LSG ಬೆಂಡೆತ್ತಿ RCB ಚರಿತ್ರೆ.. ಜಿತೇಶ್ ಜೋಶ್​ಗೆ ಮಂಕಾದ ಪಂತ್ – ಕೀಳು ಮಟ್ಟಕ್ಕಿಳಿದು ಕೆಟ್ಟ ದಿಗ್ವೇಶ್

LSG ಬೆಂಡೆತ್ತಿ RCB ಚರಿತ್ರೆ.. ಜಿತೇಶ್ ಜೋಶ್​ಗೆ ಮಂಕಾದ ಪಂತ್ – ಕೀಳು ಮಟ್ಟಕ್ಕಿಳಿದು ಕೆಟ್ಟ ದಿಗ್ವೇಶ್

ಚರಿತ್ರೆ ಬರೆದಾಯ್ತು.. ಟಾಪ್ 2 ಸೀಲ್ ಮಾಡಾಯ್ತು. ಪಂಜಾಬ್ ಕಿಂಗ್ಸ್ ವಿರುದ್ಧ ಕ್ವಾಲಿಫೈಯರ್ 1 ಆಡೋಕೆ ಆರ್​ಸಿಬಿ ಗ್ರ್ಯಾಂಡ್ ಆಗೇ ಎಂಟ್ರಿ ಕೊಟ್ಟಿದೆ. 9 ವರ್ಷಗಳ ಬಳಿಕ ಟಾಪ್-2ಗೆ ಲಗ್ಗೆ ಇಟ್ಟಿರೋ ಬೆಂಗಳೂರು ಟೀಂ ಲಕ್ನೋವನ್ನ ರಾಯಲ್ ಆಗೇ ಬಗ್ಗು ಬಡಿದಿದೆ. ಬಿಗ್ ಟಾರ್ಗೆಟ್ ಚೇಸ್ ಮಾಡೋದು ಈಸಿ ಇರ್ಲೇ ಇಲ್ಲ. ಬಟ್ ಆ ಕೆಲಸವನ್ನ ಆರ್​ಸಿಬಿ ಆಟಗಾರರು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಅದ್ರಲ್ಲೂ ಜಿತೇಶ್ ಶರ್ಮಾ ಬಗ್ಗೆ ಪರ್ಫಾಮೆನ್ಸ್ ಎಕ್ಸ್​ಟ್ರಾರ್ಡಿನರಿ. ಕೋಟ್ಯಂತರ ಕನ್ನಡಿಗರು ನಿದ್ದೆಗೆಡುವಂತೆ ಮಾಡಿದ ಆರ್​ಸಿಬಿ ವಿಕ್ಟರಿ ಬಗೆಗಿನ ರೋಚಕ ವಿಚಾರಗಳು ಹಾಗೇ ಈ ವಿಕ್ಟರಿ ಅದೆಂಥಾ ಎಫೆಕ್ಟ್ ಬೀರುತ್ತೆ? ಕಪ್ ನಮ್ದೇನಾ ಅನ್ನೋ ಕಾನ್ಫಿಡೆನ್ಸ್ ಬಂತಾ? ಈ ಬಗ್ಗೆ ಕಂಪ್ಲೀಟ್ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಆರ್‌ಸಿಬಿಗೆ ಭರ್ಜರಿ ಜಯ – ಕ್ವಾಲಿಫೈಯರ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಕಾದಾಟ

ಏಕನಾ ಸ್ಟೇಡಿಯಮ್​ನಲ್ಲಿ ನಡೆದ ಲಕ್ನೋ ವಿರುದ್ಧದ ಪಂದ್ಯದಲ್ಲಿ ಆರ್​ಸಿಬಿ ಪ್ಲೇಯಿಂಗ್ 11ನಲ್ಲಿ 3 ಬದಲಾವಣೆಗಳನ್ನ ಮಾಡ್ಕೊಂಡು ಫೀಲ್ಡಿಗಿಳಿದಿತ್ತು. ರಜತ್ ಪಾಟಿದಾರ್ ಇನ್ನೂ ಕಂಪ್ಲೀಟ್ ಆಗಿ ಫಿಟ್ ಆಗದ ಕಾರಣಕ್ಕೆ ಜಿತೇಶ್ ಶರ್ಮಾ ಟೀಂ ಲೀಡ್ ಮಾಡಿದ್ರು. ಹಾಗೇ ಟಿಮ್ ಡೇವಿಡ್ ಬದ್ಲಿಗೆ ಲಿಯಾಮ್ ಲಿವಿಂಗ್ ಸ್ಟೋನ್ ಮತ್ತು ಜೋಶ್ ಹೇಜಲ್​ವುಡ್ ಬದ್ಲಿಗೆ ನುವಾನ್ ತುಷಾರ ಪ್ಲೇಯಿಂಗ್ 11 ಸೇರಿದ್ರು. ಟಾಸ್ ಗೆದ್ದು ಫಸ್ಟ್ ಬೌಲಿಂಗ್​ಗೆ ಇಳಿದ ಆರ್​ಸಿಬಿ ಬೌಲಿಂಗ್​ನಲ್ಲಿ ಕಂಪ್ಲೀಟ್ ಕಾಸ್ಟ್ಲಿ ಆಗಿದ್ರು. ಹೀಗಾಗೇ ಲಕ್ನೋ ಬಿಗ್ ಸ್ಕೋರ್​​ ಕಲೆ ಹಾಕಿತ್ತು.. ಬಟ್ ನೀವೆಷ್ಟೇ ರನ್ಸ್ ಹೊಡೆದ್ರೂ ನಾವ್ ಫಾರ್ಮ್​ನಲ್ಲಿ ಇದ್ದೇವೆ ಅಂತಾ ತೋರಿಸಿದ್ದು ಆರ್​ಸಿಬಿ ಪ್ಲೇಯರ್ಸ್.

ದುಬಾರಿಯಾದ ಆರ್ ಸಿಬಿ ಬೌಲರ್ಸ್.. ತುಷಾರ್ ಬೆಸ್ಟ್!

ಌಕ್ಚುಲಿ ಜೋಶ್ ಹೇಜಲ್​ವುಡ್ ಆರ್​ಸಿಬಿಗೆ ಕಮ್ ಬ್ಯಾಕ್ ಮಾಡಿದ್ದು ನೋಡಿ ಲಕ್ನೋ ವಿರುದ್ಧದ ಪ್ಲೇಯಿಂಗ್ 11ನಲ್ಲಿ ಆಡ್ತಾರೆ ಅಂತಾನೇ ಪ್ರೆಡಿಕ್ಟ್ ಮಾಡ್ಲಾಗ್ತಿತ್ತು. ಬಟ್ ಹೇಜಲ್​ವುಡ್ ತಂಡದಲ್ಲೇ ಇರ್ಲಿಲ್ಲ. ಅದಕ್ಕೆ ಕಾರಣ ಆಸ್ಟ್ರೇಲಿಯಾ ಕ್ರಿಕೆಟ್ ತಂಡದಲ್ಲಿನ ರೂಲ್ಸ್. ಯಾವುದೇ ಬೌಲರ್ ಗಾಯದಿಂದ ರಿಕವರಿಗೂ ಮುನ್ನ ನೆಟ್​​ನಲ್ಲಿ 70ರಿಂದ 80 ಬಾಲ್​ಗಳನ್ನ ಎಸೆದಿರಬೇಕು. ಬಟ್ ಹೇಜಲ್​ವುಡ್ 30ರಿಂದ 40 ಎಸೆತಗಳಷ್ಟೇ ಎಸೆದಿದ್ರು. ಹೀಗಾಗಿ ಪ್ಲೇಆಫ್ಸ್ ಪಂದ್ಯಗಳಿಗೆ ಬರ್ತಾರೆ ಅಂತಾ ಜಿತೇಶ್ ಶರ್ಮಾ ಹೇಳಿದ್ರು. ಸೋ ಹೇಜಲ್​ವುಡ್ ಬದಲಿಗೆ ನುವಾನ್ ತುಷಾರ ಹಾಗೇ ಟಿಮ್ ಡೇವಿಡ್ ಬದ್ಲಿಗೆ ಲಿಯಾಮ್ ಲಿವಿಂಗ್ ಸ್ಟೋನ್​ ಕಮ್ ಬ್ಯಾಕ್ ಮಾಡಿದ್ರು. ಬಟ್ ಹೈದ್ರಾಬಾದ್ ವಿರುದ್ಧದ ಪಂದ್ಯದಂತೆಯೇ ಈ ಮ್ಯಾಚ್​ನಲ್ಲೂ ಆರ್​ಸಿಬಿ ಬೌಲರ್ ಸಿಕ್ಕಾಪಟ್ಟೆ ರನ್ಸ್ ಕೊಟ್ರು. ನುವಾನ್ ತುಷಾರ 4 ಓವರ್​ನಲ್ಲಿ 26 ರನ್ ಕೊಟ್ಟು 1 ವಿಕೆಟ್ ಕೂಡ ಬೇಟೆಯಾಡಿದ್ರು. ಅದೂ ಕೂಡ 6.50 ಎಕಾನಮಿಯಲ್ಲಿ. ಇನ್ನು ಕೃನಾಲ್ ಪಾಂಡ್ಯ 2 ಓವರ್​ಗಳಲ್ಲಿ 14 ರನ್ಸ್ ಬಿಟ್ಟುಕೊಟ್ರು. ಇವ್ರಿಬ್ರನ್ನ ಬಿಟ್ರೆ ಯಶ್ ದಯಾಳ್, ಭುವನೇಶ್ವರ್, ಸುಯಾಶ್ ಶರ್ಮಾ, ರೊಮ್ಯಾರಿಯೋ ಶೆಫೆರ್ಡ್ 11ಪ್ಲಸ್ ಎಕಾನಮಿಯಲ್ಲಿ ರನ್ಸ್ ಕೊಟ್ಟಿದ್ರು. ಇದೇ ಕಾರಣಕ್ಕೆ ಲಕ್ನೋ ತಂಡ 37 ಡಾಟ್ ಬಾಲ್ಸ್ ಆಡಿದ್ರೂ 14 ಸಿಕ್ಸ್, 17 ಫೋರ್ ಬಾರಿಸಿ ಬಿಗ್ ಟಾರ್ಗೆಟ್ ಮಾಡಿದ್ದು. 20 ಓವರ್​ಗಳಲ್ಲಿ 227 ರನ್ಸ್ ಬಾರಿಸಿದ್ರು.

13 ಪಂದ್ಯ 157 ರನ್ ಗಳಿಸಿದ್ದ ಪಂತ್ ಆರ್ ಸಿಬಿ ವಿರುದ್ಧ ಶತಕ!

ಲಕ್ನೋ ಪರ ರಿಷಭ್ ಪಂತ್ ಕಂಪ್ಲೀಟ್ ಒನ್ ಮ್ಯಾನ್ ಶೋ ಥರ ಪರ್ಫಾಮ್ ಮಾಡಿದ್ರು. ಕಳೆದ 13 ಮ್ಯಾಚ್​ಗಳಲ್ಲೂ ಔಟ್ ಆಫ್ ಫಾರ್ಮ್ ಇದ್ದ ಪಂತ್ ಆರ್​ಸಿಬಿ ವಿರುದ್ಧ ಪವರ್​ಫುಲ್ ಸೆಂಚುರಿ ಸಿಡಿಸಿದ್ರು. ಲಕ್ನೋ ಪರ ಮಿಚೆಲ್ ಮಾರ್ಚ್ ಮತ್ತು ಮ್ಯಾಥ್ಯೂ ಬ್ರೀಟ್ಜ್​ಕೆ ಇನ್ನಿಂಗ್ಸ್ ಆರಂಭಿಸಿದ್ರು. ಬಟ್ 12 ಎಸೆತಗಳಲ್ಲೇ ಬ್ರೀಟ್ಜ್​ಕೆ ವಿಕೆಟ್ ಒಪ್ಪಿಸಿದ್ರು. 3ನೇ ಸ್ಲಾಟ್​ನಲ್ಲಿ ಕಣಕ್ಕಿಳಿದ ಪಂತ್ ತಮ್ಮ ಒರಿಜಿನಲ್ ಕ್ರಿಕೆಟರ್​ನ ಹೊರತಂದ್ರು. ಅದೇನು ಲಾಸ್ಟ್ ಮ್ಯಾಚ್ ತನ್ನ ರಿಯಾಲಿಟಿ ಪ್ರೂವ್ ಮಾಡ್ಬೇಕು ಅಂತಾನೋ ಅಥವಾ ಟೆಸ್ಟ್ ಟೀಮ್​ವೆ ವೈಸ್ ಕ್ಯಾಪ್ಟನ್ ಆಗಿದ್ದಕ್ಕೆ ಸಾಲಿಡ್ ಇನ್ನಿಂಗ್ಸ್ ಮೂಲಕ  ಟೀಂ ಇಂಡಿಯಾಗೆ ಕಮ್ ಬ್ಯಾಕ್ ಮಾಡ್ಬೇಕು ಅಂತಾನೋ ಏನೋ 20ನೇ ಓವರ್​ವರೆಗೂ ಕ್ರಿಸ್​ನಲ್ಲೇ ಇದ್ದು ಬ್ಯಾಟ್ ಬೀಸಿದ್ರು. ಮಿಚೆಲ್ ಮಾರ್ಷ್ 67 ರನ್ ಬಾರಿಸಿದ್ರೆ ರಿಷಭ್ ಪಂತ್ 61 ಬಾಲ್​ಗಳಲ್ಲಿ 11 ಫೋರ್, 8 ಸಿಕ್ಸರ್ ಸಮೇತ 118 ರನ್ ಗಳಿಸಿ ನಾಟೌಟ್ ಆಗಿ ಉಳಿದ್ರು. ಅದ್ರಲ್ಲೂ ಸೆಂಚುರಿ ಕಂಪ್ಲೀಟ್ ಆದ್ಮೇಲೆ ಬ್ಯಾಟ್ ಹಾಗೇ ಗ್ಲೌಸ್ ಕಳಚಿಟ್ಟು ಪಿಚ್​​ನಲ್ಲಿ ಬ್ಯಾಕ್​ಫ್ಲಿಪ್​ ಹೊಡೆದು ಸೆಲೆಬ್ರೇಟ್ ಮಾಡಿದ್ರು. ಸೋ ಟೂರ್ನಿಯ ಕೊನೇ ಪಂದ್ಯದಲ್ಲಿ ಬಿಗ್ ಹಿಟ್ಟರ್ ಆಗಿದ್ದ ಪಂತ್ ಈ ಸ್ಕೋರ್​ನ ಡಿಫೆನ್ಸ್ ಮಾಡಿಕೊಳ್ಳೋ ಕಾನ್ಫಿಡೆನ್ಸ್​​ನಲ್ಲೇ ಇದ್ರು.

ಚೇಸಿಂಗ್ ಗಿಳಿದ ಆರ್ ಸಿಬಿಗೆ ಕೈಕೊಟ್ಟ ರಜತ್ & ಲಿವಿಂಗ್ ಸ್ಟೋನ್!

ಲಕ್ನೋ ನೀಡಿದ್ದ ಟಾರ್ಗೆಟ್ ಬೆನ್ನತ್ತೋದು ಆರ್​ಸಿಬಿಗೆ ಈಸಿ ಇರ್ಲಿಲ್ಲ. 228 ರನ್ಸ್ ಬಾರಿಸ್ಬೇಕಿತ್ತು. ಬಿಗ್ ಸ್ಕೋರ್ ಚೇಸಿಂಗ್​ಗೆ ಇಳಿದ ಆರ್​ಸಿಬಿ ಪರ ಫಿಲ್ ಸಾಲ್ಟ್ ಮತ್ತು ವಿರಾಟ್ ಕೊಹ್ಲಿ ಇನ್ನಿಂಗ್ಸ್ ಆರಂಭಿಸಿದ್ರು. ಅದ್ರಲ್ಲೂ ಫಸ್ಟ್ ಬಾಲಲ್ಲೇ ಫಿಲ್ ಸಾಲ್ಟ್ ಫೋರ್ ಬಾರಿಸಿದ್ದು ಕಾನ್ಫಿಡೆನ್ಸ್ ಜಾಸ್ತಿ ಮಾಡಿತ್ತು. ಇದೇ ಮೊಮೆಂಟಮ್​ನಲ್ಲೇ 3ನೇ ಓವರ್ ಮುಕ್ತಾಯದ ವೇಳೆಗೆಲ್ಲಾ 50 ರನ್ಸ್ ಕೂಡ ಕಂಪ್ಲೀಟ್ ಮಾಡಿದ್ರು. ಬಟ್ 30 ರನ್ ಗಳಿಸಿದ್ದ ಸಾಲ್ಟ್ ಆಕಾಶ್ ಸಿಂಗ್​ಗೆ ಕ್ಯಾಚ್ ಕೊಟ್ರು. 3ನೇ ಸ್ಲಾಟ್​ನಲ್ಲಿ ಇಂಪ್ಯಾಕ್ಟ್ ಪ್ಲೇಯರ್ ಆಗಿ ಕ್ರೀಸ್​ಗೆ ಬಂದ ರಜತ್ ಪಾಟಿದಾರ್ ಮೇಲೆ ಸಾಕಷ್ಟು ಹೋಪ್ಸ್ ಇತ್ತು. ಬಟ್ ಈ ಮ್ಯಾಚಲ್ಲೂ ಮತ್ತದೇ ಫೇಲ್ಯೂರ್. 7 ಬಾಲಲ್ಲಿ 1 ಸಿಕ್ಸ್, ಫೋರ್ ಸೇರಿ 14 ರನ್ ಹೊಡ್ದು ಔಟಾದ್ರು. ಇನ್ನು ಆ ಲಿಯಾಮ್ ಲಿವಿಂಗ್​ಸ್ಟೋನ್​ನ ಯಾಕಾದ್ರೂ ಪ್ಲೇಯಿಂಗ್ 11ಗೆ ಇಳ್ಸಿದ್ರೋ. ಕಳೆದ 5 ಪಂದ್ಯಗಳಲ್ಲಿ ಡ್ರಾಪ್ ಮಾಡಿ ಈ ಮ್ಯಾಚಲ್ಲಾದ್ರೂ ಆಡಪ್ಪ ಅಂತಾ ಬಿಟ್ರೆ ಗೋಲ್ಡನ್ ಡಕ್ ಔಟ್. ಒಂದೇ ಓವರ್​ನಲ್ಲಿ ವಿಲ್ ಓರೂರ್ಕೆ ಅದೂ ಬ್ಯಾಕ್ ಟು ಬ್ಯಾಕ್ 2 ವಿಕೆಟ್ ಎತ್ತಿದ್ರು. ಆ ಬಳಿಕ ವಿರಾಟ್ ಕೊಹ್ಲಿಗೆ ಜೊತೆಯಾದ ಮಯಾಂಕ್ ಅಗರ್ವಾಲ್ ಕಾಂಬಿನೇಷನ್ ಚೆನ್ನಾಗೇ ವರ್ಕ್ ಆಗ್ತಾ ಇತ್ತು. ಮಯಾಂಕ್ ಅಂತೂ ಹ್ಯಾಟ್ರಿಕ್ ಫೋರ್ ಬಾರಿಸಿದ್ರು. ಬಟ್ ಅಷ್ಟ್ರಲ್ಲಿ ಹಾಫ್ ಸೆಂಚುರಿ ಸಿಡಿಸಿದ್ದ ಕೊಹ್ಲಿ ಕೂಡ ಔಟ್ ಆದ್ರು. ಇಲ್ಲಿಗೆ ಕಥೆ ಮುಗಿತು ಅಂತಾನೇ ಫ್ಯಾನ್ಸ್ ಟೆನ್ಷನ್ ಆಗಿದ್ರು.

123ಕ್ಕೆ 4 ವಿಕೆಟ್.. ಮ್ಯಾಚ್ ಗೆಲ್ಲಿಸಿದ್ದೇ ಮಯಾಂಕ್ & ಜಿತೇಶ್!

ನಿಜ. ಕೊಹ್ಲಿ ಔಟ್ ಆದಾಗ 123 ರನ್​ಗಳಿಗೆ ನಾಲ್ಕು ವಿಕೆಟ್ ಬಿದ್ದಾಗಿತ್ತು. ಗೇಮ್ ಇನ್ನೂ ಅರ್ಧ ಹಾಗೇ ಇತ್ತು. ಟಾಪ್ ಆರ್ಡರ್ ಬ್ಯಾಟರ್ಸ್ ಔಟ್ ಆದ್ಮೇಲೆ ನೆಕ್ಸ್​​ಟ್ ಬರೋರ ಮೇಲೆ ಅಷ್ಟು ಹೋಪ್ಸ್ ಇರಲ್ಲಿ. ಬಟ್ ಇಂಥಾ ಟೈಮಲ್ಲಿ ಆರ್​ಸಿಬಿ ಪಾಲಿಗೆ ರಿಯಲ್ ಹೀರೋಗಳಾಗಿ ಬಂದದ್ದೇ ಮಯಾಂಕ್ ಅಗರ್ವಾಲ್ ಮತ್ತು ಜಿತೇಶ್ ಶರ್ಮಾ. ಕೊಹ್ಲಿ ಔಟಾದ್ಮೇಲೆ ಕ್ರಿಸ್​ಗೆ ಬಂದ ಜಿತೇಶ್ ಫಿಯರ್​ಲೆಸ್ ಬ್ಯಾಟಿಂಗ್ ಆಡಿದ್ರು. ಒಂದೊಂದು ಬಾಲ್​ನಲ್ಲಿ ಫೋರ್, ಸಿಕ್ಸ್​​ನತ್ತಲೇ ಅಟ್ಟುತ್ತಾ ಇದ್ರು. ಮತ್ತೊಂದೆಡೆ ಮಯಾಂಕ್ ಅಗರ್ವಾಲ್ ಕೂಡ ಮ್ಯಾಚ್ ವಿನ್ನಿಂಗ್ ಪರ್ಫಾಮೆನ್ಸ್ ಕೊಡ್ತಿದ್ರು. ನೋಡ ನೋಡುತ್ತಲೇ ಇಬ್ಬರ ಪಾರ್ಟರ್​ಶಿಪ್ ಬಿಲ್ಡ್ ಆಗ್ತಾ ಹೋಯ್ತು. 23 ಬಾಲ್​ಗಳಲ್ಲಿ ಮಯಾಂಕ್ 41 ರನ್ ಗಳಿಸಿ ನಾಟೌಟ್ ಆದ್ರೆ ಕೇವಲ 33 ಎಸೆತಗಳಲ್ಲೇ 8 ಫೋರ್, 6 ಸಿಕ್ಸ್ ಬಾರಿಸಿ 85 ರನ್ ಚಚ್ಚಿದ ಜಿತೇಶ್ ಶರ್ಮಾ ಬೆಂಗಳೂರು ತಂಡಕ್ಕೆ ಅತ್ಯದ್ಭುತ ಗೆಲುವು ತಂದುಕೊಟ್ರು. ಕ್ಯಾಪ್ಟನ್ ಆಗಿ ಮ್ಯಾಚ್ ವಿನ್ ಮಾಡಿಸೋ ಜವಾಬ್ದಾರಿಯನ್ನೂ ಅವ್ರೇ ತಗೊಂಡ್ರು.

ಜಿತೇಶ್ ಔಟ್ ಮಾಡಲು ಕೀಳು ಮಟ್ಟಕ್ಕಿಳಿದ ರಾಥಿ!

ಈ ಮ್ಯಾಚಲ್ಲಿ ಎರಡು ಮಿರಾಕಲ್​ ಬಗ್ಗೆ ಹೇಳ್ಳೇಬೇಕು. 2 ಸಲ ಔಟ್ ಆಗಿಯೂ ನಾಟೌಟ್ ಆಗಿದ್ದು ಜಿತೇಶ್ ಶರ್ಮಾ. ಫಸ್ಟ್ ಒನ್ 49 ರನ್ ಬಾರಿಸಿದ್ದ ಜಿತೇಶ್ ಶರ್ಮಾ ದಿಗ್ವೇಶ್ ರಾಥಿ ಬೌಲಿಂಗ್​ನಲ್ಲಿ ಕ್ಯಾಚ್ ಔಟ್ ಆಗಿದ್ರು. 17ನೇ ಓವರ್​ನ ಮೊದಲ ಎಸೆತದಲ್ಲೇ ನೇರವಾಗಿ ಆಯುಷ್ ಬಡೋನಿಗೆ ರಿವರ್ಸ್-ಸ್ವಿಫ್ಟ್ ಮಾಡಿದರು. ಬಟ್ ಆ ಬೌಲಿಂಗ್​ನಲ್ಲಿ ರಾಥಿ ಬ್ಯಾಕ್-ಫೂಟ್ ನೋ ಬಾಲ್ ಮಾಡಿದ್ದಾರೆ ಅನ್ನೋದು ಗೊತ್ತಾಯ್ತು. ಸೋ ಫ್ರೀ ಹಿಟ್ ಸಿಕ್ತು. ನೆಕ್ಸ್​ಟ್ ಬಾಲ್​ನಲ್ಲೇ ಸಿಕ್ಸ್ ಬಾರಿಸಿದ ಜಿತೇಶ್ 55 ಬಾರಿಸಿ ಅರ್ಧಶತಕ ಕಂಪ್ಲೀಟ್ ಮಾಡಿದ್ರು.  ಇಷ್ಟಕ್ಕೆ ಸುಮ್ಮನಾಗದ ರಾಥಿ ಕೀಳುಮಟ್ಟಕ್ಕೆ ಇಳಿದಿದ್ರು. ಇದೇ ಓವರ್​ನಲ್ಲೇ ಜಿತೇಶ್​ರನ್ನ ಮಂಕಡ್ ರನೌಟ್ ಮಾಡುವ ಪ್ರಯತ್ನ ಮಾಡಿದ್ರು. ಅಪೀಲ್ ಕೂಡ ಮಾಡಿ ಥರ್ಡ್ ಅಂಪೈರ್‌ಗೆ ಹೋಗಿದ್ರು. ಬಟ್ ರಾಥಿ ನಾನ್-ಸ್ಟ್ರೈಕರ್‌ನ ಕ್ರೀಸ್ ಒಳಗೆ ಆಲ್ರೆಡಿ ಬಂದು ಆ ನಂತ್ರ ಬೇಲ್ಸ್ ಪ್ಲಿಪ್ ಮಾಡಿದ್ರು. ಹಾಗೇ ರನ್​ಔಟ್ ಅಪೀಲ್​ನ ರಿಷಭ್ ಪಂತ್ ಹಿಂತೆಗೆದುಕೊಂಡ್ರು. ಅಂದ್ರೆ ಪಂತ್ ಇಲ್ಲಿ ಫೇರ್ ಗೇಮ್ ಆಡಿದ್ದು ಎಲ್ರಿಗೂ ಇಷ್ಟ ಆಯ್ತು. ಇದೇ ಕಾರಣಕ್ಕೆ ಜಿತೇಶ್​ ಕೂಡ ತಬ್ಬಿಕೊಂಡ್ರು. ಅಂತಿಮವಾಗಿ ತಾವೇ ನಿಂತು ಆಡಿ ಜಿತೇಶ್ ಮ್ಯಾಚ್ ವಿನ್ನರ್ ಆದ್ರು. 18.4 ಓವರ್​ನಲ್ಲೇ ಆರ್​ಸಿಬಿ 230 ರನ್ ಕಲೆಹಾಕಿತು.

ಇನ್ನು ಕಿಂಗ್ ವಿರಾಟ್ ಕೊಹ್ಲಿ ಈ ಮ್ಯಾಚ್ ಮೂಲಕ ಐಪಿಎಲ್​ನಲ್ಲಿ 9 ಸಾವಿರ ರನ್ಸ್ ಕಂಪ್ಲೀಟ್ ಮಾಡಿದ್ರು. ಹಾಗೇ ಐಪಿಎಲ್​ನ ಅತೀ ಹೆಚ್ಚು ಅರ್ಧಶತಕಗಳೂ ಕೂಡ ಕೊಹ್ಲಿ ಹೆಸರಿನಲ್ಲೇ ಇದೆ. ಇದೀಗ ಲಕ್ನೋ ವಿರುದ್ಧವೂ ಮತ್ತೊಂದು ಹಾಫ್ ಸೆಂಚುರಿ ಬಂತು. ಇದು ಐಪಿಎಲ್​ನಲ್ಲಿ ಅವ್ರ 63ನೇ ಅರ್ಧಶತಕ. ಹಾಗೇ ಈ ಪಂದ್ಯ ಆರ್​ಸಿಬಿ ಪಾಲಿಗೂ ಗೋಲ್ಡನ್ ಮ್ಯಾಚ್. ಐಪಿಎಲ್ ಇತಿಹಾಸದಲ್ಲಿ ಆರ್​ಸಿಬಿ ಚೇಸ್ ಮಾಡಿದ ಹೈಸ್ಕೋರ್ ಇದು. ಹಾಗೇ ಐಪಿಎಲ್​ ಇತಿಹಾಸದಲ್ಲೇ ಮೂರನೇ ತಂಡ. ಒಟ್ನಲ್ಲಿ ಅತ್ಯದ್ಭುತ ಪ್ರದರ್ಶನದ ಮೂಲಕ ಗೆಲುವಿನ ಟ್ರ್ಯಾಕ್ ಗೆ ಬಂದಿರೋ ಆರ್​ಸಿಬಿ ಕ್ವಾಲಿಫೈಯರ್ 1ಗೆ ಸೆಲೆಕ್ಟ್ ಆಗಿದೆ. ಮೇ 29ಕ್ಕೆ ಕ್ವಾಲಿಫೈಯರ್ 1 ಪಂದ್ಯ ನಡೆಯಲಿದ್ದು ಈ ಮ್ಯಾಚಲ್ಲಿ ಪಂಜಾಬ್ ವಿರುದ್ಧ ಕಣಕ್ಕಿಳಿಯಲಿದೆ. ಈ ಮ್ಯಾಚ್ ಗೆದ್ರೆ ಸ್ಟ್ರೈಟ್ ಟು ಫಿನಾಲೆ. ಸೋ ನೆಕ್ಸ್​ಟ್ ಮ್ಯಾಚ್​ಗೆ ಈ ರಿಸಲ್ಟ್ ಬೂಸ್ಟ್ ಕೊಡೋದಂತೂ ಪಕ್ಕಾ.

Shwetha M

Leave a Reply

Your email address will not be published. Required fields are marked *