155 ರನ್‌ಗೆ ಗುಜರಾತ್ ಕಟ್ಟಿಹಾಕಿದ ಆರ್‌ಸಿಬಿ – ವಾಷಿಂಗ್ಟನ್ ಸುಂದರ್ ಅರ್ಧಶತಕ

155 ರನ್‌ಗೆ ಗುಜರಾತ್ ಕಟ್ಟಿಹಾಕಿದ ಆರ್‌ಸಿಬಿ – ವಾಷಿಂಗ್ಟನ್ ಸುಂದರ್ ಅರ್ಧಶತಕ

ಆರ್‌ಸಿಬಿ ಮತ್ತು ಜಿಟಿ ನಡುವೆ ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡ 155 ರನ್ ಗಳಿಸಿದೆ.

ಇದನ್ನೂ ಓದಿ:ಆರ್‌ಸಿಬಿ ಬೌಲಿಂಗ್ ದಾಳಿಗೆ ಗುಜರಾತ್ ಪೆವಿಲಿಯನ್ ಪರೇಡ್ – 6ನೇ ವಿಕೆಟ್ ಕಳೆದುಕೊಂಡ ಜಿಟಿಗೆ ಕಷ್ಟ ಕಷ್ಟ

ಗುಜರಾತ್ ಟೈಟಾನ್ಸ್ ಪರ ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ ಅರ್ಧಶತಕ ಭಾರಿಸಿದರು. ಇನ್ನುಳಿದಂತೆ ಜೇಸಾನ್ ಹೋಲ್ಡರ್ 5 ಬಾಲ್‌ಗೆ 8 ರನ್ ಗಳಿಸಿ ಔಟಾದರು. ಜೊತೆಗೆ ಕೊನೇ ಓವರ್‌ನಲ್ಲಿ ರಶೀದ್ ಖಾನ್ ಔಟಾದರು. ರಶೀದ್ ಖಾನ್ 3 ಬಾಲ್‌ಗೆ 7 ರನ್ ಗಳಿಸಿ ಔಟಾದರು.

ಆರ್​​ಸಿಬಿ ಪರ ಯುವ ವೇಗಿ ರಸಿಖ್ ದಾರ್ ಸಲಾಮ್ ಗುಜರಾತ್ ತಂಡವನ್ನು ಕಟ್ಟಿ ಹಾಕುವಲ್ಲಿ ಪ್ರಮುಖ ಪಾತ್ರವಹಿಸಿದರು. ಕೊನೆಯ 20ನೇ ಓವರ್​​ನಲ್ಲಿ ರಶೀದ್ ಖಾನ್ ಅವರನ್ನು ರಸಿಖ್ ದಾರ್ ಔಟ್ ಮಾಡಿದರು. ಈ ಮೂಲಕ ರಸಿಖ್ ದಾರ್ ಮೂರು ಕಬಳಿಸಿ ಮಿಂಚಿದ್ದಾರೆ. ಭುವನೇಶ್ವರ್ ಕುಮಾರ್ 2 ವಿಕೆಟ್ ಪಡೆದರು. ಹೇಜಲ್‌ವುಡ್ ಕೂಡಾ 2 ವಿಕೆಟ್ ಪಡೆದರು. ಕೃನಾಲ್ ಪಾಂಡ್ಯ 1 ವಿಕೆಟ್ ಪಡೆದರು.

Sulekha

Leave a Reply

Your email address will not be published. Required fields are marked *