ಗ್ರೀನ್​ ಜರ್ಸಿಯಲ್ಲಿ ಕಣಕ್ಕಿಳಿಯಲಿರೋ ಆರ್‌ಸಿಬಿ? – ಹಸಿರು ಜರ್ಸಿ ಬೆಂಗಳೂರಿಗೆ ಎಷ್ಟು ಲಕ್ಕಿ ಗೊತ್ತಾ?

ಗ್ರೀನ್​ ಜರ್ಸಿಯಲ್ಲಿ ಕಣಕ್ಕಿಳಿಯಲಿರೋ ಆರ್‌ಸಿಬಿ? – ಹಸಿರು ಜರ್ಸಿ ಬೆಂಗಳೂರಿಗೆ ಎಷ್ಟು ಲಕ್ಕಿ ಗೊತ್ತಾ?

ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಇಂದು ನಡೆಯುವ ಐಪಿಎಲ್​ನ   ಡೆಲ್ಲಿ ಕ್ಯಾಪಿಟಲ್ಸ್‌​ ವಿರುದ್ಧ ಕಣಕ್ಕಿಳಿಯಲಿದೆ. ಗೋ ಗ್ರೀನ್​ ಅಭಿಯಾನದ ಭಾಗವಾಗಿ ಆರ್​ಸಿಬಿ ಈ ಪಂದ್ಯದಲ್ಲಿ ಹಸಿರು ಜೆರ್ಸಿಯಲ್ಲಿ  ಆಡಲಿದೆ. ಆರ್​ಸಿಬಿ ಈ ಜೆರ್ಸಿಯಲ್ಲಿ ಆಡಿದ ಪಂದ್ಯಗಳಲ್ಲಿ ಎಷ್ಟು ಸೋಲು ಮತ್ತು ಗೆಲುವು ಕಂಡಿದೆ ಎನ್ನುವ ಮಾಹಿತಿ  ಇದೆ.

ಇದನ್ನೂ ಓದಿ: ಇಂದು RCB VS DC ಬಿಗ್ ಫೈಟ್‌ – ಚಿನ್ನಸ್ವಾಮಿ ಕಡೆ ಹೋಗುವ ವಾಹನ ಸವಾರರೇ ಎಚ್ಚರ!

15 ಪಂದ್ಯಗಳಲ್ಲಿ ಕಣಕ್ಕೆ.. 5 ಪಂದ್ಯ ಸಾಲು 

ಆರ್​ಸಿಬಿ ಹಸಿರು ಜೆರ್ಸಿಯಲ್ಲಿ ಕಣಕ್ಕಿಳಿದ ಬಹುತೇಕ ಪಂದ್ಯದಲ್ಲಿ ಸೋಲು ಕಂಡಿದೆ. ಇದುವರೆಗೆ ಒಟ್ಟು 15 ಪಂದ್ಯಗಳನ್ನು ಆಡಿದ್ದು. ಈ ಪೈಕಿ ಕೇವಲ 5 ಪಂದ್ಯಗಳಲ್ಲಿ ಮಾತ್ರ ಗೆದ್ದಿದೆ. ಇನ್ನುಳಿದ 9 ಪಂದ್ಯಗಳಲ್ಲಿ ಸೋಲನುಭವಿಸಿದೆ. ಒಂದು ಪಂದ್ಯ ಫಲಿತಾಂಶ ಕಂಡಿಲ್ಲ. ಈ ಬಾರಿ ಆರ್​ಸಿಬಿ ಆಡಿದ 5 ಪಂದ್ಯಗಳಲ್ಲಿ ಕೇವಲ ಒಂದು ಮಾತ್ರ ಸೋಲು ಕಂಡಿದ್ದು ಉಳಿದ ನಾಲ್ಕು ಪಂದ್ಯಗಳಲ್ಲಿ ಗೆಲವು ಕಂಡಿದೆ. ಹೀಗಾಗಿ ಡೆಲ್ಲಿ​ ವಿರುದ್ಧ ಗೆಲುವು ಸಾಧಿಸೀತೇ, ಈ ಉಡುಗೆ ಆರ್​ಸಿಬಿ ಪಾಲಿಗೆ ಅದೃಷ್ಟ ತಂದೀತೇ ಎಂಬುದು ಎಲ್ಲರ ನಿರೀಕ್ಷೆ.

ಒಂದು ಬಾರಿ ನೀಲಿ ಜರ್ಸಿಯಲ್ಲಿ ಆಡಿದ್ದ RCB

​2011 ರಿಂದ ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಆರ್​ಸಿಬಿ ತಮ್ಮ ‘ಗೋ ಗ್ರೀನ್’ ಅಭಿಯಾನದಲ್ಲಿ ತೊಡಗಿಕೊಂಡಿತ್ತು. ಇದೇ ಕಾರಣಕ್ಕೆ ಪ್ರತಿ ಆವೃತ್ತಿಯಲ್ಲಿಯೂ ಒಂದು ಪಂದ್ಯವನ್ನು ಹಸಿರು ಜೆರ್ಸಿಯಲ್ಲಿ ಆಡುತ್ತಿದೆ. ಆದರೆ 2021ರಲ್ಲಿ, ಹಸಿರು ಜರ್ಸಿಯಲ್ಲಿ ಆಡುವ ಬದಲು ತಂಡವು ನೀಲಿ ಜರ್ಸಿಯಲ್ಲಿ ಆಡಿತ್ತು. ಕೋವಿಡ್ ಸಂಕಷ್ಟದ ಸಮಯದಲ್ಲಿ ಮುಂಚೂಣಿಯಲ್ಲಿರುವ ಕಾರ್ಮಿಕರಿಗೆ ಅವರ ತ್ಯಾಗ ಮತ್ತು ಕಠಿಣ ಪರಿಶ್ರಮಕ್ಕೆ ಗೌರವ ಸಲ್ಲಿಸಲು ಈ ನೀಲಿ ಜೆರ್ಸಿ ಧರಿಸಿ ಆಡಿತ್ತು.

Kishor KV