CSK ಗೆದ್ದಿದ್ದು RCBಗೆ ಲಾಭ – LSG ಸೋತ್ರೆ ಟಾಪ್-2 ಫಿಕ್ಸ್
ರೆಡ್ ಆರ್ಮಿಗೆ ಈಗ ಅಸಲಿ JOSH

ಇಂಡಿಯನ್ ಪ್ರೀಮಿಯರ್ ಲೀಗ್ ಈಗ ರೋಚಕ ಘಟ್ಟ ತಲುಪಿದೆ. ಈಗಾಗ್ಲೇ ಕೆಲ ತಂಡಗಳು ಈ ಸೀಸನ್ಗೆ ವಿದಾಯ ಕೂಡ ಹೇಳಿವೆ. ನಾಲ್ಕು ತಂಡಗಳು ಪ್ಲೇಆಫ್ಗೆ ಕ್ವಾಲಿಫೈ ಆಗಿ ವಾರ ಕಳೆದ್ರೂ ಕ್ವಾಲಿಫೈಯರ್ 1 ಆಡೋರು ಯಾರು ಅನ್ನೋದು ಇನ್ನೂ ಕನ್ಫರ್ಮ್ ಆಗಿಲ್ಲ. ಇವತ್ತಿನ ಪಂದ್ಯ ಹಾಗೂ ನಾಳೆ ಪಂದ್ಯದ ಬಳಿಕವೇ ಕ್ಲೈಮ್ಯಾಕ್ಸ್ ಪಿಕ್ಚರ್ ಸಿಗಲಿದೆ. ಇಂಟ್ರೆಸ್ಟಿಂಗ್ ಅಂದ್ರೂ ನಾಲ್ಕೂ ತಂಡಗಳಿಗೂ ಟೇಬಲ್ ಟಾಪರ್ ಆಗೋಕೆ ಈಗ್ಲೂ ಚಾನ್ಸ್ ಇದೆ.
ಇದನ್ನೂ ಓದಿ : RCB ಪ್ಲೇಆಫ್ಸ್ ಆಡಲ್ಲ ಸಾಲ್ಟ್ – ಮೊದಲ ಮಗುವಿಗಾಗಿ ವಿದೇಶಕ್ಕೆ ವಾಪಸ್
ಪ್ರಸ್ತುತ ಸೀಸನ್ನಲ್ಲಿ ಲೀಗ್ ಹಂತದ 68 ಪಂದ್ಯಗಳು ಕಂಪ್ಲೀಟ್ ಆಗಿದ್ದು ಇನ್ನೆರಡು ಮ್ಯಾಚ್ಗಳಷ್ಟೇ ಬಾಕಿ. ಈ ವೇಳೆಗೆ ಬ್ಯಾಕ್ ಟು ಬ್ಯಾಕ್ 2 ಮ್ಯಾಚ್ಗಳನ್ನ ಸೋತ್ರೂ ಗುಜರಾತ್ ಟೈಟಾನ್ಸ್ ನಂಬರ್ 1 ಪ್ಲೇಸ್ನಲ್ಲಿದೆ. 18 ಅಂಕಗಳನ್ನ ಪಡೆದಿದೆ. ಇನ್ನು 17 ಪಾಯಿಂಟ್ಸ್ಗಳೊಂದಿಗೆ ಪಂಜಾಬ್ ಕಿಂಗ್ಸ್ ತಂಡವು ದ್ವಿತೀಯ ಸ್ಥಾನದಲ್ಲಿ ಕಾಣಿಸಿಕೊಂಡಿದೆ. ಇನ್ನು ಆರ್ಸಿಬಿ ತಂಡ ಕೂಡ 17 ಪಾಯಿಂಟ್ಸ್ ಪಡೆದಿದ್ರೂ ನೆಟ್ ರನ್ ರೇಟ್ ಕಡಿಮೆ ಇರೋದ್ರಿಂದ ಮೂರನೇ ಸ್ಥಾನದಲ್ಲಿದ್ದರೆ, ಮುಂಬೈ ಇಂಡಿಯನ್ಸ್ 16 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ.
ನಾಲ್ಕೂ ತಂಡಗಳ ನಡುವೆ ಟಾಪ್-2ಗಾಗಿ ಟಫ್ ಫೈಟ್ ನಡೀತಿದೆ. ಈ ಪೈಪೋಟಿ ನಡುವೆ ಕ್ವಾಲಿಫೈಯರ್ ಆಡುವ 1 ಟೀಂ ಯಾವ್ದು ಅನ್ನೋದು ಕನ್ಫರ್ಮ್ ಆಗಲಿದೆ. ಜೈಪುರದ ಸವಾಯಿ ಮಾನ್ಸಿಂಗ್ ಸ್ಟೇಡಿಯಂನಲ್ಲಿ ನಡೆಯಲಿರುವ ಐಪಿಎಲ್ನ 69ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಮುಖಾಮುಖಿಯಾಗಲಿದೆ. ಈ ಪಂದ್ಯದಲ್ಲಿ ಗೆಲ್ಲುವ ತಂಡ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಲಿದ್ದು, ಈ ಮೂಲಕ ಪ್ಲೇಆಫ್ ಸುತ್ತಿನಲ್ಲಿ ಮೊದಲ ಕ್ವಾಲಿಫೈಯರ್ ಪಂದ್ಯವನ್ನಾಡಲು ಅರ್ಹತೆ ಪಡೆಯಲಿದೆ. ಮುಂಬೈ ತಂಡ ಗೆದ್ರೆ ಈಗಿರೋ 16 + 2 ಅಂಕ ಸೇರಿ ಟೋಟಲ್ 18 ಅಂಕ ಆಗಲಿದೆ. ನೆಟ್ ರನ್ ರೇಟ್ ಅತ್ಯದ್ಭುತವಾಗಿರೋದ್ರಿಂದ ನಂಬರ್ ಸ್ಥಾನಕ್ಕೇರಲಿದೆ. ಹಾಗೇ ಪಂಜಾಬ್ ಗೆದ್ರೆ ಈಗಿರೋ 17 + 2 ಪಾಯಿಂಟ್ಸ್ ಸೇರಿ ಟೋಟಲ್ 19 ಪಾಯಿಂಟ್ಸ್ಗಳೊಂದಿಗೆ ನಂಬರ್ 1ಸ್ಥಾನಕ್ಕೇರಲಿದೆ. ಸೋ ಇಂದಿನ ಪಂದ್ಯ ಇಬ್ಬರಿಗೂ ಕೂಡ ಮಸ್ಟ್ ವಿನ್ ಗೇಮ್ ಆಗಿದೆ.
ಲೀಗ್ ಹಂತದಲ್ಲಿ ಸದ್ಯ 13 ಪಂದ್ಯಗಳನ್ನ ಆಡಿರೋ ಆರ್ಸಿಬಿ 8 ಪಂದ್ಯಗಳನ್ನ ಗೆದ್ದಿದೆ. ಹಾಗೇ ಕೆಕೆಆರ್ ವಿರುದ್ಧದ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. ಸೋ ಟೋಟಲ್ ಆಗಿ 17 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಮಂಗಳವಾರ ನಡೆಯಲಿರುವ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಆರ್ಸಿಬಿ ಲಕ್ನೋ ವಿರುದ್ಧ ಕಣಕ್ಕಿಳಿಯಲಿದೆ. ಈ ಮ್ಯಾಚಲ್ಲಿ ಗೆದ್ರೆ 19 ಅಂಕಗಳೊಂದಿಗೆ ಕ್ವಾಲಿಫೈಯರ್ 1ಗೆ ಸೆಲೆಕ್ಟ್ ಆಗುತ್ತೆ. ಒಂದು ವೇಳೆ ಸೋತ್ರೆ ನಿಜಕ್ಕೂ ಬ್ಯಾಡ್ಲಕ್. ಯಾಕಂದ್ರೆ ಎಲಿಮಿನೇಟರ್ ಮ್ಯಾಚ್ ಆಡ್ಬೇಕಾಗುತ್ತೆ. ಸೋ ಆರ್ಸಿಬಿ ಪಾಲಿಗೆ ಈ ಮ್ಯಾಚ್ ಮಸ್ಟ್ ವಿನ್ ಆಗಿದೆ. ಅಷ್ಟಕ್ಕೂ ಆರ್ಸಿಬಿ ಪ್ಲೇಆಫ್ಸ್ಗೆ ಸೆಲೆಕ್ಟ್ ಆದಾಗಿಂದ್ಲೂ ಟಾಪ್-2 ಸ್ಥಾನವನ್ನೇ ಪಡೀಬೇಕು ಅಂತಾ ಯಾಕೆ ಅಷ್ಟೊಂದು ಒತ್ತಿ ಹೇಳ್ತಿದ್ದೇವೆ ಅಂದ್ರೆ ಅದಕ್ಕೆ ಕಾರಣ ಅಲ್ಲಿರೋ ಅಡ್ವಾಂಟೇಜಸ್.
ಕ್ವಾಲಿಫೈಯರ್ 1 ಅಡ್ವಾಂಟೇಜಸ್!
ಮೊದಲ 2 ಸ್ಥಾನಗಳಲ್ಲಿ ಉಳಿಯೋ ತಂಡಕ್ಕೆ ಬಿಗ್ ಅಡ್ವಾಂಟೇಜ್
ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಗೆಲ್ಲುವ ತಂಡವು ನೇರವಾಗಿ ಫೈನಲ್
ಸೋತವರು ದ್ವಿತೀಯ ಕ್ವಾಲಿಫೈಯರ್ ಪಂದ್ಯವಾಡಲು ಅವಕಾಶ
ಮೂರನೇ ಮತ್ತು ನಾಲ್ಕನೇ ತಂಡಗಳು ಎಲಿಮಿನೇಟರ್ ಪಂದ್ಯವನ್ನಾಡಬೇಕು
ಹೆಸರೇ ಹೇಳುವಂತೆ ಈ ಪಂದ್ಯದಲ್ಲಿ ಸೋಲುವ ತಂಡ ಎಲಿಮಿನೇಟ್
ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಸೋಲುವ ತಂಡಕ್ಕೆ ಮತ್ತೊಂದು ಅವಕಾಶ
ಎಲ್ಲಾ ತಂಡಗಳು ಮೊದಲ ಕ್ವಾಲಿಫೈಯರ್ ಪಂದ್ಯವಾಡೋಕೆ ಹೆಚ್ಚು ಟಾರ್ಗೆಟ್
ಗೆದ್ದ ತಂಡ ಮತ್ತೆ ಮೊದಲ ಕ್ವಾಲಿಫೈಯರ್ನಲ್ಲಿ ಸೋತ ತಂಡದ ಎದುರು ಆಟ
ಎಲಿಮಿನೇಟರ್ ನಲ್ಲಿ ಸೋತ್ರೆ ಮನೆಗೆ ಗೆದ್ರೂ ಕೂಡ ಕ್ವಾಲಿಫೈಯರ್ 2 ಪಂದ್ಯ

ನೋಡಿರಿ

