RCBಯಿಂದ ಯಶ್ ದಯಾಳ್ ಬ್ಯಾನ್? – ಲವ್.. ಸೆ*ಕ್ಸ್.. ಯುವತಿಗೆ ದೋಖಾ?
ಅರೆಸ್ಟ್ ಟೆನ್ಷನ್ ನಲ್ಲಿ IPL ಹೀರೋ!

ಸತತ 17 ವರ್ಷಗಳಿಂದ ಟ್ರೋಫಿ ವಂಚಿತವಾಗಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 18ನೇ ಸೀಸನ್ನಲ್ಲಿ ಚೊಚ್ಚಲ ಐಪಿಎಲ್ ಟ್ರೋಫಿಗೆ ಮುತ್ತಿಕ್ಕಿತ್ತು. ಟೂರ್ನಿಯುದ್ಧಕ್ಕೂ ಬ್ಯಾಟಿಂಗ್, ಬೌಲಿಂಗ್ನಲ್ಲಿ ಕಂಪ್ಲೀಟ್ ಪ್ಯಾಕೇಜ್ನಂತೆ ಪರ್ಫಾಮ್ ಮಾಡಿದ್ರು. ವೇಗದ ಬೌಲಿಂಗ್ ವಿಭಾಗದಲ್ಲಿ ಎದುರಾಳಿಗಳ ಎದೆಯಲ್ಲಿ ನಡುಕ ಹುಟ್ಟಿಸಿದ್ದ ಯಶ್ ದಯಾಳ್ ಸ್ಫೋಟಕ ಪ್ರದರ್ಶನ ನೀಡಿದ್ರು. ಆದ್ರೀಗ ಅದೇ ದಯಾಳ್ ಬದುಕಲ್ಲಿ ಬಿರುಗಾಳಿ ಎದ್ದಿದೆ. ಲೈಂಗಿಕ ದೌರ್ಜನ್ಯ, ಹಿಂಸೆ ಹಾಗೂ ವಂಚನೆ ಆರೋಪಗಳು ಕೇಳಿಬಂದಿವೆ.
ಇದನ್ನೂ ಓದಿ : ಹಾಸನದಲ್ಲಿ ಹೃದಯಾತದಿಂದ ಸರಣಿ ಸಾವು – ಆರೋಗ್ಯ ಇಲಾಖೆ ಸಮಿತಿ ರಚನೆ
ಭಾರತದ ಯುವ ಕ್ರಿಕೆಟಿಗ ಯಶ್ ದಯಾಳ್ ಐಪಿಎಲ್ 2025ರಲ್ಲಿ ಆರ್‌ಸಿಬಿ ತಂಡದ ಪರ ಶೈನಿಂಗ್ ಆಗಿದ್ರು. ತಂಡವನ್ನ ಚಾಂಪಿಯನ್ ಪಟ್ಟಕೇರಿಸುವಲ್ಲಿ ಅವ್ರ ಪರ್ಫಾಮೆನ್ಸ್ ಕೂಡ ದೊಡ್ಡದಿತ್ತು. ಆದ್ರೀಗ ಅದೇ ದಯಾಳ್ ವಿರುದ್ಧ ಸಂತ್ರಸ್ತೆಯೊಬ್ಬರು ಲೈಂಗಿಕ ದೌರ್ಜನ್ಯ, ಹಿಂಸೆ ಮತ್ತು ವಂಚನೆ ಆರೋಪ ಮಾಡಿದ್ಧಾರೆ. ಈ ಸಂಬಂಧ ಯಶ್ ದಯಾಳ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸೋಶಿಯಲ್ ಮೀಡಿಯಾದಲ್ಲೂ ಪೋಸ್ಟ್ ಮಾಡಿದ್ದಾರೆ. ನ್ಯಾಯ ಕೊಡಿಸುವಂತೆ ಆಗ್ರಹಿಸಿ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಮತ್ತು ರಾಜ್ಯ ಪೊಲೀಸರಿಗೆ ಮನವಿ ಸಹ ಮಾಡಿದ್ದಾರೆ. ಪ್ರಕರಣ ಸಂಬಂಧ ಸಂತ್ರಸ್ತ ಮಹಿಳೆ ಸಿಎಂ ಹೆಲ್ಪ್‌ಲೈನ್ ಪೋರ್ಟಲ್‌ನಲ್ಲಿ ದೂರು ದಾಖಲು ಮಾಡಿದ್ದು, ಅದರ ಸ್ಕ್ರೀನ್ ಶಾಟ್‌ಗಳನ್ನು ಸಾಮಾಜಿಕ ಜಾಲತಾಣಾದಲ್ಲಿ ಹಂಚಿಕೊಂಡಿದ್ದಾರೆ. ಈ ಪೋಸ್ಟ್‌ನಲ್ಲಿ ಮಹಿಳೆ ದಯಾಳ್ ಜೊತೆಗಿನ ತನ್ನ ಫೋಟೋವನ್ನು ಸಹ ಶೇರ್ ಮಾಡಿದ್ದಾರೆ.
ಲವ್.. ಸೆಕ್ಸ್.. ದೋಖಾ?
5 ವರ್ಷಗಳಿಂದ ಸಂಬಂಧ ಹೊಂದಿದ್ದು ವಿವಾಹ ಆಗುವುದಾಗಿ ವಂಚನೆ
ಭಾವನಾತ್ಮಕವಾಗಿ, ಮಾನಸಿಕವಾಗಿ ಮತ್ತು ದೈಹಿಕವಾಗಿ ಬಳಸಿಕೊಂಡಿದ್ದಾರೆ
ಭಾವಿ ಸೊಸೆ ಎಂದು ಅವರ ಕುಟುಂಬಕ್ಕೆ ಪರಿಚಯಿಸಿ ಬಳಿಕ ನನಗೆ ವಂಚನೆ
ಅಂತರ ಕಾಯ್ದುಕೊಳ್ಳೋದು ಗಮನಕ್ಕೆ ಬಂದಿದ್ದು ಗಂಭೀರವಾಗಿ ಪರಿಗಣಿಸಿದೆ
ಅನೇಕ ಮಹಿಳೆಯರೊಂದಿಗೆ ಅಕ್ರಮ ಸಂಬಂಧ, ಜೂನ್ 14ರಂದು ದೂರು ನೀಡಿದ್ದೆ
ಎಲ್ಲಿಯೂ ಯಶ್ ದಯಾಳ್ ಅವರ ಹೆಸರನ್ನು ನೇರವಾಗಿ ಉಲ್ಲೇಖ ಮಾಡಿಲ್ಲ
ಯಶ್ ದಯಾಳ್ ಅವರೊಂದಿಗೆ ತಾವು ಇರುವ ಫೋಟೋವನ್ನು ಹಂಚಿಕೆ
ಯಶ್ ದಯಾಳ್ ಅವರಿಂದ ಇದುವರೆಗೂ ಯಾವುದೇ ಸ್ಪಷ್ಟೀಕರಣ ನೀಡಿಲ್ಲ
ಜೂನ್ 25ರಂದು ಸಾಮಾಜಿಕ ಜಾಲತಾಣದಲ್ಲಿ ದೂರಿನ ಸ್ಕ್ರೀನ್ ಶಾಟ್ ಪೋಸ್ಟ್
ಇನ್ ಸ್ಟಾದಲ್ಲಿ ಪೋಸ್ಟ್ ಮಾಡಿರುವ ಯಶ್ ದಯಾಳ್ ಫಿಯರ್ ಲೆಸ್ ಎಂದು ಬರಹ
ಯಶ್ ದಯಾಳ್ ಜೊತೆಗಿರುವ ಕೆಲ ಫೋಟೋಗಳನ್ನು ಖಾತೆಯಲ್ಲಿ ಪೋಸ್ಟ್
ಸದ್ಯ ಯುವತಿ ದೂರಿನ ಬೆನ್ನಲ್ಲೇ ಯಶ್ ದಯಾಳ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ಒಂದು ವೇಳೆ ಪೊಲೀಸರು ತನಿಖೆಗೆ ಮುಂದಾಗಿ ಯಶ್ ದಯಾಳ್ ಮೇಲಿನ ಆರೋಪಗಳೇನಾದ್ರೂ ಸಾಬೀತಾದರೆ ಅವರಿಗೆ ಸಂಕಷ್ಟ ಕಟ್ಟಿಟ್ಟ ಬುತ್ತಿಯಾಗಲಿದ್ದು, ಪರಿಣಾಮ ಆರ್‌ಸಿಬಿಯಿಂದ ಬ್ಯಾನ್ ಆಗುವ ಸಾಧ್ಯತೆಯೂ ಇರುತ್ತದೆ.

ನೋಡಿರಿ

