ಟಗರು ಪುಟ್ಟಿ WPLಗೂ ಇಲ್ಲ.. WCಗೂ ಇಲ್ಲ.. – ಕನ್ನಡ ಬಿಗ್ ಬಾಸ್ಗೆ ಶ್ರೇಯಾಂಕ ಸ್ಪರ್ಧಿ?
ಪಾಟೀಲ್ ಶೋಗೆ Okay.. ಕ್ರಿಕೆಟ್ ಕತೆ?

ಶ್ರೇಯಾಂಕ ಪಾಟೀಲ್.. ಆರ್ಸಿಬಿ ಅಭಿಮಾನಿಗಳ ಹಾಟ್ ಫೇವರೇಟ್ ಪ್ಲೇಯರ್.. ಕ್ರಿಕೆಟ್ ಲೋಕಕ್ಕೆ ಕಾಲಿಟ್ಟ ಕೆಲವೇ ಕೆಲವು ಟೈಮ್ನಲ್ಲಿ ಟಗರುಪುಟ್ಟಿ ಕ್ಲಿಕ್ ಆಗಿದ್ದಾರೆ.. ಬ್ಯಾಟಿಂಗ್.. ಫೀಲ್ಡಿಂಗ್.. ಬೌಲಿಂಗ್ ಈ ಮೂರರಲ್ಲೂ ಸಾಲಿಡ್ ಪರ್ಫಾಮೆನ್ಸ್ ಕೊಡ್ತಾ ಬಂದಿದ್ರು ಕನ್ನಡದ ಕುವರಿ.. ಆದ್ರೆ ಇತ್ತೀಚೆಗೆ ಶ್ರೇಯಾಂಕ ಮೈದಾನದಲ್ಲಿ ಕಾಣಿಸಿಕೊಳ್ತಿಲ್ಲ.. ಕಳೆದ ಸೀಸನ್ WPLನಲ್ಲೂ ಕಾಣಿಸಿಕೊಂಡಿಲ್ಲ.. ಮುಂಬರೋ ವಿಶ್ವಕಪ್ ತಂಡಕ್ಕೂ ಆಯ್ಕೆಯಾಗಿಲ್ಲ.. ಆದ್ರೆ ಸೋಶಿಯಲ್ ಮೀಡಿಯಾದಲ್ಲಿ ಮಾತ್ರ ಶ್ರೇಯಾಂಕ ಫುಲ್ ಆಕ್ಟಿವ್.. ಇದೀಗ ಅಭಿಮಾನಿಗಳಿಗೆ ಒಂದು ಚಿಂತೆ ಕಾಡ್ತಾನೆ ಇದೆ.. ಟಗರುಪುಟ್ಟಿ ಆನ್ಫೀಲ್ಡ್ ಗೆ ಎಂಟ್ರಿ ಕೊಡೋದು ಯಾವಾಗ ಅಂತ? ಆದ್ರೀಗ ಶ್ರೇಯಾಂಕ ಬಗ್ಗೆ ಮತ್ತೊಂದು ಟಾಕ್ ಕೂಡ ಶುರುವಾಗಿದೆ. ಬಿಗ್ ಬಾಸ್ ಮನೆಗೆ ಕನ್ನಡತಿ ಕಾಲಿಡಲಿದ್ದಾರಂತೆ.
ಇದನ್ನೂ ಓದಿ: ಮನೆಯಲ್ಲಿ ಮಲಗಿದ್ದ ಮಗುವನ್ನ ನೀರಿನ ಡ್ರಮ್ನಲ್ಲಿ ಮುಳುಗಿಸಿ ಕೊಂದ ಕೋತಿಗಳು!
ಶ್ರೇಯಾಂಕ ಪಾಟೀಲ್ ಆನ್ ದಿ ಫೀಲ್ಡ್.. ಆಫ್ ದಿ ಫೀಲ್ಡ್ ಸಖತ್ ಆಕ್ಟಿವ್.. ಟೀಮ್ ಇಂಡಿಯಾ ಹಾಗೂ ಆರ್ಸಿಬಿ ಪರ ಆಡಿ ಮೋಡಿ ಮಾಡಿರುವ ಶ್ರೇಯಾಂಕ ಕ್ರಿಕೆಟ್ ಅಭಿಮಾನಿಗಳ ಕ್ರಶ್ ಆಗಿದ್ದಾರೆ. ಅತೀ ಕಡಿಮೆ ಸಮಯದಲ್ಲೇ ಕ್ರಿಕೆಟ್ ಲೋಕದಲ್ಲಿ ಸದ್ದು ಮಾಡಿದ ಆಟಗಾರ್ತಿ ಎನಿಸಿಕೊಂಡಿದ್ದಾರೆ. ಆದ್ರೆ ಶ್ರೇಯಾಂಕ ಮೈದಾನದಲ್ಲಿ ಬ್ಯಾಟ್ ಬೀಸಿ ಒಂದು ವರ್ಷವೇ ಆಗ್ತಾ ಬಂತು.. ಈ ವರ್ಷದ WPL ನಲ್ಲೂ ಆಟವಾಡಿಲ್ಲ.. ಮುಂಬರೋ ವಿಶ್ವಕಪ್ ಟೂರ್ನಿಗೂ ಆಯ್ಕೆಯಾಗಿಲ್ಲ. ಇಂಜುರಿ ಕಾರಣದಿಂದಾಗಿ ಟೀಮ್ ನಲ್ಲಿ ಅವಕಾಶ ಸಿಕ್ಕಿಲ್ಲ. 2024ರ ಅಕ್ಟೋಬರ್ನಲ್ಲಿ ಮಹಿಳಾ ಏಷ್ಯಾ ಕಪ್ ಪಂದ್ಯದ ವೇಳೆ ಶ್ರೇಯಾಂಕ ಇಂಜುರಿಗೆ ಒಳಗಾಗಿದ್ರು. ಅದಾದ ಬಳಿಕ ಯಾವುದೇ ಟೂರ್ನಿಯಲ್ಲಿ ಕಾಣಿಸಿಕೊಂಡಿಲ್ಲ.. ಸಿಕ್ಕ ಟೈಮ್ ನಲ್ಲಿ ಟಗರು ಪುಟ್ಟಿ ಈಗ ಎಂಜಾಯ್ ಮಾಡ್ತಿದ್ದಾರೆ. ಡಾನ್ಸ್, ಹಾಡು, ರೀಲ್ಸ್, ಸುತ್ತಾಟ ಅಂತಾ ಫುಲ್ ಎಂಜಾಯ್ ಮಾಡ್ತಿದ್ದಾರೆ. ಇದ್ರ ಜೊತೆಗೆ ಶ್ರೇಯಾಂಕ ಮರ್ಸಿಡಿಸ್ ಬೆಂಜ್ನಂತಾ ಟಾಪ್ ಬ್ರ್ಯಾಂಡ್ ಜೊತೆಗೆ ಟೈ ಅಪ್ ಆಗಿದ್ದಾರೆ.. ಹೀಗಾಗಿ ಶ್ರೇಯಾಂಕ, ಶೂಟ್ನಲ್ಲೂ ಭಾಗಿಯಾಗ್ತಿದ್ದಾರೆ.. ಇವೆಲ್ಲದ್ರ ಮಧ್ಯೆ ಶ್ರೇಯಾಂಕ ಪಾಟೀಲ್ ಹೊಸ ವಿಚಾರ ಸದ್ದು ಮಾಡ್ತಿದೆ.. ಕನ್ನಡತಿ ಬಿಗ್ ಬಾಸ್ ಮನೆಗೂ ಕಾಲಿಡ್ತಿದ್ದಾರೆ ಎಂಬ ಮಾತು ಕೇಳಿಬಂದಿದೆ.
ಹೌದು.. ಶ್ರೇಯಾಂಕ ಪಾಟೀಲ್ ಸದ್ಯ ಯಾವ ಟೂರ್ನಿಯಲ್ಲೂ ಆಡ್ತಿಲ್ಲ.. ಬೆಂಗಳೂರಿನ ಎನ್ಸಿಎನಲ್ಲಿ ರಿಹ್ಯಾಬ್ಗೆ ಒಳಗಾಗಿದ್ದಾರೆ. ಇದ್ರ ಜೊತೆಗೆ ನೆಟ್ಸ್ನಲ್ಲಿ ಅಭ್ಯಾಸವನ್ನೂ ನಡೆಸ್ತಾ ಇದ್ದಾರೆ. ಈ ಮೂಲಕ ಆಟವನ್ನ ಇಂಪ್ರೂವ್ ಮಾಡಿಕೊಳ್ಳೋಕೆ ಶ್ರಮವಹಿಸ್ತಿದ್ದಾರೆ. ಇದೀಗ ಶ್ರೇಯಾಂಕ ಪಾಟೀಲ್ ಬಿಗ್ ಬಾಸ್ ಕನ್ನಡ ಸೀಸನ್ 12 ಕ್ಕೆ ಸ್ಪರ್ಧಿಯಾಗಿ ಬರಲಿದ್ದಾರೆ ಅನ್ನೋ ಸುದ್ದಿ ಸದ್ದು ಮಾಡ್ತಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬಿಸಿ ಬಿಸಿ ಚರ್ಚೆ ನಡಿತಾ ಇದೆ. ಆದ್ರೆ ಈ ಬಗ್ಗೆ ಶ್ರೇಯಾಂಕ ಆಗ್ಲೀ, ಬಿಗ್ ಬಾಸ್ ಟೀಮ್ ಆಗ್ಲೀ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಒಂದ್ವೇಳೆ.. ಕನ್ನಡತಿ ದೊಡ್ಮನೆಗೆ ಬಂದ್ರೂ ಸ್ಪರ್ಧಿಯಾಗಿ ಬರ್ಲಿಕ್ಕಿಲ್ಲ.. ಗ್ರ್ಯಾಂಡ್ ಓಪನಿಂಗ್ ದಿನ ಗೆಸ್ಟ್ ಆಗಿ ಬರ್ಬೋದು.. ಅಥವಾ ಒಂದೆರಡು ಸಂಚಿಕೆಗಳಿಗೆ ಅವರನ್ನ ಕರೆಸಿಕೊಳ್ಬೋದು ಅಷ್ಟೇ.. ಈ ಬಗ್ಗೆ ಮುಂದಿನ ದಿನಗಳಲ್ಲಿ ಅಪ್ಡೇಟ್ ಸಿಗುತ್ತಾ ಅಂತಾ ಕಾದುನೋಡ್ಬೇಕು.. ಆದ್ರೆ ಶ್ರೇಯಾಂಕ ಅಭಿಮಾನಿಗಳು ಮಾತ್ರ ಕನ್ನಡತಿ ಆದಷ್ಟು ಬೇಗ ಫುಲ್ ಫಿಟ್ ಆಗಿ. ಫೀಲ್ಡ್ಗೆ ಕಮ್ಬ್ಯಾಕ್ ಮಾಡಲಿ ಅಂತಾ ಬಯಸ್ತಿದ್ದಾರೆ.

ನೋಡಿರಿ

