2026ಕ್ಕೆ RCB 4+12 ಸೂತ್ರ – ಚೀಪ್ ಆದ್ರೂ ಬೆಸ್ಟ್ ಸೆಲೆಕ್ಷನ್  
ಸ್ಮೃತಿ, ಪೆರ್ರಿ ಜತೆ ಬೆಲ್.. ಕಪ್ ನಮ್ದೇ?

2026ಕ್ಕೆ RCB 4+12 ಸೂತ್ರ – ಚೀಪ್ ಆದ್ರೂ ಬೆಸ್ಟ್ ಸೆಲೆಕ್ಷನ್  ಸ್ಮೃತಿ, ಪೆರ್ರಿ ಜತೆ ಬೆಲ್.. ಕಪ್ ನಮ್ದೇ?

2026ರ ವುಮೆನ್ಸ್ ಪ್ರೀಮಿಯರ್ ಲೀಗ್​ಗಾಗಿ ನಡೆದ ಮೆಗಾ ಹರಾಜು ಈ ಸಲ ಸಾಕಷ್ಟು ಅಚ್ಚರಿಗಳಿಗೆ ಕಾರಣವಾಗಿದೆ. ಐಸಿಸಿ ಟ್ರೋಫಿಗಳಿಗೆ ಮುತ್ತಿಕ್ಕಿದ್ದ ಸ್ಟಾರ್ ಪ್ಲೇಯರ್ಸ್ ಹರಾಜಿನಲ್ಲಿ ಅನ್​ಸೋಲ್ಡ್ ಆದ್ರೆ ಇನ್ನೂ ಕೆಲವ್ರು ದುಬಾರಿ ಬೆಲೆಗೆ ಬಿಡ್ ಆಗಿದ್ದಾರೆ. ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಕೂಡ ಮೆಗಾ ಹರಾಜಿನಲ್ಲಿ ಅಳೆದು ತೂಗಿ ಆಟಗಾರ್ತಿಯರನ್ನ ಖರೀದಿ ಮಾಡಿದೆ. ಮಹಿಳಾ ಪ್ರೀಮಿಯರ್ ಲೀಗ್​ಗೆ ನಡೆದ ಮೆಗಾ ಆಕ್ಷನ್​ನಲ್ಲಿ ಒಟ್ಟಾರೆ 276 ಆಟಗಾರ್ತಿಯರು ಭಾಗಿಯಾಗಿದ್ರು. 73 ಸ್ಥಾನಗಳು ಖಾಲಿ ಇದ್ರೂ ಕೂಡ 67 ಸ್ಥಾನಗಳಷ್ಟೇ ಭರ್ತಿ ಆಯ್ತು. ಇನ್ನು 2024 ರ ಆವೃತ್ತಿಯಲ್ಲಿ ಚಾಂಪಿಯನ್ ಆಗಿದ್ದ ಆರ್​ಸಿಬಿ ಹರಾಜಿಗೂ ಮುನ್ನ ನಾಲ್ವರನ್ನು ರಿಟೇನ್ ಮಾಡಿಕೊಂಡು ಉಳಿದವ್ರನ್ನ ರಿಲೀಸ್ ಮಾಡಿತ್ತು. 6.15 ಕೋಟಿ ರೂಪಾಯಿ ಬಜೆಟ್​ನೊಂದಿಗೆ ಹರಾಜಿಗೆ ಇಳಿದಿದ್ದ ಬೆಂಗಳೂರು ಫ್ರಾಂಚೈಸಿ 12 ಆಟಗಾರ್ತಿಯರನ್ನು ಖರೀದಿ ಮಾಡಿದೆ. ಈಗ ಟೋಟಲ್ಲಾಗಿ ತಂಡದಲ್ಲಿ 16 ಪ್ಲೇಯರ್ಸ್ ಒಟ್ಟಾಗಿದ್ದಾರೆ.

ಇದನ್ನೂ ಓದಿ : 1.10 ಕೋಟಿ ರೂ.ಗೆ ಡೆಲ್ಲಿ ತಂಡದ ಪಾಲಾದ ದಕ್ಷಿಣ ಆಫ್ರಿಕಾ ನಾಯಕಿ ಲಾರಾ ವೊಲ್ವಾರ್ಡ್ಟ್

ರಿಟೇನ್ ಮಾಡಿಕೊಂಡಿದ್ದ ಪ್ಲೇಯರ್ಸ್!

ಸ್ಮೃತಿ ಮಂಧಾನ- 3.5 ಕೋಟಿ

ಎಲ್ಲಿಸ್ ಪೆರ್ರಿ- 2 ಕೋಟಿ

ರಿಚಾ ಘೋಷ್- 2.4 ಕೋಟಿ

ಶ್ರೇಯಾಂಕ ಪಾಟೀಲ್- 60 ಲಕ್ಷ

ಇವ್ರು ನಾಲ್ಕು ಜನ ಮಾತ್ರವೇ ಮೆಗಾ ಹರಾಜಿಗೂ ಮತ್ತು ರಿಟೇನ್ ಆಗಿದ್ರು. ಈ ನಾಲ್ಕು ಆಟಗಾರ್ತಿಯರಿಗಾಗಿ ಒಟ್ಟು ₹8.85 ಕೋಟಿ ವೆಚ್ಚವಾಗಿತ್ತು. ಇದೀಗ ಉಳಿದ ಮೊತ್ತದಲ್ಲಿ 12 ಆಟಗಾರ್ತಿಯರನ್ನ ಖರೀದಿ ಮಾಡಿದೆ.

ಹರಾಜಿನಲ್ಲಿ ಖರೀದಿಸಿದ ಆಟಗಾರ್ತಿಯರು

ಜಾರ್ಜಿಯಾ ವೋಲ್-60 ಲಕ್ಷ

ನಡಿನ್ ಡಿ ಕ್ಲರ್ಕ್-65 ಲಕ್ಷ

ರಾಧಾ ಯಾದವ್- 65 ಲಕ್ಷ

ಲಾರೆನ್ ಬೆಲ್- 90 ಲಕ್ಷ

ಲೆನ್ಸಿ ಸ್ಮಿತ್- 30 ಲಕ್ಷ

ಪ್ರೇಮಾ ರಾವತ್- 20 ಲಕ್ಷ

ಅರುಂಧತಿ ರೆಡ್ಡಿ- 75 ಲಕ್ಷ

ಪೂಜಾ ವಸ್ತ್ರಕರ್- 85 ಲಕ್ಷ

ಗ್ರೇಸ್ ಹ್ಯಾರಿಸ್- 75 ಲಕ್ಷ

ಗೌತಮಿ ನಾಯ್ಕ್- 10 ಲಕ್ಷ

ಪ್ರತ್ಯೂಷಾ ಕುಮಾರ್- 10 ಲಕ್ಷ

ಡಿ ಹೇಮಲತಾ- 30 ಲಕ್ಷ

ನೀವಿಲ್ಲಿ ಗಮನಿಸಿದ್ರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಮೆಗಾ ಹರಾಜಿನಲ್ಲಿ ಯಾರಿಗೂ ಕೋಟಿ ಕೊಟ್ಟೇ ಇಲ್ಲ. ಅಂದ್ರೆ ಒಂದು ಕೋಟಿ ಒಳಗೇ ಎಲ್ಲರನ್ನೂ ಖರೀದಿ ಮಾಡಿದೆ. ಇಂಗ್ಲೆಂಡ್​ ವೇಗಿ ಲಾರೆನ್​ ಬೆಲ್​ಗೆ 90 ಲಕ್ಷ ನೀಡಿದ್ದೇ ಆರ್​​ಸಿಬಿಯ ದುಬಾರಿ ಖರೀದಿಯಾಗಿದೆ. ಪಕ್ಕಾ ಪ್ಲ್ಯಾನ್​ನಲ್ಲೇ ಕಣಕ್ಕಿಳಿದಿದ್ದ ರೆಡ್​ಆರ್ಮಿ ಚೀಪ್​ ಌಂಡ್ ಬೆಸ್ಟ್​ ಎನ್ನುವಂರೆ ಆಟಗಾರ್ತಿಯರನ್ನೇ ಬೇಟೆಯಾಡಿದೆ. ಌಂಡ್ ಪ್ರಸ್ತುತ ತಂಡದಲ್ಲಿ ಮೂವರು ಪ್ಯೂರ್ ಬ್ಯಾಟರ್ಸ್ ಇದ್ದಾರೆ. ಇಬ್ಬರು ವಿಕೆಟ್ ಕೀಪರ್ಸ್ ಇದ್ದಾರೆ. ಌಂಡ್ ಐವರು ಆಲ್​ರೌಂಡರ್ಸ್ ಹಾಗೇ ಆರು ಜನ ಬೌಲರ್ಸ್ ಇದ್ದಾರೆ. ಬಟ್ ಆರ್​ಸಿಬಿ ಹೊರತು ಪಡಿಸಿ ಬೇರೆ ಬೇರೆ ತಂಡಗಳು ಪ್ಲೇಯರ್ಸ್ ಮೇಲೆ ಕೋಟಿ ಕೋಟಿ ಹಣ ಸುರಿದಿದ್ದಾರೆ.

ಹರಾಜಿನಲ್ಲಿ ಕೋಟಿ ಕೋಟಿ ಬಿಡ್.. ದೀಪ್ತಿಗೆ ಹೈಯೆಸ್ಟ್ ಸ್ಯಾಲರಿ!

2025ರ ಐಸಿಸಿ ವುಮೆನ್ಸ್ ಏಕದಿನ ವಿಶ್ವಕಪ್​ನಲ್ಲಿ ಭಾರತ ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಆಲ್​ರೌಂಡರ್ ದೀಪ್ತಿ ಶರ್ಮಾಗೆ ಮೆಗಾ ಹರಾಜಿನಲ್ಲಿ ಬಂಪರ್ ಲಾಟರಿ ಹೊಡೆದಿದೆ. ಯುಪಿ ವಾರಿಯರ್ಸ್ ತಂಡ ಬರೋಬ್ಬರಿ 3.20 ಕೋಟಿ ರೂಪಾಯಿಗೆ ಆರ್​ಟಿಎಂ ಕಾರ್ಡ್ ಬಳಸಿ ತಂಡಕ್ಕೆ ಸೇರಿಸಿಕೊಂಡಿದೆ. ಌಂಡ್ ನೆಕ್ಸ್​ಟ್ ಅಮೆಲಿಯಾ ಕೆರ್ ಅವ್ರನ್ನ ಮುಂಬೈ ತಂಡ 3 ಕೋಟಿಗೆ ಖರೀದಿ ಮಾಡಿದೆ. ಶಿಖಾ ಪಾಂಡೆ 2.40 ಕೋಟಿಗೆ ಯುಪಿ ಪಾಲಾಗಿದ್ರೆ ಸೋಫಿ ಡಿವೈನ್​ಗೆ 2 ಕೋಟಿ ನೀಡಿ ಗುಜರಾತ್ ತಂಡ ಸೆಳೆದುಕೊಂಡಿದೆ. ಇನ್ನು 7 ಆಟಗಾರ್ತಿಯರು ಒಂದು ಕೋಟಿಗೂ ಹೆಚ್ಚು ಮೊತ್ತಕ್ಕೆ ಸೇಲ್ ಆಗಿದ್ದಾರೆ.

ಜನವರಿ 9ಕ್ಕೆ ಆರಂಭ.. ಫೆಬ್ರವರಿ 5ಕ್ಕೆ ಫೈನಲ್!

ಇನ್ನು 2026ರ ಆರಂಭದಲ್ಲೇ ಡಬ್ಲ್ಯೂಪಿಎಲ್ ಹಬ್ಬ ಶುರುವಾಗುತ್ತೆ. ಜನವರಿ 9 ರಂದು ಟೂರ್ನಿ ಉದ್ಘಾಟನೆಯಾಗಲಿದ್ದು ಫೆಬ್ರವರಿ 5 ರಂದು ಫೈನಲ್ ಪಂದ್ಯ ನಡೆಯಲಿದೆ. ಎಲ್ಲಾ ಡಬ್ಲ್ಯೂಪಿಎಲ್ ಪಂದ್ಯಗಳು ನವಿ ಮುಂಬೈ ಮತ್ತು ವಡೋದರಾದಲ್ಲಿ ನಡೆಯಲಿವೆ. ಟೂರ್ನಿಯ ಮೊದಲಾರ್ಧವನ್ನು ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ಆಡಲಾಗುತ್ತದೆ. ನಂತರ ಅದು ವಡೋದರಾಕ್ಕೆ ಶಿಫ್ಟ್ ಆಗುತ್ತೆ. 2023 ರಲ್ಲಿ ಪ್ರಾರಂಭವಾದ ಮಹಿಳಾ ಪ್ರೀಮಿಯರ್ ಲೀಗ್ 2026 ಲೀಗ್‌ಗೆ ನಾಲ್ಕನೇ ಸೀಸನ್ ಆಗಿರುತ್ತದೆ. ಕಳೆದ ಮೂರು ಸೀಸನ್​ಗಳಲ್ಲಿ ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಮುಂಬೈ ತಂಡವು 2023 ಮತ್ತು 2025 ರಲ್ಲಿ ಪ್ರಶಸ್ತಿಯನ್ನು ಗೆದ್ದಿತ್ತು. ಸ್ಮೃತಿ ಮಂಧಾನ ಮುನ್ನಡೆಸುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 2024ರಲ್ಲಿ ಒಂದು ಬಾರಿ ಚಾಂಪಿಯನ್ ಇತಿಹಾಸ ಸೃಷ್ಟಿಸಿದೆ. ಇಂಟ್ರೆಸ್ಟಿಂಗ್ ಅಂದ್ರೆ ಡೆಲ್ಲಿ ಕ್ಯಾಪಿಟಲ್ಸ್ ಮೂರೂ ಆವೃತ್ತಿಗಳಲ್ಲೂ ಫೈನಲ್ ಪ್ರವೇಶ ಪಡೆದಿದೆ. ಆದ್ರೆ ಟ್ರೋಫಿ ಗೆಲ್ಲೋಕೆ ಸಾಧ್ಯವಾಗಿಲ್ಲ. ಮೂರು ಬಾರಿಯೂ ರನ್ನರ್-ಅಪ್ ಸ್ಥಾನ ಪಡೆದಿದೆ. ಫೈನಲಿ ಡಬ್ಲ್ಯೂಪಿಎಲ್​ ಸಮರಕ್ಕೆ ತಂಡಗಳು ರೆಡಿಯಾಗಿವೆ. ಸೋ ಇನ್ನೇನಿದ್ರೂ ಪ್ಲೇಯಿಂಗ್ 11 ಲೆಕ್ಕಾಚಾರ ಅಷ್ಟೇ ಬಾಕಿ ಇದೆ. ಪುರುಷರ ತಂಡದಂತೆಯೇ ಮಹಿಳಾ ತಂಡದಲ್ಲೂ ಅಳೆದು ತೂಗಿ ಹೆಜ್ಜೆ ಇಟ್ಟಿರೋ ಆರ್​ಸಿಬಿ ಮತ್ತೊಮ್ಮೆ ಟೈಟಲ್ ಗೆಲ್ಲೋ ಕಾನ್ಫಿಡೆನ್ಸ್​ನಲ್ಲಿದೆ.

Shantha Kumari