RCB ಹೀರೋ ದಿಲ್‌ ಗೆದ್ದ ಅನಾ! – ವಿಲ್ ಜ್ಯಾಕ್ಸ್ ಪ್ರೇಯಸಿ ಯಾರು?

RCB ಹೀರೋ ದಿಲ್‌ ಗೆದ್ದ ಅನಾ! – ವಿಲ್ ಜ್ಯಾಕ್ಸ್ ಪ್ರೇಯಸಿ ಯಾರು?

ವಿಲ್ ಜ್ಯಾಕ್ಸ್ ಸದ್ಯ ಆರ್‌ಸಿಬಿಯ ಹೊಸ ಸ್ಫೋಟಕ ಬ್ಯಾಟ್ಸ್‌ಮನ್. ವಿಶ್ವದ ಹಲವು ಲೀಗ್‌ಗಳಲ್ಲಿ ಅಬ್ಬರಿಸಿದ್ದ ಇಂಗ್ಲೆಂಡ್‌ನ ಈ ಸ್ಫೋಟಕ ಬ್ಯಾಟ್ಸ್‌ಮನ್ ಐಪಿಎಲ್‌ನಲ್ಲಿ ಕೂಡ ತಾವೆಂತ ಆಟಗಾರ ಎನ್ನುವುದನ್ನು ಸಾಬೀತುಪಡಿಸಿದ್ದಾರೆ. ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ 41 ಎಸೆತಗಳಲ್ಲಿ ಭರ್ಜರಿ ಶತಕ ಸಿಡಿಸುವ ಮೂಲಕ ಆರ್ ಸಿಬಿಗೆ ಭರ್ಜರಿ ಗೆಲುವು ತಂದುಕೊಟ್ಟಿದ್ರು.. ಐಪಿಲ್ ನಲ್ಲಿ ವಿಲ್ ಜಾಕ್ಸ್ ಶೈನ್ ಆಗ್ತಿದ್ದಂತೆ  ಹುಡುಗಿಯರು ಅವರ ಪರ್ಸನಲ್ ಲೈಫ್ ಬಗ್ಗೆ ಹುಡುಕಾಟ ಶುರು ಮಾಡಿದ್ದಾರೆ.. ಇಷ್ಟೊಂದು ಹ್ಯಾಂಡ್ಸಮ್ ಆಗಿರೋ ವಿಲ್ ಗರ್ಲ್ ಫ್ರೆಂಡ್ ಯಾರು ಅಂತಾ ಗೂಗಲ್ ಮಾಡ್ತಾ ಇದ್ದಾರೆ.. ಅಷ್ಟಕ್ಕೂ ವಿಲ್ ಜಾಕ್ಸ್ ಗರ್ಲ್ ಫ್ರೆಂಡ್ ಯಾರು? ಅವ್ರು ಏನು ಮಾಡ್ತಾ ಇದ್ದಾರೆ ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: 17 ವರ್ಷ.. 248 ಪಂದ್ಯ.. 7,805 ರನ್ – ಕಿಂಗ್ ಕೊಹ್ಲಿಗೆ RCBಯೇ ಉಸಿರು!

ಕಳೆದ ಐಪಿಎಲ್‌ ಆವೃತ್ತಿಯಲ್ಲಿ ಕೇವಲ ಬೆಂಚ್‌ ಕಾಯಿಸಲಷ್ಟೇ ಸೀಮಿತವಾಗಿದ್ದ ವಿಲ್‌ ಜ್ಯಾಕ್ಸ್‌ ಗೆ ಈ ಬಾರಿ ಆರ್‌ಸಿಬಿಯಲ್ಲಿ ಆಡಲು ಅವಕಾಶ ನೀಡಿದೆ.. ಈ ಅವಕಾಶವನ್ನು ಎರಡು ಕೈ ಯಿಂದ ಬಾಚಿಕೊಂಡ ವಿಲ್‌ ಜ್ಯಾಕ್ಸ್‌ ಕಳೆದ ಐದು ಪಂದ್ಯಗಳಿಂದ ಭರ್ಜರಿ ಪ್ರದರ್ಶನ ನೀಡ್ತಾ ಬಂದಿದ್ದಾರೆ..  ಆರ್‌ಸಿಬಿ ತನ್ನ ಮೇಲೆ ಇಟ್ಟ ನಂಬಿಕೆ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.. ಸದ್ಯ ಐಪಿಎಲ್ ನಲ್ಲಿ ಉತ್ತಮ ಪರ್ಫಮೆನ್ಸ್ ನೀಡ್ತಾ ಇರುವ ವಿಲ್ ಜಾಕ್ಸ್ ಅವರನ್ನ ಹೊಗಳುವುದರ ಜೊತೆಗೆ ಅವರ ವೈಯುಕ್ತಿಕ ಬದುಕಿ‌ನ ವಿಚಾರ ತಿಳಿಯಲು ಕ್ರಿಕೆಟ್ ಪ್ರೇಮಿಗಳು ಉತ್ಸುಕರಾಗಿದ್ದಾರೆ.. ಅವರ ಮನೆ, ಗೆಳತಿ ಇವೆಲ್ಲದರ ಬಗ್ಗೆ ಹುಡುಕಾಡುತ್ತಿದ್ದಾರೆ.

ಆರ್​ಸಿಬಿ ಆಟಗಾರ ವಿಲ್​ ಜಾಕ್ಸ್​ ಗೆಳತಿ ಹೆಸರು ಅನ್ನಾ ಬ್ರಮ್​ವೆಲ್​. 24 ವರ್ಷದ ಈಕೆಯನ್ನು ವಿಲ್​ ಜಾಕ್ಸ್​ ಲವ್​ ಮಾಡುತ್ತಿದ್ದಾರೆ. ಲಂಡನ್​ ಮೂಲದವರಾಗಿರುವ ಅನ್ನಾ ತಮ್ಮ ಅದ್ಭುತ ಸೌಂದರ್ಯ ಹಾಗೂ ಗ್ಲಾಮರ್ ಮೂಲಕ  ಹಾಲಿವುಡ್ ನಟಿಯರಿಗೆ ಪೈಪೋಟಿ ನೀಡುವಂತಿದ್ದಾರೆ.  ಅನ್ನಾ ಬ್ರಮ್​ವೆಲ್​ ಸದ್ಯ ವ್ಯಾಸಂಗ ಮಾಡ್ತಾ ಇದ್ದು, ಕಾಲೇಜಿಗೆ ಹೋಗುತ್ತಿದ್ದಾರೆ. ಜೊತೆಗೆ ಎಲ್ಲಾ ಮಕ್ಕಳಿಗೆ ಶಿಕ್ಷಣ ದೊರಕಬೇಕು ಎಂದು ಉತ್ತೇಜನ ನೀಡುವ ನಿಟ್ಟಿನಲ್ಲಿ ಎನ್​ಜಿಒದಲ್ಲಿ ಕೆಲಸ ಮಾಡುತ್ತಿದ್ದಾರೆ. ಅಪ್ಸರೆಯಂತೆ ಕಾಣುವ ಅನಾ ಫಿಟ್‌ನೆಸ್ ಫ್ರೀಕ್ ಕೂಡ ಹೌದು.  ವಿಲ್​ ಜಾಕ್ಸ್​ ಗೆಳತಿ ಪ್ರಯಾಣವನ್ನು ಹೆಚ್ಚು ಇಷ್ಟ ಪಡುವ ಹುಡುಗಿ. ಜಗತ್ತಿನ ಹಲವು ದೇಶಗಳಿಗೆ ಈಗಾಗ್ಲೇ ಭೇಟಿ ನೀಡಿದ್ದಾರೆ.

ಇನ್ನು ಅನ್ನಾ ಸಮಯ ಸಿಕ್ಕಾಗಲೆಲ್ಲಾ ಬೀಚ್‌ನಲ್ಲಿ ಕಾಲ ಕಳೆಯಲು ಇಷ್ಟಪಡುತ್ತಾರೆ. ಇನ್​ಸ್ಟಾಗ್ರಾಂನಲ್ಲಿ ಸದಾ ಪ್ರಯಾಣದ ಫೋಟೋವನ್ನೇ ಹಂಚಿಕೊಳ್ಳುತ್ತಿರುವ ಈಕೆ, ಆಗಾಗ ಬೀಚ್‌ನಲ್ಲಿ ಬಿಕಿನಿ ತೊಟ್ಟು ಹಾಟ್ ಹಾಟ್ ಆಗಿ ಪೋಸ್ ನೀಡಿದ ಫೋಟೊವನ್ನೂ ಕೂಡ ಪೋಸ್ಟ್ ಮಾಡ್ತಾ ಇರ್ತಾರೆ.

ಅನ್ನಾ ಐಪಿಎಲ್ ಮ್ಯಾಚ್ ನೋಡಲು ಭಾರತಕ್ಕೂ ಬಂದಿದ್ರು.. ಇತ್ತೀಚೆಗೆ ಬೆಂಗಳೂರಿನ ಇಸ್ಕಾನ್​ ಟೆಂಪಲ್ ಗೂ ಈ ಜೋಡಿ ಭೇಟಿ‌ ನೀಡಿತ್ತು. ದೇವಸ್ಥಾನದ ದ್ವಾರದ ಬಳಿ ನಿಂತು ಫೋಟೋ ಕ್ಲಿಕ್ಕಿಸಿಕೊಂಡಿದ್ದರು. ಇದನ್ನು ಸಾಮಾಜಿಕ ಜಾಲತಾಣದಲ್ಲೂ ಹಂಚಿಕೊಂಡಿದ್ದರು. ಈ ಮೂಲಕ‌ ವಿಲ್‍ ಹೋದಲ್ಲೆಲ್ಲಾ ಅನಾ ಜೊತೆಯಾಗುತ್ತಿದ್ದಾರೆ.. ಈ ಸೂಪರ್‌ ಜೋಡಿ ಆದಷ್ಟು ಬೇಗ ದಾಂಪತ್ಯ ಜೀವನಕ್ಕೂ ಎಂಟ್ರಿ‌ಕೊಕಡಲಿ ‌ಎಂಬುದು ಅಭಿಮಾನಿಗಳ ಹಾರೈಕೆ..

Shwetha M