ಗಂಡು ಮಗುವಿನ ತಂದೆಯಾದ ಆರ್‌ಸಿಬಿ ಸ್ಟಾರ್ ಆಟಗಾರ ಮ್ಯಾಕ್ಸ್‌ವೆಲ್ – ಜ್ಯೂನಿಯರ್ ಮ್ಯಾಕ್ಸ್‌ವೆಲ್‌ಗೆ ಶುಭಾಶಯಗಳ ಸುರಿಮಳೆ

ಗಂಡು ಮಗುವಿನ ತಂದೆಯಾದ ಆರ್‌ಸಿಬಿ ಸ್ಟಾರ್ ಆಟಗಾರ ಮ್ಯಾಕ್ಸ್‌ವೆಲ್ – ಜ್ಯೂನಿಯರ್ ಮ್ಯಾಕ್ಸ್‌ವೆಲ್‌ಗೆ ಶುಭಾಶಯಗಳ ಸುರಿಮಳೆ

ಆಸ್ಟ್ರೇಲಿಯಾ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್ವೆಲ್ ಗಂಡು ಮಗುವಿನ ತಂದೆಯಾದ ಸಂಭ್ರಮದಲ್ಲಿದ್ದಾರೆ. ಮ್ಯಾಕ್ಸ್‌ವೆಲ್ ಮತ್ತು ವಿನಿ ರಾಮನ್ ತಮ್ಮ ಕುಟುಂಬಕ್ಕೆ ಹೊಸ ಅತಿಥಿಯನ್ನು ಸಂಭ್ರಮದಿಂದ ಸ್ವಾಗತಿಸಿದ್ದಾರೆ. ಭಾರತೀಯ ಮೂಲದ ವಿನಿ ರಾಮನ್, ಜ್ಯೂನಿಯರ್ ಮ್ಯಾಕ್ಸ್‌ವೆಲ್‌ಗೆ ಜನ್ಮ ನೀಡಿದ್ದಾರೆ. ಆಸ್ಟ್ರೇಲಿಯಾ ಕ್ರಿಕೆಟಿಗ ಗ್ಲೆನ್ ಮ್ಯಾಕ್ಸ್‌ವೆಲ್ ತಾವು ತಂದೆಯಾಗಿರುವ ವಿಷಯವನ್ನು ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಂನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ‘800’ ಸಿನಿಮಾ ರಿಲೀಸ್ ದಿನಾಂಕ ಘೋಷಣೆ – ಅಕ್ಟೋಬರ್ 6ರಂದು ಮುತ್ತಯ್ಯ ಮುರಳೀಧರನ್ ಬಯೋಪಿಕ್ ರಿಲೀಸ್

ಗ್ಲೆನ್ ಮ್ಯಾಕ್ಸ್ವೆಲ್ ಹಾಗೂ ವಿನಿ ರಾಮನ್ ದಂಪತಿ 11-09-2023ರಂದು ಮುದ್ದು ಕಂದನನ್ನು ತಮ್ಮ ಕುಟುಂಬದೊಳಗೆ ಸ್ವಾಗತಿಸಿದ್ದಾರೆ. ವಿನಿ ರಾಮನ್ ಹಾಗೂ ಗ್ಲೆನ್ ಮ್ಯಾಕ್ಸ್ವೆಲ್ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಆಸ್ಟ್ರೇಲಿಯಾ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್ವೆಲ್ ಗಂಡು ಮಗುವಿನ ತಂದೆಯಾಗಿದ್ದಾರೆ. ವಿನಿ ರಾಮನ್ ಹಾಗೂ ಗ್ಲೆನ್ ಮ್ಯಾಕ್ಸ್ವೆಲ್ ತಮ್ಮ ಮಗನ ಕೈಹಿಡಿದಿರುವ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಪುಟ್ಟ ಕಂದನಿಗೆ ಶುಭಾಶಯ ಸುರಿಮಳೆಯೇ ಹರಿದುಬಂದಿದೆ.

ಕಳೆದ ತಿಂಗಳಷ್ಟೇ ವಿನಿ ರಾಮನ್ ತಾವು ಸೆಪ್ಟೆಂಬರ್‌ನಲ್ಲಿ ತಾಯಿಯಾಗಲಿರುವ ವಿಚಾರವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಕಳೆದ ತಿಂಗಳಷ್ಟೇ ವಿನಿ ರಾಮನ್ ಅವರಿಗೆ ಭಾರತೀಯ ಸಂಪ್ರದಾಯದಂತೆ ಸೀಮಂತವನ್ನು ಮಾಡಲಾಗಿತ್ತು. ಆ ಫೋಟೋಗಳು ಕೂಡಾ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದ್ದವು. ಮುಂಬರುವ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೂ ಮುನ್ನ ತಾವು ತಂದೆಯಾಗಿರುವುದು ಗ್ಲೆನ್ ಮ್ಯಾಕ್ಸ್ವೆಲ್ ಪಾಲಿಗೆ ತುಂಬಾ ಖುಷಿಯ ಸಂಗತಿಯಾಗಿದೆ. ಅಕ್ಟೋಬರ್ 05ರಿಂದ ಭಾರತದಲ್ಲಿ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿ ನಡೆಯಲಿದ್ದು, ಇದಕ್ಕೂ ಮುನ್ನ ಕೆಲಕಾಲ ತನ್ನ ಪತ್ನಿ ಹಾಗೂ ಮಗನ ಜತೆ ಖುಷಿಯ ಕ್ಷಣಗಳನ್ನು ಕಳೆಯಲು ಅವಕಾಶ ಸಿಕ್ಕಂತೆ ಆಗಿದೆ. ಗ್ಲೆನ್ ಮ್ಯಾಕ್ಸ್ವೆಲ್, ವಿಶ್ವಕಪ್ ಟೂರ್ನಿಗೆ ಆಸ್ಟ್ರೇಲಿಯಾ ತಂಡದಲ್ಲಿ ಸ್ಥಾನ ಪಡೆದಿದ್ದು, ಇದೀಗ ಹೈವೋಲ್ಟೇಜ್ ಟೂರ್ನಿಗೆ ಹೊಸ ಹುರುಪಿನೊಂದಿಗೆ ಕಣಕ್ಕಿಳಿಯಲು ಮ್ಯಾಕ್ಸಿ ಎದುರು ನೋಡುತ್ತಿದ್ದಾರೆ.

ಭಾರತೀಯ ಮೂಲದ ವಿನಿ ರಾಮನ್ ಮಾರ್ಚ್ 03, 1993ರಲ್ಲಿ ಆಸ್ಟ್ರೇಲಿಯಾದ ಮೆಲ್ಬರ್ನ್ನಲ್ಲಿ ಜನಿಸಿದ್ದರು. ಅವರು ಮೆಡಿಕಲ್ ಸೈನ್ಸ್ ವ್ಯಾಸಂಗ ಮಾಡಿ ವೃತ್ತಿಯಲ್ಲಿ ಫಾರ್ಮಾಸಿಸ್ಟ್ ಆಗಿದ್ದಾರೆ. ವಿನಿ ರಾಮನ್, ಆಸೀಸ್ ಕ್ರಿಕೆಟಿಗ ಗ್ಲೆನ್ ಮ್ಯಾಕ್ಸ್ವೆಲ್ ಜತೆ ಕೆಲಕಾಲ ಡೇಟಿಂಗ್ ನಡೆಸಿ ಮಾರ್ಚ್ 18, 2022ರಂದು ಕ್ರಿಶ್ಚಿಯನ್ ಸಂಪ್ರದಾಯದಂತೆ ಹಾಗೂ ಮಾರ್ಚ್ 27ರಂದು ತಮಿಳು ಸಂಪ್ರದಾಯದಂತೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು.

Sulekha