ಟಿ-20 ಪಂದ್ಯಗಳನ್ನಷ್ಟೇ ಆಡ್ತಾರಂತೆ ಟಿಮ್ ಡೇವಿಡ್ – ಆಫರ್ ಕೊಟ್ರೂ ನಿರಾಕರಿಸಿದ್ದೇಕೆ RCB ಸ್ಟಾರ್?

2025ರ ಸೀಸನ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಪ್ ಗೆಲ್ಲೋಕೆ ಒನ್ ಆಫ್ ದಿ ಮೇನ್ ರೀಸನ್ ಟಿಮ್ ಡೇವಿಡ್. ಬಿಗ್ ಹಿಟ್ಗಳ ಮೂಲಕವೇ ಫಿನಿಶಿಂಗ್ ರೋಲ್ನ ಅದ್ಬುತವಾಗಿ ಪ್ಲೇ ಮಾಡಿದ್ರು. ಈಗಲೂ ಕೂಡ ಆಸ್ಟ್ರೇಲಿಯಾ ಪರ ಟಿ20 ಕ್ರಿಕೆಟ್‌ನಲ್ಲಿ ಸಿಕ್ಕಾಪಟ್ಟೆ ಸೌಂಡ್ ಮಾಡ್ತಿದ್ದಾರೆ. ಆದರೆ ಏಕದಿನ ಕ್ರಿಕೆಟ್‌ನಿಂದ ಮಾತ್ರ ದೂರ ಉಳಿದಿದ್ದಾರೆ. 29 ವರ್ಷದ ಬ್ಯಾಟ್ಸ್‌ಮನ್ 50 ಓವರ್‌ಗಳ ಸ್ವರೂಪದಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ.
ಇದನ್ನೂ ಓದಿ : ಶಮಿ T-20I ಕ್ರಿಕೆಟ್ ಜರ್ನಿ ಅಂತ್ಯ? – ಫಿಟ್ ನೆಸ್ ಬಗ್ಗೆ ಶಾಕಿಂಗ್ ಸ್ಟೇಟ್ ಮೆಂಟ್
ಇತ್ತೀಚೆಗಷ್ಟೇ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯ ಮೊದಲ ಪಂದ್ಯದಲ್ಲೇ ಟಿಮ್ ಡೇವಿಡ್ 83 ರನ್‌ಗಳ ಅಬ್ಬರದ ಇನ್ನಿಂಗ್ಸ್ ಆಡಿದ್ರು. ಇದ್ರಲ್ಲಿ 8 ಗಗನಚುಂಬಿ ಸಿಕ್ಸರ್‌ಗಳೂ ಇದ್ವು. ಡೇವಿಡ್ ಬ್ಯಾಟಿಂಗ್ನಿಂದಲೇ ಆಸ್ಟ್ರೇಲಿಯಾ ಅದ್ಭುತ ಗೆಲುವು ಸಾಧಿಸಿತ್ತು. ಹಾಗೇ ಇದಕ್ಕೂ ಮೊದಲು ವೆಸ್ಟ್ ಇಂಡೀಸ್ ಮತ್ತು ಪಾಕಿಸ್ತಾನ ವಿರುದ್ಧದ ಟಿ20 ಸರಣಿಯಲ್ಲೂ ಡೇವಿಡ್ ತಮ್ಮ ಫಿನಿಶಿಂಗ್ ಸ್ಕಿಲ್ನಿಂದಲೇ ಅನೇಕ ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ರು. ಟಿಮ್ ಡೇವಿಡ್ ಅವರ ಇದೇ ಅತ್ಯದ್ಭುತ ಫಾರ್ಮ್ ನೋಡಿದ ಆಸ್ಟ್ರೇಲಿಯಾ ತಂಡದ ಆಡಳಿತವು ಏಕದಿನ ಕ್ರಿಕೆಟ್‌ನಲ್ಲೂ ಕಣಕ್ಕಿಳಿಸೋಕೆ ಬಯಸಿದೆ. ಆದ್ರೆ ಡೇವಿಡ್ ಅವರ ಆನ್ಸರ್ ಮಾತ್ರ ಕ್ಲಿಯರ್ ಆಗಿದೆ. 50 ಓವರ್‌ಗಳ ಮಾದರಿಯಲ್ಲಿ ಆಡೋದನ್ನ ನಿರಾಕರಿಸಿದ್ದಾರೆ. ಡೇವಿಡ್ರನ್ನ ಓಡಿಐಗೆ ಕರೆ ತರೋದ್ರ ಹಿಂದೆ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿಯ ಬಹುದೊಡ್ಡ ಪ್ಲ್ಯಾನೇ ಇದೆ.
ಟಿ-20 ಮಾದರಿ ಹಿಟ್ಟರ್!
ಆಸ್ಟ್ರೇಲಿಯಾದ ಏಕದಿನ ತಂಡವು ಪ್ರಸ್ತುತ ಬದಲಾವಣೆಯ ಹಂತ
ಸ್ಟೀವ್ ಸ್ಮಿತ್, ಮಾರ್ಕಸ್ ಸ್ಟೊಯಿನಿಸ್ ಮತ್ತು ಗ್ಲೆನ್ ಮ್ಯಾಕ್ಸ್ ವೆಲ್
ಅನುಭವಿ ಆಟಗಾರರು 50 ಓವರ್‌ಗಳ ಸ್ವರೂಪದಿಂದ ನಿವೃತ್ತರಾಗಿದ್ದಾರೆ
ಐಪಿಎಲ್ ಮತ್ತು ಟಿ20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ
ಡೇವಿಡ್ ಮಾತ್ರ ಈ ಸ್ವರೂಪದಿಂದ ಅಂತರ ಕಾಯ್ದುಕೊಳ್ಳುವ ಬಗ್ಗೆ ಮಾತು
2026ರಲ್ಲಿ ನಡೆಯಲಿರೋ ಟಿ-20 ವಿಶ್ವಕಪ್ ಗೂ ಮುನ್ನ ಹಲವು ಟಿ20 ಸರಣಿ
51 ಟಿ20 ಅಂತರರಾಷ್ಟ್ರೀಯ ಪಂದ್ಯಗಳನ್ನ ಆಡಿದ್ದು 1416 ರನ್
2023 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಪಂದ್ಯಕ್ಕೆ ಪಾದಾರ್ಪಣೆ
4 ಪಂದ್ಯಗಳಲ್ಲಿ ಕೇವಲ 45 ರನ್, ಇದೇ ಕಾರಣದಿಂದ ಏಕದಿನ ನಿರಾಸಕ್ತಿ
ಇನ್ನು ಟಿಮ್ ಡೇವಿಡ್ ಅವ್ರ ಈ ನಿರ್ಧಾರದ ಹಿಂದೆ ಟಿ20 ಕ್ರಿಕೆಟ್ ಮೇಲೆ ಗಮನ ಹರಿಸುವುದು ಅವರ ಕಾರ್ಯತಂತ್ರದ ಭಾಗವಾಗಿರಬಹುದು. ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತದ ಟಿ20 ಲೀಗ್‌ಗಳಲ್ಲಿಯೂ ಅವರು ಟಿ20 ಸ್ವರೂಪದಲ್ಲಿ ಸಿಕ್ಕಾಪಟ್ಟೆ ಡಿಮ್ಯಾಂಡ್ನಲ್ಲಿದ್ದಾರೆ. ಅತ್ಯಂತ ಡೇಂಜರಸ್ ಫಿನಿಷರ್‌ಗಳಲ್ಲಿ ಒಬ್ಬರು. ಐಪಿಎಲ್ನೂ ಕೂಡ ಗಮನದಲ್ಲಿ ಇಟ್ಟುಕೊಂಡು ಈ ನಿರ್ಧಾರಕ್ಕೆ ಬಂದಿದ್ದಾರೆ. ಟಿಮ್ ಡೇವಿಡ್ ಇದುವರೆಗೆ ಐಪಿಎಲ್‌ನಲ್ಲಿ 27.75 ಕೋಟಿ ರೂ. ಗಳಿಸಿದ್ದಾರೆ. ಮುಂದಿನ ವರ್ಷಗಳಲ್ಲೂ ಟಿಮ್ ಡೇವಿಡ್ಗೆ ಹೆಚ್ಚಿನ ಬೇಡಿಕೆ ಸಿಗಲಿದೆ. ಇದೇ ಕಾರಣಕ್ಕೋ ಏನೋ ಏಕದಿನ ಮಾದರಿಯಿಂದ ದೂರವಿದ್ದು ಪ್ರೆಶರ್ನ ಕಂಟ್ರೋಲ್ ಮಾಡೋ ಲೆಕ್ಕಾಚಾರದಲ್ಲಿದ್ದಾರೆ.

ನೋಡಿರಿ

