3 ಪಂದ್ಯಶ್ರೇಷ್ಠ.. 4 ಟ್ರೋಫಿ ವಿನ್ನರ್.. RCB ಗೇಮ್ ಚೇಂಜರ್ ಕೃನಾಲ್- ಪಾಂಡ್ಯ ಪವರ್ ಗೆ ಕನ್ನಡಿಗರು ಫಿದಾ

3 ಪಂದ್ಯಶ್ರೇಷ್ಠ.. 4 ಟ್ರೋಫಿ ವಿನ್ನರ್.. RCB ಗೇಮ್ ಚೇಂಜರ್ ಕೃನಾಲ್- ಪಾಂಡ್ಯ ಪವರ್ ಗೆ ಕನ್ನಡಿಗರು ಫಿದಾ

18 ವರ್ಷಗಳ ಬಳಿಕ ಆರ್​ಸಿಬಿಗೆ ಕಪ್ ಗೆಲ್ಲಿಸಿಕೊಟ್ಟ್ಟಿರೋ ಪ್ರತಿಯೊಬ್ಬ ಆಟಗಾರನೂ ಹೀರೋನೇ. ಅದ್ರಲ್ಲೂ ಫೈನಲ್ ಮ್ಯಾಚಲ್ಲಿ ರಿಯಲ್ ಗೇಮ್ ಚೇಂಜರ್ ಆದ ಕೃನಾಲ್ ಪಾಂಡ್ಯ ಬಗ್ಗೆ ನಾವಿಲ್ಲಿ ಹೇಳ್ಳೇಬೇಕು. ಆವತ್ತು ಅಭಿಮಾನಿಗಳ ಕ್ರೇಜ್ ನೋಡಿ ಇವ್ರಿಗಾಗಿಯಾದ್ರೂ ನಾವು ಕಪ್ ಗೆಲ್ಬೇಕು ಎಂದಿದ್ದ ಕೃನಾಲ್ ಕೊನೆಗೂ ತಮ್ಮ ಮಾತನ್ನ ಉಳಿಸಿಕೊಂಡಿದ್ದಾರೆ.

ಇದನ್ನೂ ಓದಿ: 90 ಕೋಟಿ ಒಡೆಯ ಶ್ರೇಯಸ್‌! – ಕ್ಯಾಪ್ಟನ್ಸಿ ಕ್ಲಿಕ್..‌ ಆದಾಯ ಡಬಲ್!

ಆವತ್ತು ಮೇ 3. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್​ಸಿಬಿ ವರ್ಸಸ್ ಸಿಎಸ್​ಕೆ ನಡುವೆ ಮ್ಯಾಚ್ ನಡೆದಿತ್ತು. ಲಾಸ್ಟ್ ಬಾಲ್​ವರೆಗೂ ಅಭಿಮಾನಿಗಳನ್ನ ತುದಿಗಾಲಲ್ಲಿ ನಿಲ್ಲಿಸಿದ್ದ ರಣರೋಚಕ ಕಾದಾಟ ಅದು. ಕೊನೆಗೂ ಆರ್​ಸಿಬಿ ಪಂದ್ಯದಲ್ಲಿ ಗೆದ್ದು ಬೀಗಿತ್ತು. ಅದೂ ಕೂಡ 2 ರನ್​ಗಳಿಂದ. ಈ ಗೆಲುವನ್ನ ಸಂಭ್ರಮಿಸುತ್ತಿದ್ದ ಅಭಿಮಾನಿಗಳು ಮಧ್ಯರಾತ್ರಿಯಾದ್ರೂ ಚಿನ್ನಸ್ವಾಮಿ ಮೈದಾನದ ಹೊರಗೆ ಜಮಾಯಿಸಿದ್ರು. ಆರ್​ಸಿಬಿ ಆಟಗಾರರ ಬಸ್ ಹೊರಡೋ ವೇಳೆ ರಸ್ತೆ ತುಂಬೆಲ್ಲಾ ನಿಂತು ಜಯಘೋಷ ಕೂಗಿದ್ರು. ಆವತ್ತು ಲಾಯಲ್ಟಿ ಅಂದ್ರೇನೆ, ಅಭಿಮಾನ ಅಂದ್ರೇನೆ, ಸಪೋರ್ಟ್ ಹೇಗಿರಬೇಕು ಅನ್ನೋದನ್ನ ಕೃನಾಲ್ ಪಾಂಡ್ಯ ಕಣ್ಣಾರೆ ಕಂಡಿದ್ರು. ಫ್ಯಾನ್ಸ್ ಕ್ರೇಜ್ ಕಂಡು ಪುಳಕಿತರಾದ ಕೃನಾಲ್, ಈ ಸಲ ಇವರಿಗಾಗಿ ನಾವು ಕಪ್ ಗೆಲ್ಲಲೇಬೇಕು ಎಂದು ಶಪಥ ಮಾಡಿದ್ದರು. ಈ ಶಪಥವನ್ನು ಇದೀಗ ಪಾಂಡ್ಯ ಈಡೇರಿಸಿದ್ದಾರೆ.

ಪಂಜಾಬ್ ತಂಡದ ಬೆನ್ನೆಲುಬು ಮುರಿದು ಕಪ್ ಗೆಲ್ಲಿಸಿದ ಕೃನಾಲ್!

ಅಹಮದಾಬಾದ್​ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆರ್​ಸಿಬಿ 20 ಓವರ್​ಗಳಲ್ಲಿ 190 ರನ್ ಕಲೆಹಾಕಿತ್ತು. ಈ ಗುರಿಯನ್ನು ಬೆನ್ನತ್ತಿದ ಪಂಜಾಬ್ ಕಿಂಗ್ಸ್ ಒಂದು ಸ್ಟೇಜ್​ವರೆಗೂ  ಒಳ್ಳೆ ಫಾರ್ಮ್​ನಲ್ಳೇ ಇತ್ತು. ಆದರೆ ಯಾವಾಗ ಕೃನಾಲ್ ಪಾಂಡ್ಯ ಬೌಲಿಂಗ್ ಶುರು ಮಾಡಿದರೋ, ಇಡೀ ಪಂದ್ಯದ ಗತಿ ಬದಲಾಯಿತು. ಫಿಂಗರ್ ಸ್ಪಿನ್ ಮೂಲಕ ಅಟ್ಯಾಕಿಂಗ್ ಶುರು ಮಾಡಿದ ಕೃನಾಲ್ ಪಾಂಡ್ಯ 4 ಓವರ್​ಗಳಲ್ಲಿ ನೀಡಿದ್ದು ಕೇವಲ 17 ರನ್​ಗಳು ಮಾತ್ರ. ಇದರ ಜೊತೆಗೆ ಡೇಂಜರಸ್ ಆಗಿದ್ದ ಪ್ರಭ್ ಸಿಮ್ರಾನ್ ಸಿಂಗ್ ಹಾಗೇ  ಜೋಶ್ ಇಂಗ್ಲಿಸ್ ಅವರ ವಿಕೆಟ್​ಗಳನ್ನು ಸಹ ಪಡೆದರು. ಈ ಮೂಲಕ ಫೈನಲ್ ಪಂದ್ಯದ ಗೆಲುವಿನ ರೂವಾರಿಯಾಗಿ ಹೊರಹೊಮ್ಮಿದ್ದರು. ಇದೇ ಪರ್ಫಾಮೆನ್ಸ್​ಗಾಗಿ ಪ್ಲೇಯರ್ ಆಫ್ ದಿ ಮ್ಯಾಚ್ ರಿವಾರ್ಡ್ ಕೂಡ ಪಡ್ಕೊಂಡ್ರು.

ಆರ್ ಸಿಬಿ ಪರ 3 ಸಲ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಕೃನಾಲ್!

ಈ ಸೀಸನ್​ನಲ್ಲಿ ಆರ್​ಸಿಬಿ ಲೀಗ್ ಹಂತದ 9 ಪಂದ್ಯ ಹಾಗೇ ಕ್ವಾಲಿಫೈಯರ್ 1 ಮತ್ತು ಫೈನಲ್ ಮ್ಯಾಚ್ ಸೇರಿ ಟೋಟಲ್ಲಾಗಿ 11 ಪಂದ್ಯಗಳನ್ನ ಗೆದ್ದಿದೆ. ಇದ್ರಲ್ಲಿ 9 ಬೇರೆ ಬೇರೆ ಪ್ಲೇಯರ್ಸ್ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಗೆದ್ದು ಬೀಗಿದ್ದಾರೆ. ಇಂಟ್ರೆಸ್ಟಿಂಗ್ ಅಂದ್ರೆ ಆರ್​ಸಿಬಿ ಪರ ಈ ಸೀಸನ್​ನಲ್ಲಿ ಕೃನಾಲ್ ಪಾಂಡ್ಯ ಮೂರು ಸಲ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಮುತ್ತಿಕ್ಕಿದ್ದಾರೆ. ಕೊಲ್ಕತ್ತಾದ ಈಡನ್ ಗಾರ್ಡನ್ಸ್​ನಲ್ಲಿ ನಡೆದಿದ್ದ ಉದ್ಘಾಟನಾ ಪಂದ್ಯದಲ್ಲೇ 3 ವಿಕೆಟ್ಸ್ ಕಿತ್ತು ಶುಭಾರಂಭಕ್ಕೆ ಮುನ್ನುಡಿ ಬರೆದಿದ್ರು. ಮ್ಯಾನ್ ಆಫ್ ದಿ ಮ್ಯಾಚ್ ರಿವಾರ್ಡ್ ಪಡೆದಿದ್ರು. ಆ ಬಳಿಕ ದೆಹಲಿ ವಿರುದ್ಧದ ಮ್ಯಾಚಲ್ಲಿ 73 ರನ್ ಗಳಿಸಿ ಆರ್ ಸಿಬಿ ಗೆಲುವಿನ ಹೀರೋ ಆಗಿ ಎರಡನೇ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರೈಜ್ ಪಡೆದಿದ್ರು. ಇದೀಗ ಫೈನಲ್ ಪಂದ್ಯದಲ್ಲಿ 4 ಓವರ್​ಗಳಳನ್ನ ಬೌಲ್ ಮಾಡಿ ಕೇವಲ 17 ರನ್​ಗಳನ್ನ ನೀಡಿದ್ರು. ಎರಡು ಪ್ರಮುಖ ವಿಕೆಟ್​ಗಳನ್ನ ಉರುಳಿಸಿದ್ರು.  ಈ ಮೂಲಕ ಒಂದೇ ಸೀಸನ್​ನಲ್ಲಿ ಮೂರನೇ ಬಾರಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ತಮ್ಮದಾಗಿಸಿಕೊಂಡ್ರು.

ಐಪಿಎಲ್ ಫೈನಲ್ ನಲ್ಲಿ 2 ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಏಕೈಕ ಆಟಗಾರ

ಇಷ್ಟೇ ಅಲ್ದೇ ಕೃನಾಲ್ ಪಾಂಡ್ಯ ಐಪಿಎಲ್ ಇತಿಹಾಸನದಲ್ಲಿ ಯಾರೂ ಮಾಡಿರದ ಸಾಧನೆ ಮಾಡಿದ್ದಾರೆ.  ಅಂದ್ರೆ ಐಪಿಎಲ್ ವೃತ್ತಿ ಜೀವನದಲ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಗೆದ್ದಿರುವುದು ಇದು ಎರಡನೇ ಬಾರಿ. 2017 ರ ಫೈನಲ್‌ನಲ್ಲಿ ಮುಂಬೈ ಇಂಡಿಯನ್ಸ್ ಪರ ಕಣಕ್ಕಿಳಿಯುತ್ತಿದ್ದ ಕೃನಾಲ್ ಪಾಂಡ್ಯ ಫೈನಲ್ ಪಂದ್ಯದಲ್ಲಿ ರೈಸಿಂಗ್ ಪುಣೆ ಸೂಪರ್ ಜೇಂಟ್ಸ್ ವಿರುದ್ಧ ಅತ್ಯದ್ಭುತ ಪ್ರದರ್ಶನ ನೀಡಿದ್ರು. ಌಕ್ಚುಲಿ ಆವತ್ತಿನ ಮ್ಯಾಚಲ್ಲಿ ಮುಂಬೈ ತಂಡ 20 ಓವರ್​ಗಳಲ್ಲಿ 8 ವಿಕೆಟ್ ನಷ್ಟಕ್ಕೆ ಕಲೆ ಹಾಕಿದ್ದೇ 129 ರನ್ಸ್. ಮುಂಬೈ ಪರ ಹೈಯೆಸ್ಟ್ ರನ್ ಸ್ಕೋರರ್ ಆಗಿದ್ದು ಕೃನಾಲ್ ಪಾಂಡ್ಯ. 38 ಬಾಲ್​ಗಳಲ್ಲೇ 47 ರನ್ಸ್ ಕಲೆ ಹಾಕಿದ್ರು. ಹಾಗೇ ಬೌಲಿಂಗ್​ನಲ್ಲಿ 4 ಓವರ್ ಬೌಲ್ ಮಾಡಿ 31 ರನ್ಸ್ ಕೊಟ್ಟಿದ್ರು. ಕೃನಾಲ್ ರ ಈ ಆಲ್ ರೌಂಡ್ ಪ್ರದರ್ಶನದಿಂದ ಮುಂಬೈ ತಂಡ ಕೇವಲ 1 ರನ್​ನಿಂದ ಗೆದ್ದು ಬೀಗಿತ್ತು. ಹೀಗಾಗಿ ಪಂದ್ಯಶ್ರೇಷ್ಠ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ರು.

ಇನ್ನು ಇಷ್ಟೇ ಅಲ್ದೇ ಕೃನಾಲ್ ಪಾಂಡ್ಯ ತಮ್ಮ ಐಪಿಎಲ್ ಕರಿಯರ್​ನಲ್ಲಿ ಒಟ್ಟಾರೆಯಾಗಿ ನಾಲ್ಕು ಬಾರಿ ಫೈನಲ್ ಗೆದ್ದ ತಂಡದ ಭಾಗವಾಗಿದ್ದಾರೆ. 2017, 2019 ಮತ್ತು 2020 ರಲ್ಲಿ ಮುಂಬೈ ತಂಡದೊಂದಿಗೆ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಇದೀಗ ಆರ್​ಸಿಬಿ ಪರ ತಮ್ಮ ನಾಲ್ಕನೇ ಐಪಿಎಲ್ ಟ್ರೋಫಿಗೆ ಮುತ್ತಿಟ್ಟಿದ್ದಾರೆ. ಒಟ್ನಲ್ಲಿ ಆರ್​ಸಿಬಿ ಕಪ್ ಗೆಲುವಿನ ಹಿಂದೆ ಎಲ್ಲರದ್ದೂ ಪಾಲಿದೆ. ಬಟ್ ಫೈನಲ್ ಮ್ಯಾಚಲ್ಲಿ ಕೃನಾಲ್ ಪಾಂಡ್ಯ ಸ್ವಲ್ಪ ಸ್ಪೆಷಲ್ ಅನ್ಸಿದ್ದು ಸುಳ್ಳಲ್ಲ.

Shwetha M

Leave a Reply

Your email address will not be published. Required fields are marked *