RCBಗೆ 18ನೇ ಸೀಸನ್ ಸ್ಪೆಷಲ್ – ಸಾಲ್ಟ್ TO ಟಿಮ್.. ಹೇಗಿದೆ ಟೀಂ?

ಪ್ರತೀ ಬಾರಿ ಐಪಿಎಲ್ ಟೂರ್ನಿ ಆರಂಭಕ್ಕೂ ಮುನ್ನ ಈ ಸಲ ಕಪ್ ನಮ್ದೇ ಅನ್ನೋ ಚಾಂಟಿಂಗ್ ಜೋರಾಗಿ ಇರ್ತಿತ್ತು. ಹಾಗೇ ಆರಂಭದಲ್ಲಿ ಒಂದೆರಡು ಮ್ಯಾಚ್ ಮುಗಿದು ಆರ್ಸಿಬಿ ಸೋತಾಗ ಈ ಮ್ಯಾಚ್ ದೇವ್ರಿಗೆ, ಈ ಮ್ಯಾಚ್ ಫ್ಯಾನ್ಸ್ಗೆ ಅಂತಾ ತಮ್ಮನ್ನ ತಾವೇ ಸಮಾಧಾನ ಮಾಡಿಕೊಳ್ತಿದ್ರು. ಬಟ್ ಈ ಸಲ ಹಂಗಲ್ಲ. ಬ್ಯಾಕ್ ಟು ಬ್ಯಾಕ್ ಧಮಾಕಾ. ಕೆಕೆಆರ್ ವಿರುದ್ಧದ ಗೆಲುವನ್ನ ಸಂಭ್ರಮಿಸ್ತಿರೋ ಹೊತ್ತಲ್ಲೇ ಸಿಎಸ್ಕೆ ವಿರುದ್ಧ ಬೆಂಗಳೂರು ಹುಡುಗ್ರು ಗೆದ್ದು ಬೀಗಿದ್ದಾರೆ. ಆಡಿರೋ ಎರಡು ಮ್ಯಾಚ್ ಗಳಲ್ಲೇ ಕಪ್ ಕೊಡಿಸೋ ಭರವಸೆ ಮೂಡಿಸಿದ್ದಾರೆ. ಹಳೇ ಸೋಲಿನ ಲೆಕ್ಕಗಳನ್ನೆಲ್ಲಾ ಚುಕ್ತಾ ಮಾಡ್ತಿದ್ದಾರೆ. ಈ ಸೀಸನ್ ಬೆಂಗಳೂರು ಪಾಲಿಗೆ ತುಂಬಾನೇ ವಿಶೇಷ ಅನ್ನಿಸ್ತಿದೆ. ಅದಕ್ಕೆ ಕಾರಣಗಳೂ ಇವೆ.
ಇದನ್ನೂ ಓದಿ : ಮುಂಬೈ ಇಂಡಿಯನ್ಸ್ ಹಾಗೂ ಗುಜರಾತ್ ಟೈಟಾನ್ಸ್ ಮುಖಾಮುಖಿ – ಮೊದಲ ಗೆಲುವಿಗಾಗಿ ಪಾಂಡ್ಯ, ಗಿಲ್ ಕಾದಾಟ
2025ರ ಐಪಿಎಲ್ನ ಉದ್ಘಾಟನಾ ಪಂದ್ಯದಲ್ಲಿ ರಜತ್ ಪಾಟೀದಾರ್ ಬಳಗ ಇನ್ನೂ 22 ಎಸೆತಗಳಿರುವಾಗಲೇ ಹಾಲಿ ಚಾಂಪಿಯನ್ ವಿರುದ್ಧ 7 ವಿಕೆಟ್ ಗಳಿಂದ ಗೆದ್ದು ಬೀಗಿತ್ತು. ಈ ಗೆಲುವಿನ ಮೂಲಕ ಆರ್ಸಿಬಿ 18 ವರ್ಷಗಳ ಹಿಂದಿನ ಸೋಲಿನ ಸೇಡು ತೀರಿಸಿಕೊಂಡಿತ್ತು. 2008ರ ಉದ್ಘಾಟನಾ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಬೆಂಗಳೂರು ಟೀಂ ಸೋಲು ಅನುಭವಿಸಿತ್ತು. ಇದೀಗ 18 ವರ್ಷಗಳ ಬಳಿಕ ತಿರುಗೇಟು ನೀಡಿದೆ. ಹಾಗೇ ಕಳೆದ ಎರಡು ವರ್ಷಗಳಿಂದ ಕೆಕೆಆರ್ ವಿರುದ್ಧ ಆರ್ಸಿಬಿ ಗೆದ್ದೇ ಇರಲಿಲ್ಲ. ಆಡಿದ ನಾಲ್ಕೂ ಪಂದ್ಯಗಳಲ್ಲೂ ಸೋಲು ಕಂಡಿತ್ತು. ಆದ್ರೆ ಈ ವರ್ಷ ಮೊದಲ ಪಂದ್ಯದಲ್ಲೇ ಚಾಂಪಿಯನ್ ತಂಡವನ್ನ ಅವ್ರದ್ದೇ ನೆಲದಲ್ಲಿ ಬಗ್ಗು ಬಡಿದಿದೆ.
ಇನ್ನು ಶುಕ್ರವಾರ ರಾತ್ರಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೂ ಅಂಥದ್ದೇ ಏಟು ಕೊಟ್ಟಿದೆ. ಚೆಪಾಕ್ನಲ್ಲಿ ನಾವೇ ಕಿಂಗ್ ಅಂತಾ ಮೆರೀತಿದ್ದ ಸಿಎಸ್ಕೆ ಫ್ಯಾನ್ಸ್ ಮತ್ತು ಪ್ಲೇಯರ್ಸ್ ನ ಬೆಂಡೆತ್ತಿದ್ದಾರೆ. ಬರೋಬ್ಬರಿ 6155 ದಿನಗಳ ನಂತರ ಚೆನ್ನೈನಲ್ಲಿ ಗೆದ್ದು ತಮ್ಮ ಪವರ್ ತೋರಿಸಿದ್ದಾರೆ. ಬರೋಬ್ಬರಿ 17 ವರ್ಷಗಳಿಂದ ಅಂದರೆ 6155 ದಿನಗಳಿಂದ ಸಿಎಸ್ಕೆ ತಂಡವನ್ನು ಅವರ ತವರು ನೆಲದಲ್ಲಿ ಸೋಲಿಸಲು ಹೆಣಗಾಡುತ್ತಿದ್ದ ಆರ್ಸಿಬಿ, ಈ ಪಂದ್ಯದಲ್ಲಿ ಏಕಪಕ್ಷೀಯವಾಗಿ ಗೆದ್ದಿದೆ. ಈ ಮೂಲಕ ತಮ್ಮ ಬಹು ವರ್ಷಗಳ ಬರವನ್ನು ನೀಗಿಸಿಕೊಂಡಿದ್ದಾರೆ.. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಆರ್ಸಿಬಿ 196 ರನ್ ಕಲೆಹಾಕಿದರೆ, ಈ ಗುರಿ ಬೆನ್ನಟ್ಟಿದ ಸಿಎಸ್ಕೆ, 146 ರನ್ ಗಳಿಸಲಷ್ಟೇ ಸಾಧ್ಯವಾಯ್ತು. ಈ ಮೂಲಕ 50 ರನ್ಗಳ ಅಂತರದಲ್ಲಿ ಬೆಂಗಳೂರು ಟೀಂ ಗೆಲುವು ದಾಖಲಿಸಿತು. ಇನ್ನು 17 ವರ್ಷಗಳ ಇತಿಹಾಸದಲ್ಲಿ ಬೆಂಗಳೂರು ಟೀಂ ಚೆನ್ನೈ ವಿರುದ್ಧ ಬ್ಯಾಕ್ ಟು ಬ್ಯಾಕ್ ಎರಡು ಪಂದ್ಯಗಳನ್ನ ಗೆದ್ದಿದ್ದ ಇತಿಹಾಸವೇ ಇರಲಿಲ್ಲ. ಬಟ್ ಈ ಸಲ ಅದನ್ನೂ ಸಾಧಿಸಿದೆ.
2025ರ ಸೀಸನ್ ನಲ್ಲಿ ಬೆಂಗಳೂರು ಟೀಂ ಇಷ್ಟೊಂದು ಪವರ್ ಫುಲ್ ಆಗಿ ಕಾಣ್ತಿರೋದಕ್ಕೆ ಕಾರಣವೇ ತಂಡದಲ್ಲಿರೋ ಟಾಪ್ ಕ್ವಾಲಿಟಿ ಪ್ಲೇಯರ್ಸ್. ಮೊದ್ಲೆಲ್ಲಾ ಟಾಪ್ 5 ಆರ್ಡರ್ ಬ್ಯಾಟರ್ಸ್ ಔಟಾದ್ರೆ ಆ ನಂತ್ರ ಸ್ಕೋರೇ ಬರ್ತಾ ಇರ್ಲಿಲ್ಲ. ದಿನೇಶ್ ಕಾರ್ತಿಕ್ ಬಿಟ್ರೆ ಉಳಿದವ್ರೆಲ್ಲಾ ಲೆಕ್ಕಕ್ಕೇ ಇರ್ತಾ ಇರ್ಲಿಲ್ಲ. ಬಟ್ ಈ ಸಲ ಒಬ್ರಿಗಿಂತ ಒಬ್ರು ಸೂಪರ್ ಆಗಿದ್ದಾರೆ. ಟಾಪ್ 8ವರೆಗೂ ಬ್ಯಾಟಿಂಗ್ ಆರ್ಡರ್ ಸಾಲಿಡ್ ಆಗಿದೆ. ಫಿಲ್ ಸಾಲ್ಟ್ರಿಂದ ಹಿಡಿದು ಟಿಮ್ ಡೇವಿಡ್ ವರೆಗೂ ಎಲ್ರೂ ಪವರ್ ಹಿಟ್ಟರ್ಗಳೇ. ಸೋ ಒಬ್ರು ಹೋದ್ರೂ ಇನ್ನೊಬ್ರು ಬಂದು ಅದನ್ನ ಪ್ಯಾಚ್ ಅಪ್ ಮಾಡ್ತಾರೆ. ಫಸ್ಟ್ ಮ್ಯಾಚಲ್ಲಿ ನಿರಾಸೆ ಮೂಡಿಸಿದ್ದ ದೇವದತ್ ಪಡಿಕ್ಕಲ್ ಎರಡನೇ ಮ್ಯಾಚಲ್ಲಿ ಭರವಸೆ ಮೂಡಿಸಿದ್ದಾರೆ. ಕೊಹ್ಲಿ, ರಜತ್, ಜಿತೇಶ್, ಲಿಯಾಮ್ ಸಾಲಿಡ್ ಫಾರ್ಮ್ನಲ್ಲಿದ್ದಾರೆ. ಸೋ ಬ್ಯಾಟಿಂಗ್ ಬಗ್ಗೆಯಂತೂ ಪ್ರಶ್ನೆ ಮಾಡಂಗೇ ಇಲ್ಲ. ಅದಕ್ಕಿಂತ ಹೆಚ್ಚಾಗಿ ಬೌಲಿಂಗ್ ಎಕ್ಸ್ಟ್ರಾರ್ಡಿನರಿ ಅಂದ್ರೂ ತಪ್ಪಿಲ್ಲ. ಮೊದ್ಲೆಲ್ಲಾ ಓಪನಿಂಗ್, ಡೆತ್ ಓವರ್ ಯಾರಿಂದ ಹಾಕ್ಸೋದು ಅನ್ನೋದೇ ಗೊತ್ತಾಗ್ತಿರಲಿಲ್ಲ. ಬಟ್ ಈ ಸಲ ಭುವನೇಶ್ವರ್ ಕುಮಾರ್, ಜೋಶ್ ಹ್ಯಾಜಲ್ವುಡ್ ಬೆಸ್ಟ್ ಪಿಕ್ ಎನಿಸಿಕೊಳ್ತಿದ್ದಾರೆ. ಕೃನಾಲ್ ಪಾಂಡ್ಯ ಕೂಡ ಗೇಮ್ ಚೇಂಜಿಂಗ್ ಪರ್ಫಾಮೆನ್ಸ್ ಕೊಡ್ತಿದ್ದಾರೆ. ಎರಡೂ ಪಂದ್ಯಗಳ ಪರ್ಫಾಮೆನ್ಸ್ ನೋಡಿದ್ರೆ ಗೊತ್ತಾಗ್ತಿದೆ ನಮ್ಮ ಬೌಲಿಂಗ್ ಸ್ಕ್ವಾಡ್ ಕೂಡ ಎಷ್ಟು ಸ್ಟ್ರಾಂಗ್ ಅನ್ನೋದು.