ಸ್ಮೃತಿ ಓಪನರ್.. ರಿಚಾ ಫಿನಿಶರ್ – ಟಗರುಪುಟ್ಟಿ ಶ್ರೇಯಾಂಕಾ ಈಸ್ ಬ್ಯಾಕ್
ಪೆರ್ರಿ ಇಲ್ಲದ RCB ಕಪ್ ಗೆಲ್ಲುತ್ತಾ?

ಸ್ಮೃತಿ ಓಪನರ್.. ರಿಚಾ ಫಿನಿಶರ್ – ಟಗರುಪುಟ್ಟಿ ಶ್ರೇಯಾಂಕಾ ಈಸ್ ಬ್ಯಾಕ್ಪೆರ್ರಿ ಇಲ್ಲದ RCB ಕಪ್ ಗೆಲ್ಲುತ್ತಾ?

ಮಿನಿ ಆಕ್ಷನ್ ಮುಗೀತು.. ಶೆಡ್ಯೂಲ್ ಫಿಕ್ಸ್ ಆಯ್ತು.. ಪ್ಲೇಯರ್ಸ್ ಫೈನಲ್ ಆದ್ರು.. ಫೋಟೋಶೂಟ್​ಗಳಲ್ಲೂ ಪೋಸ್ ಕೊಟ್ಟಿದ್ದಾಯ್ತು.. ಇನ್ನೇನಿದ್ರೂ ಅಖಾಡಕ್ಕಿಳಿದು ಧೂಳೆಬ್ಬಿಸೋದೊಂದೇ ಬಾಕಿ. ನಾಲ್ಕನೇ ಆವೃತ್ತಿಯ ವುಮೆನ್ಸ್ ಪ್ರೀಮಿಯರ್​ ಲೀಗ್​ಗೆ ಕೌಂಟ್​ಡೌನ್ ಶುರುವಾಗಿದೆ. ಶುಕ್ರವಾರ ಟೂರ್ನಿಯ ಮೊದಲ ಪಂದ್ಯ ನಡೆಯಲಿದ್ದು, ಐದು ತಂಡಗಳು ಚಾಂಪಿಯನ್​ಶಿಪ್​ಗಾಗಿ ಫೈಟ್ ನಡೆಸಲಿವೆ. ಉದ್ಘಾಟನಾ ಪಂದ್ಯದಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇಯರ್ಸ್ ಪೈಪೋಟಿ ನಡೆಸಲಿದ್ದಾರೆ.

ಇದನ್ನೂ ಓದಿ : 2026ರಲ್ಲಿ KING ನಡೆದಿದ್ದೇ ದಾರಿ – ಚರಿತ್ರೆ ಸೃಷ್ಟಿಸೋ ಅವತಾರಗಳೆಷ್ಟು?

2026ನೇ ಆವೃತ್ತಿಯ ಡಬ್ಲ್ಯೂಪಿಎಲ್​ 4ನೇ ಸೀಸನ್ ಜನವರಿ 9ರಿಂದ ಆರಂಭವಾಗಲಿದೆ. ನವಿ ಮುಂಬೈನಲ್ಲಿ ಮೊದಲ ಪಂದ್ಯ ನಡೆಯಲಿದ್ದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್   ಮುಖಾಮುಖಿ ಆಗಲಿವೆ. ಒಂದ್ಕಡೆ 2024ರ ಚಾಂಪಿಯನ್ ಆರ್​ಸಿಬಿ ಇನ್ನೊಂದ್ಕಡೆ 2025ರ ಚಾಂಪಿಯನ್ಸ್ ಮುಂಬೈ ನಡುವೆ ಹೈವೋಲ್ಟೇಜ್ ಫೈಟ್ ನಡೆಯಲಿದೆ. ಸ್ಮೃತಿ ಮಂದಾನ ಕ್ಯಾಪ್ಟನ್ಸಿಯಲ್ಲಿ ಬೆಂಗಳೂರು ಟೀಂ ಪವರ್​ಫುಲ್ ಆಗಿ ರೆಡಿ ಆಗಿವೆ.

ಬ್ಯಾಟಿಂಗ್, ಬೌಲಿಂಗ್ ಮತ್ತು ಆಲ್ ರೌಂಡರ್ಸ್ ಸೂಪರ್!

ಐಪಿಎಲ್ ಮತ್ತು ಡಬ್ಲ್ಯೂಪಿಎಲ್ ಎರಡರಲ್ಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೂಪರ್ ಸ್ಟ್ರಾಂಗ್ ಆಗಿದೆ. ಬ್ಯಾಟಿಂಗ್ ಲೈನಪ್ ಬೊಂಬಾಟ್ ಆಗಿದೆ. ಟಿ20 ಸೂತ್ರ, ಪವರ್​ ಹಿಟ್ಟರ್‌ಗಳು, ಅದ್ಭುತ ಸ್ಟ್ರೈಕ್ ರೇಟ್ ಇರೋರನ್ನೇ ತಂಡಕ್ಕೆ ಪಿಕ್ ಮಾಡಿದೆ. ಈ ವರ್ಷ ಎಲ್ಲಿಸ್ ಪೆರ್ರಿ ಐಪಿಎಲ್​ನಿಂದ ಹಿಂದೆ ಸರಿದಿದ್ರೂ ಕೂಡ ಬ್ಯಾಟಿಂಗ್ ಸ್ಟ್ರಾಂಗ್ ಆಗೇ ಕಾಣ್ತಿದೆ. ಮಿಡಲ್ ಆರ್ಡರ್​ನಲ್ಲಿ ಫಿನಿಶರ್ಸ್ ಕೂಡ ಬೆಸ್ಟ್ ಇದ್ದಾರೆ. ಌಂಡ್ ಈ ಸಲ ಬೌಲಿಂಗ್ ಮತ್ತಷ್ಟು ಸ್ಟ್ರಾಂಗ್ ಆಗಿದೆ. ಇಂಗ್ಲೆಂಡ್ ತಂಡದ ಸ್ಟಾರ್ ಆಟಗಾರ್ತಿ ಲಾರೆನ್ ಬೆಲ್, ಹಾಗೇ ಕರ್ನಾಟಕದ ಟಗರು ಪುಟ್ಟಿ ಶ್ರೇಯಾಂಕ ಪಾಟೀಲ್ ಬಂದಿರೋದು ಅಡ್ವಾಂಟೇಜ್ ಆಗಲಿದೆ.

ಆರ್ ಸಿಬಿ ಸಂಭಾವ್ಯ ಪ್ಲೇಯಿಂಗ್ 11

ಸ್ಮೃತಿ ಮಂಧಾನ

ಜಾರ್ಜಿಯಾ ವೊಲ್

ದಯಾಳನ್ ಹೇಮಲತಾ

ರಿಚಾ ಘೋಷ್

ಗ್ರೇಸ್ ಹ್ಯಾರಿಸ್

ನಾಡಿನ್ ಡಿ ಕ್ಲರ್ಕ್

ಪೂಜಾ ವಸ್ತ್ರಕರ್

ಶ್ರೇಯಾಂಕಾ ಪಾಟೀಲ್

ರಾಧಾ ಯಾದವ್

ಅರುಂಧತಿ ರೆಡ್ಡಿ

ಲಾರೆನ್ ಬೆಲ್

ಹೀಗೆ ಆರ್​ಸಿಬಿ ಪ್ಲೇಯಿಂಗ್ 11 ಕಂಪ್ಲೀಟ್ ಬ್ಯಾಲೆನ್ಸಿಂಗ್ ಆಗಿದೆ. ಲೀಗ್ ಹಂತದಲ್ಲಿ ಆರ್​ಸಿಬಿ ಒಟ್ಟು 8 ಪಂದ್ಯಗಳನ್ನಾಡಲಿದೆ. ಜನವರಿ 9ರಂದು ನವಿ ಮುಂಬೈನ ಡಿ.ವೈ. ಪಾಟೀಲ್ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಮೊದಲ ಪಂದ್ಯ ಆಡಲಿದೆ. ನಂತ್ರ ಜನವರಿ 12ರಂದು ಯುಪಿ ವಾರಿಯರ್ಸ್ ವಿರುದ್ಧ , ಜನವರಿ 16ರಂದು ಗುಜರಾತ್ ಜೈಂಟ್ಸ್ ವಿರುದ್ಧ, , ಜನವರಿ 17ರಂದು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆಡಲಿದೆ. ಜನವರಿ 19ರಂದು ಗುಜರಾತ್ ಜೈಂಟ್ಸ್ ವಿರುದ್ಧ , ಜನವರಿ 24ರಂದು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ , ಜನವರಿ 26ರಂದು ಮುಂಬೈ ಇಂಡಿಯನ್ಸ್ ವಿರುದ್ಧ ಆಡಲಿದೆ. ಕೊನೆಯದಾಗಿ, ಜನವರಿ 29ರಂದು ಯುಪಿ ವಾರಿಯರ್ಜ್ ವಿರುದ್ಧ ವಡೋದರದಲ್ಲಿ ತನ್ನ ಲೀಗ್ ಹಂತದ ಕೊನೆಯ ಪಂದ್ಯವನ್ನು ಆಡಲಿದೆ.

ಇನ್ನು ಟೂರ್ನಿ ಬಗ್ಗೆ ಒಟ್ಟು 28 ದಿನಗಳ ಕಾಲ ಟೂರ್ನಿ ನಡೆಯಲಿದೆ. ನವಿ ಮುಂಬೈನ ಡಿ.ವೈ. ಪಾಟೀಲ್ ಕ್ರೀಡಾಂಗಣವು ಮೊದಲ 11 ಪಂದ್ಯಗಳಿಗೆ ಆತಿಥ್ಯ ವಹಿಸಲಿದೆ. ಇದರಲ್ಲಿ ಎರಡು ಡಬಲ್ ಹೆಡರ್‌ಗಳು (ಒಂದೇ ದಿನ ಎರಡು ಪಂದ್ಯಗಳು) ನಡೆಯುತ್ವೆ. ನಂತರ ವಡೋದರದ ಕೋಟಂಬಿ ಕ್ರೀಡಾಂಗಣಕ್ಕೆ ಪಂದ್ಯಗಳು ಶಿಫ್ಟ್ ಆಗಲಿವೆ.. ಇಲ್ಲಿ ಕೊನೆಯ 11 ಪಂದ್ಯಗಳು ನಡೆಯಲಿವೆ. ಎರಡೂ ಮೈದಾನಗಳಲ್ಲಿ ಆರ್​ಸಿಬಿ ತಲಾ ನಾಲ್ಕು ನಾಲ್ಕು ಪಂದ್ಯಗಳನ್ನ ಆಡಲಿದೆ.  ಫೆಬ್ರವರಿ 3ರಂದು ಎಲಿಮಿನೇಟರ್ ಪಂದ್ಯ ಮತ್ತು ಫೆಬ್ರವರಿ 5ರಂದು ಫೈನಲ್ ಪಂದ್ಯ ಸಹ ವಡೋದರದಲ್ಲಿಯೇ ನಡೆಯಲಿವೆ. ಫೈನಲ್ ಪಂದ್ಯ ಫೆಬ್ರವರಿ 5ರ ಗುರುವಾರದಂದು ನಡೆಯದೆ. ಅಲ್ಲಿಗೆ 4ನೇ ಆವೃತ್ತಿಯ ವುಮೆನ್ಸ್ ಪ್ರೀಮಿಯರ್​ ಲೀಗ್​ಗೆ ತೆರೆ ಬೀಳಲಿದೆ.

Shantha Kumari