RCBಗೆ ಕಪ್ ಗೆಲ್ಲಿಸಿದವ್ರು ಸೇಫ್ – ರಿಟೇನ್ & ರಿಲೀಸ್ಟ್ ಲಿಸ್ಟ್ ಹೇಗಿದೆ?
2026ರ IPLಗೆ ಉಳಿಯೋದು ಇವ್ರೇನಾ?

RCBಗೆ ಕಪ್ ಗೆಲ್ಲಿಸಿದವ್ರು ಸೇಫ್ – ರಿಟೇನ್ & ರಿಲೀಸ್ಟ್ ಲಿಸ್ಟ್ ಹೇಗಿದೆ?2026ರ IPLಗೆ ಉಳಿಯೋದು ಇವ್ರೇನಾ?

2026ರ ಐಪಿಎಲ್​ಗೆ ಆಲ್ರೆಡಿ ಫ್ರಾಂಚೈಸಿಗಳೆಲ್ಲಾ ಪ್ರಿಪೇರ್ ಆಗ್ತಿವೆ. ಸದ್ಯಕ್ಕೆ ಟ್ರೇಡ್ ವಿಂಡೋದಲ್ಲಿ ಯಾರ ಹೆಸ್ರೂ ಇಲ್ದೇ ಇದ್ರೂ ನವೆಂಬರ್ 15ವೊಳಗೆ ಆಟಗಾರರ ರಿಲೀಸ್​ಗಂತೂ ಡೆಡ್​ಲೈನ್ ಸಿಕ್ಕಿದೆ. ಡಿಸೆಂಬರ್​ನಲ್ಲಿ ಮಿನಿ ಆಕ್ಷನ್ ನಡೆಯಲಿದ್ದು ಒಂದಷ್ಟು ಸ್ಟಾರ್ ಆಟಗಾರರ ಹೆಸರೂ ಕೂಡ ರೇಸ್​​ನಲ್ಲಿದೆ. ಬಟ್ ಹಾಲಿ ಚಾಂಪಿಯನ್ ಆರ್​ಸಿಬಿ ಮುಂದಿನ ಆವೃತ್ತಿಗೂ ಮುನ್ನ ಯಾರನ್ನೆಲ್ಲಾ ರಿಟೇನ್ ಮಾಡಿಕೊಳ್ಬೋದು. ಯಾರನ್ನೆಲ್ಲಾ ರಿಲೀಸ್ ಮಾಡ್ಬೋದು ಅನ್ನೋ ಚರ್ಚೆಯೂ ನಡೀತಿದೆ.

ಇದನ್ನೂ ಓದಿ : ಇಂದು ವಿಶ್ವ ದಾಖಲೆ ಬರೆಯಲು ಸಜ್ಜಾದ ಅಯೋಧ್ಯೆ ರಾಮಮಂದಿರ – 26.11ಲಕ್ಷ ಮಣ್ಣಿನ ಹಣತೆಯಲ್ಲಿ ಬೆಳಗಲಿದೆ ದೀಪ

18ನೇ ಸೀಸನ್ ಐಪಿಎಲ್ ನಲ್ಲಿ ಫಾರ್ ದಿ ಫಸ್ಟ್ ಟೈಂ ಆರ್​ಸಿಬಿ ಟೀಂ ಚಾಂಪಿಯನ್ ಪಟ್ಟಕ್ಕೇರಿತ್ತು. ಬ್ಯಾಟಿಂಗ್, ಬೌಲಿಂಗ್ ಸೇರಿದಂತೆ ಮಿಡಲ್ ಆರ್ಡರ್​ನಲ್ಲೂ ಕ್ವಾಲಿಟಿ ಪ್ಲೇಯರ್ಸ್ ಇದ್ದದ್ದೇ ಕಪ್ ಗೆಲ್ಲೋಕೆ ಕಾರಣ ಆಯ್ತು. ಹೀಗಾಗಿ ಈ ಟೀಮ್​ನೇ ಮುಂದಿನ ಸೀಸನ್​ನಲ್ಲೂ ಉಳಿಸಿಕೊಳ್ಳೋಕೆ ಮ್ಯಾನೇಜ್​ಮೆಂಟ್ ಪ್ಲ್ಯಾನ್ ಮಾಡಿದೆ.  ಅಲ್ದೇ 2025ರ ಆವೃತ್ತಿಯಲ್ಲಿ ಅವ್ರ ಪರ್ಫಾಮೆನ್ಸ್ ಕೂಡ ಅದ್ಭುತವಾಗಿತ್ತು.

RCB ರಿಟೇನ್ ಲಿಸ್ಟ್!

ಹೆಸರು                       ಮಾದರಿ             2025ರ ಪರ್ಫಾಮೆನ್ಸ್

ರಜತ್ ಪಾಟಿದಾರ್          ಬ್ಯಾಟರ್             15 ಪಂದ್ಯ, 312 ರನ್‌

ವಿರಾಟ್ ಕೊಹ್ಲಿ              ಬ್ಯಾಟರ್            15 ಪಂದ್ಯ, 657 ರನ್

ದೇವದತ್ ಪಡಿಕ್ಕಲ್         ಬ್ಯಾಟರ್            10 ಇನ್ನಿಂಗ್ಸ್‌, 247 ರನ್‌

ಫಿಲ್ ಸಾಲ್ಟ್                 ಬ್ಯಾಟರ್             13 ಪಂದ್ಯ, 403 ರನ್‌

ಜಿತೇಶ್ ಶರ್ಮಾ          WK-ಬ್ಯಾಟರ್       15 ಪಂದ್ಯ, 261 ರನ್‌

ಟಿಮ್ ಡೇವಿಡ್             ಆಲ್-ರೌಂಡರ್       12 ಪಂದ್ಯ, 187 ರನ್‌

ಕೃನಾಲ್ ಪಾಂಡ್ಯ              ಆಲ್-ರೌಂಡರ್     15 ಪಂದ್ಯ, 17 ವಿಕೆಟ್‌, 109 ರನ್‌

ರೊಮಾರಿಯೊ ಶೆಫರ್ಡ್        ಆಲ್-ರೌಂಡರ್      70 ರನ್‌

ಜೋಶ್ ಹ್ಯಾಜಲ್‌ವುಡ್        ಬೌಲರ್             12 ಪಂದ್ಯ, 22

ಭುವನೇಶ್ವರ್ ಕುಮಾರ್          ಬೌಲರ್            14 ಪಂದ್ಯ, 17 ವಿಕೆಟ್‌

ಸುಯಾಶ್ ಶರ್ಮಾ             ಬೌಲರ್           14 ಪಂದ್ಯ, 8 ವಿಕೆಟ್‌

ಯಶ್ ದಯಾಳ್                 ಬೌಲರ್          15 ಪಂದ್ಯ, 13 ವಿಕೆಟ್‌

ಇವ್ರಿಷ್ಟು ಲಾಸ್ಟ್ ಸೀಸನ್​ನಲ್ಲಿ ಪರ್ಫಾಮ್ ಮಾಡಿದ್ದವ್ರು. ಇವ್ರನ್ನ ಬಿಟ್ರೆ ಸ್ವಸ್ತಿಕ್ ಚಿಕಾರ ಮತ್ತು ಮನೋಜ್ ಭಾಂಡಗೆಯನ್ನೂ ಉಳಿಸಿಕೊಳ್ಳೋ ಚಾನ್ಸಸ್ ಇದೆ. ಚಿಕಾರ ಅವರನ್ನು ಪ್ರಾಮಿಸಿಂಗ್ ಡೊಮೆಸ್ಟಿಕ್ ಟ್ಯಾಲೆಂಟ್ ಆಗಿರೋದ್ರಿಂದ ಬ್ಯಾಟಿಂಗ್ ತಂಡಕ್ಕೆ ಬ್ಯಾಕಪ್ ಆಗಿ ನೋಡ್ತಿದೆ. ಇನ್ನು ಭಾಂಡನೆ ಬ್ಯಾಟಿಂಗ್, ಬೌಲಿಂಗ್ ಎರಡರಲ್ಲೂ ಫ್ಯೂಚರ್ ಪ್ಲೇಯರ್ ಆಗಿ ಉಳಿಸಿಕೊಳ್ಳೋ ಯೋಜನೆಯಲ್ಲಿದೆ. ಉಳಿದಂತೆ ಲಿಯಾಮ್ ಲಿವಿಂಗ್ ಸ್ಟೋನ್, ರಸಿಕ್ ಸಲಾಂ ದಾರ್ ಇಬ್ರನ್ನೂ ರಿಲೀಸ್ ಮಾಡ್ಬೋದು. ಹಾಗೇ ತಾತ್ಕಾಲಿಕ ಬದಲಿ ಆಟಗಾರರಾಗಿ ತಂಡ ಸೇರಿಕೊಂಡಿದ್ದ, ಟಿಮ್ ಸೈಫರ್ಟ್, ನುವಾನ್ ತುಷಾರಾ, ಬ್ಲೆಸ್ಸಿಂಗ್ ಮುಜರಾಬಾನಿಯನ್ನ ರಿಲೀಸ್ ಮಾಡ್ಬೇಕಾಗುತ್ತೆ. ಯಾಕಂದ್ರೆ ಅವ್ರ ಕಾಂಟ್ರ್ಯಾಕ್ಟ್ ಇದ್ದಿದ್ದೇ 2025ರ ಐಪಿಎಲ್ ಆವೃತ್ತಿಗೆ ಮಾತ್ರ.

Shantha Kumari