ಹರಿಣಗಳಿಗೆ ನೀರಿಳಿಸಿದ ಸಾಲ್ಟ್, ಬಟ್ಲರ್ – T-20Iನಲ್ಲಿ ಭಾರತಕ್ಕೆ ENG ಸೆಡ್ಡು

 ಹರಿಣಗಳಿಗೆ ನೀರಿಳಿಸಿದ ಸಾಲ್ಟ್, ಬಟ್ಲರ್ – T-20Iನಲ್ಲಿ ಭಾರತಕ್ಕೆ ENG ಸೆಡ್ಡು

ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್ ನಡುವಿನ ಮೂರು ದಿನಗಳ ಟಿ-20ಐ ಸರಣಿಯಲ್ಲಿ ಇಂಗ್ಲೆಂಡ್ ಪಡೆ ಚರಿತ್ರೆ ಬರೆದಿದೆ. ಮ್ಯಾಂಚೆಸ್ಟರ್‌ನಲ್ಲಿ ನಡೆದ ಎರಡನೇ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಮೆನ್ಸ್ ಟಿ-20ಐ ಫಾರ್ಮೆಟ್​ನಲ್ಲಿ ಹೈಯೆಸ್ಟ್ ರನ್ಸ್ ಸ್ಕೋರ್ ಮಾಡಿದೆ. ಫಾರ್ ದಿ ಫಸ್ಟ್ ಟೈಂ 300+ ರನ್ಸ್ ಸ್ಕೋರ್ ಮಾಡಿದೆ. ಜೊತೆಗೆ ಒಟ್ಟಾರೆ ಟಿ-20ಐ ಮಾದರಿಯಲ್ಲಿ ಮೂರನೇ ಅತ್ಯಧಿಕ ಸ್ಕೋರ್ ಆಗಿದೆ.

ಟಾಸ್ ಸೋತು ಬ್ಯಾಟಿಂಗ್ ಗಿಳಿದು ಇತಿಹಾಸ ಬರೆದ ಇಂಗ್ಲೆಂಡ್!

ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡದ ಪರ ಫಿಲ್ ಸಾಲ್ಟ್ ಮತ್ತು ಜೋಸ್ ಬಟ್ಲರ್ ಇನ್ನಿಂಗ್ಸ್ ಆರಂಭಿಸಿದ್ರು. ಫಸ್ಟ್ ಓವರ್​ನಿಂದ ಕಂಪ್ಲೀಟ್ ಅಗ್ರೆಶನ್ ಮೋಡ್​ನಲ್ಲೇ ಬ್ಯಾಟ್ ಬೀಸಿದ್ರು. ಹಾಗೇ 126 ರನ್‌ಗಳ ಜೊತೆಯಾಟದ ಮೂಲಕ ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ಟಿದ್ರು. ಅದ್ರಲ್ಲೂ ಬಟ್ಲರ್ ಅಂತೂ ಕೇವಲ 30 ಎಸೆತಗಳಲ್ಲೇ 7 ಸಿಕ್ಸ್, 8 ಬೌಂಡರಿಗಳ ಸಮೇತ 83 ರನ್ ಚಚ್ಚಿ ಔಟ್ ಆದ್ರು. ಆ ಬಳಿಕ ಸಾಲ್ಟ್ ಜೊತೆಯಾದ ಜಾಕೋಬ್ ಬೆಥೆಲ್ ಕೂಡ 14 ಎಸೆತಗಳಲ್ಲಿ 26 ರನ್ ಕಲೆ ಹಾಕಿದ್ರು. ಮತ್ತೊಂದು ತುದಿಯಲ್ಲಿ ಸಾಲ್ಟ್ ಸಿಡಿಯುತ್ತಲೇ ಇದ್ರು. ಪರಿಣಾಮ ಎರಡನೇ ವಿಕೆಟ್‌ಗೆ 95 ರನ್‌ಗಳ ಜೊತೆಯಾಟವಾಡಿದ್ರು. 4ನೇ ಕ್ರಮಾಂಕದಲ್ಲಿ ಬಂದ ನಾಯಕ ಹ್ಯಾರಿ ಬ್ರೂಕ್ ಕೂಡ ಅದೇ ಸ್ಟ್ರೈಲಲ್ಲೇ ಬ್ಯಾಟ್ ಬೀಸಿದ್ರು. 21 ಎಸೆತಗಳಲ್ಲಿ ಐದು ಬೌಂಡರಿ ಮತ್ತು ಒಂದು ಸಿಕ್ಸರ್ ಸಹಾಯದಿಂದ ಅಜೇಯವಾಗಿ 41 ರನ್‌ ಕಲೆಹಾಕಿದರು. ಇತ್ತ ಓಪನರ್ ಆಗಿ ಕಣಕ್ಕಿಳಿದಿದ್ದ ಸಾಲ್ಟ್ 60 ಎಸೆತಗಳಲ್ಲಿ 15 ಬೌಂಡರಿ ಮತ್ತು ಎಂಟು ಸಿಕ್ಸರ್‌ಗಳ ಸಹಾಯದಿಂದ 141 ರನ್‌ಗಳೊಂದಿಗೆ ಅಜೇಯರಾಗಿ ಉಳಿದ್ರು. ಈ ಮೂಲಕ 20 ಓವರ್​ಗಳಲ್ಲಿ 2 ವಿಕೆಟ್ ನಷ್ಟಕ್ಕೆ 304 ರನ್​ಗಳನ್ನ ಕಲೆಹಾಕಿದ್ರು. ಈ ಬಿಗ್ ಟಾರ್ಗೆಟ್ ಬೆನ್ನತ್ತಿದ ಸೌಲ್ ಆಫ್ರಿಕಾ ಏಡಂ ಮಾರ್ಕ್ರಮ್ 41 ರನ್ ಗಳಿಸಿದ್ದೇ ಹೈಯೆಸ್ಟ್ ಸ್ಕೋರ್ ಆಯ್ತು. ಅಂತಿಮವಾಗಿ 16.1 ಓವರ್​ಗಳಲ್ಲೇ 158 ರನ್​ಗಳಿಗೆ ಆಲೌಟ್ ಆದ್ರು. ಈ ಮೂಲಕ ಆಂಗ್ಲರು 146 ರನ್‌ಗಳ ಬಿಗ್ ಮಾರ್ಜಿನ್​ನಿಂದ ಪಂದ್ಯವನ್ನ ಗೆದ್ದು ಬೀಗಿದ್ರು. ಈ ಮ್ಯಾಚ್ ಮೂಲಕ ಹಲವು ದಾಖಲೆಗಳನ್ನೂ ಬರೆದ್ರು. ಫುಲ್ ಮೆಂಬಲ್ ಟೀಂ ವಿರುದ್ಧ ಗಳಿಸಿದ ಹೈಯೆಸ್ಟ್ ಸ್ಕೋರ್ ಎನಿಸಿಕೊಳ್ತು.

ಪೂರ್ಣ ಸದಸ್ಯ ತಂಡದ ವಿರುದ್ಧದ ದಾಖಲೆ!

304/2 ಇಂಗ್ಲೆಂಡ್ vs ದಕ್ಷಿಣ ಆಫ್ರಿಕಾ, ಮ್ಯಾಂಚೆಸ್ಟರ್ 2025

297/6 ಭಾರತ vs ಬಾಂಗ್ಲಾದೇಶ, ಹೈದರಾಬಾದ್ 2024

283/1 ಭಾರತ vs ದಕ್ಷಿಣ ಆಫ್ರಿಕಾ, ಜೋಹಾನ್ಸ್ ಬರ್ಗ್ 2024

278/3 ಅಫ್ಘಾನಿಸ್ತಾನ vs ಐರ್ಲೆಂಡ್, ಡೆಹ್ರಾಡೂನ್ 2019

267/3 ಇಂಗ್ಲೆಂಡ್ vs ವೆಸ್ಟ್ ಇಂಡೀಸ್, ತರೂಬಾ 2023

ಈ ಮೂಲಕ ಭಾರತದ ಹೆಸರಿನಲ್ಲಿ ಟಿ-20ಐ ಹೈಯೆಸ್ಟ್ ಸ್ಕೋರ್ ದಾಖಲೆಯನ್ನ ಇಂಗ್ಲೆಂಡ್ ಬ್ರೇಕ್ ಮಾಡಿ ನಂಬರ್ 1 ಸ್ಥಾನಕ್ಕೇರಿದೆ. ಬಟ್ ಓವರ್ ಆಲ್ ಆಗಿ ಪುರುಷರ ಟಿ20ಐಗಳಲ್ಲಿ ಅತ್ಯಧಿಕ ಮೊತ್ತ ಇನ್ನೂ ಜಾಸ್ತಿ ಇದೆ.

T20I ಪಂದ್ಯಗಳಲ್ಲಿ ಅತ್ಯಧಿಕ ಸ್ಕೋರ್!

344/4 ಜಿಂಬಾಬ್ವೆ vs ಗ್ಯಾಂಬಿಯಾ, ನೈರೋಬಿ 2024

314/3 ನೇಪಾಳ vs ಮಂಗೋಲಿಯಾ, ಹ್ಯಾಂಗ್‌ಝೌ 2023

304/2 ಇಂಗ್ಲೆಂಡ್ vs ದಕ್ಷಿಣ ಆಫ್ರಿಕಾ, ಮ್ಯಾಂಚೆಸ್ಟರ್ 2025

297/6 ಭಾರತ vs ಬಾಂಗ್ಲಾದೇಶ, ಹೈದರಾಬಾದ್ 2024

286/5 ಜಿಂಬಾಬ್ವೆ vs ಸೀಶೆಲ್ಸ್, ನೈರೋಬಿ 2024

ಒಂದ್ಕಡೆ ದಾಖಲೆ ಮೇಲೆ ದಾಖಲೆ ಬರೆದು ಇಂಗ್ಲೆಂಡ್ ಹಿರಿ ಹಿರಿ ಹಿಗ್ಗುತ್ತಿದ್ರೆ ದಕ್ಷಿಣ ಆಫ್ರಿಕಾ 146 ರನ್‌ಗಳ ಅಂತರದಿಂದ ಸೋಲನ್ನು ಕಂಡಿದೆ. ಇದು ಟಿ20 ಇತಿಹಾಸದಲ್ಲಿ ದಕ್ಷಿಣ ಆಫ್ರಿಕಾದ ಅತಿ ದೊಡ್ಡ ಸೋಲು ಆಗಿದೆ. ಅಲ್ಲದೆ ಇಂಗ್ಲೆಂಡ್‌ನ ತಂಡದ ಇದು ಅತಿದೊಡ್ಡ ಗೆಲುವಾಗಿದೆ. ಌಕ್ಚುಲಿ ಈ ಪಂದ್ಯದಲ್ಲಿ ಮೇನ್ ಹೈಲೆಟ್ ಆಗಿದ್ದು ಆರ್​ಸಿಬಿಯ ಸ್ಫೋಟಕ ಓಪನರ್ ಬ್ಯಾಟರ್ ಫಿಲ್ ಸಾಲ್ಟ್. ಅಜೇಯ ಶತಕದ ಮೂಲಕ ಹಲವು ದಾಖಲೆಗಳನ್ನ ಬರೆದಿದ್ದಾರೆ.

ಸಾಧನೆಗಳ ಸರದಾರ ಸಾಲ್ಟ್!

39 ಎಸೆತಗಳಲ್ಲೇ ಶತಕ.. ಇಂಗ್ಲೆಂಡ್‌ ಪರ ವೇಗವಾಗಿ ಶತಕ

ಲಿಯಾಮ್ ಲಿವಿಂಗ್‌ಸ್ಟೋನ್‌ 42 ಎಸೆತಗಳಲ್ಲಿ ಶತಕ ದಾಖಲೆ ಬ್ರೇಕ್

ಟಿ-20ಐನ 42 ಇನ್ನಿಂಗ್ಸ್ ಗಳಿಂದ ಸಾಲ್ಟ್ ವೇಗವಾಗಿ 4 ಶತಕ ದಾಖಲು

ಸೂರ್ಯಕುಮಾರ್ ಯಾದವ್ 57 ಇನಿಂಗ್ಸ್‌ ಗಳಲ್ಲಿ ಈ ಸಾಧನೆ ಮಾಡಿದ್ದರು

ಟಿ20 ಕ್ರಿಕೆಟ್‌ ಇತಿಹಾಸದಲ್ಲಿ ಅತಿ ಹೆಚ್ಚು ಶತಕ ಬಾರಿಸಿದ ಬ್ಯಾಟರ್‌ ಗಳ ಪಟ್ಟಿ

ಫಿಲ್ಸ್ ಸಾಲ್ಟ್‌, ಸೂರ್ಯ ಜೊತೆಗೆ ಎರಡನೇ ಸ್ಥಾನದಲ್ಲಿ, 5 ಶತಕದ ಮ್ಯಾಕ್ಸಿ ನಂ.1

ಟಿ20 ಕ್ರಿಕೆಟ್‌ ನಲ್ಲಿ ಇಂಗ್ಲೆಂಡ್ ಬ್ಯಾಟರ್‌ ದಾಖಲಿಸಿದ ಗರಿಷ್ಠ ರನ್‌141 ರನ್

Shantha Kumari