CSK ಗೆದ್ದಿದ್ದು RCBಗೆ ಲಾಭ.. LSG ಸೋತ್ರೆ ಟಾಪ್-2 ಫಿಕ್ಸ್!

18ನೇ ಸೀಸನ್ ಐಪಿಎಲ್ ಇನ್ನೇನು ಕ್ಲೈಮ್ಯಾಕ್ಸ್ ಸ್ಟೇಜ್ನಲ್ಲಿದೆ. ಲೀಗ್ ಹಂತದಲ್ಲಿ ಇನ್ನೆರಡೇ ಪಂದ್ಯಗಳು ಬಾಕಿ ಇವೆ. ಬಟ್ ಈ ಎರಡು ಮ್ಯಾಚ್ಗಳೇ ಟಾಪ್-2ನಲ್ಲಿ ಸ್ಥಾನ ಪಡೆಯೋದು ಯಾರು ಅನ್ನೋದನ್ನ ಡಿಸೈಡ್ ಮಾಡುತ್ತೆ. ಮುಂಬೈ ಇಂಡಿಯನ್ಸ್ ವರ್ಸಸ್ ಪಂಜಾಬ್ ಕಿಂಗ್ಸ್ ಹಾಗೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ವರ್ಸಸ್ ಲಕ್ನೋ ಸೂಪರ್ ಜೇಂಟ್ಸ್ ನಡುವಿನ ಫೈಟ್ ಹೇಗೆ ಗೇಮ್ ಚೇಂಜರ್ ಆಗುತ್ತೆ.
ಇದನ್ನೂ ಓದಿ: ಆ್ಯಕ್ಷನ್ ಪ್ರಿನ್ಸ್ ‘ಭೈರತಿ ರಣಗಲ್’ ಡೈರೆಕ್ಟರ್ ಆ್ಯಕ್ಷನ್ ಕಟ್ – ಧ್ರುವ ಸರ್ಜಾ ಮುಂದಿನ ಸಿನಿಮಾ ಯಾವ್ದು?
ಇಂಡಿಯನ್ ಪ್ರೀಮಿಯರ್ ಲೀಗ್ ಈಗ ರೋಚಕ ಘಟ್ಟ ತಲುಪಿದೆ. ಈಗಾಗ್ಲೇ ಕೆಲ ತಂಡಗಳು ಈ ಸೀಸನ್ಗೆ ವಿದಾಯ ಕೂಡ ಹೇಳಿವೆ. ನಾಲ್ಕು ತಂಡಗಳು ಪ್ಲೇಆಫ್ಗೆ ಕ್ವಾಲಿಫೈ ಆಗಿ ವಾರ ಕಳೆದ್ರೂ ಕ್ವಾಲಿಫೈಯರ್ 1 ಆಡೋರು ಯಾರು ಅನ್ನೋದು ಇನ್ನೂ ಕನ್ಫರ್ಮ್ ಆಗಿಲ್ಲ. ಇವತ್ತಿನ ಪಂದ್ಯ ಹಾಗೂ ನಾಳೆ ಪಂದ್ಯದ ಬಳಿಕವೇ ಕ್ಲೈಮ್ಯಾಕ್ಸ್ ಪಿಕ್ಚರ್ ಸಿಗಲಿದೆ. ಇಂಟ್ರೆಸ್ಟಿಂಗ್ ಅಂದ್ರೂ ನಾಲ್ಕೂ ತಂಡಗಳಿಗೂ ಟೇಬಲ್ ಟಾಪರ್ ಆಗೋಕೆ ಈಗ್ಲೂ ಚಾನ್ಸ್ ಇದೆ.
ಪ್ರಸ್ತುತ ಸೀಸನ್ನಲ್ಲಿ ಲೀಗ್ ಹಂತದ 68 ಪಂದ್ಯಗಳು ಕಂಪ್ಲೀಟ್ ಆಗಿದ್ದು ಇನ್ನೆರಡು ಮ್ಯಾಚ್ಗಳಷ್ಟೇ ಬಾಕಿ. ಈ ವೇಳೆಗೆ ಬ್ಯಾಕ್ ಟು ಬ್ಯಾಕ್ 2 ಮ್ಯಾಚ್ಗಳನ್ನ ಸೋತ್ರೂ ಗುಜರಾತ್ ಟೈಟಾನ್ಸ್ ನಂಬರ್ 1 ಪ್ಲೇಸ್ನಲ್ಲಿದೆ. 18 ಅಂಕಗಳನ್ನ ಪಡೆದಿದೆ. ಇನ್ನು 17 ಪಾಯಿಂಟ್ಸ್ಗಳೊಂದಿಗೆ ಪಂಜಾಬ್ ಕಿಂಗ್ಸ್ ತಂಡವು ದ್ವಿತೀಯ ಸ್ಥಾನದಲ್ಲಿ ಕಾಣಿಸಿಕೊಂಡಿದೆ. ಇನ್ನು ಆರ್‌ಸಿಬಿ ತಂಡ ಕೂಡ 17 ಪಾಯಿಂಟ್ಸ್ ಪಡೆದಿದ್ರೂ ನೆಟ್ ರನ್ ರೇಟ್ ಕಡಿಮೆ ಇರೋದ್ರಿಂದ ಮೂರನೇ ಸ್ಥಾನದಲ್ಲಿದ್ದರೆ, ಮುಂಬೈ ಇಂಡಿಯನ್ಸ್ 16 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ.
ಮುಂಬೈ ವರ್ಸಸ್ ಪಂಜಾಬ್.. ಗೆದ್ದವ್ರಿಗೆ ಟಿಕೆಟ್ ಕನ್ಫರ್ಮ್!
ನಾಲ್ಕೂ ತಂಡಗಳ ನಡುವೆ ಟಾಪ್-2ಗಾಗಿ ಟಫ್ ಫೈಟ್ ನಡೀತಿದೆ. ಈ ಪೈಪೋಟಿ ನಡುವೆ ಕ್ವಾಲಿಫೈಯರ್ ಆಡುವ 1 ಟೀಂ ಯಾವ್ದು ಅನ್ನೋದು ಕನ್ಫರ್ಮ್ ಆಗಲಿದೆ. ಜೈಪುರದ ಸವಾಯಿ ಮಾನ್ಸಿಂಗ್ ಸ್ಟೇಡಿಯಂನಲ್ಲಿ ನಡೆಯಲಿರುವ ಐಪಿಎಲ್ನ 69ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಮುಖಾಮುಖಿಯಾಗಲಿದೆ. ಈ ಪಂದ್ಯದಲ್ಲಿ ಗೆಲ್ಲುವ ತಂಡ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಲಿದ್ದು, ಈ ಮೂಲಕ ಪ್ಲೇಆಫ್ ಸುತ್ತಿನಲ್ಲಿ ಮೊದಲ ಕ್ವಾಲಿಫೈಯರ್ ಪಂದ್ಯವನ್ನಾಡಲು ಅರ್ಹತೆ ಪಡೆಯಲಿದೆ. ಮುಂಬೈ ತಂಡ ಗೆದ್ರೆ ಈಗಿರೋ 16 + 2 ಅಂಕ ಸೇರಿ ಟೋಟಲ್ 18 ಅಂಕ ಆಗಲಿದೆ. ನೆಟ್ ರನ್ ರೇಟ್ ಅತ್ಯದ್ಭುತವಾಗಿರೋದ್ರಿಂದ ನಂಬರ್ ಸ್ಥಾನಕ್ಕೇರಲಿದೆ. ಹಾಗೇ ಪಂಜಾಬ್ ಗೆದ್ರೆ ಈಗಿರೋ 17 + 2 ಪಾಯಿಂಟ್ಸ್ ಸೇರಿ ಟೋಟಲ್ 19 ಪಾಯಿಂಟ್ಸ್ಗಳೊಂದಿಗೆ ನಂಬರ್ 1ಸ್ಥಾನಕ್ಕೇರಲಿದೆ. ಸೋ ಇಂದಿನ ಪಂದ್ಯ ಇಬ್ಬರಿಗೂ ಕೂಡ ಮಸ್ಟ್ ವಿನ್ ಗೇಮ್ ಆಗಿದೆ.
ಲಕ್ನೋ ತಂಡವನ್ನ ಮಣಿಸಿದ್ರೆ ಟಾಪ್-2ಗೆ ಬೆಂಗಳೂರು!
ಲೀಗ್ ಹಂತದಲ್ಲಿ ಸದ್ಯ 13 ಪಂದ್ಯಗಳನ್ನ ಆಡಿರೋ ಆರ್‌ಸಿಬಿ 8 ಪಂದ್ಯಗಳನ್ನ ಗೆದ್ದಿದೆ. ಹಾಗೇ ಕೆಕೆಆರ್ ವಿರುದ್ಧದ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. ಸೋ ಟೋಟಲ್ ಆಗಿ 17 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಮಂಗಳವಾರ ನಡೆಯಲಿರುವ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಆರ್‌ಸಿಬಿ ಲಕ್ನೋ ವಿರುದ್ಧ ಕಣಕ್ಕಿಳಿಯಲಿದೆ. ಈ ಮ್ಯಾಚಲ್ಲಿ ಗೆದ್ರೆ 19 ಅಂಕಗಳೊಂದಿಗೆ ಕ್ವಾಲಿಫೈಯರ್ 1ಗೆ ಸೆಲೆಕ್ಟ್ ಆಗುತ್ತೆ. ಒಂದು ವೇಳೆ ಸೋತ್ರೆ ನಿಜಕ್ಕೂ ಬ್ಯಾಡ್ಲಕ್. ಯಾಕಂದ್ರೆ ಎಲಿಮಿನೇಟರ್ ಮ್ಯಾಚ್ ಆಡ್ಬೇಕಾಗುತ್ತೆ. ಸೋ ಆರ್‌ಸಿಬಿ ಪಾಲಿಗೆ ಈ ಮ್ಯಾಚ್ ಮಸ್ಟ್ ವಿನ್ ಆಗಿದೆ. ಅಷ್ಟಕ್ಕೂ ಆರ್‌ಸಿಬಿ ಪ್ಲೇಆಫ್ಸ್ಗೆ ಸೆಲೆಕ್ಟ್ ಆದಾಗಿಂದ್ಲೂ ಟಾಪ್-2 ಸ್ಥಾನವನ್ನೇ ಪಡೀಬೇಕು ಅಂತಾ ಯಾಕೆ ಅಷ್ಟೊಂದು ಒತ್ತಿ ಹೇಳ್ತಿದ್ದೇವೆ ಅಂದ್ರೆ ಅದಕ್ಕೆ ಕಾರಣ ಅಲ್ಲಿರೋ ಅಡ್ವಾಂಟೇಜಸ್.
ಕ್ವಾಲಿಫೈಯರ್ 1 ಅಡ್ವಾಂಟೇಜಸ್!
ಪ್ಲೇಆಫ್ಸ್ ಸುತ್ತಿಗೆ ಸೆಲೆಕ್ಟ್ ಆಗಿರೋ ನಾಲ್ಕು ತಂಡಗಳ ಪೈಕಿ ಮೊದಲ 2 ಸ್ಥಾನಗಳಲ್ಲಿ ಉಳಿಯೋ ತಂಡಕ್ಕೆ ಬಿಗ್ ಅಡ್ವಾಂಟೇಜ್ ಇರುತ್ತೆ. ಯಾಕಂದ್ರೆ ಈ ತಂಡಗಳು ಕ್ವಾಲಿಫೈಯರ್ 1ನಲ್ಲಿ ಕಣಕ್ಕಿಳಿಯಲಿವೆ. ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಗೆಲ್ಲುವ ತಂಡವು ನೇರವಾಗಿ ಫೈನಲ್ಗೆ ಪ್ರವೇಶಿಸಲಿದೆ. ಇನ್ನು ಸೋತ ತಂಡಕ್ಕೂ ಮತ್ತೊಂದು ಅವಕಾಶ ಸಿಗುತ್ತೆ. ದ್ವಿತೀಯ ಕ್ವಾಲಿಫೈಯರ್ ಪಂದ್ಯವಾಡಲು ಅವಕಾಶ ಪಡೆಯಲಿದೆ. ಅಲ್ಲಿ ಗೆದ್ರೆ ಮತ್ತೆ ಫೈನಲ್ಗೆ ಪ್ರವೇಶ ಪಡೆಯುತ್ತೆ. ಬಟ್ ಮೂರನೇ ಮತ್ತು ನಾಲ್ಕನೇ ಸ್ಥಾನಗಳನ್ನು ಪಡೆಯುವ ತಂಡಗಳು ಎಲಿಮಿನೇಟರ್ ಪಂದ್ಯವನ್ನಾಡಬೇಕಾಗುತ್ತೆ. ಈ ಪಂದ್ಯದಲ್ಲಿ ಗೆಲ್ಲುವ ತಂಡ ದ್ವಿತೀಯ ಕ್ವಾಲಿಫೈಯರ್ಗೆ ಅರ್ಹತೆ ಪಡೆಯಲಿದೆ. ಅಷ್ಟಕ್ಕೂ ಎಲಿಮಿನೇಟರ್ ಮ್ಯಾಚ್ ಅಂದ್ರೆ ಸ್ವಲ್ಪ ಟೆನ್ಷನ್ ಇದ್ದದ್ದೇ. ಯಾಕಂದ್ರೆ ಹೆಸರೇ ಹೇಳುವಂತೆ ಈ ಪಂದ್ಯದಲ್ಲಿ ಸೋಲುವ ತಂಡ ಎಲಿಮಿನೇಟ್ ಆಗಲಿದೆ. ಅಂದರೆ ಟೂರ್ನಿಯಿಂದಲೇ ಹೊರಬೀಳಲಿದೆ. ಆದರೆ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಸೋಲುವ ತಂಡಕ್ಕೆ ಮತ್ತೊಂದು ಅವಕಾಶ ದೊರೆಯುತ್ತದೆ. ಹೀಗಾಗಿಯೇ ಎಲ್ಲಾ ತಂಡಗಳು ಮೊದಲ ಕ್ವಾಲಿಫೈಯರ್ ಪಂದ್ಯವಾಡೋಕೆ ಹೆಚ್ಚು ಟಾರ್ಗೆಟ್ ಇಟ್ಕೊಂಡಿರ್ತಾವೆ. ಅದೂ ಅಲ್ದೇ ಎಲಿಮಿನೇಟರ್ನಲ್ಲಿ ಗೆದ್ದ ತಂಡ ಮತ್ತೆ ಮೊದಲ ಕ್ವಾಲಿಫೈಯರ್ನಲ್ಲಿ ಸೋತ ತಂಡದ ಎದುರು ಕಣಕ್ಕಿಳಿಯಬೇಕು. ಈ ಮ್ಯಾಚ್ನಲ್ಲಿ ಗೆಲ್ಲುವ ತಂಡ ಫೈನಲ್ಗೆ ಅರ್ಹತೆ ಪಡೆಯಲಿದೆ. ಅಂದ್ರೆ ಎಲಿಮಿನೇಟರ್ನಲ್ಲಿ ಸೋತ್ರೆ ಮನೆಗೆ ಗೆದ್ರೂ ಕೂಡ ಕ್ವಾಲಿಫೈಯರ್ 2 ಪಂದ್ಯ ಆಡ್ಬೇಕು. ಲೀಗ್ ಸ್ಟೇಜ್ನಲ್ಲಿ ಉಳಿದಿರೋದು ಇನ್ನೆರಡೇ ಮ್ಯಾಚ್. ಬಟ್ ನಾಲ್ಕೂ ತಂಡಗಳಿಗೂ ಟಾಪ್-2ಗೆ ಹೋಗೋಕೆ ಚಾನ್ಸ್ ಇದ್ದೇ ಇದೆ.
ನಾಲ್ಕೂ ತಂಡಗಳಿಗೂ ಪ್ಲೇಆಫ್ ಚಾನ್ಸ್!
ಗುಜರಾಟ್ ಟೈಟಾನ್ಸ್ ತಂಡ ಲೀಗ್ ಹಂತದಲ್ಲಿ 14 ಪಂದ್ಯಗಳನ್ನೂ ಆಡಿದ್ದು 9ರಲ್ಲಿ ಗೆದ್ದು 18 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಸದ್ಯ ಅಗ್ರ ಸ್ಥಾನದಲ್ಲಿದೆ. ಸೋಮವಾರ ಮುಂಬೈ ಮತ್ತು ಪಂಜಾಬ್ ಪಂದ್ಯ ನಡೆಯಲಿದ್ದು ಇಬ್ಬರಲ್ಲಿ ಯಾರೇ ಗೆದ್ರೂ ಟೇಬಲ್ ಟಾಪರ್ ಆಗ್ತಾರೆ. ಮುಂಬೈ ಗೆಲುವು ಸಾಧಿಸಿದರೆ 18 ಅಂಕ ಆಗುತ್ತದೆ. ರನ್ ರೇಟ್ ಜಾಸ್ತಿ ಇರೋದ್ರಿಂದ ಜಿಟಿ ತಂಡವನ್ನ ಹಿಂದಿಕ್ಕಿ ನಂಬರ್ 1 ಸ್ಥಾನಕ್ಕೆ ಹೋಗುತ್ತೆ. ಒಂದು ವೇಳೆ ಪಂಜಾಬ್ ಜಯ ಸಾಧಿಸಿದರೆ, 19 ಅಂಕಗಳೊಂದಿಗೆ ಅಗ್ರ ಸ್ಥಾನ ಭದ್ರ ಪಡಿಸಿಕೊಳ್ಳುತ್ತದೆ. ಬಟ್ ಗುಜರಾತ್ ಟೇಬಲ್ ಟಾಪರ್ ಆಗ್ಬೇಕು ಅಂದ್ರೆ ಬೆಂಗಳೂರು ತಂಡ ಲಕ್ನೋ ವಿರುದ್ಧ ಸೋಲಬೇಕಾಗುತ್ತೆ. ಇತ್ತ ಪಂಜಾಬ್ ಕಿಂಗ್ಸ್ ಕಥೆ ನೋಡೋದಾದ್ರೆ ಇವತ್ತಿನ ಮ್ಯಾಚಲ್ಲಿ ಪಂಜಾಬ್ ಗೆದ್ರೆ ಸೀದಾ ಕ್ವಾಲಿಫೈಯರ್ 1ಗೆ ಅರ್ಹತೆ ಪಡ್ಕೊಳುತ್ತೆ. ಹಾಗೇನಾದ್ರೂ ಸೋತ್ರೆ ಎಲಿಮಿನೇಟರ್ ಮ್ಯಾಚ್ ಆಡೋದು ಕನ್ಫರ್ಮ್ ಆಗುತ್ತೆ. ಇನ್ನು ಮುಂಬೈ ಸದ್ಯಕ್ಕೆ ನಾಲ್ಕನೇ ಸ್ಥಾನದಲ್ಲಿದ್ರೂ ಪಂಜಾಬ್ ತಂಡವನ್ನ ಸೋಲಿಸಿದ್ರೆ ಕ್ವಾಲಿಫೈಯರ್ 1ಗೆ ಸೆಲೆಕ್ಟ್ ಆಗುತ್ತೆ. 18 ಅಂಕ ಪಡೆಯುತ್ತೆ. ಸೋತ್ರೆ ಎಲಿಮಿನೇಟರ್ ಮ್ಯಾಚ್. ಇತ್ತ ಆರ್‌ಸಿಬಿ ಕೂಡ ಲಕ್ನೋ ವಿರುದ್ಧದ ಪಂದ್ಯ ಗೆದ್ರೆ ಇವತ್ತಿನ ಮ್ಯಾಚಲ್ಲಿ ಗೆಲ್ಲುವಂತಹ ತಂಡದ ಜೊತೆ ಕ್ವಾಲಿಫೈಯರ್ 1ನಲ್ಲಿ ಕಣಕ್ಕಿಳಿಯುತ್ತೆ.

ನೋಡಿರಿ

