ಕ್ರಿಕೆಟ್ ದೇವರು..ಧೋನಿ ರೀತಿ ರಿಚಾ ಬ್ಯಾಟಿಂಗ್! – RCBಯ ರಿಚಾ ಘೋಷ್ ಯಾರು?

ಆರ್‌ಸಿಬಿ ತಂಡದ ಫೈರ್ ಬ್ರ್ಯಾಂಡ್ ಆಟಗಾರ್ತಿ ಎಲ್ಲಿಸ್ ಪೆರ್ರಿ ಜೊತೆ ಗುಜರಾತ್ ಜೈಂಟ್ಸ್ ತಂಡವನ್ನು ಚೆಂಡಾಡಿದ್ದು ರಿಚಾ ಘೋಷ್.. ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ವಿಕೆಟ್ ಕೀಪರ್ ಕಂ ಬ್ಯಾಟ್ಸ್ ವುಮನ್ ರಿಚಾ ಘೋಷ್ ಕೇವಲ ಜಿಜಿ ವಿರುದ್ಧ ಮಾತ್ರ ಸಿಡಿಗುಂಡಿನಂತೆ ಅಬ್ಬರಿಸಿದ್ದಲ್ಲ.. ಈ ಯಂಗ್ ಪ್ಲೇಯರ್ ಕ್ರಿಕೆಟ್ ಕೆರಿಯರ್ ಕೇವಲ 16 ವರ್ಷದಲ್ಲೇ ಶುರುವಾಗಿತ್ತು.. ಕ್ರಿಕೆಟ್ ದೇವರು ಸಚಿನ್ ತೆಂಡುಲ್ಕರ್ ಶೈಲಿಯಲ್ಲಿ ಬ್ಯಾಟ್ ಬೀಸುವ ಈ ಹುಡುಗಿ ಕೂಡ ಸಚಿನ್ ವಯಸ್ಸಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದು ವಿಶೇಷ.. ಆಕೆಯ ಬದುಕಿನ ಇಂಟ್ರೆಸ್ಟಿಂಗ್ ಕತೆಯನ್ನು ಹೇಳ್ತೇನೆ.. ನಾನು ಶ್ವೇತಾ.. ಇಂತಹ ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಅಯ್ಯೋ.. ಮೀನು ಹಿಡಿದು ಜೀವವೇ ಹೋಯ್ತು- ತಮಾಷೆಯೇ ಜೀವ ಹೋಗುವಂತೆ ಮಾಡ್ತಾ?
ರಿಚಾ ಘೋಷ್ ಪಶ್ಚಿಮ ಬಂಗಾಳ ಸಿಲಿಗುರಿಯಲ್ಲಿ 2003ರಲ್ಲಿ ಜನಿಸಿದ್ರು. ರಿಚಾಳ ತಂದೆ ಮನಬೇಂದ್ರ ಘೋಷ್‌ಗೆ ಕ್ರಿಕೆಟ್ ಅಂದ್ರೆ ಸಿಕ್ಕಾಪಟ್ಟೆ ಹುಚ್ಚು.. ಸಿಲಿಗುರಿಯ ಕ್ರಿಕೆಟ್ ಕ್ಲಬ್ ಪರವಾಗಿ ಕ್ರಿಕೆಟ್ ಆಡುತ್ತಿದ್ದ ಮನಬೇಂದ್ರ ಘೋಷ್, ಮಗಳನ್ನು ಆಕೆಯ ಮೂರನೇ ವಯಸ್ಸಿನಿಂದಲೇ ತಾವು ಕ್ರಿಕೆಟ್ ಆಡುವ ಕಡೆಗೆಲ್ಲಾ ಕರ್ಕೊಂಡು ಹೋಗ್ತಿದ್ರು.. ಅಚ್ಚರಿ ಅಂದ್ರೆ ನಾಲ್ಕನೇ ವರ್ಷಕ್ಕೆಕಾಲಿಡುವ ವೇಳೆಗೆ ಸ್ವತಃ ರಿಚಾ ಕೂಡ ಕ್ರಿಕೆಟ್ ಆಡಲು ಶುರು ಮಾಡಿದ್ದಳು.. ಹೀಗೆ ಅಪ್ಪನಿಂದ ಕ್ರಿಕೆಟ್ ಹುಚ್ಚು ಬೆಳೆಸಿಕೊಂಡಿದ್ದ ಪುಟಾಣಿ ರಿಚಾ ಚಿಕ್ಕವಯಸ್ಸಲೇ ಕ್ರಿಕೆಟ್‌ನಲ್ಲಿ ತನ್ನನ್ನು ಪ್ರೂವ್ ಮಾಡಿದ್ದಳು.. ಹೀಗಾಗಿ ಪುಟಾಣಿ ರಿಚಾಳನ್ನು ಆಕೆಯ ಪೋಷಕರು ಕ್ರಿಕೆಟ್ ಕೋಚಿಂಗ್‌ಗೆ ಹಾಕಿದ್ರು.. ಅಲ್ಲಿಂದ ನಂತರ ಏಜ್ ಗ್ರೂಪ್ ಕ್ರಿಕೆಟ್ ತಂಡಗಳಲ್ಲಿ ತನ್ನ ಭರ್ಜರಿ ಬ್ಯಾಟಿಂಗ್ ಮೂಲಕ ಗಮನ ಸೆಳೆದ ರಿಚಾ ನೋಡನೋಡುತ್ತಿದ್ದಂತೆ ಬಂಗಾಳ ಕ್ರಿಕೆಟ್ ತಂಡಕ್ಕೆ ಆಯ್ಕೆಯಾದ್ರು.. ಇದರ ನಡುವೆ ಒಂದು ವಿಷಯ ಹೇಳಲೇ ಬೇಕು. ಕ್ಲಬ್ ಪರ ಆಡುತ್ತಿದ್ದ ರಿಚಾಳ ತಂದೆ ಅಂಪೈರಿಂಗ್ ಕೆಲಸ ಶುರು ಮಾಡಿದ್ದರು. ಆದ್ರೆ ಅದನ್ನೂ ಕೂಡ ಅವರಿಗೆ ಮುಂದುವರೆಸಿಕೊಂಡು ಹೋಗಲು ಆಗಲಿಲ್ಲ. ಹಾಗಾಗಿ ಅಂಪೈರಿಂಗ್ ಬಿಟ್ಟು ಮಗಳ ಕೆರಿಯರ್ ಬಗ್ಗೆ ಫೋಕಸ್ ಮಾಡಿದ್ರು.
2016ರಲ್ಲಿ ಅಪ್ಪ ಅಂಪೈರಿಂಗ್ ಬಿಟ್ಟಾಗ ರಿಚಾಗೆ 13 ವರ್ಷ. ಮುಂದಿನ ಎರಡೇ ವರ್ಷ ದಲ್ಲಿ ಅಂದರೆ 15ನೇ ವಯಸ್ಸಿನಲ್ಲಿ ಆಕೆ ಬಂಗಾಳ ತಂಡದ ಪರವಾಗಿ ಆಡಿದ್ದಳು. ರಾಜ್ಯ ತಂಡಕ್ಕೆ ಆಯ್ಕೆಯಾದ ನಂತರ ಈ ಹುಡುಗಿ ಹಿಂತಿರುಗಿ ನೋಡಲೇ ಇಲ್ಲ.. ಕೇವಲ 16 ನೇ ವಯಸ್ಸಿನಲ್ಲಿ ಟೀಂ ಇಂಡಿಯಾಗೆ ಆಯ್ಕೆ ಆಗುವ ಮೂಲಕ ಎಲ್ಲರ ಅಚ್ಚರಿಗೆ ಕಾರಣರಾದ್ರು.. ರಿಚಾಗೆ ಚಿಕ್ಕಂದಿನಿಂದಲೂ ಸಚಿನ್ ತೆಂಡೂಲ್ಕರ್ ಅಂದ್ರೆ ಎಲ್ಲಿಲ್ಲದ ಪ್ರೀತಿ.. ಅಂತಹ ರಿಚಾಗೆ ಕ್ರಿಕೆಟ್ ಬದುಕಿನಲ್ಲಿ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ರೀತಿಯಲ್ಲೇ ದಾಖಲೆ ಮಾಡುವ ಅವಕಾಶ ಸಿಕ್ಕಿತು. ಸಚಿನ್ ತೆಂಡೂಲ್ಕರ್ ರೀತಿಯಲ್ಲೇ 16ರ ಹರೆಯದಲ್ಲಿ ಟೀಂ ಇಂಡಿಯಾದ ಜರ್ಸಿ ತೊಟ್ಟು ಭಾರತದ ಪರವಾಗಿ ಆಟವಾಡಿದ್ರು.. ಸಚಿನ್ ಜೊತೆಗೆ ಆಕೆಯ ಬಾಲ್ಯದ ಇನ್ನೋರ್ವ ಹೀರೋ ಅಂದ್ರೆ ಅದು ಮಹೇಂದ್ರ ಸಿಂಗ್ ಧೋನಿ.. ಎಂಎಸ್ ಧೋನಿ ರೀತಿಯಲ್ಲೇ ರಿಚಾ ಕೂಡ ವಿಕೆಟ್ ಕೀಪಿಂಗ್ ಅನ್ನು ಶ್ರದ್ಧೆಯಿಂದ ಕಲಿತುಕೊಂಡು.. ಜೊತೆಗೆ ಧೋನಿ ರೀತಿಯಲ್ಲೇ ಸ್ಫೋಟಕ ಬ್ಯಾಟಿಂಗ್ ಮೂಲಕ ಬಾಲನ್ನು ಬೌಂಡರಿ ಲೈನ್ ದಾಟಿಸುವುದು ರಿಚಾ ಸ್ಪೆಷಾಲಿಟಿ.. ಇದನ್ನು ಆಕೆ ತಾನು ಆಡಿದ ಮೂರನೇ ಅಂತಾರಾಷ್ಟ್ರೀಯ ಪಂದ್ಯದಲ್ಲೇ ಪ್ರೂವ್ ಮಾಡಿದ್ದರು.. ವೆಸ್ಟ್ ಇಂಡೀಸ್ ವಿರುದ್ಧ ನಡೆದ ಪಂದ್ಯದಲ್ಲಿ 26 ಎಸೆತಗಳಲ್ಲಿ 36 ರನ್ ಸ್ಫೋಟಿಸಿ ಮಿಂಚಿದ್ರು.. ಇದಾದ ನಂತರ ಟಿ20ಯಲ್ಲೂ ಸೆಲೆಕ್ಟ್ ಆದ ರಿಚಾ ಸ್ಫೋಟಕ ಆಟದ ಮೂಲಕವೇ ಗಮನ ಸೆಳೆಯುತ್ತಿದ್ದಾರೆ. ಕ್ರಿಕೆಟ್ ಜೊತೆ ಸಾಮಾಜ ಸೇವೆಯಲ್ಲೂ ರಿಚಾ ಗುರುತಿಸಿಕೊಂಡಿದ್ದಾರೆ. ಕೋವಿಡ್ 19 ಸಮಯದಲ್ಲಿ ಈ ಹುಡುಗಿ ಪಶ್ಚಿಮ ಬಂಗಾಳ ಸಿಎಂ ಪರಿಹಾರ ನಿಧಿಗೆ 10 ಲಕ್ಷ ರೂಪಾಯಿ ದೇಣಿಗೆ ನೀಡಿದ್ದದ್ರು. 2023ರಲ್ಲಿ ರಿಚಾಳನ್ನು ಆರ್ ಸಿ ಬಿ 1.9 ಕೋಟಿ ರೂಪಾಯಿ ಗೆ ಖರೀದಿಸಿದ್ದು ಕಳೆದ ಮೂರು ಸೀಸನ್ ಗಳಿಂದ ತಂಡದ ಆಧಾರ ಸ್ತಂಭ ವಾಗಿದ್ದಾಳೆ.