ಗೆಲುವಿನ ನಾಗಲೋಟ ಮುಂದುವರಿಸಿದ ಆರ್ಸಿಬಿ! – ಸತತ 5 ಪಂದ್ಯದಲ್ಲಿ ಗೆದ್ದು ಪ್ಲೇ ಆಫ್ ಪ್ರವೇಶಿಸಿದ ಬೆಂಗಳೂರು!

WPLನಲ್ಲಿ ಆರ್ಸಿಬಿ ಗೆಲುವಿನ ನಾಗಲೋಟ ಮುಂದುವರಿಸಿದೆ. ನಿನ್ನೆ ಆರ್ಸಿಬಿ ಹಾಗೂ ಗುಜರಾತ್ ಜೈಂಟ್ಸ್ ನಡುವೆ ನಡೆದ ಪಂದ್ಯದಲ್ಲೂ ಭರ್ಜರಿ ಜಯ ಸಾಧಿಸಿದೆ. ಗುಜರಾತ್ ಜೈಂಟ್ಸ್ ವಿರುದ್ಧ 61 ರನ್ಗಳ ಜಯ ಸಾಧಿಸಿ ಪ್ಲೇ ಆಫ್ ಪ್ರವೇಶಿಸಿದೆ.
ಇದನ್ನೂ ಓದಿ: ಪಡಿತರ ಫಲಾನುಭವಿಗಳಿಗೆ ಸರ್ಕಾರದಿಂದ ಗುಡ್ನ್ಯೂಸ್! – ಈ ನಂಬರ್ ಹೇಳಿದ್ರೆ ಇನ್ಮುಂದೆ ಪಡಿತರ ಸಿಗುತ್ತೆ!
ಟಾಸ್ ಸೋತು ಮೊದಲು ಬ್ಯಾಟ್ ಬೀಸಿದ ಆರ್ಸಿಬಿ 9 ರನ್ಗಳಿಸುವಷ್ಟರಲ್ಲೇ 2 ವಿಕೆಟ್ ಕಳೆದುಕೊಂಡಿತ್ತು. ನಂತರ ಸ್ಮೃತಿ ಮಂಧಾನ ಮತ್ತು ಗೌತಮಿ ನಾಯ್ಕ್ ಮೂರನೇ ವಿಕೆಟಿಗೆ 45 ಎಸೆತಗಳಲ್ಲಿ 60 ರನ್ ಜೊತೆಯಾಟವಾಡಿ ಸ್ವಲ್ಪ ಚೇತರಿಕೆ ನೀಡಿದರು. ಸ್ಮೃತಿ ಮಂಧಾನ 26 ರನ್ಗಳಿಸಿ(23 ಎಸೆತ, 4 ಬೌಂಡರಿ) ಹೊಡೆದು ಔಟಾದರೆ ನಂತರ ಗೌತಮಿ ನಾಯ್ಕ್ ಮತ್ತು ರಿಚಾ ಘೋಷ್ 45 ಎಸೆತಗಳಲ್ಲಿ 69 ಜೊತೆಯಾಟವಾಡಿದರು.
ಸ್ಫೋಟಕ ಬ್ಯಾಟ್ ಬೀಸಿದ ಗೌತಮಿ 73 ರನ್(55 ಎಸೆತ, 7 ಬೌಂಡರಿ, 1 ಸಿಕ್ಸ್) ರಿಚಾ ಘೋಷ್ 27 ರನ್(20 ಎಸೆತ, 3 ಸಿಕ್ಸ್) ಕೊನೆಯಲ್ಲಿ ರಾಧಾ ಯಾದವ್ 17 ರನ್(8 ಎಸೆತ, 2 ಬೌಂಡರಿ, 1 ಸಿಕ್ಸ್), ಶ್ರೇಯಾಂಕ ಪಾಟೀಲ್ 8 ರನ್(2 ಎಸೆತ, 2 ಬೌಂಡರಿ) ಹೊಡೆದರು. ಗುಜರಾತ್ ಇತರೇ ರೂಪದಲ್ಲೇ 21 ರನ್ಗಳನ್ನು ಬಿಟ್ಟುಕೊಟ್ಟಿತ್ತು.
ಗೆಲ್ಲಲು 179 ರನ್ಗಳ ಕಠಿಣ ಗುರಿಯನ್ನು ಪಡೆದ ಗುಜರಾತ್ 5 ರನ್ ಗಳಿಸುವಷ್ಟಲ್ಲೇ ಪ್ರಮುಖ 3 ವಿಕೆಟ್ ಕಳೆದುಕೊಂಡಿತ್ತು. ಸಯಾಲಿ ಸತ್ಘರೆ ತಮ್ಮ ಮೊದಲ ಓವರ್ನಲ್ಲೇ ಎರಡು ವಿಕೆಟ್ ಕಿತ್ತು ಶಾಕ್ ನೀಡಿದರು. ಅನುಷ್ಕಾ ಶರ್ಮಾ ಅವರು 18 ರನ್ಗಳಿಸಿ ಔಟಾದರೆ ನಾಯಕಿ ಆಶ್ಲೀ ಗಾರ್ಡ್ನರ್ 54 ರನ್ (43 ಎಸೆತ, 5 ಬೌಂಡರಿ, 1 ಸಿಕ್ಸ್) ಹೊಡೆದು ಸ್ವಲ್ಪ ಪ್ರತಿರೋಧ ತೋರಿದರು. ಗುಜರಾತ್ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 117 ರನ್ಗಳಿಸಿ ಸೋಲನ್ನು ಒಪ್ಪಿಕೊಂಡಿತು. ಸತತ 5 ಪಂದ್ಯಗಳನ್ನು ಜಯಿಸಿದ ಆರ್ಸಿಬಿ ಅಂಕಪಟ್ಟಿಯಲ್ಲಿ 10 ಅಂಕ ಸಂಪಾದಿಸಿ ಮೊದಲ ಸ್ಥಾನದಲ್ಲೇ ಮುಂದುವರಿದಿದೆ. ಈ ಮೂಲಕ ಪ್ಲೇ ಆಫ್ ಪ್ರವೇಶಿಸಿದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ನೋಡಿರಿ

