್ಕಿ ಸ್ಟಾರ್ ಆಗ್ತಾರಾ ಫಿಲ್ ಸಾಲ್ಟ್?

RCB ಶಕ್ತಿಯೇ ಯಂಗ್ ಸ್ಟರ್ಸ್.. 2025ಕ್ಕೆ ಅಸಲಿ ಹೊಸ ಅಧ್ಯಾಯ – ಲಕ್ಕಿ ಸ್ಟಾರ್ ಆಗ್ತಾರಾ ಫಿಲ್ ಸಾಲ್ಟ್?

ಟೀಂ ಇಂಡಿಯಾ ಆಟಗಾರರು ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಬ್ಯುಸಿ ಆಗಿದ್ರೆ ಐಪಿಎಲ್ ಫ್ರಾಂಚೈಸಿಗಳು ಟ್ರೋಫಿ ಗೆಲ್ಲೋಕೆ ಈಗಾಗ್ಲೇ ಕಸರತ್ತು ಶುರು ಮಾಡಿವೆ. ಐಪಿಎಲ್ ಆರಂಭಕ್ಕೆ ಇನ್ನೂ ಮೂರು ತಿಂಗಳು ಬಾಕಿ ಇರುವಾಗ್ಲೇ ಪ್ರಾಕ್ಟೀಸ್ ಕೂಡ ಶುರು ಮಾಡಿಕೊಂಡಿವೆ. ಹರಾಜಿನಲ್ಲಿ ಬಲಿಷ್ಠ ತಂಡವನ್ನ ಕಟ್ಟಿರುವ ಆರ್​ಸಿಬಿ ಕೂಡ ತಯಾರಿ ಆರಂಭಿಸಿದ್ದು ಅಚ್ಚರಿ ಮೂಡಿಸಿದೆ. ಟೀಮ್​ನಲ್ಲಿರೋ ಪ್ಲೇಯರ್ಸ್ ಚಿನ್ನಸ್ವಾಮಿ ಸ್ಟೇಡಿಯಮ್​ನಲ್ಲಿ ಅಭ್ಯಾಸ ಶುರು ಮಾಡಿದ್ದಾರೆ. ಅಸಲಿಗೆ ಆರ್​ಸಿಬಿಗೆ 2025ರ ಸೀಸನ್​ ಹೊಸ ಅಧ್ಯಾಯ. ಅದು ಹೇಗೆ ಮತ್ತು ಯಾಕೆ ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: IND Vs AUS.. ಮಳೆಗೆ ಪಂದ್ಯ ರದ್ದು.. ಭಾರತಕ್ಕೆ ನಷ್ಟ.. ಆಸಿಸ್ ಗೆ ಲಾಭ ಹೇಗೆ? – WTC ಕನಸಿಗೆ ಎಳ್ಳುನೀರು ಬಿಡುತ್ತಾ?

17 ಸೀಸನ್​ಗಳಿಂದ ಕಪ್ ಗೆಲ್ಲುವಲ್ಲಿ ಫೇಲ್ಯೂರ್ ಆಗಿರೋ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನೆಕ್ಸ್​ಟ್ ಸೀಸನ್ ಕಪ್ ಹೊಡಿಲೇಬೇಕು ಅಂತಾ ಪಣ ತೊಟ್ಟಿದೆ. ಇದೇ ಕಾರಣಕ್ಕೆ ಈಗಲೇ ಪ್ರಾಕ್ಟೀಸ್ ಕೂಡ ಸ್ಟಾರ್ಟ್ ಮಾಡಿದ್ದಾರೆ. ದೇಶೀಯ ಆಟಗಾರರು ಬೆಂಗಳೂರಿನಲ್ಲಿ ಅಭ್ಯಾಸ ಆರಂಭಿಸಿದ್ದಾರೆ. ಕಳೆದ ವರ್ಷ ಸೆಕೆಂಡ್ ಆಫ್​ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಆರ್​ಸಿಬಿ ಪ್ಲೇ ಆಫ್ ಪ್ರವೇಶ ಮಾಡಿತ್ತು. ಬಟ್ ಪ್ಲೇ ಆಫ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಸೋತು ನಿರಾಸೆ ಅನುಭವಿಸಿತ್ತು. ಆರಂಭದಲ್ಲಿ ಸತತ ಸೋಲು ಕಂಡಿದ್ದ ಆರ್ ಸಿಬಿ ಬಳಿಕ ಸತತ ಏಳು ಪಂದ್ಯಗಳನ್ನು ಸತತವಾಗಿ ಗೆದ್ದು ಪ್ಲೇಆಫ್‌ಗೆ ಪ್ರವೇಶಿಸಿದ್ದು ಅಭಿಮಾನಿಗಳಂತೂ ಫುಲ್ ಥ್ರಿಲ್ ಆಗಿದ್ರು.

ಹಳಬರನ್ನ ರಿಲೀಸ್ ಮಾಡಿ ಹೊಸಬರನ್ನ ಖರೀದಿಸಿದ್ದ ಪ್ಲಸ್!

ಮೆಗಾ ಹರಾಜಿಗೂ ಮುನ್ನ ತಂಡದಲ್ಲಿ ಮಹತ್ವದ ಬದಲಾವಣೆ ಮಾಡಿದ್ದ ಫ್ರಾಂಚೈಸಿ ವಿರಾಟ್ ಕೊಹ್ಲಿ, ರಜತ್ ಪಟಿದಾರ್ ಮತ್ತು ಯಶ್ ದಯಾಳ್‌ರನ್ನು ಮಾತ್ರ ಉಳಿಸಿಕೊಂಡು ಉಳಿದ ಆಟಗಾರರನ್ನು ಬಿಡುಗಡೆ ಮಾಡಿತ್ತು. ಮೆಗಾ ಹರಾಜಿನಲ್ಲಿ ಪ್ರಮುಖ ಆಟಗಾರರನ್ನು ಆರ್ ಟಿಎಂ ಬಳಸಿ ವಾಪಸ್ ತೆಗೆದುಕೊಳ್ಳುತ್ತೆ ಅನ್ನೋ ನಿರೀಕ್ಷೆ ಇದ್ರೂ ಆರ್ ಸಿಬಿ ಸ್ವಪ್ನಿಲ್ ಸಿಂಗ್‌ರನ್ನು ಹೊರತುಪಡಿಸಿ ಉಳಿದ ಯಾವ ಆಟಗಾರರು ವಾಪಸ್ ಆರ್ ಸಿಬಿಗೆ ಬರಲಿಲ್ಲ. ಬಟ್ ಕೊನೆಗೂ ಅಭಿಮಾನಿಗಳಿಗೆ ನಿರಾಸೆ ಮೂಡಿಸಲಿಲ್ಲ. ಐಪಿಎಲ್ ಮೆಗಾ ಹರಾಜಿನಲ್ಲಿ ಫಿಲ್ ಸಾಲ್ಟ್ ಮತ್ತು ಜೋಶ್ ಹ್ಯಾಜಲ್‌ವುಡ್, ಜೇಕಬ್ ಬೆಥೆಲ್, ಭುವನೇಶ್ವರ್ ಕುಮಾರ್, ಲಿಯಾಮ್ ಲಿವಿಂಗ್‌ಸ್ಟೋನ್‌ರಂತಹ ಉತ್ತಮ ಆಟಗಾರರನ್ನು ಖರೀದಿ ಮಾಡಿದೆ. ಈ ಬಾರಿ ತಂಡ ಬಲಿಷ್ಠವಾಗಿದ್ದು ಉತ್ತಮ ಪ್ರದರ್ಶನ ನೀಡುವ ವಿಶ್ವಾಸದಲ್ಲಿದೆ.

ದೇಶೀಯ ಆಟಗಾರರು ಚಿನ್ನಸ್ವಾಮಿಯಲ್ಲಿ ಭರ್ಜರಿ ತಾಲೀಮು!

ಬೆಂಗಳೂರಿನಲ್ಲಿ ನಡೆಯುತ್ತಿರುವ ಶಿಭಿರದಲ್ಲಿ ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ರಜತ್ ಪಾಟಿದಾರ್, ಜಿತೇಶ್ ಶರ್ಮಾ, ಯಶ್ ದಯಾಳ್ ಮತ್ತು ರಸಿಖ್ ದಾರ್ ಸೇರಿದಂತೆ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಆಡುತ್ತಿರುವ ಆಟಗಾರರು ಭಾಗಿಯಾಗಿದ್ರು. ಬಟ್ ಈವರೆಗೂ ಯಾರು ಕ್ಯಾಪ್ಟನ್ ಎಂದು ಅನೌನ್ಸ್ ಮಾಡದೇ ಇರೋದು ಬಾರೀ ಕುತೂಹಲ ಮೂಡಿಸಿದೆ.

ಕೆಎಲ್ ರಾಹುಲ್ ರನ್ನು ಕೈ ಬಿಟ್ಟ ಬಗ್ಗೆ ಕ್ಲಾರಿಟಿ ಕೊಟ್ಟ ಫ್ರಾಂಚೈಸಿ!

83 ಕೋಟಿಯೊಂದಿಗೆ ಹರಾಜಿಗೆ ಇಳಿದಿದ್ದ ಫ್ರಾಂಚೈಸಿ ಯಾವ ಸ್ಲಾಟ್ ಆಟಗಾರರನಿಗೆ ಎಷ್ಟು ಅಮೌಂಟ್ ಅಂತಾ ಮೊದ್ಲೇ ಫಿಕ್ಸ್ ಆಗಿತ್ತು. ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡವು ಓಪನಿಂಗ್​​ ಸ್ಲಾಟ್​ಗೆ ಮೊದಲು ಕನ್ನಡಿಗ ಕೆ.ಎಲ್​ ರಾಹುಲ್​ ಅವರನ್ನೇ ಪರಿಗಣಿಸಿತ್ತು. ಆರ್​​ಸಿಬಿ ಫಸ್ಟ್​ ಲಿಸ್ಟ್​ನಲ್ಲೇ ಇವರ ಹೆಸರಿತ್ತು. ಓಪನಿಂಗ್​ ಸ್ಲಾಟ್​ಗೆ ಆರ್​​ಸಿಬಿ ಬಜೆಟ್​​ ಕೇವಲ 12 ಕೋಟಿ ಮೀಸಲಿಟ್ಟಿತ್ತು. ಕೆ.ಎಲ್​ ರಾಹುಲ್​ ಖರೀದಿಗೆ ಆರ್​​ಸಿಬಿ, ಕೆಕೆಆರ್​​, ಡೆಲ್ಲಿ ಕ್ಯಾಪಿಟಲ್ಸ್​ ತಂಡಗಳ ನಡುವೆ ಪೈಪೋಟಿ ನಡೆದಿತ್ತು. ರಾಹುಲ್​ ಅವರನ್ನು ಮೊದಲು ಬಿಡ್​​ ಮಾಡಿದ್ದು ಆರ್​​ಸಿಬಿ. ಬಳಿಕ ಸುಮಾರು 12 ಕೋಟಿವರೆಗೂ ಆರ್​​ಸಿಬಿ ಬಿಡ್​ ಮಾಡಿತು. ಯಾವಾಗ ರಾಹುಲ್​ ಬೆಲೆ ಏರುತ್ತಲೇ ಹೋಯ್ತು, ಅವಾಗ ಆರ್​​ಸಿಬಿ ಹಿಂದೇಟು ಹಾಕಿತು. ನಂತರ ಇವರ ಸ್ಥಾನಕ್ಕೆ ಫಿಲ್​ ಸಾಲ್ಟ್​ ಅವರನ್ನು ಖರೀದಿ ಮಾಡಲಾಗಿದೆ. ಈ ವಿಚಾರವನ್ನ ಆರ್​ಸಿಬಿಯೇ ರಿವೀಲ್ ಮಾಡಿದೆ. ಮೊದಲ ದಿನವೇ ಬರೋಬ್ಬರಿ 50 ಕೋಟಿ ಖರ್ಚು ಮಾಡಿದ್ದ ಫ್ರಾಂಚೈಸಿ 2ನೇ ದಿನ ಉಳಿದ 30 ಕೋಟಿಯನ್ನು ಆಟಗಾರರ ಮೇಲೆ ಸುರಿಯಿತು. ಈ ಪೈಕಿ ಆರ್​​ಸಿಬಿ ಜೋಶ್‌ ಹೇಜಲ್​ವುಡ್‌ಗೆ 12.50 ಕೋಟಿ, ಫಿಲ್ ಸಾಲ್ಟ್​​ಗೆ 11.50 ಕೋಟಿ ರೂ., ಜಿತೇಶ್ ಶರ್ಮಾಗೆ 11.00 ಕೋಟಿ ರೂ., ಭುವನೇಶ್ವರ್ ಕುಮಾರ್​ಗೆ 10.75 ಕೋಟಿ ರೂ., ಲಿಯಾಮ್ ಲಿವಿಂಗ್‌ಸ್ಟೋನ್​ಗೆ ಸುಮಾರು 8.75 ಕೋಟಿ ರೂ. ನೀಡಿ ಖರೀದಿ ಮಾಡಿದೆ.

ಬೆಂಗಳೂರು ಪಾಲಿಗೆ ಲಕ್ಕಿ ಸ್ಟಾರ್ ಆಗ್ತಾರಾ ಫಿಲ್ ಸಾಲ್ಟ್?

ಹರಾಜಿನಲ್ಲಿ ಇಂಗ್ಲೆಂಡ್‌ ತಂಡದ ಸ್ಫೋಟಕ ಬ್ಯಾಟರ್‌ ಫಿಲ್‌ ಸಾಲ್ಟ್‌ ಅವರನ್ನು ಖರೀದಿ ಮಾಡುವಲ್ಲಿ ಆರ್​​ಸಿಬಿ ಯಶಸ್ವಿಯಾಗಿದೆ. ಇವರಿಗೆ ಬರೋಬ್ಬರಿ 11.50 ಕೋಟಿ ನೀಡಿ ಆರ್‌ಸಿಬಿ ತಂಡಕ್ಕೆ ಬರಮಾಡಿಕೊಂಡಿದೆ.  28 ವರ್ಷದ ಇಂಗ್ಲೆಂಡ್ ತಂಡದ ಸ್ಫೋಟಕ ಆಟಗಾರ ಫಿಲ್​ ಸಾಲ್ಟ್​​ ತಮ್ಮ ಬಿರುಸಿನ ಬ್ಯಾಟಿಂಗ್‌ನಿಂದಲೇ ಹೆಸರು ವಾಸಿ. ಇವರು ಇಂಗ್ಲೆಂಡ್ ತಂಡದ ಪರ 38 ಟಿ20 ಪಂದ್ಯಗಳಲ್ಲಿ 165.32 ಸ್ಟ್ರೈಕ್‌ ರೇಟ್‌ನಲ್ಲಿ 1106 ರನ್‌ ಸಿಡಿಸಿದ್ದಾರೆ. ಅದರಲ್ಲೂ ಇವರ ಟ್ರ್ಯಾಕ್​ ರೆಕಾರ್ಡ್​ ನೋಡಿ ಆರ್​​ಸಿಬಿ ಖರೀದಿ ಮಾಡಿದೆ. ಸಾಲ್ಟ್​​ ತನ್ನ ಕರಿಯರ್​ನಲ್ಲೇ ಶೇ. 28ರಷ್ಟು ಸಮಯ ಒಂದು ಓವರ್​​ನಲ್ಲಿ 6-8 ರನ್​​ ಗಳಿಸುತ್ತಾರೆ. ಶೇ. 30ರಷ್ಟು ಸಮಯ 1 ಓವರ್​​ನಲ್ಲಿ 12-15 ರನ್​​ ಕಲೆ ಹಾಕುತ್ತಾರೆ. 4 ಓವರ್​​ಗಳ ಪೈಕಿ 1ರಲ್ಲಿ 16ಕ್ಕೂ ಹೆಚ್ಚು ರನ್​​​ ಸಿಡಿಸುತ್ತಾರೆ. ಆವರೇಜ್​​ 2 ಓವರ್​​ಗೆ ಒಮ್ಮೆ 12 ರನ್​​ ಬಾರಿಸೋ ಸಾಮರ್ಥ್ಯ ಇದೆ. ಇವರ ಟ್ರ್ಯಾಕ್​​ ರೆಕಾರ್ಡ್​ ನೋಡಿ ಆರ್​​ಸಿಬಿ ಬೆಚ್ಚಿಬಿದ್ದಿತ್ತು. ಪ್ಲಾನ್​ ಪ್ರಕಾರ ಇವರೇ ಆರ್​​ಸಿಬಿ ತಂಡದ ಓಪನಿಂಗ್​​ ಸ್ಲಾಟ್​​ಗೆ ಬೇಕು ಎಂದು ಖರೀದಿ ಮಾಡಲಾಗಿದೆ. ಆರ್​​ಸಿಬಿ ರಿಲೀಸ್​ ಮಾಡಿದ ವಿಡಿಯೋದಲ್ಲಿ ಕಂಪ್ಲೀಟ್​​ ಪ್ಲಾನಿಂಗ್​ ರೆಕಾರ್ಡ್​ ಆಗಿದ್ದು, ನೀವು ನೋಡಬಹುದಾಗಿದೆ. ಇವರು ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 3 ಶತಕ ಹಾಗೂ 4 ಅರ್ಧಶತಕಗಳನ್ನು ಬಾರಿಸಿದ್ದಾರೆ.

ಐಪಿಎಲ್​ನಲ್ಲೂ ಫಿಲ್ ಸಾಲ್ಟ್ ಒಳ್ಳೆ ಪ್ರದರ್ಶನ ನೀಡಿದ್ದಾರೆ. 2024ರ ಐಪಿಎಲ್​ನಲ್ಲಿ ಕೆಕೆಆರ್​ ತಂಡದ ಪರ ಫಿಲ್​ ಸಾಲ್ಟ್ ಆರಂಭಿಕ ಬ್ಯಾಟರ್‌ ಆಗಿ ಬಿಗ್ ಇನ್ನಿಂಗ್ಸ್‌ ಆಡಿದ್ದರು. ಕೆಕೆಆರ್ ಫೈನಲ್‌ ತಲುಪಲು ನೆರವಾಗಿದ್ದರು. ಇದುವರೆಗೂ ತಾನು ಆಡಿರೋ 21 ಐಪಿಎಲ್​ ಪಂದ್ಯಗಳಲ್ಲಿ 653 ರನ್‌ ಬಾರಿಸಿದ್ದಾರೆ. ಇದರಲ್ಲಿ 6 ಅರ್ಧಶತಕಗಳು ಸೇರಿವೆ. ಇಷ್ಟೇ ಅಲ್ಲ ವಿಕೆಟ್​ ಕೀಪಿಂಗ್​ನಲ್ಲೂ ಒಳ್ಳೆಯ ರೆಕಾರ್ಡ್​ ಇದೆ. ಕೆಎಲ್ ರಾಹುಲ್ ಸ್ಥಾನವನ್ನ ಸಮರ್ಥವಾಗಿ ನಿಭಾಯಿಸೋ ಕೆಪಾಸಿಟಿ ಕೂಡ ಇವ್ರಲ್ಲಿದೆ.

Shwetha M

Leave a Reply

Your email address will not be published. Required fields are marked *