RCB ಟೀಂ ಸೆಲೆಕ್ಷನ್ ಸೂಪರ್ – ಸ್ಟಾರ್ಸ್ ಕೈಬಿಟ್ರೂ ಬಲಿಷ್ಠ ತಂಡ ರೆಡಿ
ಬ್ಯಾಟಿಂಗ್, ಬೌಲಿಂಗ್ ಪ್ಲಸ್ ಆಯ್ತಾ?
ಐಪಿಎಲ್ ಹರಾಜು ಶುರುವಾದ ಮೊದಲ ದಿನ ಬಿಡ್ಡಿಂಗ್ನಲ್ಲಿ ಚರಿತ್ರೆಯೇ ಸೃಷ್ಟಿಯಾಗಿತ್ತು. ರಿಷಭ್ ಪಂತ್, ಶ್ರೇಯಸ್ ಅಯ್ಯರ್, ಅರ್ಶದೀಪ್ ಸಿಂಗ್ ಹೀಗೆ ಸ್ಟಾರ್ ಆಟಗಾರರರೆಲ್ಲಾ ದಾಖಲೆಯ ಮೊತ್ತದಲ್ಲಿ ಸೇಲ್ ಆಗಿದ್ರು. ಪಂಜಾಬ್, ಲಕ್ನೋ ಫ್ರಾಂಚೈಸಿಗಳೆಲ್ಲಾ ಬಲಿಷ್ಠ ಆಟಗಾರರನ್ನ ಬುಟ್ಟಿಗೆ ಹಾಕಿಕೊಳ್ತಿದ್ರೆ ಬೆಂಗಳೂರು ಫ್ರಾಂಚೈಸಿ ಸೈಲೆಂಟ್ ಆಗಿ ಕುಳಿತಿದ್ರು. ಸೆಕೆಂಡ್ ಡೇನೂ ಅದೇ ರಿಪೀಟ್. ಆರ್ಸಿಬಿ ಅಭಿಮಾನಿಗಳಂತೂ ಬಾಯಿಗೆ ಬಂದಂತೆ ಬೈಕೊಂಡ್ರು. ಈ ಸಲನೂ ಕಪ್ ನಮ್ದಲ್ಲ ಬಿಡ್ರೋ ಅಂತಾ ಮಾಲೀಕರಿಗೆ ಹಿಡಿಶಾಪ ಹಾಕಿದ್ರು. ಬಟ್ ಈಗ ಅದೇ ಫ್ಯಾನ್ಸ್ ಆರ್ಸಿಬಿಯದ್ದು ಜಾಣನಡೆ ಅಂತಾ ಅಪ್ರಿಶಿಯೇಟ್ ಮಾಡ್ತಿದ್ದಾರೆ. ಯಾಕೆ ಅನ್ನೋ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಹೊಸ ತಿರುವು ಪಡೆದುಕೊಂಡ ಮುಡಾ ಕೇಸ್ – ಸಿಎಂ ಸಿದ್ಧರಾಮಯ್ಯ ಪತ್ನಿ ವಿರುದ್ಧ ಮತ್ತೊಂದು ಕೇಸ್ ದಾಖಲು
ಸೌದಿ ಅರೇಬಿಯಾದ ಜೆಡ್ಡಾದಲ್ಲಿ ನಡೆದ 2 ದಿನಗಳ ಮೆಗಾ ಹರಾಜು ಪ್ರಕ್ರಿಯೆಯಲ್ಲಿ 10 ಫ್ರಾಂಚೈಸಿಗಳು ತಮಗೆ ಬೇಕಾದ ಆಟಗಾರರನ್ನ ಖರೀದಿ ಮಾಡಿಕೊಂಡಿದ್ದಾರೆ. ಅದ್ರಲ್ಲೂ ಲಕ್ನೋ ಮತ್ತು ಪಂಜಾಬ್ ಫ್ರಾಂಚೈಸಿಗಳು ದಾಖಲೆಯ ಮೊತ್ತದಲ್ಲಿ ಆಟಗಾರರ ಮೇಲೆ ಬಿಡ್ ಮಾಡಿವೆ. ಲಕ್ನೋ ಸೂಪರ್ ಜೇಂಟ್ಸ್ ತಂಡದ ಮಾಲೀಕರು ರಿಷಭ್ ಪಂತ್ಗೆ ಬರೋಬ್ಬರಿ 27 ಕೋಟಿ ರೂಪಾಯಿ ನೀಡಿದ್ರೆ ಶ್ರೇಯಸ್ ಅಯ್ಯರ್ ಗೆ ಪ್ರೀತಿ ಜಿಂಟಾ ಒಡೆತನದ ಪಂಜಾಬ್ ಕಿಂಗ್ಸ್ ತಂಡ 26.75 ಕೋಟಿ ರೂಪಾಯಿ ನೀಡಿ ಖರೀದಿಸಿದೆ. ಹಾಗೇ ಕೆಎಲ್ ರಾಹುಲ್, ಇಶಾನ್ ಕಿಶನ್, ಜೋಸ್ ಬಟ್ಲರ್, ಮೊಹಮ್ಮದ್ ಶಮಿ, ಕಗಿಸೋ ರಬಾಡ ಸೇರಿದಂತೆ ಮತ್ತೊಂದಷ್ಟು ಪ್ಲೇಯರ್ಸ್ ಉತ್ತಮ ಸಂಭಾವನೆ ಪಡೆಯುವ ಮೂಲಕ ಇತರ ತಂಡಗಳನ್ನ ಸೇರಿಕೊಂಡಿದ್ದಾರೆ. ಬಟ್ ಬೆಂಗಳೂರು ಮಾತ್ರ ದೊಡ್ಡ ದೊಡ್ಡ ಮೊತ್ತದ ಆಟಗಾರರಿಗೆ ಹಣ ಸುರಿದಿಲ್ಲ. ಸ್ಟಾರ್ಟಿಂಗ್ ನಲ್ಲಿ ಫ್ರಾಂಚೈಸಿ ನಡೆ ಬಗ್ಗೆ ಆಪೋಸ್ ಬಂದಿತ್ತಾದ್ರೂ ಈಗ ಗುಡ್ ಡಿಸಿಷನ್ಸ್ ಅಂತಿದ್ದಾರೆ. ಅದಕ್ಕೆ ಕಾರಣವೂ ಇದೆ.
ಕೋಟಿಗಳ ಲೆಕ್ಕದಲ್ಲಿ ಹಣ ಸುರಿದ್ರೂ ಪ್ರದರ್ಶನದ ಬಗ್ಗೆ ಗ್ಯಾರಂಟಿ ಇಲ್ಲ!
ಯಾವ ಆಟಗಾರನಿಗೆ ಎಷ್ಟು ಕೋಟಿ ಕೊಟ್ಟರೂ ಆತನಿಂದ ಪ್ರದರ್ಶನ ಹೇಗೆ ಬರುತ್ತದೆ ಎಂಬ ಗ್ಯಾರಂಟಿ ಇರೋದಿಲ್ಲ. ಒಂದೆರಡು ಮ್ಯಾಚ್ ಆಡಿ ಮತ್ತೆ ಫಾರ್ಮ್ ಕಳ್ಕೊಂಡಿರೋ ಸಾಕಷ್ಟು ಆಟಗಾರರ ನಿದರ್ಶನಗಳೂ ಇವೆ. ಅಷ್ಟೇ ಇಡೀ ಸೀಸನ್ ಉದ್ದಕ್ಕೂ ಕಳಪೆ ಪ್ರದರ್ಶನ ನೀಡಿದವ್ರೂ ಇದ್ದಾರೆ. ಫಾರ್ ಎಕ್ಸಾಂಪಲ್ ಲಾಸ್ಟ್ ಸೀಸನ್ನಲ್ಲಿ ಆರ್ ಸಿಬಿಯಲ್ಲಿದ್ದ ಗ್ಲೆನ್ ಮ್ಯಾಕ್ಸ್ ವೆಲ್. 2022, 23ರಲ್ಲಿ ಉತ್ತಮ ಪ್ರದರ್ಶನ ನೀಡಿದ್ರೂ 2024ರ ಆವೃತ್ತಿಯಲ್ಲಿ ಡಕೌಟ್ ಆಗಿದ್ದೇ ಬಂದಿತ್ತು. ಹೀಗಾಗಿ ಒಂದೇ ರೀತಿ ಸ್ಕಿಲ್ಸ್ ಇರೋ ಬೇರೆ ಬೇರೇ ಪ್ಲೇಯರ್ಸ್ ಸಿಕ್ಕೇ ಸಿಗ್ತಾರೆ. ಓಕೆ ಆಪ್ಶನ್ಸ್ ಯಾರೂ ಇಲ್ಲ ಅಂದಾಗ ಮಾತ್ರ ಪರ್ಸ್ ಖಾಲಿ ಮಾಡ್ಕೊಂಡು ಖರೀದಿ ಮಾಡಬೇಕು. ಸುಮ್ಮನೇ ಎಕ್ಸೈಟ್ ಆಗಿ ಮನಸ್ಸಿಗೆ ಬಂದಷ್ಟು ಕೂಗೋದ್ರಲ್ಲಿ ಅರ್ಥವಿಲ್ಲ ಅನ್ನೋದು ಈಗ ಕ್ರಿಕೆಟ್ ಎಕ್ಸ್ಪರ್ಟ್ ಗಳ ವಾದವೂ ಆಗಿದೆ.
ಒಬ್ಬರಿಗೆ 27 ಕೋಟಿ ಕೊಟ್ಟರೆ ಉಳಿದವರು ಆಟಕ್ಕುಂಟು ಲೆಕ್ಕಕ್ಕಿಲ್ಲ!
ಯಾವಾಗ ಒಬ್ಬ ಆಟಗಾರನಿಗೆ 20+ ಕೋಟಿ ಕೊಡೋಕೆ ಫ್ರಾಂಚೈಸಿಗಳು ಮುಂದಾಗ್ತಾವೋ ಆತನಿಂದ ನಿರೀಕ್ಷೆಗಳು ಅಷ್ಟೇ ಹೆಚ್ಚಾಗಿರುತ್ವೆ. ಇಡೀ ತಂಡದ ಕೊಡುಗೆಯೇ ಒಂದುಕಡೆಯಾದ್ರೆ ಆ ದುಬಾರಿ ಪ್ಲೇಯರ್ ಹೇಗೆ ಪರ್ಫಾಮ್ ಮಾಡಿದ ಅನ್ನೋದು ಕೂಡ ಮ್ಯಾಟ್ರ್ ಆಗುತ್ತೆ. ಅಷ್ಟೇ ಅಲ್ಲ ಒಬ್ಬರ ಮೇಲೆಯೇ 25 ರಿಂದ 30 ಕೋಟಿ ಕೊಟ್ಟು, ಉಳಿದ ಜಾಗಕ್ಕೆ ಸಿಕ್ಕವರನ್ನು ತಗೊಂಡ್ರೆ ಆಗ ಗೆಲ್ಲೋದು ಸುಲಭವಲ್ಲ. ಯಾಕಂದ್ರೆ ಕ್ರಿಕೆಟ್ ನಾಟ್ ಎ ಇಂಡಿವಿಶ್ಯೂಯಲ್ ಗೇಮ್. ಇಟ್ಸ್ ಎ ಟೀಮ್ ಗೇಮ್. ತುಂಬಾ ಕಾಸ್ಟ್ಲಿನೂ ಅಲ್ಲ ಹಂಗಂತ ಲೋ ಬಜೆಟ್ ಬೇಡ ಅಂತಾ ಎಲ್ಲರಿಗೂ 6-8-10-12 ಕೋಟಿ ಕೊಟ್ಟು ಬ್ಯಾಲೆನ್ಸ್ಡ್ ಟೀಂ ಕಟ್ಟಿದ್ರೆ ತುಂಬಾ ಒಳ್ಳೇದು. ಬಹುಶಃ ಇದೇ ಲಾಜಿಕ್ನಲ್ಲೇ ಬೆಂಗಳೂರು ಫ್ರಾಂಚೈಸಿ ಬಿಡ್ಡಿಂಗ್ನಲ್ಲಿ ಸ್ಮಾರ್ಟ್ ಆಟ ಆಡಿದೆ.
ಕ್ಯಾಪ್ಟನ್ಸಿ ಖಾಲಿಯಿದ್ರೂ ಸ್ಟಾರ್ ಪ್ಲೇಯರ್ ಯಾಕೆ ಖರೀದಿಸಿಲ್ಲ?
2024ರ ಐಪಿಎಲ್ ಮುಗಿತಯುತ್ತಲೇ ಬೆಂಗಳೂರು ತಂಡ ಒಬ್ಬ ನಾಯಕನ ಹುಡುಕಾಟದಲ್ಲಿತ್ತು. ಸೋ ಈ ಸಲ ಹರಾಜಿನಲ್ಲಿ ಖರೀದಿ ಮಾಡೋದು ಫಿಕ್ಸ್ ಅಂತಾನೇ ಹೇಳಲಾಗಿತ್ತು. ಅದ್ರಲ್ಲೂ ಮೆಗಾ ಹರಾಜಿನಲ್ಲಿ ಕನ್ನಡಿಗ ಕೆಎಲ್ ರಾಹುಲ್ ಅವರನ್ನು ಕೊಂಡುಕೊಳ್ಳುತ್ತದೆ. ಕನ್ನಡಿಗನೇ ಕ್ಯಾಪ್ಟನ್ ಅಂತಾ ಫ್ಯಾನ್ಸ್ ಕೂಡ ಥ್ರಿಲ್ನಲ್ಲಿದ್ರು. ರಿಟೇನ್ ವೇಳೆ ಲಕ್ನೋ ಸೂಪರ್ ಜೈಂಟ್ಸ್ ತಂಡ ರಾಹುಲ್ ರನ್ನು ಕೈ ಬಿಡುತ್ತಿದ್ದಂತೆ ತವರಿನ ತಂಡಕ್ಕೆ ಕರೆತರುವಂತೆ ಅಭಿಮಾನಿಗಳ ಡಿಮ್ಯಾಂಡ್ ಕೂಡ ಜೋರಿತ್ತು. ಬಿಡ್ಡಿಂಗ್ ನಲ್ಲಿ ಆರ್‌ಸಿಬಿ ಸಹ ರಾಹುಲ್ ಮೇಲೆ ಹಣವನ್ನು ಹೂಡಿತು. ಆದರೆ ರಾಹುಲ್ ಅವರನ್ನು 10.75 ಕೋಟಿವರೆಗೆ ಮಾತ್ರ ಬಿಡ್ಡಿಂಗ್ ಮಾಡಿ ಕೈಬಿಟ್ಟಿತು. ಆ ಬಳಿಕ 14 ಕೋಟಿರೂಪಾಯಿಗೆ ದೆಹಲಿ ತಂಡ ಖರೀದಿ ಮಾಡಿತು. ಅಲ್ಲಿಗೆ ಬೆಂಗಳೂರು ತಂಡ ಒಬ್ಬರ ಮೇಲೆಯೇ ಫೋಕಸ್ ಮಾಡೋಕೆ ರೆಡಿ ಇರ್ಲಿಲ್ಲ ಅನ್ನೋದು ಇಲ್ಲಿ ಸ್ಪಷ್ಟವಾಗ್ತಿದೆ. ಹಾಗಂತ ರಾಹುಲ್ ಏನು ಕಳಪೆ ಆಟಗಾರ ಅಲ್ಲ. ಅವ್ರನ್ನ ಖರೀದಿ ಮಾಡಿದ್ರೆ ಹೆಚ್ಚೆಚ್ಚು ಲಾಭಗಳೂ ಇತ್ತು. ಕ್ಯಾಪ್ಟನ್ ಆಗಿ, ವಿಕೆಟ್ ಕೀಪರ್ ಆಗಿ, ಓಪನರ್ ಆಗಿ ಅಥವಾ ಮಿಡಲ್ ಆರ್ಡರ್ನಲ್ಲಿ ಹೀಗೆ ಯಾವ ಸ್ಲಾಟ್ನಲ್ಲಿ ಬೇಕಿದ್ರೂ ಬ್ಯಾಟಿಂಗ್ ಮಾಡೋ ಕೆಪಾಸಿಟಿ ಇತ್ತು.
ವಿರಾಟ್ ಕೊಹ್ಲಿಗೇ ಕ್ಯಾಪ್ಟನ್ಸಿ ಕಟ್ಟಲು ಫಿಕ್ಸ್ ಆಗಿತ್ತಾ ಫ್ರಾಂಚೈಸಿ?
ಯೆಸ್. ಬೆಂಗಳೂರು ಫ್ರಾಂಚೈಸಿ ಬಿಡ್ಡಿಂಗ್ ವೇಳೆ ಕ್ಯಾಪ್ಟನ್ ಕ್ವಾಲಿಟೀಸ್ ಇರುವಂಥ ಯಾವ ಪ್ಲೇಯರ್ಗೂ ಹೆಚ್ಚೆಚ್ಚು ಬಿಡ್ ಮಾಡೋಕೆ ಹೋಗ್ಲೇ ಇಲ್ಲ. ಕಡಿಮೆ ಮೊತ್ತಕ್ಕೆ ಸಿಕ್ಕರೆ ಸಿಗಲಿ ಅಂತಾ ಸ್ಟಾರ್ಟಿಂಗ್ನಲ್ಲಿ ರೈಸ್ ಮಾಡಿದ್ರೂ 10, 12 ಕೋಟಿ ಮೀರಿದ ಮೇಲೆ ಕೈ ಬಿಟ್ಟುಬಿಡ್ತಿತ್ತು. ಇದಕ್ಕೆ ಕಾರಣನೂ ಇತ್ತು. ಯಾಕಂದ್ರೆ ಆರ್‌ಸಿಬಿ ಐಪಿಎಲ್ ಮೆಗಾ ಹರಾಜಿಗೆ ಹೋಗುವ ಮುನ್ನವೇ ನಾಯಕನನ್ನು ಫಿಕ್ಸ್ ಮಾಡಿಕೊಂಡು ಹೋದಂತಿತ್ತು. ಹೀಗಾಗಿ ಸ್ಟಾರ್ ಪ್ಳೇಯರ್ಸ್ ಸೇರಿದಂತೆ ಕಳೆದ ಬಾರಿ ತಂಡವನ್ನು ಮುನ್ನಡೆಸಿದ್ದ ಫಾಫ್ ಡುಪ್ಲೇಸಿಸ್ ಅವರನ್ನು ಕೊಳ್ಳುವಲ್ಲಿ ಇಂಟರೆಸ್ಟ್ ತೋರಿಸಲಿಲ್ಲ. ಈ ಎಲ್ಲಾ ಬೆಳವಣಿಗೆಗಳ ಬಳಿಕ ಬೆಂಗಳೂರು ನಾಯಕತ್ವವನ್ನು ವಿರಾಟ್ ಕೊಹ್ಲಿ ಅವರಿಗೆ ಒಪ್ಪಿಸಿದಂತೆ ಕಾಣ್ತಿದೆ. ಅಥವಾ ತಂಡದಲ್ಲಿ ಇರುವ ಮತ್ತೊಬ್ಬ ಆಟಗಾರನಿಗೆ ನಾಯಕತ್ವದ ಪಟ್ಟವನ್ನು ನೀಡುವ ಲೆಕ್ಕಾಚಾರ ಹಾಕಿಕೊಂಡಂತಿದೆ. ಸೋ 18ನೇ ಸೀಸನ್ ಐಪಿಎಲ್ಗೆ ಆರ್ಸಿಬಿಯನ್ನ ಯಾರು ಲೀಡ್ ಮಾಡ್ತಾರೆ ಅನ್ನೋ ಬಗ್ಗೆ ಕ್ಲೀಯರ್ ಪಿಶ್ಚರ್ ಟೀಮ್ ಮ್ಯಾನೇಜ್ಮೆಂಟ್‌ಗೆ ಇದೆ. ಬಟ್ ಎಲ್ಲೂ ಅದನ್ನ ಬಹಿರಂಗಪಡಿಸಿಲ್ಲ ಅಷ್ಟೇ.
ಒಟ್ನಲ್ಲಿ ಆರ್ಸಿಬಿ ಟೀಮ್ನಲ್ಲಿ 8 ವಿದೇಶಿ ಪ್ಲೇಯರ್ಸ್ ಸೇರಿದಂತೆ 22 ಆಟಗಾರರಿದ್ದಾರೆ. ಅದ್ರಲ್ಲೂ ಈ ಸಲ ಹೆಚ್ಚೆಚ್ಚು ಬೌಲರ್ಸ್ನ ಪಿಕ್ ಮಾಡಿರೋದು ಪ್ಲಸ್ ಆಗಲಿದೆ ಅನ್ನೋ ಮಾತುಗಳೂ ಕೇಳಿ ಬರ್ತಿವೆ.