ಭಾರತಕ್ಕಿಲ್ಲ ಭುವಿ.. RCBಗಷ್ಟೇ ಬೌಲರ್ – ಸಾಲಿಡ್ ಫಾರ್ಮ್ ಇದ್ರೂ ಚಾನ್ಸ್ ಏಕಿಲ್ಲ?
ಸ್ವಿಂಗ್ ಕಿಂಗ್ ಕೆರಿಯರ್ ಮುಗಿಸಿದ್ಯಾರು?

ಕ್ರಿಕೆಟ್ ಲೋಕದಲ್ಲಿ ಯಾರು ಯಾವಾಗ ಶೈನ್ ಆಗ್ತಾರೆ ಮತ್ತೆ ಯಾವಾಗ ಸೈಡ್ಲೈನ್ ಆಗ್ತಾರೆ ಅಂತಾ ಹೇಳೋಕಾಗಲ್ಲ. ಕೆಲವ್ರಿಗೆ ಪರ್ಫಾಮೆನ್ಸ್ ಇಲ್ಲದೆ ಚಾನ್ಸ್ ಕೈ ತಪ್ಪಿದ್ರೆ ಇನ್ನೂ ಕೆಲವ್ರಿಗೆ ಸಾಲಿಡ್ ಪ್ರದರ್ಶನ ನೀಡಿದ್ರೂ ಅವಕಾಶ ಸಿಗೋದಿಲ್ಲ. ಯಾಕೆ ಅನ್ನೋ ಕಾರಣವೂ ಗೊತ್ತಾಗೋಲ್ಲ. ಆದ್ರೂ ಇಂದಲ್ಲ ನಾಳೆ ಮತ್ತೆ ಅದೃಷ್ಟ ಒಲಿಯಬಹುದು ಅಂತಾ ಕಾದಿದ್ದೇ ಆಗುತ್ತೆ. ಹೀಗೆ ಭಾರತ ತಂಡದಲ್ಲಿ ಅವಕಾಶಕ್ಕಾಗಿ ಕಾಯ್ತಿರೋ ಸ್ಟಾರ್ ಆಟಗಾರ ಭುವನೇಶ್ವರ್ ಕುಮಾರ್. ಭಾರತ ಕ್ರಿಕೆಟ್ ತಂಡ ಕಂಡಂತಹ ಸರಳ ಮತ್ತು ಸಜ್ಜನಿಕೆಯ ಆಟಗಾರರಲ್ಲಿ ಭುವನೇಶ್ವರ್ ಕುಮಾರ್ ಟಾಪ್ನಲ್ಲಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಟೀಮ್ ಇಂಡಿಯಾಕ್ಕೆ ಪ್ರಮುಖ ವೇಗದ ಬೌಲರ್ ಆಗಿದ್ದರು. ಚೆಂಡನ್ನ ಸ್ವಿಂಗ್ ಮಾಡುತ್ತಲೇ ಎದುರಾಳಿ ಬ್ಯಾಟರ್ಗಳ ವಿಕೆಟ್ ಎಗರಿಸ್ತಿದ್ರು. ಬ್ಯಾಟಿಂಗ್ನಲ್ಲೂ ಆಸರೆಯಾಗಿದ್ರು. ಆದ್ರೀಗ ನಿವೃತ್ತಿಯ ಅಂಚಿನಲ್ಲಿದ್ದಾರೆ. ಭಾರತದ ಪರ ಆಡ್ಬೇಕು ಅನ್ನೋ ಆಸೆ ಇದ್ರೂ ತಂಡದ ಬಾಗಿಲು ತೆರೆಯುತ್ತಿಲ್ಲ. ಈ ಬಗ್ಗೆ ಸ್ವತಃ ಭುವಿ ತಮ್ಮ ಮನದಾಳವನ್ನ ಬಿಚ್ಚಿಟ್ಟಿದ್ದಾರೆ.
ಇದನ್ನೂ ಓದಿ : ಸು ಫ್ರಮ್ ಸೋ OTTಯಲ್ಲಿ ರಿಲೀಸ್ ಆಗಲ್ಲ!? – ಸುಳ್ಳು ಸುದ್ದಿ.. ಜಿಯೋ ಹಾಟ್ ಸ್ಟಾರ್ ಹೇಳಿದ್ದೇನು?
ಭಾರತ ತಂಡದಲ್ಲಿ ಅವಕಾಶದ ಬಗ್ಗೆ ಮೌನ ಮುರಿದಿರೋ ಭುವಿ, ಮೈದಾನದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ರೂ ಆಯ್ಕೆ ನನ್ನ ಕೈಯಲ್ಲಿಲ್ಲ ಎಂದಿದ್ದಾರೆ. ನನ್ನ ಕೆಲಸ ಮೈದಾನದಲ್ಲಿ 100 ಪರ್ಸೆಂಡ್ ಪರ್ಫಾಮೆನ್ಸ್ ಕೊಡೋದು. ನಾನು ಅದನ್ನೇ ಮಾಡುತ್ತಿದ್ದೇನೆ. ಯುಪಿ ಲೀಗ್ ನಂತರ ಮುಷ್ತಾಕ್ ಅಲಿ, ರಣಜಿ ಅಥವಾ ಏಕದಿನ ಮಾದರಿಯಲ್ಲಿ ಉತ್ತರ ಪ್ರದೇಶ ಪರ ಆಡಲು ಅವಕಾಶ ಸಿಕ್ಕರೆ, ಅಲ್ಲಿಯೂ ನನ್ನ ಅತ್ಯುತ್ತಮ ಪ್ರದರ್ಶನ ನೀಡ್ತೇನೆ. ಶಿಸ್ತಿನ ಬೌಲರ್ ಆಗಿ, ನನ್ನ ಗಮನ ಫಿಟ್ನೆಸ್ ಮತ್ತು ಲೈನ್-ಲೆಂತ್ ಮೇಲೆ ಇರುತ್ತದೆ. ನೀವು ಎಷ್ಟೇ ಉತ್ತಮ ಪ್ರದರ್ಶನ ನೀಡಿದರೂ, ಕೆಲವೊಮ್ಮೆ ಅದೃಷ್ಟವು ನಿಮ್ಮ ಕಡೆ ಇರೋದಿಲ್ಲ. ಉಳಿದೆಲ್ಲವೂ ಆಯ್ಕೆದಾರರ ಮೇಲೆ ಡಿಪೆಂಡ್ ಆಗಿರುತ್ತೆ ಎಂದಿದ್ದಾರೆ.
ಭುವನೇಶ್ವರ್ ಕುಮಾರ್ ಅವರು ಟೀಮ್ ಇಂಡಿಯಾ ಪರ ತಮ್ಮ ಕೊನೆಯ ಏಕದಿನ ಪಂದ್ಯವನ್ನು 2022ರ ಜನವರಿ 21 ರಂದು ದಕ್ಷಿಣ ಆಫ್ರಿಕಾ ವಿರುದ್ಧ ಆಡಿದ್ದರು. ಬಳಿಕ 2022ರ ನವೆಂಬರ್ 22 ರಂದು ನ್ಯೂಜಿಲೆಂಡ್ ವಿರುದ್ಧ ಭಾರತದ ಪರ ಅವರು ತಮ್ಮ ಕೊನೆಯ ಟಿ20 ಪಂದ್ಯದಲ್ಲಿ ಕಾಣಿಸಿಕೊಂಡಿದ್ದರು. 2018ರ ದಕ್ಷಿಣ ಆಫ್ರಿಕಾ ವಿರುದ್ಧದ ಜೋಹಾನ್ಸ್‌ಬರ್ಗ್ ಟೆಸ್ಟ್ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನಕ್ಕಾಗಿ ಭುವನೇಶ್ವರ್ ಕುಮಾರ್ ಅವರಿಗೆ ‘ಮ್ಯಾನ್ ಆಫ್ ದಿ ಮ್ಯಾಚ್’ಪ್ರಶಸ್ತಿ ಸಿಕ್ಕಿತ್ತು. ಆದರೆ ಇದಾದ ನಂತರ ಅವರಿಗೆ ಭಾರತದ ಪರ ಟೆಸ್ಟ್ ಕ್ರಿಕೆಟ್ ಆಡುವ ಅದೃಷ್ಟ ಸಿಕ್ಕಿಲ್ಲ. ಅದ್ರಲ್ಲೂ 2018 ರಲ್ಲಿ ತಮ್ಮ ಕೊನೆಯ ಟೆಸ್ಟ್ ಪಂದ್ಯದಲ್ಲಿ, ಭುವನೇಶ್ವರ್ ಕುಮಾರ್ ಜೋಹಾನ್ಸ್‌ಬರ್ಗ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 63 ರನ್ ಗಳಿಸಿವುದರ ಜೊತೆಗೆ 4 ವಿಕೆಟ್‌ಗಳನ್ನು ಸಹ ಕಬಳಿಸಿದ್ದರು. ಕ್ರಿಕೆಟ್ ಜಗತ್ತಿನಲ್ಲಿ ಭುವನೇಶ್ವರ್ ಕುಮಾರ್ ಹಲವು ದಾಖಲೆಗಳನ್ನ ಬರೆದಿದ್ದು ಈಗಲೂ ಅಚ್ಚಳಿಯದೆ ಉಳಿದಿವೆ.
ಭುವಿ ಬೆಂಕಿ ಬೌಲಿಂಗ್!
ಭಾರತದ ಪರ ಮೂರೂ ಮಾದರಿಯಲ್ಲಿ ತಮ್ಮ ಮೊದಲ ವಿಕೆಟ್ ಕ್ಲೀನ್ ಬೌಲ್ಡ್
2012 ಪಾಕಿಸ್ತಾನ ವಿರುದ್ಧ ನಾಸಿರ್ ಜಮ್ಶೆಡ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದ್ರು
2012 ರಂದು ಪಾಕಿಸ್ತಾನ ವಿರುದ್ಧ ಮೊಹಮ್ಮದ್ ಹಫೀಜ್ ಅವರನ್ನು ಕ್ಲೀನ್ ಬೌಲ್ಡ್
2013 ರಂದು ಹೈದರಾಬಾದ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಟೆಸ್ಟ್ ಪಂದ್ಯದಲ್ಲಿ
ಡೇವಿಡ್ ವಾರ್ನರ್ ಅವರನ್ನು ಔಟ್ ಮಾಡುವ ಮೂಲಕ ತಮ್ಮ ಮೊದಲ ಟೆಸ್ಟ್ ವಿಕೆಟ್ ಪ
ಏಷ್ಯಾಕಪ್ ನಲ್ಲಿ ಭಾರತದ ಪರ ಟಿ-20ಐನಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ಬೌಲರ್
ಭುವಿ ಆಡಿದ 6 ಏಷ್ಯಾ ಕಪ್ ಟಿ20 ಪಂದ್ಯದಲ್ಲಿ ಒಟ್ಟು 13 ವಿಕೆಟ್ ಪಡೆದು, ಮೊದಲ ಸ್ಥಾನ
ಭುವನೇಶ್ವರ್ ಕುಮಾರ್ ಭಾರತ ಪರ 121 ಏಕದಿನ, 21 ಟೆಸ್ಟ್ ಮತ್ತು 87 ಟಿ20 ಪಂದ್ಯಗಳನ್ನು ಆಡಿದ್ದಾರೆ. ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 294 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಹೀಗಿದ್ರೂ ಭುವಿಗೆ ಭಾರತ ತಂಡದಲ್ಲಿ ಅವಕಾಶ ಸಿಗ್ತಿಲ್ಲ. ಪ್ರಸ್ತುತ ಐಪಿಎಲ್ ನಲ್ಲಿ ಆರ್ ಸಿಬಿ ಪರ ಕಣಕ್ಕಿಳಿಯುತ್ತಿದ್ದಾರೆ. ಐಪಿಎಲ್ 2024 ರ ಹರಾಜಿನಲ್ಲಿ, ಎಸ್‌ಆರ್‌ಹೆಚ್ ಅವರನ್ನು ಕೈಬಿಟ್ಟ ನಂತರ ಆರ್‌ಸಿಬಿ ಅವರನ್ನು ₹10.75 ಕೋಟಿಗೆ ಖರೀದಿಸಿತು. ಅವರು 14 ಪಂದ್ಯಗಳಲ್ಲಿ 17 ವಿಕೆಟ್‌ಗಳನ್ನು ಕಬಳಿಸುವ ಮೂಲಕ ಆರ್‌ಸಿಬಿ ತಮ್ಮ ಮೊದಲ ಐಪಿಎಲ್ ಪ್ರಶಸ್ತಿಯನ್ನು ಗೆಲ್ಲಲು ಸಹಾಯ ಮಾಡಿದರು. ಬಟ್ ಭಾರತ ತಂಡಕ್ಕೆ ಕಮ್ ಬ್ಯಾಕ್ ಮಾಡೋದು ಈಸಿ ಇಲ್ಲ. ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಅರ್ಷದೀಪ್ ಸಿಂಗ್ ಮತ್ತು ಇತರ ಯುವ ವೇಗಿಗಳು ಈಗಾಗಲೇ ಮುನ್ನಡೆ ಸಾಧಿಸುತ್ತಿದ್ದಾರೆ. ಹೀಗಾಗಿ ಭುವಿ ಅಂತಾರಾಷ್ಟ್ರೀಯ ಕ್ರಿಕೆಟ್ ನಿವೃತ್ತಿಯ ಸನಿಹದಲ್ಲಿದೆ.

ನೋಡಿರಿ

