RCB Vs DC ಫೈಟ್.. ಎರಡೂ ತಂಡಗಳೂ ಸ್ಟ್ರಾಂಗ್ – ಬೆಂಗಳೂರು ಮೈದಾನ ಯಾರಿಗೆ ಪ್ಲಸ್?

RCB Vs DC ಫೈಟ್.. ಎರಡೂ ತಂಡಗಳೂ ಸ್ಟ್ರಾಂಗ್ – ಬೆಂಗಳೂರು ಮೈದಾನ ಯಾರಿಗೆ ಪ್ಲಸ್?

18ನೇ ಸೀಸನ್​ ಆರ್​ಸಿಬಿ ತಂಡಕ್ಕೆ ತುಂಬಾನೇ ಸ್ಪೆಷಲ್ ಆಗಿದೆ. ಈಗಾಗ್ಲೇ ಆಡಿರುವ ನಾಲ್ಕು ಪಂದ್ಯಗಳ ಪೈಕಿ ಮೂರು ಪಂದ್ಯಗಳಲ್ಲಿ ಗೆಲವು ಕಂಡಿದೆ. ಪ್ರಸ್ತುತ 6 ಅಂಕಗಳೊಂದಿಗೆ ಪಾಯಿಂಟ್ಸ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಬಟ್ ತವರಿನಲ್ಲೇ ಗುಜರಾತ್ ವಿರುದ್ಧ ಸೋತಿದ್ದ ರೆಡ್ ಆರ್ಮಿ ಬಾಯ್ಸ್ ಹೋಂ ಗ್ರೌಂಡ್​ನಲ್ಲಿ ಫ್ಯಾನ್ಸ್​ಗೆ ಗೆಲುವಿನ ಖುಷಿ ಕೊಡ್ಬೇಕಿದೆ. ಮತ್ತೊಂದೆಡೆ ಕನ್ನಡಿಗ ಕೆಎಲ್ ರಾಹುಲ್ ಆಡ್ತಿರೋ ಡೆಲ್ಲಿ ಕ್ಯಾಪಿಟಲ್ಸ್ ಕೂಡ ಭರ್ಜರಿ ಫಾರ್ಮ್​ನಲ್ಲಿದ್ದು ಮೂರಕ್ಕೆ ಮೂರೂ ಪಂದ್ಯಗಳನ್ನೂ ಗೆದ್ದಿದೆ. ಪಾಯಿಂಟ್ಸ್ ಟೇಬಲ್​ನಲ್ಲಿ ಸೆಕೆಂಡ್ ಪ್ಲೇಸ್​ನಲ್ಲಿದ್ದು ಟಫ್ ಫೈಟ್ ಕೊಡೋಕೆ ರೆಡಿಯಾಗಿದೆ.

ಇದನ್ನೂ ಓದಿ : ರಾಜಸ್ಥಾನ್ ರಾಯಲ್ಸ್ ವಿರುದ್ಧ ಗುಜರಾತ್​ಗೆ ಗೆಲುವು – ಪಾಯಿಂಟ್ಸ್​ ಪಟ್ಟಿಯಲ್ಲಿ No.1ಸ್ಥಾನ ಪಡೆದ GT

ಮುಂಬೈ ಇಂಡಿಯನ್ಸ್ ವಿರುದ್ಧ ಅದ್ಭುತ ಗೆಲುವಿನೊಂದಿಗೆ ಮರಳಿರೋ ಬೆಂಗಳೂರು ಟೀಂ, ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಬ್ಯಾಲೆನ್ಸ್​ಡ್ ಆಗಿದ್ದಾರೆ. ಎಲ್ಲಾ ಆಟಗಾರರು ತಂಡಕ್ಕೆ ತಮ್ಮದೇ ಆದ ಕೊಡುಗೆ ನೀಡುತ್ತಿದ್ದಾರೆ. ಹೀಗಾಗಿ ಪ್ಲೇಯಿಂಗ್ 11ನಲ್ಲಿ ಬದಲಾವಣೆ ಮಾಡೋ ಸಾಧ್ಯತೆ ಕಡಿಮೆ. ಬಟ್ ಗುಜರಾತ್ ವಿರುದ್ಧ ಬೆಂಗಳೂರಲ್ಲಿ ಸೋತಿದ್ದರಿಂದ ಸಣ್ಣ ಬದಲಾವಣೆ ಮಾಡಿಕೊಂಡರೂ ಅಚ್ಚರಿ ಇಲ್ಲ. ವೇಗಿಗಳ ಬದಲಾಗಿ ಸ್ಪಿನ್ನರ್ಸ್​ಗೆ ಹೆಚ್ಚು ಆಧ್ಯತೆ ನೀಡಬಹುದು. ಯಾಕಂದ್ರೆ ಬೆಂಗಳೂರಿನ ಮೈದಾನ ಸ್ಪಿನ್ನರ್ಸ್ ಸ್ನೇಹಿ ಆಗಿದೆ. ಬ್ಯಾಟಿಂಗ್​ಗೂ ಅನುಕೂಲಕರವಾಗಿದೆ. ಸೋ ಓಪನರ್ಸ್ ಆಗಿ ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್ ಬಂದ್ರೆ ನಂತ್ರ  ದೇವದತ್ ಪಡಿಕ್ಕಲ್, ರಜತ್ ಪಾಟಿದಾರ್, ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ, ಟಿಮ್ ಡೇವಿಡ್ ಇರ್ತಾರೆ. ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಜೋಶ್ ಹೇಜಲ್‌ವುಡ್, ಯಶ್ ದಯಾಳ್  ಬೌಲಿಂಗ್ ವಿಭಾಗದಲ್ಲಿ ಪರಿಣಾಮಕಾರಿಯಾಗಿದ್ದಾರೆ.

ಮೊದ್ಲೆಲ್ಲಾ ಡಿಸಿ ತಂಡ ಅಂದ್ರೆ ಕ್ರೇಜೇ ಇರ್ತಾ ಇರ್ಲಿಲ್ಲ. ಒಂಥರಾ ಡಮ್ಮಿ ಅನ್ನೋ ಫೀಲ್ ಕೊಡ್ತಿತ್ತು. ಬಟ್ ಈ ಸಲ ಅವ್ರೇ ಸೂಪರ್ ಸ್ಟ್ರಾಂಗ್ ಆಗಿ ಕಾಣ್ತಿದ್ದಾರೆ. ಅದೂ ಅಲ್ದೇ 2008ರ ನಂತರ ಫ್ರಾಂಚೈಸಿ ಇತಿಹಾಸದಲ್ಲಿ ಮೊದಲ ಬಾರಿಗೆ ಡೆಲ್ಲಿ ತಂಡ ಸತತ ಮೂರು ಪಂದ್ಯಗಳನ್ನು ಗೆದ್ದಿದೆ. ನಾಯಕ ಅಕ್ಷರ್ ಪಟೇಲ್ ಮತ್ತು ವಿಪ್ರಜ್ ನಿಗಮ್ ಪ್ರಮುಖ ಸ್ಪಿನ್-ಬೌಲಿಂಗ್ ಆಲ್‌ರೌಂಡರ್‌ಗಳಾಗಿದ್ದಾರೆ. ಇದರೊಂದಿಗೆ ಕುಲ್ದೀಪ್ ಯಾದವ್, ಮಿಚೆಲ್ ಸ್ಟಾರ್ಕ್, ಮೋಹಿತ್ ಶರ್ಮಾ ಮತ್ತು ಮುಖೇಶ್ ಕುಮಾರ್ ಇದ್ದು, ಅತ್ಯುತ್ತಮ ಬೌಲಿಂಗ್ ತಂಡವನ್ನು ಹೊಂದಿದೆ. ಕಳೆದ ಆವೃತ್ತಿವರೆಗೂ ಆರ್‌ಸಿಬಿ ನಾಯಕರಾಗಿದ್ದ ಫಾಫ್ ಡು ಪ್ಲೆಸಿಸ್ ಈ ಬಾರಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸೇರಿದ್ದು, ಕನ್ನಡಿಗ ಕೆಎಲ್ ರಾಹುಲ್ ಕೂಡ ಇದ್ದಾರೆ.

ಇನ್ನು ಡಿಸಿ ಮ್ಯಾಚ್ ವಿರುದ್ಧ 1000ಪ್ಲಸ್ ರನ್ ಬಾರಿಸಿರೋ ವಿರಾಟ್ ಕೊಹ್ಲಿ ಮತ್ತೊಂದು ದೊಡ್ಡ ಇನ್ನಿಂಗ್ಸ್ ನಿರೀಕ್ಷೆಯಲ್ಲಿದ್ದಾರೆ. ಹಾಗೇ ನಾಯಕ ರಜತ್, ಟಿಮ್‌ ಡೇವಿಡ್, ಜಿತೇಶ್ ಶರ್ಮಾ ಈ ಮೂವರ ಸ್ಟ್ರೈಕ್‌ರೇಟ್ 150ಕ್ಕಿಂತ ಹೆಚ್ಚಿದೆ. ದೇವದತ್ ಪಡಿಕ್ಕಲ್, ಲಿವಿಂಗ್ ಸ್ಟೋನ್ ಕೂಡಾ ಅಬ್ಬರಿಸುತ್ತಿದ್ದಾರೆ. ಇನ್ನು, ಆರ್‌ಸಿಬಿಯ ಬೌಲಿಂಗ್ ಕೂಡಾ ಬಲಿಷ್ಠವಾಗಿದೆ. ವೇಗಿ ಭುವನೇಶ್ವರ್, ಹೇಜಲ್ ವುಡ್ ಜೊತೆಗೆ ಕೃನಾಲ್, ಸುಯಶ್ ಡೆಲ್ಲಿ ಬ್ಯಾಟರ್ ಗಳನ್ನು ಕಾಡಬಹುದು.ಮತ್ತೊಂದೆಡೆ ಡೆಲ್ಲಿ ತಂಡದಲ್ಲಿ ಕುಲೀಪ್‌ ಯಾದವ್, ಅಕ್ಷರ್‌ ಪಟೇಲ್‌ ಹಾಗೂ ವಿಪ್ರಾಜ್ ನಿಗಮ್‌ ಸ್ಪಿನ್ ದಾಳಿ ಜೋರಾಗಿದೆ. ಅದ್ರಲ್ಲೂ ಡೆಲ್ಲಿಯ ಪ್ರಮುಖ ಅಸ್ತ್ರ ಪ್ರಚಂಡ ವೇಗಿ ಮಿಚೆಲ್ ಸ್ಟಾರ್ಕ್‌ ಇರೋದು ಮತ್ತಷ್ಟು ಬಲ ನೀಡಿದೆ. ಯಾವುದೇ ಸ್ಲಾಟ್​ನಲ್ಲಿ ನಿಲ್ಸಿದ್ರೂ ಆಡ್ತಿನಿ ಅನ್ನುವ ಕನ್ನಡಿಗ ಕೆ.ಎಲ್.ರಾಹುಲ್ ಮತ್ತೆ ತಮ್ಮ ತವರಿನಲ್ಲಿ ಆಡಲಿದ್ದು, ಮ್ಯಾಚ್​ನ ಅಟ್ರಾಕ್ಷನ್ ಆಗಿದ್ದಾರೆ. ಚೆನ್ನೈ ಪಂದ್ಯದಲ್ಲಿ ರಾಹುಲ್ ಆರಂಭಿಕನಾಗಿ ಆಡಿದ್ದರೂ, ಆರ್‌ಸಿಬಿ ವಿರುದ್ಧ ಯಾವ ಸ್ಲಾಟ್​ನಲ್ಲಿ ಬರ್ತಾರೆ ನೋಡ್ಬೇಕು.

ಎಲ್ಲಾ ಟೀಮ್​ಗಳು ಹೋಂ ಗ್ರೌಂಡ್ ಲಾಭ ಪಡೆದ್ರೆ ಆರ್​ಸಿಬಿಗೆ ಮಾತ್ರ ಅದು ಡೆಡ್​ ಆಪೋಸಿಟ್. ಯಾಕಂದ್ರೆ ಚಿನ್ನಸ್ವಾಮಿಯಲ್ಲಿ ಅಷ್ಟು ಮ್ಯಾಚ್ ಗೆದ್ದಿದ್ದಾರೋ ಅಷ್ಟೇ ಮ್ಯಾಚ್ ಸೋತಿದ್ದಾರೆ. ಈವರೆಗೂ 92 ಪಂದ್ಯಗಳನ್ನ ಚಿನ್ನಸ್ವಾಮಿಯಲ್ಲಿ ಆಡಿರೋ ಬೆಂಗಳೂರು ಬಾಯ್ಸ್ 42 ಮ್ಯಾಚ್​ಗಳನ್ನ ಗೆದ್ದಿದ್ದಾರೆ. ಹಾಗೇ 42 ಮ್ಯಾಚ್​ಗಳನ್ನ ಸೋತಿದ್ದಾರೆ. ಉಳಿದ ನಾಲ್ಕು ಪಂದ್ಯಗಳು ಫಲಿತಾಂಶ ಕಂಡಿಲ್ಲ. ಅಲ್ದೇ ಏಪ್ರಿಲ್ 2ರಂದು ಗುಜರಾತ್ ವಿರುದ್ಧ ನಡೆದ ಪಂದ್ಯದಲ್ಲೂ ಬೆಂಗಳೂರು ಟೀಂ ಸೋಲು ಕಂಡಿತ್ತು. ಮೊದಲು ಬ್ಯಾಟಿಂಗ್ ಮಾಡಿದ್ದ ಆರ್​ಸಿಬಿ ಕೇವಲ 169 ರನ್ ಗಳಿಸಲು ಸಾಧ್ಯವಾಯಿತು, ಆದರೆ ಆ ಪಂದ್ಯದಲ್ಲಿ ಗುರಿಯನ್ನು ಬೆನ್ನಟ್ಟಿದ ಗುಜರಾತ್ ಟೈಟಾನ್ಸ್ 2 ಓವರ್‌ಗಳ ಮುಂಚಿತವಾಗಿಯೇ ಪಂದ್ಯವನ್ನು ಗೆದ್ದಿತು. ಇದೀಗ ಡಿಸಿ ವಿರುದ್ಧ ತವರಿನಲ್ಲೇ ಮತ್ತೊಂದು ಪಂದ್ಯಕ್ಕೆ ರೆಡಿಯಾಗಿದೆ. ಆದ್ರೆ ಡಿಸಿ ಕೂಡ ಸಾಲಿಡ್ ಫಾರ್ಮ್​ನಲ್ಲಿ ಇರೋದ್ರಿಂದ ದೊಡ್ಡ ಸವಾಲೂ ಇದೆ.  ಆರ್‌ಸಿಬಿ ಬ್ಯಾಟರ್ಸ್‌ ಹಾಗೂ ಡೆಲ್ಲಿ ಸ್ಪಿನ್ನರ್ಸ್ ನಡುವೆ ರೋಚಕ ಪೈಪೋಟಿ ಇರಲಿದೆ.

ಇನ್ನು ಐಪಿಎಲ್​ನಲ್ಲಿ ಎರಡೂ ತಂಡಗಳ ಹೆಡ್ ಟು ಹೆಡ್ ರೆಕಾರ್ಡ್ಸ್ ನೋಡೋದಾದ್ರೆ ಆರ್‌ಸಿಬಿಯೇ ಮೇಲುಗೈ ಸಾಧಿಸಿದೆ. ಇಲ್ಲಿಯವರೆಗೆ ಬೆಂಗಳೂರು ಮತ್ತು ಡೆಲ್ಲಿ ಮಧ್ಯೆ 31 ಐಪಿಎಲ್ ಪಂದ್ಯಗಳು ನಡೆದಿದ್ದು, ಆರ್‌ಸಿಬಿ 19 ಪಂದ್ಯಗಳಲ್ಲಿ ಜಯಗಳಿಸಿದ್ರೆ ದೆಹಲಿ 11 ಪಂದ್ಯಗಳಲ್ಲಿ ಜಯ ಗಳಿಸಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬೆಂಗಳೂರು ಮತ್ತು ದೆಹಲಿ ನಡುವೆ 12 ಪಂದ್ಯಗಳು ನಡೆದಿದ್ದು, ಅವುಗಳಲ್ಲಿ ಆರ್‌ಸಿಬಿ 7 ಪಂದ್ಯಗಳನ್ನು ಗೆದ್ದಿದೆ. ಹೀಗಾಗಿ ಇಂದಿನ ಪಂದ್ಯದಲ್ಲೂ ಆರ್‌ಸಿಬಿ ತಂಡವೇ ಫೇವರಿಟ್ ಆಗಿದೆ.  ಚಿನ್ನಸ್ವಾಮಿ ಮೈದಾನದಲ್ಲಿ ಒಟ್ಟು 96 ಐಪಿಎಲ್ ಪಂದ್ಯಗಳು ನಡೆದಿದ್ದು, ಇದರಲ್ಲಿ ಮೊದಲು ಬ್ಯಾಟ್ ಮಾಡಿದ ತಂಡ 41 ಪಂದ್ಯಗಳಲ್ಲಿ ಗೆದ್ದಿದ್ದರೆ, ಗುರಿಯನ್ನು ಬೆನ್ನಟ್ಟಿದ ತಂಡ 51 ಪಂದ್ಯಗಳಲ್ಲಿ ಗೆದ್ದಿದೆ. ಸೋ ಇವತ್ತು ಟಾಸ್ ಗೆದ್ದವ್ರು ಫಸ್ಟ್ ಬೌಲಿಂಗ್ ಸೆಲೆಕ್ಟ್ ಮಾಡಿಕೊಳ್ತಾರೆ.

Shantha Kumari

Leave a Reply

Your email address will not be published. Required fields are marked *