RCBಗೆ ಯಶ್ ದಯಾಳ್ ಕನ್ಫ್ಯೂಷನ್ – ರಿಲೀಸ್ ಮಾಡಿದ್ರೂ ಕಷ್ಟ.. ಇದ್ರೂ ಕಷ್ಟ
UPCAನಂತೆ IPLನಲ್ಲೂ ಬ್ಯಾನ್ ಆಗ್ತಾರಾ?

ಐಪಿಎಲ್ನ ಹತ್ತೂ ಫ್ರಾಂಚೈಸಿಗಳಲ್ಲೂ ರಿಟೇನ್ & ರಿಲೀಸ್ ಲಿಸ್ಟ್ ರೆಡಿಯಾಗ್ತಿದೆ. ಶನಿವಾರದೊಳಗೆ ಅದನ್ನ ಅನೌನ್ಸ್ ಕೂಡ ಮಾಡ್ಬೇಕು. ಆದ್ರೆ ಆರ್ಸಿಬಿಯಲ್ಲಿ ಅದೊಬ್ಬ ಆಟಗಾರ ಮ್ಯಾನೇಜ್ಮೆಂಟ್ ಪಾಲಿಗೆ ಬಿಸಿ ತುಪ್ಪವಾಗಿದ್ದಾರೆ. ರಿಲೀಸ್ ಮಾಡೋಕೆ ಇಷ್ಟ ಇಲ್ಲ ಹಂಗಂತ ತಂಡದಲ್ಲಿ ಇಟ್ಟುಕೊಳ್ಳೋಕೂ ಆಗಲ್ಲ. ಅದುವೇ ಯಶ್ ದಯಾಳ್.
ಇದನ್ನೂ ಓದಿ : IPL ಎಕ್ಸ್ ಚೇಂಜ್ ಡೀಲ್ ಸ್ಟಾರ್ಟ್ – 10 ಟೀಂ.. ಪರ್ಸ್ ಬ್ಯಾಲೆನ್ಸ್ ಹೇಗಿದೆ?
18ನೇ ಸೀಸನ್ ಐಪಿಎಲ್ನ ಆರ್ಸಿಬಿ ಫ್ಯಾನ್ಸ್ ಅಂತೂ ಲೈಫ್ ಲಾಂಗ್ ಮರೆಯೋಕೆ ಚಾನ್ಸೇ ಇಲ್ಲ. ಯಾಕಂದ್ರೆ ಸತತ 17 ವರ್ಷಗಳ ಬಳಿಕ ಚೊಚ್ಚಲ ಬಾರಿಗೆ ಟ್ರೋಫಿಗೆ ಮುತ್ತಿಟ್ಟ ಕ್ಷಣ ಅದು. ಌಂಡ್ ಕೋಟ್ಯಂತರ ಅಭಿಮಾನಿಗಳು ಆರಾಧಿಸೋ ವಿರಾಟ್ ಕೊಹ್ಲಿ ಕೂಡ ಕಣ್ಣೀರಾಗಿದ್ರು. ಇದೇ ಚಾಂಪಿಯನ್ ಟೀಮ್ನೆ ನೆಕ್ಸ್ಟ್ ಸೀಸನ್ಗೂ ಕಂಟಿನ್ಯೂ ಮಾಡಿ. ಬ್ಯಾಟಿಂಗ್ ಬೊಂಬಾಟ್ ಆಗಿದೆ, ಬೌಲಿಂಗ್ ಅಲ್ಟಿಮೇಟ್ ಆಗಿದೆ. ಟೋಟಲಿ ಬ್ಯಾಲೆನ್ಸ್ಡ್ ಟೀಂ ಅಂತಾ ಸಜೇಷನ್ಸ್ ಕೊಡ್ತಿದ್ದಾರೆ. ಆದ್ರೆ ಯಶ್ ದಯಾಳ್ರನ್ನ ಬಿಡುಗಡೆ ಮಾಡ್ಲೇಬೇಕಾದ ಸ್ಥಿತಿ ಬಂದಿದೆ. ಅದಕ್ಕೆ ಕಾರಣ ದಯಾಳ್ ಮಾಡಿಕೊಂಡಿರೋ ಎಡವಟ್ಟು.
ಮದುವೆಯಾಗೋದಾಗಿ ನಂಬಿಕೆ ಮೋಸ.. ದಯಾಳ್ ಬ್ಯಾನ್?
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಎಡಗೈ ವೇಗಿ ಯಶ್ ದಯಾಳ್ ಕಳೆದ ಸೀಸನ್ನಲ್ಲಿ ಆರ್ಸಿಬಿ ಟ್ರೋಫಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ರು. ಆದ್ರೆ ಐಪಿಎಲ್ ಮುಗಿದ್ಮೇಲೆ ಅವ್ರ ಇಮೇಜ್ ಕಂಪ್ಲೀಟ್ ಡ್ಯಾಮೇಜ್ ಆಗಿತ್ತು. ಇದನ್ನ ಮಾಡಿಕೊಂಡಿದ್ದೇ ಅವ್ರು. ಮದುವೆಯಾಗೋದಾಗಿ ನಂಬಿಸಿ ಐದು ವರ್ಷದಿಂದ ಯುವತಿ ಜೊತೆ ರಿಲೇಷನ್ಶಿಪ್ನಲ್ಲಿದ್ದು ಆ ನಂತ್ರ ಮೋಸ ಮಾಡಿದ್ದಾಗಿ ಆರೋಪ ಕೇಳಿ ಬಂದಿತ್ತು. ಹಾಗೇ ಅಪ್ರಾಪ್ತೆಗೂ ಮೋಸ ಮಾಡಿದ್ದ ಆರೋಪವಿದೆ. ಇದೇ ಕಾರಣಕ್ಕೆ ಉತ್ತರ ಪ್ರದೇಶದ ಗಾಝಿಯಾಬಾದ್ ಠಾಣೆಯಲ್ಲಿ ದಯಾಳ್ ವಿರುದ್ಧ ಪ್ರಕರಣ ಕೂಡ ದಾಖಲಾಗಿತ್ತು. ಌಂಡ್ ಅರೆಸ್ಟ್ ಆಗೋ ಭೀತಿಯಲ್ಲೂ ಇದ್ರು. ಇದೆಲ್ಲಾ ಆದ್ಮೇಲೆ ಉತ್ತರ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಯುಪಿ ಟಿ20 ಲೀಗ್ನಿಂದ ಹೊರಗಿಟ್ಟಿದ್ದರು. ಅಷ್ಟೇ ಅಲ್ಲದೆ ಪ್ರಸ್ತುತ ನಡೆಯುತ್ತಿರುವ ರಣಜಿ ಟೂರ್ನಿಗೂ ಆಯ್ಕೆ ಮಾಡಿಲ್ಲ. ಹೀಗಾಗಿ ಉತ್ತರ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಯಶ್ ದಯಾಳ್ ಮೇಲೆ ನಿಷೇಧ ಹೇರಿರುವ ಕಾರಣ ಅವರು ಮುಂಬರುವ ಐಪಿಎಲ್ನಲ್ಲಿ ಕಣಕ್ಕಿಳಿಯಲು ಸಾಧ್ಯವಾಗುವುದಿಲ್ಲ. ಹೀಗಾಗಿ ಐಪಿಎಲ್ ಮಿನಿ ಹರಾಜಿಗೂ ಮುನ್ನವೇ ಎಡಗೈ ವೇಗಿಯನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಬಿಡುಗಡೆ ಮಾಡ್ಲೇಬೇಕಾಗುತ್ತೆ. ಸೋ ಇದು ಒಂದು ಌಂಗಲ್. ಬಟ್ ದಯಾಳ್ ಕೈಬಿಟ್ರೆ ಅಂಥದ್ದೇ ವರ್ತ್ ಇರೋ ಪ್ಲೇಯರ್ನ ರಿಪ್ಲೇಸ್ ಮಾಡ್ಬೇಕಾಗುತ್ತೆ.
ಗುಜರಾತ್ ನಲ್ಲಿ ವಿಲನ್.. ಆರ್ ಸಿಬಿ ಹೀರೋ ಆಗಿದ್ದ ದಯಾಳ್!
ಐಪಿಎಲ್ ಫ್ಯಾನ್ಸ್ಗೆ ಯಶ್ ದಯಾಳ್ ಅಂದಾಕ್ಷಣ ಥಟ್ ಅಂತಾ ನೆನಪಾಗೋದೇ ಸತತ ಐದು ಸಿಕ್ಸರ್. 2023ರಲ್ಲಿ ಒಂದೇ ಓವರ್ನಲ್ಲಿ ಸತತ 5 ಸಿಕ್ಸರ್ ಹೊಡೆಸಿಕೊಂಡಿದ್ದು. ಕೆಕೆಆರ್ ಮತ್ತು ಗುಜರಾತ್ ನಡುವಿನ ಮ್ಯಾಚಲ್ಲಿ ರಿಂಕು ಸಿಂಗ್ ಕೊನೇ ಐದು ಬಾಲ್ಗಳಲ್ಲಿ ಬ್ಯಾಕ್ ಟು ಬ್ಯಾಕ್ ಸಿಕ್ಸರ್ ಸಿಡಿಸಿ ಕೆಕೆಆರ್ ತಂಡವನ್ನ ಗೆಲ್ಲಿಸಿಕೊಟ್ಟಿದ್ರು. ಕಳಪೆ ಬೌಲಿಂಗ್ನಿಂದಾಗಿ ಗುಜರಾತ್ ತಂಡ ದಯಾಳ್ರನ್ನ ಕೈಬಿಟ್ಟಿತ್ತು. ಇಂಥಾ ಟೈಮಲ್ಲಿ ಅವ್ರಿಗೆ ಮತ್ತೊಂದು ಚಾನ್ಸ್ ಕೊಟ್ಟಿದ್ದೇ ಆರ್ಸಿಬಿ. 2024ರ ಐಪಿಎಲ್ಗೂ ಮುನ್ನ ಆರ್ಸಿಬಿ ಸೇರಿದ್ದ ದಯಾಳ್ ಅದ್ಭುತ ಪ್ರದರ್ಶನವನ್ನೇ ನೀಡಿದ್ರು. ಹಾಗೇ 15 ವಿಕೆಟ್ಗಳನ್ನ ತೆಗೆದಿದ್ರು. ಆ ಬಳಿಕ 2025ರ ಐಪಿಎಲ್ಗೂ ಮುನ್ನ ಫ್ರಾಂಚೈಸಿ ದಯಾಳ್ರನ್ನ ರಿಟೇನ್ ಮಾಡ್ಕೊಂಡಿತ್ತು. ಌಂಡ್ ಮೊದಲ ಬಾರಿಗೆ ಐಪಿಎಲ್ ಪ್ರಶಸ್ತಿಯನ್ನು ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಯಶ್ ದಯಾಳ್ 18ನೇ ಸೀಸನ್ನಲ್ಲಿ 15 ಪಂದ್ಯಗಳನ್ನು ಆಡಿದ್ದು, 13 ವಿಕೆಟ್ಗಳನ್ನು ಕಬಳಿಸಿದ್ದರು. ಇನ್ನು ಜೋಶ್ ಹೇಜಲ್ವುಡ್ ಕೆಲ ಪಂದ್ಯಗಳಲ್ಲಿ ಮಿಸ್ ಆದಾಗ ದಯಾಳ್ ಮ್ಯಾಚ್ ವಿನ್ನಿಂಗ್ ಪರ್ಫಾಮೆನ್ಸ್ ನೀಡಿದ್ರು. ಜೊತೆಗೆ ಪವರ್ ಪ್ಲೇ ಮತ್ತು ಡೆತ್ ಓವರ್ಗಳಲ್ಲಿ ಟ್ರಸ್ಟ್ ಮಾಡಬಹುದಾದಂತ ಬೌಲರ್ ಕೂಡ ಹೌದು. ಆದ್ರೀಗ ನೆಕ್ಸ್ಟ್ ಸೀಸನ್ಗೆ ಐಪಿಎಲ್ನಿಂದಲೇ ಬ್ಯಾನ್ ಆಗೋ ಚಾನ್ಸಸ್ ಇದೆ. ಯಾಕಂದ್ರೆ ಯುಪಿ ಅಸೋಸಿಯೇಷನ್ ನಿಷೇಧ ಹೇರಿರೋದ್ರಿಂದ ಐಪಿಎಲ್ನಲ್ಲಿ ಆಡೋಕೂ ಸಾಧ್ಯವಾಗಲ್ಲ. ಅನಿವಾರ್ಯವಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಕೂಡ ತಂಡದಿಂದ ರಿಲೀಸ್ ಮಾಡ್ಬೇಕಾಗುತ್ತೆ.

ನೋಡಿರಿ

