ಮೊದಲ ಪಂದ್ಯ ದೇವ್ರಿಗೆ ಬಿಟ್ಟಿದಾಯ್ತು, ಈಗ ಎರಡನೇ ಪಂದ್ಯ ಹೇಗಿರುತ್ತೆ? – ಪಂಜಾಬ್ ಕಿಂಗ್ಸ್ ವಿರುದ್ಧ RCB ಸೆಕೆಂಡ್ ಮ್ಯಾಚ್

ಮೊದಲ ಪಂದ್ಯ ದೇವ್ರಿಗೆ ಬಿಟ್ಟಿದಾಯ್ತು, ಈಗ ಎರಡನೇ ಪಂದ್ಯ ಹೇಗಿರುತ್ತೆ? – ಪಂಜಾಬ್ ಕಿಂಗ್ಸ್ ವಿರುದ್ಧ RCB ಸೆಕೆಂಡ್ ಮ್ಯಾಚ್

ಆರ್‌ಸಿಬಿ ಆ ಒಬ್ಬ ಬೌಲರ್‌ನನ್ನು ಹೊರಗಿಟ್ಟು ಎರಡನೇ ಪಂದ್ಯದಲ್ಲಿ ಕಣಕ್ಕಿಳಿಯುವ ಸಾಧ್ಯತೆ ಜಾಸ್ತಿಯಿದೆ.. ಯಾಕಂದ್ರೆ ಬೌಲಿಂಗ್‌ನಲ್ಲಿ ಬದಲಾವಣೆ ಮಾಡಿಕೊಳ್ಳದಿದ್ದರೆ ಆರ್‌ಸಿಬಿ ಗೆಲುವು ಅಷ್ಟು ಸುಲಭವಿಲ್ಲ.. ಹಾಗಿದ್ದರೂ ಕಿಂಗ್‌ ಕೊಹ್ಲಿ ಏನಾದ್ರೂ ಸಿಡಿದ್ರೆ ಪಂಜಾಬ್‌ ಕಿಂಗ್ಸ್‌ ಧೂಳೀಪಟ ಆಗೋದ್ರಲ್ಲಿ ಅಭಿಮಾನಿಗಳಿಗೆ ಯಾವುದೇ ಅನುಮಾನವಿಲ್ಲ.. KGF ತ್ರಿಮೂರ್ತಿಗಳ ಮೇಲೆಯೇ ಈಗ ಅಭಿಮಾನಿಗಳು ಕಣ್ಣಿಟ್ಟಿದ್ದಾರೆ.. ಈ ಮೂವರ ಆಟದ ಮೇಲೆಯೇ ಆರ್‌ಸಿಬಿ ಭವಿಷ್ಯ ನಿಂತಿದೆ..  ಮೊದಲ ಪಂದ್ಯ ದೇವ್ರಿಗೆ ಬಿಟ್ಟಿರೋ ಆರ್‌ಸಿಬಿ ಸೆಕೆಂಡ್ ಮ್ಯಾಚ್‌ಗೆ ರೆಡಿಯಾಗಿದೆ. ಆರ್‌ಸಿಬಿ ಸೆಕೆಂಡ್ ಮ್ಯಾಚ್ ಇರೋದು ತವರಿನಲ್ಲಿ. ಬೆಂಗಳೂರಿನ ಚಿನ್ನಸ್ವಾಮಿ ಗ್ರೌಂಡ್‌ನಲ್ಲಿ ಆರ್‌ಸಿಬಿ ಪಂಜಾಬ್ ಕಿಂಗ್ಸ್ ವಿರುದ್ಧ ಕಣಕ್ಕಿಳಿಯುತ್ತಿದೆ. ಮೊದಲ ಪಂದ್ಯ ಗೆದ್ದಿರುವ ಜೋಶ್‌ನಲ್ಲಿ ಪಂಜಾಬ್ ಟೀಮ್ ಬೆಂಗಳೂರಿಗೆ ಬಂದಿಳಿದಿದೆ. ಮೊದಲ ಪಂದ್ಯದ ಫೆಲ್ಯೂರ್‌ನ ಕರೆಕ್ಟ್ ಮಾಡಿಕೊಂಡ್ರೆ ಆರ್‌ಸಿಬಿಗೆ ಪಂಜಾಬ್ ಕಿಂಗ್ಸ್ ಎದುರಿಸೋದು ಈಸಿಯಾಗ್ಬಹುದು.

ಇದನ್ನೂ ಓದಿ: ಹೊಸ ಅಧ್ಯಾಯ.. ಹಳೆ ಸಂಪ್ರದಾಯ – ಮೊದಲ ಪಂದ್ಯ ದೇವರಿಗೆ ಸಮರ್ಪಣೆ – ನಮ್ಮ RCB ಎಡವಿದ್ದೆಲ್ಲಿ?

ಚೆಪಾಕ್‌ನಲ್ಲಿ ಆರ್‌ಸಿಬಿ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡಲ್ಲೂ ವಿಫಲವಾಗಿತ್ತು. ಆಡಿದ ಮೊದಲ ಪಂದ್ಯದಲ್ಲೇ ಆರ್‌ಸಿಬಿಯ ವೀಕ್‌ನೆಸ್ ಜಗಜ್ಜಾಹೀರಾಗಿದೆ. ತಂಡಕ್ಕೆ ಬ್ಯಾಟಿಂಗ್ ಮಾತ್ರವೇ ದೊಡ್ಡ ಶಕ್ತಿ.. ಆದ್ರೆ ಬೌಲಿಂಗ್ ವಿಭಾಗದಲ್ಲಿ ಮಾತ್ರ ಯಾವ ಮೊನಚೂ ಕಾಣ್ತಿಲ್ಲ… ಬೌಲಿಂಗ್ ವಿಭಾಗದಲ್ಲಿ ಚೇಂಜಸ್ ಮಾಡಲೇಬೇಕಿದೆ. ಆದರೆ ಅದಕ್ಕೆ ಬೇಕಾದ ಬ್ಯಾಕ್‌ಅಪ್‌ ಕೂಡ ಆರ್‌ಸಿಬಿ ಮ್ಯಾನೇಜ್‌ಮೆಂಟ್‌ ಖರೀದಿ ಮಾಡದೇ ಇರುವುದೇ ತಂಡಕ್ಕೆ ಇರುವ ದೊಡ್ಡ ಡ್ರಾಬ್ಯಾಕ್‌.. ಸಿಎಸ್​ಕೆ ವಿರುದ್ಧದ ಪಂದ್ಯದಲ್ಲಿ ಬೌಲರ್ಗಳಲ್ಲಿ ಆಕ್ರಮಣಕಾರಿ ಆಟ ಕಾಣಿಸಿರಲಿಲ್ಲ. ಈಗ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಾದರೂ ಬೌಲರ್ಸ್ ಎನರ್ಜಿಯಿಂದ ಎಂಟ್ರಿಕೊಡ್ತಾರಾ ಎಂದು ನೋಡಬೇಕಿದೆ. ಬೌಲಿಂಗ್ ಜೊತೆಗೆ ಬ್ಯಾಟಿಂಗ್ನಲ್ಲೂ ಆರ್ಸಿಬಿ ಬ್ಯಾಟರ್‌ಗಳು ಫಾರ್ಮ್ ಕಂಡುಕೊಳ್ಳಬೇಕಾಗಿದೆ. ಆರಂಭಿಕರಾಗಿ ಕ್ಯಾಪ್ಟನ್‌ ಫಾಫ್ ಡುಪ್ಲೆಸಿಸ್ ಅಬ್ಬರಿಸಿದ್ದನ್ನು ಬಿಟ್ಟರೆ ಉಳಿದಂತೆ ತಂಡದ ಅಗ್ರ ಕ್ರಮಾಂಕ ಸಿಎಸ್‌ಕೆ ವಿರುದ್ಧದ ಮಹತ್ವದ ಪಂದ್ಯದಲ್ಲಿ ಸಪ್ಪೆ ಪ್ರದರ್ಶನ ನೀಡಿತ್ತು. ವಿರಾಟ್ ಕೊಹ್ಲಿ ಸೇರಿದಂತೆ ರಜತ್ ಪಟಿದಾರ್, ಗ್ಲೆನ್ ಮ್ಯಾಕ್ಸ್‌ವೆಲ್, ಕ್ಯಾಮರೂನ್ ಗ್ರೀನ್ ತಮ್ಮ ತಾಕತ್ತಿಗೆ ತಕ್ಕಂತಹ ಪ್ರದರ್ಶನ ನೀಡಿರಲಿಲ್ಲ. ಇದು ತಂಡವನ್ನು ಆರಂಭದಲ್ಲೇ ಸಂಕಷ್ಟಕ್ಕೆ ದೂಡಿತ್ತು. ಆದರೆ ಕೆಳಕ್ರಮಾಂಕದಲ್ಲಿ ಜೊತೆಯಾದ ದಿನೇಶ್ ಕಾರ್ತಿಕ್ ಮತ್ತು ಅನುಜ್ ರಾವತ್ ಜಾಣತನದಿಂದ ಆಟವಾಡಿದ್ದರಿಂದ ತಂಡದ ಸ್ಕೋರ್ 170ರ ಗಡಿ ದಾಟಿತ್ತು. ಆದರೆ ಕೆಳ ಕ್ರಮಾಂಕದ ಮೇಲೆ ಪ್ರತಿ ಬಾರಿಯೂ ಮೊದಲು ಬ್ಯಾಟಿಂಗ್‌ ಮಾಡಿದಾಗ ಅವಲಂಬಿತರಾದರೆ ತಂಡಕ್ಕೆ ಗೆಲ್ಲುವುದು ಸಾಧ್ಯವಿಲ್ಲ. ಹೀಗಾಗಿ ಆರ್‌ಸಿಬಿಯ ತ್ರಿಮೂರ್ತಿಗಳಾದ ಕಿಂಗ್‌ ಕೊಹ್ಲಿ, ನಾಯಕ ಫಾಫ್ ಡು ಪ್ಲೆಸಿಸ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ದೊಡ್ಡ ಇನ್ನಿಂಗ್ಸ್ ಆಡಲೇಬೇಕಿದೆ..

ನಿಮಗೆ ಗೊತ್ತಿರೋ ಹಾಗೆ ಆರ್ಸಿಬಿಯಲ್ಲಿ ಎಫೆಕ್ಟಿವ್ ಸ್ಪಿನ್ನರ್‌ಗಳ ಕೊರತೆಯಿದೆ..  ಅನುಭವಿ ಬೌಲರ್‌ ಕರ್ನ್‌ ಶರ್ಮಾ ಮೇಲೆ ಜವಾಬ್ದಾರಿ ಹೆಚ್ಚಿದೆ.. ಅವರಿಗೆ ಮಯಾಂಕ್‌ ದಾಗರ್‌ ಜೊತೆಗೆ ಮ್ಯಾಕ್ಸ್‌ ವೆಲ್‌ ಸಾತ್‌ ಕೊಡಬೇಕಿದೆ.. ಆಗ ಬೌಲಿಂಗ್‌ನಲ್ಲಿ ವೇರಿಯೇಷನ್‌ ಸಿಗಬಹುದು.. ಬೆಂಗಳೂರಿನ ಟ್ರ್ಯಾಕ್‌ ಬ್ಯಾಟಿಂಗ್‌ಗೆ ಹೆಚ್ಚು ನೆರವಾಗುವುದರಿಂದ ಸ್ಪಿನ್ನರ್‌ಗಳನ್ನು ಸರಿಯಾಗಿ ಬಳಸಿಕೊಳ್ಳುವುದು ನಾಯಕ ಡುಪ್ಲೆಸಿಸ್‌ಗೆ ಇರುವ ದೊಡ್ಡ ಚಾಲೆಂಜ್‌.. ಯಾಕಂದ್ರೆ ಫಸ್ಟ್ ಮ್ಯಾಚ್‌ನಲ್ಲಿ ಸೋತ ಆರ್‌ಸಿಬಿ ಬಗ್ಗೆ ಭಾರತದ ಮಾಜಿ ನಾಯಕ ಸುನಿಲ್ ಗವಾಸ್ಕರ್ ಕೆಲವೊಂದು ಟಿಪ್ಸ್ ಕೊಟ್ಟಿದ್ದಾರೆ. ಆರ್‌ಸಿಬಿ ಬೌಲರ್ ಗಳು ಹೆಚ್ಚಾಗಿ ಶಾರ್ಟ್ ಬಾಲ್ ಹಾಕ್ತಾರೆ ಇದು ರಾಂಗ್ ಡಿಸಿಶನ್ ಎಂದಿದ್ದಾರೆ ಸುನಿಲ್ ಗವಾಸ್ಕರ್. ಶಾರ್ಟ್ ಬಾಲ್ ಅನ್ನು ಎಲ್ಲಾ ರೀತಿಯಿಂದಲೂ ಪ್ರಯತ್ನಿಸಿ, ಆದರೆ ಅದು ಕೆಲಸ ಮಾಡದಿದ್ದಾಗ, ಬೇರೆ ಏನಾದರೂ ಮಾಡಬೇಕಲ್ಲವೇ ಎಂದು ಪ್ರಶ್ನಿಸಿದ್ದಾರೆ. ಅದರಲ್ಲೂ ಚೆನ್ನೈ ವಿರುದ್ಧ ಮಯಾಂಕ್ ದಾಗರ್ 2 ಓವರ್ ಗಳಲ್ಲಿ 6 ನೀಡಿದ್ದರೂ ಅವರಿಂದ ಮತ್ತೊಂದು ಓವರ್ ಹಾಕಿಸದೇ ಇದ್ದ ಕ್ಯಾಪ್ಟನ್‌ ನಿರ್ಧಾರಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬ್ಯಾಟಿಂಗ್‌ನಲ್ಲಿ ಇಬ್ಬರೂ ಎಡಗೈ ಬ್ಯಾಟ್ಸ್‌ಮನ್‌ ಇದ್ದರು ಎನ್ನುವ ಏಕೈಕ ಕಾರಣಕ್ಕೆ ಎಡಗೈ ಸ್ಪಿನ್ನರ್ ಹತ್ತಿರ ಬೌಲಿಂಗ್ ಮಾಡಿಸದೇ ಇರುವುದು ತಪ್ಪು, ಯಾವುದಕ್ಕೂ ಒಮ್ಮೆ ಪ್ರಯತ್ನಿಸಿ ನೋಡಬೇಕಿತ್ತು.. ಇದೇ ವೇಳೆ ವೇಗದ ಬೌಲ್‌ಗಳ ಬೌನ್ಸರ್ ನಿಖರವಾಗಿರಬೇಕು ಇಲ್ಲವಾದರೆ ವೈಡ್ ಆಗುತ್ತದೆ, ಜೊತೆಗೆ ಮತ್ತೊಮ್ಮೆ ಬೌಲ್ ಮಾಡಬೇಕಾಗುತ್ತದೆ. ಆರ್‌ಸಿಬಿ ಬೌಲರ್ ಗಳು ಹೆಚ್ಚಾಗಿ ಬೌನ್ಸರ್ ಹಾಕಲು ಹೋಗಿ ಎಡವಿದರು ಎಂದು ಹೇಳಿದ್ದಾರೆ. ಇನ್ನೊಂದೆಡೆ ಚೆನ್ನೈ ವಿರುದ್ಧ ಟಾಸ್ ಗೆದ್ದ ನಂತರ ಆರ್‌ಸಿಬಿ ಬೌಲಿಂಗ್ ಆಯ್ಕೆ ಮಾಡಿಕೊಳ್ಳಬಹುದಿತ್ತು ಎಂದು ಇಂಗ್ಲೆಂಡ್‌ನ ಮಾಜಿ ಬ್ಯಾಟ್ಸ್‌ಮನ್ ಕೆವಿನ್ ಪೀಟರ್ಸನ್ ಹೇಳಿದ್ದಾರೆ. ಫಾಫ್ ಡುಪ್ಲೆಸಿಸ್ ಜಾಗದಲ್ಲಿ ನಾನಿದ್ದರೆ ಚೇಸಿಂಗ್ ಮಾಡುತ್ತಿದ್ದೆ. ಚೆನ್ನೈ ಪಿಚ್ ಸ್ಪಿನ್ನರ್‌ಗಳಿಗೆ ಸಹಾಯಕವಾಗಿರಲಿಲ್ಲ, ಆರ್ ಸಿಬಿ ಚೇಸ್ ಮಾಡಬೇಕಿತ್ತು ಎಂದು ಹೇಳಿದ್ದಾರೆ. ಆದ್ರೆ ಅವೆಲ್ಲಾ ಈಗ ಮುಗಿದ ಅಧ್ಯಾಯ.. ಯಾಕಂದ್ರೆ ಹೊಸ ಪಂದ್ಯದಲ್ಲಿ ಹೊಸ ಎದುರಾಳಿ ಮತ್ತು ಹೊಸ ತಂತ್ರಗಾರಿಕೆ ಬೇಕಿರುತ್ತದೆ.. ಶಿಖರ್‌ ಧವನ್‌ ಪಡೆ ಆಲ್‌ರೆಡಿ ಒಂದು ಮ್ಯಾಚ್‌ ಗೆದ್ದಿರುವ ಹುಮ್ಮಸ್ಸಿನಲ್ಲಿದೆ.. ಡಿಸಿ ವಿರುದ್ಧದ ರನ್‌ ಚೇಸ್‌ನಲ್ಲಿ ಬಹಳ ಆರಾಮಾಗಿಯೇ ಪಂಜಾಬ್‌ ಗೆದ್ದಿತ್ತು.. ಧವನ್‌ ಸೇರಿದಂತೆ ಸ್ಯಾಮ್‌ ಕರ್ರನ್‌, ಲಿಯಾಮ್‌ ಲಿವಿಂಗ್‌ಸ್ಟೊನ್‌ ಭರ್ಜರಿಯಾಗಿಯೇ ಆಡಿದ್ದರು.. ಬಹುತೇಕ ಪಂಜಾಬ್‌ ಕಿಂಗ್ಸ್‌ ವಿನ್ನಿಂಗ್‌ ಕಾಂಬಿನೇಷನ್‌ ಬದಲಾಯಿಸೋದು ಅನುಮಾನವಿದೆ.. ಪಂಜಾಬ್‌ನವರು ಏನೇ ಬದಲಾವಣೆ ಮಾಡುವುದಿದ್ದರೂ ಇಂಪ್ಯಾಕ್ಟ್‌ ಪ್ಲೇಯರ್‌ ಆಯ್ಕೆ ವಿಚಾರದಲ್ಲಿ ಮಾತ್ರ ಬದಲಾವಣೆಯ ಅವಕಾಶ ಉಳಿಸಿಕೊಳ್ಳಬಹುದು.. ಆದರೆ ಆರ್‌ಸಿಬಿಯ ಸದ್ಯದ ಪರಿಸ್ಥಿತಿ ಹಾಗಿಲ್ಲ.. ಅದರಲ್ಲೂ ಬಹಳ ನಿರೀಕ್ಷೆ ಇಟ್ಟುಕೊಂಡು ಆರ್‌ಸಿಬಿ ಬಿಡ್‌ ಮಾಡಿ ಖರೀದಿಸಿದ್ದ ಆಲ್‌ಝರಿ ಜೋಸೆಫ್‌ 3.4 ಓವರ್‌ಗಳಲ್ಲಿ 38 ರನ್‌ ಹೊಡೆಸಿಕೊಂಡಿದ್ದರು.. ಅವರ ಜಾಗ ತುಂಬಲು ಲಾಕಿ ಫೆರ್ಗ್ಯುಸನ್‌ ( Lockie Ferguson) ಕಾಯುತ್ತಿದ್ದಾರೆ.. ಯಾಕಂದ್ರೆ ಜೋಸೆಫ್‌ಗಿಂತ ಹೆಚ್ಚು ಐಪಿಎಲ್‌ ಮ್ಯಾಚ್‌ ಆಡಿರುವ ಫೆರ್ಗ್ಯುಸನ್‌, ಹೆಚ್ಚು ವಿಕೆಟ್‌ ಕಬಳಿಸಿರುವ ದಾಖಲೆ ಹೊಂದಿದ್ದಾರೆ.. ಪಂಜಾಬ್‌ ಕಿಂಗ್ಸ್‌ ವಿರುದ್ಧ ಆರ್‌ಸಿಬಿ ಪ್ಲೇಯಿಂಗ್‌ 11 ಹೀಗಿರುವ ಸಾಧ್ಯತೆ ಹೆಚ್ಚಿದೆ..

RCB ಪ್ಲೇಯಿಂಗ್‌ -11

  • ಫಾಫ್‌ ಡು ಪ್ಲೆಸಿಸ್‌ (ನಾಯಕ)
  • ವಿರಾಟ್‌ ಕೊಹ್ಲಿ
  • ರಜತ್‌ ಪಟಿದಾರ್‌
  • ಗ್ಲೆನ್‌ ಮ್ಯಾಕ್ಸ್‌ ವೆಲ್‌
  • ಕ್ಯಾಮರೋನ್‌ ಗ್ರೀನ್‌
  • ದಿನೇಶ್‌ ಕಾರ್ತಿಕ್‌ (ಇಂಪ್ಯಾಕ್ಟ್‌)
  • ಅನುಜ್‌ ರಾವತ್‌ (ವಿ.ಕೀಪರ್‌)
  • ಕರ್ನ್‌ ಶರ್ಮಾ
  • ಲಾಕಿ ಫೆರ್ಗ್ಯುಸನ್‌
  • ಮಯಾಂಕ್‌ ದಾಗರ್‌
  • ಮೊಹಮದ್‌ ಸಿರಾಜ್‌
  • ಇಂಪ್ಯಾಕ್ಟ್‌ ಪ್ಲೇಯರ್‌- ಯಶ್‌ ದಯಾಳ್‌

 

– ಆರ್‌ ಸಿಬಿ ಪ್ಲೇಯಿಂಗ್‌ ಇಲೆವೆನ್‌ ನಲ್ಲಿ  ನಾಯಕ ಫಾಫ್‌ ಡು ಪ್ಲೆಸಿಸ್‌ ಹಾಗೂ ಕಿಂಗ್‌ ವಿರಾಟ್‌ ಕೊಹ್ಲಿ ಓಪನಿಂಗ್‌ ಮಾಡಲಿದ್ದಾರೆ.. ರಜತ್‌ ಪಟಿದಾರ್‌, ಗ್ಲೆನ್‌ ಮ್ಯಾಕ್ಸ್‌ ವೆಲ್‌, ಕ್ಯಾಮರೋನ್‌ ಗ್ರೀನ್‌ ಅಗ್ರ ಕ್ರಮಾಂಕದಲ್ಲಿದ್ದಾರೆ.. ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್‌ ಹೊಣೆಗಾರಿಕೆ ಇಂಪ್ಯಾಕ್ಟ್‌ ಪ್ಲೇಯರ್‌ಗಳಲ್ಲಿ ಒಬ್ಬರಾಗಲಿರುವ ದಿನೇಶ್‌ ಕಾರ್ತಿಕ್‌ ಹಾಗೂ ವಿಕೆಟ್‌ ಕೀಪರ್‌ ಅನುಜ್‌ ರಾವತ್‌ ಮೇಲಿರಲಿದೆ.. ಉಳಿದಂತೆ ಕರ್ನ್‌ ಶರ್ಮಾ. ಲಾಕಿ ಫೆರ್ಗ್ಯುಸನ್‌, ಮಯಾಂಕ್‌ ದಗರ್‌ ಮತ್ತು ಮೊಹಮದ್‌ ಸಿರಾಜ್‌ ಬೌಲಿಂಗ್‌ ಜವಾಬ್ದಾರಿ ಹೊರಲಿದ್ದಾರೆ.. ಬಹುತೇಕ ಇನ್ನೋರ್ವ ಬೌಲರ್‌ನಲ್ಲೇ ಇಂಪ್ಯಾಕ್ಟ್‌ ಪ್ಲೇಯರ್‌ ಆಗಿ ಆಯ್ಕೆ ಮಾಡುವುದಿದ್ದರೆ ಯಶ್‌ ದಯಾಳ್‌ಗೆ ಮತ್ತೊಂದು ಅವಕಾಶ ಸಿಗಬಹುದು..

ಇನ್ನು ಆರ್‌ಸಿಬಿ ಮತ್ತು ಪಂಜಾಬ್‌ ಕಿಂಗ್ಸ್‌ ನಡುವೆ ನಡೆದಿರುವ ಕಳೆದು ಐದು ಪಂದ್ಯಗಳಲ್ಲಿ ಮೂರು ಬಾರಿ ಪಂಜಾಬ್‌ ಕಿಂಗ್ಸ್‌ ಗೆದ್ದಿದ್ದರೆ, ಎರಡು ಬಾರಿ ಮಾತ್ರ ಆರ್‌ಸಿಬಿ ಗೆದ್ದುಕೊಂಡಿತ್ತು.. ಆದ್ರೆ ಪಂಜಾಬ್‌ ಕಿಂಗ್ಸ್‌ ಕೂಡ ಹೇಳಿಕೊಳ್ಳುವಂತಹ ಅದ್ಭುತ ತಂಡವೇನಲ್ಲ.. ಬ್ಯಾಟಿಂಗ್‌ ಬಲದ ವಿಚಾರಕ್ಕೆ ಬಂದ್ರೆ ಅದು ಆರ್‌ಸಿಬಿ ಸರಿತೂಗಲು ಸಾಧ್ಯವೇ ಇಲ್ಲ.. ಕೊಹ್ಲಿ ಒಮ್ಮೆ ಸಿಡಿದ್ರೆ ಸಾಕು ಅಷ್ಟೇ ಎನ್ನುವುದು ಕ್ರಿಕೆಟ್‌ ಅಭಿಮಾನಿಗಳಿಗೆ ಇರುವ ವಿಶ್ವಾಸ.. ಹಾಗಿದ್ದರೂ ಗೆಲುವಿನ ಟ್ರ್ಯಾಕ್‌ಗೆ ಮರಳಬೇಕಾದ ಒತ್ತಡದಲ್ಲಿ ಆರ್‌ಸಿಬಿ ಇದೆ..

Sulekha