RCB ಬಜೆಟ್ ಪ್ಲ್ಯಾನ್ ಫೈನಲ್ – ಲಿವಿಂಗ್ ಸ್ಟೋನ್ ತಂಡಕ್ಕೆ ಬೇಕಾ?
ರಿಲೀಸ್ & ರಿಟೇನ್ ಲಿಸ್ಟ್ ಹೇಗಿದೆ?  

RCB ಬಜೆಟ್ ಪ್ಲ್ಯಾನ್ ಫೈನಲ್ – ಲಿವಿಂಗ್ ಸ್ಟೋನ್ ತಂಡಕ್ಕೆ ಬೇಕಾ?ರಿಲೀಸ್ & ರಿಟೇನ್ ಲಿಸ್ಟ್ ಹೇಗಿದೆ?  

ಐಪಿಎಲ್​ ಫ್ರಾಂಚೈಸಿಗಳಿಗೆ ನವೆಂಬರ್ 15ರ ಡೆಡ್​​ಲೈನ್.. ಯಾರನ್ನ ಉಳಿಸಿಕೊಳ್ಬೇಕು ಯಾರನ್ನ ರಿಲೀಸ್ ಮಾಡ್ಬೇಕು ಅನ್ನೋದನ್ನ ಅನೌನ್ಸ್ ಮಾಡ್ಬೇಕು. ಟ್ರೇಡ್ ವಿಂಡೋ.. ಸ್ವ್ಯಾಪ್ ಡೀಲ್.. ಮಿನಿ ಆಕ್ಷನ್ ಅಂತಾ ಬ್ಯುಸಿಯಾಗಿರೋ ಫ್ರಾಂಚೈಸಿಗಳೆಲ್ಲಾ ಒಂದಷ್ಟು ಆಟಗಾರರ ಲಿಸ್ಟ್​​ನಂತೂ ರೆಡಿ ಮಾಡಿದ್ದಾರೆ. ಌಂಡ್ ದೊಡ್ಡ ದೊಡ್ಡ ಹೆಸರುಗಳೇ ಕೇಳಿ ಬರ್ತಿವೆ. ಇದೆಲ್ಲದ್ರ ನಡುವೆ ಚಾಂಪಿಯನ್ ಟೀಂ ಆಗಿರೋ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಬಿಗ್ ಚೇಂಜಸ್ ಅಂತಾ ಏನೂ ಇಲ್ಲದೇ ಇದ್ರೂ ಒಂದಷ್ಟು ಬದಲಾವಣೆಗಳು ಆಗೋದಂತೂ ಪಕ್ಕಾ.

ಇದನ್ನೂ ಓದಿ : RCB ಫ್ಯಾನ್ಸ್‌ಗೆ ಬಿಗ್ ಶಾಕ್ – ಚಿನ್ನಸ್ವಾಮಿಯಲ್ಲಿ ಐಪಿಎಲ್ ಪಂದ್ಯ ನಡೆಯೋದು ಡೌಟ್

ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಬಗ್ಗೆ ಮೊದ್ಲಿಂದಲೂ ಇದ್ದ ಮೇನ್ ಕಂಪ್ಲೇಂಟ್ ಅಂದ್ರೆ ಬೌಲಿಂಗ್ ಸ್ಕ್ವಾಡ್ ಸ್ಟ್ರಾಂಗ್ ಇಲ್ಲ ಅನ್ನೋದು. ಬ್ಯಾಟಿಂಗ್​ನಲ್ಲಿ ಘಟಾನುಘಟಿಗಳೇ ಇದ್ದು ಎಷ್ಟೇ ಬಿಗ್ ಸ್ಕೋರ್ ಬಂದ್ರೂ ಅದನ್ನ ಡಿಫೆನ್ಸ್ ಮಾಡಿಕೊಳ್ಳೋಕೆ ಸಾಧ್ಯ ಆಗ್ತಿರಲಿಲ್ಲ. ಬಟ್ 2025ರ ಐಪಿಎಲ್​ನಲ್ಲಿ ಬೌಲಿಂಗ್ ಟೀಂ ಪವರ್​ಫುಲ್ ಆಗಿತ್ತು. ಌಂಡ್ ಬ್ಯಾಲೆನ್ಸ್​ಡ್ ಆಗಿತ್ತು. ಜೊತೆಗೆ ಚಾಂಪಿಯನ್ ಪಟ್ಟಕ್ಕೂ ಏರಿದ್ರು. ಸೋ ಆಲ್ಮೋಸ್ಟ್ ಇದೇ ಟೀಮ್​ನೇ ನೆಕ್ಸ್​ಟ್ ಸೀಸನ್​ಗೂ ಕಂಟಿನ್ಯೂ ಮಾಡೋ ಪ್ಲ್ಯಾನ್​ನಲ್ಲೇ ಇದ್ದಾರೆ. ಹೀಗಿದ್ರೂ ಒಂದಷ್ಟು ಪ್ಲೇಯರ್ಸ್ ತಂಡ ಬಿಡೋದಂತೂ ಗ್ಯಾರಂಟಿ.

2025ರ ಪವರ್ ಹಿಟ್ಟರ್ ಪ್ಲೇಯರ್ಸ್ ಸೇಫ್!

ಆರ್​ಸಿಬಿಯ 2026 ರ ಐಪಿಎಲ್ ರಿಟೆನ್ಷನ್ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಡೌಟೇ ಇಲ್ದೇ ಉಳ್ಕೊಳ್ತಾರೆ. ಬ್ಯಾಟಿಂಗ್ ಲೈನಪ್​ನ ಬ್ಯಾಕ್ ಬೋನ್. ಌಂಡ್ ಆರ್​ಸಿಬಿಯ ಐಕಾನಿಕ್ ಪ್ಲೇಯರ್. ಹಾಗೇ  ಪವರ್ ಪ್ಲೇ ಆಕ್ಸಿಲರೇಟರ್ ಆಗಿರೋ ಫಿಲ್ ಸಾಲ್ಟ್ ಕೂಡ ಸೇಫ್ ಆಗ್ತಾರೆ. ಅಗ್ರೆಸ್ಸಿವ್ ಬ್ಯಾಟಿಂಗ್ ಪವರ್ ಬೇಕೇಬೇಕು. ದೇವದತ್ ಪಡಿಕ್ಕಲ್, ರಜತ್ ಪಾಟಿದಾರ್, ಜಿತೇಶ್ ಶರ್ಮಾ ಬಿಟ್ಟುಕೊಡೋ ಮಾತೇ ಇಲ್ಲ. ಹಾಗೇ ಟಿಮ್ ಡೇವಿಡ್ ಪ್ಯೂರ್ ಫಿನಿಶರ್ ಆಗಿ ಉಳ್ಕೊಳ್ತಾರೆ. ಹಾಗೇ ಕೃನಾಲ್ ಪಾಂಡ್ಯ, ಜೋಶ್ ಹ್ಯಾಜಲ್‌ವುಡ್ ತಮ್ಮ ಅನುಭವ ಮತ್ತು ಕೌಶಲ್ಯದಿಂದ ಆರ್‌ಸಿಬಿಗೆ ಬಿಗ್ ಬ್ರೇಕ್ ಥ್ರ್ಯೂ ತಂದುಕೊಡ್ತಾರೆ. ಭುವನೇಶ್ವರ್ ಕುಮಾರ್  ಸ್ವಿಂಗ್ ಬೌಲಿಂಗ್ ಸ್ಟ್ರೆಂಥ್ ಪ್ಲಸ್ ಆಗುತ್ತೆ. ಹೀಗಾಗಿ ಮುಂದಿನ ಸೀಸನ್​ಗೂ ಮುನ್ನ ವಿಜೇತ ತಂಡವನ್ನೇ ಕಂಟಿನ್ಯೂ ಮಾಡೋಕೆ ಫ್ರಾಂಚೈಸಿ ಮುಂದಾಗಿದೆ. ಆದ್ರೆ ಲಿಯಾಮ್ ಲಿವಿಂಗ್​ಸ್ಟೋನ್ ವಿಚಾರದಲ್ಲಿ ಸ್ವಲ್ಪ ಕನ್ಫ್ಯೂಷನ್ಸ್ ಅಂತೂ ಇದೆ.

2025ರ ಐಪಿಎಲ್​ನಲ್ಲಿ ಆರ್​ಸಿಬಿ ಪರ ಎಲ್ರೂ ದಿ ಬೆಸ್ಟ್ ಪರ್ಫಾಮೆನ್ಸ್ ಕೊಟ್ಟಿದ್ದಾರೆ. ಬಟ್ ಲಿಯಾಮ್ ಲಿವಿಂಗ್ ಸ್ಟೋನ್ ಕಡೆಯಿಂದ ಬಿಗ್ ಇನ್ನಿಂಗ್ಸ್ ಬಂದಿರಲಿಲ್ಲ. 8.75 ಕೋಟಿ ರೂಪಾಯಿಗೆ ಖರೀದಿಸಿದ್ದ ಈ ಪವರ್‌ಹಿಟ್ಟರ್, 2025 ರ ಐಪಿಎಲ್‌ನಲ್ಲಿ 16ರ ಸರಾಸರಿಯಲ್ಲಿ ಕೇವಲ 112 ರನ್‌ಗಳನ್ನು ಗಳಿಸಿದರು. ಆದ್ರೆ ಐಪಿಎಲ್ ಮುಗಿದ್ಮೇಲೆ ಬೇರೆ ಬೇರೆ ಲೀಗ್ ಮತ್ತು ಪಂದ್ಯಗಳಲ್ಲಿ ಬೆಸ್ಟ್ ಪರ್ಫಾಮೆನ್ಸ್ ಕೊಟ್ಟಿದ್ದಾರೆ. ಪವರ್ ಹಿಟ್ಟಿಂಗ್ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. ಹೀಗಾಗಿ ಮುಂದಿನ ಆವೃತ್ತಿಗೆ ಬೇಕೋ ಬೇಡ್ವೋ ಅನ್ನೋ ಗೊಂದಲ ಇದೆ. ಅದೂ ಅಲ್ದೇ ಆರ್‌ಸಿಬಿ ಮಧ್ಯಮ ಕ್ರಮಾಂಕದ ಆಯ್ಕೆಗಳಾಗಿ ಟಿಮ್ ಡೇವಿಡ್ , ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಜಿತೇಶ್ ಶರ್ಮಾ, ರೊಮಾರಿಯೊ ಶೆಫರ್ಡ್ ಎಮರ್ಜಿಂಗ್ ಪ್ಲೇಯರ್ ಜಾಕೋಬ್ ಬೆಥೆಲ್ ಮತ್ತು ಕೃನಾಲ್ ಪಾಂಡ್ಯ ಇದ್ದಾರೆ. ಹೀಗಾಗಿ ಲಿವಿಂಗ್ ಸ್ಟೋನ್ ವಿಚಾರದಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಬೋದು. ಇನ್ನು ರಸಿಕ್ ಸಲಾಂ ದಾರ್ ಮತ್ತು ಯಶ್ ದಯಾಳ್ ಅವರನ್ನು ಆರ್‌ಸಿಬಿ ರಿಲೀಸ್ ಮಾಡೋ ಚಾನ್ಸಸ್ ಅಂತೂ ಇದೆ. 27 ವರ್ಷದ ಯಶ್ ದಯಾಳ್ ವಿರುದ್ಧ ಗಂಭೀರ ಆರೋಪಗಳು ಕೇಳಿ ಬಂದಿರೋದ್ರಿಂದ ಬಿಡುಗಡೆ ಮಾಡೋ ಚಾನ್ಸಸ್ ಇದೆ. ಇನ್ನು 6 ಕೋಟಿ ರೂಪಾಯಿಗೆ ಖರೀದಿಸಿದ್ದ ರಸಿಕ್ ಸಲಾಂ ದಾರ್ ಆರ್‌ಸಿಬಿ ಪರ ಕೇವಲ ಎರಡು ಬಾರಿ ಮಾತ್ರ ಕಾಣಿಸಿಕೊಂಡರು. ಮೆಗಾ ಹರಾಜಿನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದ ಅನ್‌ಕ್ಯಾಪ್ಡ್ ಇಂಡಿಯನ್ ಆಗಿದ್ರೂ ಪರ್ಫಾಮೆನ್ಸ್ ವೀಕ್ ಆಗಿತ್ತು. ಒಂದು ವೇಳೆ ಆರ್‌ಸಿಬಿ ಲಿವಿಂಗ್‌ಸ್ಟೋನ್, ದಯಾಳ್ ಮತ್ತು ರಸಿಕ್ ಮೂವರನ್ನೂ ಬಿಡುಗಡೆ ಮಾಡಿದರೆ, ಮಿನಿ ಹರಾಜಿನಲ್ಲಿ ಖರ್ಚು ಮಾಡಲು ಅವರಿಗೆ ಒಟ್ಟು 19.75 ಕೋಟಿ ರೂಪಾಯಿ ಸೇವಿಂಗ್ಸ್ ಆಗುತ್ತೆ. ಹೀಗಾಗಿ ಮೂವರು ಡೇಂಜರ್​ಝೋನ್​ನಲ್ಲಿದ್ದಾರೆ.

ಇನ್ನು ಪ್ರತೀ ಫ್ರಾಂಚೈಸಿಯು ಒಟ್ಟು 25 ಆಟಗಾರರನ್ನ ತಂಡದಲ್ಲಿ ಉಳಿಸಿಕೊಳ್ಳೋ ಅವಕಾಶ ಇರುತ್ತೆ. ಹಾಗೇ 120 ಕೋಟಿಯ ಬಜೆಟ್ ಮಿತಿ ವಿಧಿಸಲಾಗಿದೆ. ಸದ್ಯಕ್ಕೆ ಆರ್​ಸಿಬಿಯ ಪರ್ಸ್​ನಲ್ಲಿ ಇರೋದು ಜಸ್ಟ್ 75 ಲಕ್ಷ ರೂಪಾಯಿ ಮಾತ್ರ. ಹೀಗಾಗಿ ಫ್ರಾಂಚೈಸಿ ಯಾವೆಲ್ಲಾ ಪ್ಲೇಯರ್​ಗಳನ್ನ ರೀಟೇನ್ ಮಾಡಿಕೊಂಡಿದೆ. ಹಾಗೆ ಯಾವೆಲ್ಲಾ ಪ್ಲೇಯರ್​ಗಳನ್ನ ರಿಲೀಸ್ ಮಾಡಬಹುದು ಅನ್ನೋ ಬಗ್ಗೆ ಕ್ಲಾರಿಟಿ ಇಲ್ಲ. ಆದ್ರೆ ಚಾಂಪಿಯನ್ ತಂಡವನ್ನೇ ಆಲ್ಮೋಸ್ಟ್ ಉಳಿಸಿಕೊಳ್ಳೋದಂತೂ ಪಕ್ಕಾ.

Shantha Kumari