ಮಗುವಿನ ನಿರೀಕ್ಷೆಯಲ್ಲಿ ಆರ್ ಸಿಬಿ ಆಟಗಾರ ಗ್ಲೆನ್ ಮ್ಯಾಕ್ಸ್ ವೆಲ್ – ಸಿಹಿ ಸುದ್ದಿ ಹಂಚಿಕೊಂಡ ವಿನಿ ರಾಮನ್!

ಐಪಿಎಲ್ ಕ್ರೇಜ್ ದಿನದಿನಕ್ಕೂ ಹೆಚ್ಚಾಗುತ್ತಿದೆ. ಈಗಾಗಲೇ ತಂಡಗಳು ಪ್ಲೇ ಆಫ್ ಗೆ ಲಗ್ಗೆ ಇಡಲು ಕಸರತ್ತು ನಡೆಸುತ್ತಿವೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೂಡ ಪ್ಲೇ ಆಫ್ ಕನಸಿನೊಂದಿಗೆ ತನ್ನ ಮುಂದಿನ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಜೈಪುರದಲ್ಲಿ ಎದುರಿಸಲಿದೆ. ಇದರ ನಡುವೆಯೇ ತಂಡದ ಸ್ಟಾರ್ ಆಲ್ ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ವೈಯಕ್ತಿಕ ಜೀವನದಲ್ಲಿ ಸಂಭ್ರಮದ ಸುದ್ದಿಯನ್ನು ಪಡೆದುಕೊಂಡಿದ್ದಾರೆ.
ಇದನ್ನೂ ಓದಿ : ಆರ್‌ಸಿಬಿ ತಂಡಕ್ಕೆ ಮತ್ತೊಂದು ಆಘಾತ – ದಿನೇಶ್ ಕಾರ್ತಿಕ್ ಆರೋಗ್ಯದಲ್ಲಿ ಏರುಪೇರು
ಈ ವರ್ಷದ ಸೆಪ್ಟೆಂಬರ್‌ನಲ್ಲಿ ದಂಪತಿ ತಮ್ಮ ಮೊದಲ ಮಗುವನ್ನು ನಿರೀಕ್ಷಿಸುತ್ತಿದ್ದಾರೆ ಎಂದು ಮ್ಯಾಕ್ಸ್‌ವೆಲ್ ಅವರ ಪತ್ನಿ ವಿನಿ ರಾಮನ್ ಗುರುವಾರ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಮ್ಯಾಕ್ಸ್‌ವೆಲ್ ಕಳೆದ ವರ್ಷದ ಐಪಿಎಲ್‌ಗೂ ಮುನ್ನ ಕ್ರಿಶ್ಚಿಯನ್ ಮತ್ತು ತಮಿಳು ಸಂಪ್ರದಾಯದಲ್ಲಿ ಭಾರತೀಯ ಮೂಲದ ವಿನಿ ರಾಮನ್ ಅವರನ್ನು ವಿವಾಹವಾಗಿದ್ದರು. ವಿನಿ ರಾಮನ್ ಅವರು ವೃತ್ತಿಯಲ್ಲಿ ಮೆಲ್ಬೋರ್ನ್ ಮೂಲದ ಫಾರ್ಮಾಸಿಸ್ಟ್ ಆಗಿದ್ದಾರೆ.
‘ನಮ್ಮ ಬದುಕಿನ ಕಾಮನಬಿಲ್ಲು ಆಗಿರುವ ಮಗುವು ಸೆಪ್ಟೆಂಬರ್ 2023ಕ್ಕೆ ಬರಲಿದೆ ಎಂದು ಘೋಷಿಸಲು ಗ್ಲೆನ್ ಮತ್ತು ನಾನು ಭಾವುಕರಾಗಿದ್ದೇವೆ ಎಂದು ವಿನಿ ರಾಮನ್ ತಮ್ಮ ಇನ್ಸ್‌ಟಾಗ್ರಾಮ್‌ನಲ್ಲಿ ಬರೆದಿದ್ದಾರೆ. ನಮ್ಮ ಈ ಪ್ರಯಾಣವು ಸುಗಮ ಹಾಗೂ ಸುಲಭವಾಗಿರಲಿಲ್ಲ ಎಂದು ಒಪ್ಪಿಕೊಳ್ಳುವುದು ನಮಗೆ ಬಹಳ ಮುಖ್ಯವಾಗಿದೆ. ನಿಮಗೆ ಮಗು ಯಾವಾಗ ಎಂದು ಕೇಳುವ ಪೋಸ್ಟ್‌ಗಳನ್ನು ನೋಡುವುದು ಎಷ್ಟು ನೋವಿನಿಂದ ಕೂಡಿದೆ ಎಂದು ನನಗೆ ತಿಳಿದಿದೆ. ಫಲವತ್ತತೆ ಅಥವಾ ನಷ್ಟದೊಂದಿಗೆ ಹೋರಾಡುತ್ತಿರುವ ಇತರ ದಂಪತಿಗಳಿಗೆ ನಾವು ನಮ್ಮ ಪ್ರೀತಿ ಮತ್ತು ಶಕ್ತಿಯನ್ನು ಕಳುಹಿಸುತ್ತೇವೆ’ ಎಂದು ಅವರು ಬರೆದುಕೊಂಡಿದ್ದಾರೆ. ವಿನಿ ರಾಮನ್ ಅವರು ಮಗುವನ್ನು ‘ರೇನ್ಬೋ ಬೇಬಿ’ ಎಂದು ಕರೆದಿದ್ದಾರೆ.