ಟ್ರೋಫಿ ಗೆದ್ದ RCB ದಾಖಲೆಗಳೆಷ್ಟು? –  CSK, MI, KKR ಬೇಟೆಯೇ ಚರಿತ್ರೆ
ಕಪ್ ನಮ್ದು.. ಮನೆ ಮನೆಯಲ್ಲೂ ಹಬ್ಬ   

ಟ್ರೋಫಿ ಗೆದ್ದ RCB ದಾಖಲೆಗಳೆಷ್ಟು? –  CSK, MI, KKR ಬೇಟೆಯೇ ಚರಿತ್ರೆಕಪ್ ನಮ್ದು.. ಮನೆ ಮನೆಯಲ್ಲೂ ಹಬ್ಬ   

6,255 ದಿನಗಳು.. 286 ಪಂದ್ಯಗಳು.. ಸುದೀರ್ಘ 18 ವರ್ಷಗಳು.. ಯಾವ ಕ್ಷಣಕ್ಕಾಗಿ ಇಡೀ ಕರುನಾಡೇ ಕಾಯ್ತಿತ್ತೋ, ಯಾವ ದಿನಕ್ಕಾಗಿ ಕ್ರಿಕೆಟ್ ಜಗತ್ತು ಎದುರು ನೋಡ್ತಿತ್ತೋ, ಅದ್ಯಾವ ಗಳಿಗೆಗಾಗಿ ಕಿಂಗ್ ವಿರಾಟ್ ಕೊಹ್ಲಿ ಹಂಬಲಿಸ್ತಿದ್ರೋ ಆ ಟ್ರೋಫಿ ಕೊನೆಗೂ ಬೆಂಗಳೂರು ಮಡಿಲು ಸೇರಿದೆ. 2008ರಲ್ಲಿ ಶುರುವಾದ ದಂಡಯಾತ್ರೆ 2025ರ ಆವೃತ್ತಿಗೆ ವಿಜಯಯಾತ್ರೆಯಾಗಿದೆ.

ಇದನ್ನೂ ಓದಿ ಕಪ್ ಗೆದ್ದು ಕೊಹ್ಲಿ ಕಣ್ಣೀರ ಅಭಿಷೇಕ.. ಸಾಲ್ಟ್ ಕ್ಯಾಚ್.. ಕೃನಾಲ್ ಹೀರೋ -18ರ ನಂಟು.. ಹೇಗಿತ್ತು RCB ಗೇಮ್?

ಜಗತ್ತಿನಾದ್ಯಂತ ಅಭಿಮಾನಿಗಳನ್ನ ಹೊಂದಿರೋ ಅತ್ಯಂತ ನಿಷ್ಠಾವಂತ ತಂಡ ಆರ್ಸಿಬಿಯ 18 ವರ್ಷಗಳ ಟ್ರೋಫಿ ಬರ ನೀಗಿದೆ. ಪ್ರತೀ ಸಲ ಕಪ್ ಗೆಲ್ಲದ ನೋವನ್ನ ಎದೆಯಲ್ಲೇ ಅಡಗಿಸಿಟ್ಟುಕೊಂಡಿದ್ದ ವಿರಾಟ್ ಕೊಹ್ಲಿ ಪಂದ್ಯ ಗೆಲ್ಲುತ್ತಿದ್ದಂತೆ ಅಷ್ಟೂ ವರ್ಷಗಳ ತಾಳ್ಮೆ ಕಣ್ಣೀರಾಗಿ ಹರಿದಿದೆ. ಈ ಗೆಲುವು ನಿಜಕ್ಕೂ ವಿರಾಟ್​ಗೆ ಸಲ್ಲಲೇಬೇಕು.  ಹಾಗೇ ಈ ಸಲ ಬೆಂಗಳೂರು ಟೀಂ ತುಂಬಾನೇ ಡಿಫ್ರೆಂಟ್ ಆಗಿದ್ದು ಪ್ರತೀ ಪಂದ್ಯದಲ್ಲೂ ಚರಿತ್ರೆ ಸೃಷ್ಟಿಸಿದೆ.

ಐಪಿಎಲ್ ರೆಕಾರ್ಡ್ ಜರ್ನಿ!

2019ರ ಬಳಿಕ ಈಡನ್ ಗಾರ್ಡನ್ಸ್ ನಲ್ಲಿ ಕೆಕೆಆರ್ ವಿರುದ್ಧ ಗೆಲುವು

2008ರ ನಂತರ ಚೆಪಾಕ್ ನಲ್ಲಿ ಚೆನ್ನೈ ವಿರುದ್ಧ ವಿಕ್ಟರಿ

2015ರ ಬಳಿಕ ವಾಂಖೆಡೆಯಲ್ಲಿ ಮುಂಬೈ ವಿರುದ್ಧ ಜಯಭೇರಿ

ಶೆಫರ್ಡ್ ಐಪಿಎಲ್ ನಲ್ಲಿ 2ನೇ ಅತೀ ವೇಗದ ಅರ್ಧ ಶತಕ

ಐಪಿಎಲ್ ನಲ್ಲಿ ಮೊದಲ ಬಾರಿ ಸಿಎಸ್ ಕೆ ವಿರುದ್ಧ 2 ಮ್ಯಾಚ್ ಗೆಲುವು

ವಿರಾಟ್ ಐಪಿಎಲ್ ನಲ್ಲಿ ಅತ್ಯಧಿಕ ಅರ್ಧಶತಕಗಳ ದಾಖಲೆ -63

ಐಪಿಎಲ್ ಇತಿಹಾಸದಲ್ಲೇ 3ನೇ ಅತ್ಯಧಿಕ ಮೊತ್ತದ ಚೇಸ್ -228 ರನ್ಸ್

ಆವೃತ್ತಿನ ಲೀಗ್ ಹಂತದಲ್ಲಿ ತವರಿನೇತರ ಎಲ್ಲಾ ಪಂದ್ಯ ಗೆದ್ದ ಆರ್ ಸಿಬಿ -7

ಪ್ರಸ್ತುತ ಆವೃತ್ತಿಯಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ 9 ವಿಭಿನ್ನ ಪ್ಲೇಯರ್ಸ್

ಆರ್ ಸಿಬಿ ಪರ 10 ವಿಭಿನ್ನ ಆಟಗಾರರಿಂದ ಅರ್ಧ ಶತಕಗಳ ದಾಖಲೆ

Shantha Kumari