ಫಿನಾಲೆಗೆ RCB ಗ್ರ್ಯಾಂಡ್ ಎಂಟ್ರಿ – ಜೋಶ್, ಸುಯಾಶ್ ಡೆಡ್ಲಿ ಅಟ್ಯಾಕ್ ಗೆ ಪತರುಗುಟ್ಟಿದ ಪಂಜಾಬ್‌   

ಫಿನಾಲೆಗೆ RCB ಗ್ರ್ಯಾಂಡ್ ಎಂಟ್ರಿ – ಜೋಶ್, ಸುಯಾಶ್ ಡೆಡ್ಲಿ ಅಟ್ಯಾಕ್ ಗೆ ಪತರುಗುಟ್ಟಿದ ಪಂಜಾಬ್‌   

ಈ ಸಲ ಕಪ್ ನಮ್ದು ಅಂತಾ ಎದೆಯುಬ್ಬಿಸಿ ಹೇಳೋಕೆ ಇನ್ನೊಂದೇ ಹೆಜ್ಜೆ. 18 ವರ್ಷಗಳ ಮಹಾತಪಸ್ಸು ಫಲಿಸೋ ಗಳಿಗೆಗೆ ಮುಹೂರ್ತ ಫಿಕ್ಸ್ ಆಗಿದೆ.  ಟಾಪ್ ಆಫ್ ದಿ ಟೇಬಲ್ ಪಂಜಾಬ್ ಕಿಂಗ್ಸ್ ತಂಡವನ್ನ ಸೋಲಿಸಿ 18ನೇ ಸೀಸನ್​ ಐಪಿಎಲ್​ನ ಫಸ್ಟ್ ಫೈನಲಿಸ್ಟ್ ಆಗಿ ಗ್ರ್ಯಾಂಡ್ ಆಗಿ ಎಂಟ್ರಿ ಕೊಟ್ಟಿದ್ದಾರೆ. ಇನ್ನೇನಿದ್ರೂ ಜೂನ್ 3ಕ್ಕೆ ನಡೆಯೋ ಚಾಂಪಿಯನ್ ಫೈಟ್​ನಲ್ಲಿ ಯಾರು ಎದುರಾಳಿ ಅನ್ನೋದನ್ನ ಕಾಯೋದಷ್ಟೇ ಬಾಕಿ.

ಇದನ್ನೂ ಓದಿ: ನೀರಿನ ವಿಚಾರದಲ್ಲಿ ಪಾಕಿಸ್ತಾನ ಎಂದೂ ರಾಜಿ ಮಾಡಿಕೊಳ್ಳುವುದಿಲ್ಲ – ಪಾಕಿಸ್ತಾನ ಸೇನಾ ಮುಖ್ಯಸ್ಥ ಆಸಿಮ್

ಕಂಪ್ಲೀಟ್ ಡಾಮಿನೇಷನ್.. ಟಾಸ್ ಇಂದ ಹಿಡ್ದು ಮ್ಯಾಚ್ ವಿನ್ನಿಂಗ್ ಸಿಕ್ಸರ್ ಹೊಡೆಯೋವರೆಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬಾಯ್ಸ್ ಕಂಪ್ಲೀಟ್ ಡಾಮಿನೇಟ್ ಮಾಡಿದ್ರು. ಬೌಲಿಂಗ್​ಗೆ ಬಂದವ್ರೆಲ್ಲಾ ವಿಕೆಟ್​​ ಎತ್ತಾಕ್ಕೊಳ್ತಿದ್ರೆ ಪಂಜಾಬ್ ಬ್ಯಾಟರ್ಸ್ ಪೆವಿಲಿಯನ್ ಟು ಕ್ರೀಸ್.. ಕ್ರೀಸ್ ಟು ಪೆವಿಲಿಯನ್ ಅಂತಾ ಒಬ್ರಿಂದೆ ಒಬ್ರು ಪರೇಡ್ ನಡೆಸಿದ್ದೇ ನಡ್ಸಿದ್ದು. ಆರ್​ಸಿಬಿ ಫ್ಯಾನ್ಸ್​ ಚೂರೇಚೂರು ಟೆನ್ಷನ್ ಆಗೋಕೂ ಅವಕಾಶ ಕೊಡ್ಲೇ ಇಲ್ಲ. ಮ್ಯಾಚ್ ಓಪನಿಂಗ್ ಟು ಎಂಡಿಂಗ್​ವರೆಗೂ ಫುಲ್ ಪೈಸಾ ವಸೂಲ್ ಎಂಟಟೈನ್​ಮೆಂಟ್. 9 ವರ್ಷಗಳ ಬಳಿಕ ಫಿನಾಲೆಗೆ ಕಾಲಿಟ್ಟಿರೋ ರೆಡ್ ಆರ್ಮಿ ಕಪ್ ಕನಸನ್ನ ನನಸು ಮಾಡೋಕೆ ಜಸ್ಟ್ ಒಂದು ಗೆಲುವು ಬೇಕಷ್ಟೇ.

ಆರ್ ಸಿಬಿ ಬೌಲರ್ಸ್ ಪ್ರವಾಹಕ್ಕೆ ಕೊಚ್ಚಿ ಹೋದ ಪಂಜಾಬ್ ಬ್ಯಾಟರ್ಸ್!

ಕ್ವಾಲಿಫೈಯರ್ 1 ಮ್ಯಾಚ್ ಆಗಿದ್ರಿಂದ ಟಫ್ ಫೈಟ್ ಇದ್ದೇ ಇರುತ್ತೆ ಅಂತ್ಲೇ ಎಲ್ರೂ ಇಮ್ಯಾಜಿನ್ ಮಾಡ್ಕೊಂಡಿದ್ರು. ಯಾಕಂದ್ರೆ ಬೆಂಗಳೂರು ಮತ್ತು ಪಂಜಾಬ್ ಆಟಗಾರರು 19 ಪಾಯಿಂಟ್ಸ್​ಗಳೊಂದಿಗೆ ಟೇಬಲ್ ಟಾಪರ್ಸ್ ಆಗಿದ್ರು. ಟೂರ್ನಿಯುದ್ಧಕ್ಕೂ ಅತ್ಯದ್ಭುತ ಪ್ರದರ್ಶನಗಳನ್ನೇ ನೀಡ್ಕೊಂಡು ಬಂದಿದ್ರು. ಬಟ್ ಇದು ಚರಿತ್ರೆ ಸೃಷ್ಟಿಸೋ ಅವತಾರ ಅಂತಾ 18ನೇ ಸೀಸನ್​ಗೆ ಕಾಲಿಟ್ಟಿದ್ದ ರೆಡ್ ಆರ್ಮಿ ಲಾಸ್ಟ್ ಮ್ಯಾಚಲ್ಲಿ ರೆಕಾರ್ಡ್ ಬ್ರೇಕಿಂಗ್ ಚೇಸಿಂಗ್ ಮಾಡಿ ಕ್ವಾಲಿಫೈಯರ್ 1ಗೆ ಬಂದಿದ್ರು. ಬಟ್ ಈ ಮ್ಯಾಚಲ್ಲಿ ರಿಸ್ಕ್ ಫ್ರೀ ಪರ್ಫಾಮೆನ್ಸ್ ಮಾಡಿದ್ರು. ಬೌಲಿಂಗ್ ಮತ್ತು ಬ್ಯಾಟಿಂಗ್​ನಲ್ಲಿ ಪಂಜಾಬ್​ ಆಟಗಾರರನ್ನ ಅಟ್ಟಾಡಿಸಿದ್ರು. ಅದ್ರಲ್ಲೂ ಆರ್​ಸಿಬಿ ಬೌಲರ್ಸ್ ಬೌಲಿಂಗ್ ಪ್ರವಾಹದ ಮುಂದೆ ಶ್ರೇಯಸ್ ಪಡೆ ಬ್ಯಾಟಿಂಗ್ ಸ್ಕ್ಯಾಡ್ ಕಂಪ್ಲೀಟ್ ಕೊಚ್ಚಿ ಹೋಗಿತ್ತು.

14.1 ಓವರ್ ​ನಲ್ಲೇ 101 ರನ್ ​ಗಳಿಗೆ ಪಂಜಾಬ್ ಆಲೌಟ್!

ಚಂಢೀಗರ್​ನ ಮುಲ್ಲನ್​ಪುರ ಸ್ಟೇಡಿಯಮ್​ನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಆರ್​ಸಿಬಿ ಬೌಲಿಂಗ್ ಚೂಸ್ ಮಾಡಿಕೊಳ್ತು. ಸೋ ಫಸ್ಟ್ ಬ್ಯಾಟಿಂಗ್​ಗೆ ಇಳಿದ ಪಂಜಾಬ್ ಬ್ಯಾಟರ್ಸ್ ಮಿನಿಮಮ್ 200+ ಸ್ಕೋರ್ ಮಾಡ್ಬೇಕು ಅನ್ನೋ ಇಂಟೆನ್ಷನ್​ನಲ್ಲೇ ಇದ್ರು. ಆದ್ರೆ ಆರ್​ಸಿಬಿ ಬೌಲರ್ಸ್ ಸೆಟಲ್ ಆಗೋಕೂ ಚಾನ್ಸ್ ಕೊಡ್ಲಿಲ್ಲ. ಅದೆಷ್ಟರ ಮಟ್ಟಿಗೆ ಅಂದ್ರೆ ತಂಡದ 8 ಬ್ಯಾಟ್ಸ್‌ಮನ್‌ಗಳು ಎರಡಂಕಿ ತಲುಪಲೂ ಸಾಧ್ಯವಾಗಲಿಲ್ಲ. ಮಾರ್ಕಸ್ ಸ್ಟೊಯಿನಿಸ್ 26 ರನ್ ಗಳಿಸಿ ಹೈ ಸ್ಕೋರರ್ ಎನಿಸಿಕೊಂಡರೆ, ಪ್ರಭ್ ಸಿಮ್ರಾನ್ ಸಿಂಗ್ 18 ರನ್ ಮತ್ತು ಅಜ್ಮತುಲ್ಲಾ ಒಮರ್ಜೈ 18 ರನ್ ಗಳಿಸಿದ್ರು. ಉಳಿದವ್ರೆಲ್ಲಾ ಬಿಲೋ 10 ಇದ್ರು. ಟೋಟಲಿ ಓಪನರ್ ಬ್ಯಾಟರ್​ನಿಂದ ಹಿಡ್ದು 10ನೇ ವಿಕೆಟ್ ಪ್ಲೇಯರ್​​​ವರೆಗೂ ಕಂಪ್ಲೀಟ್ ಸರೆಂಡರ್ ಆದ್ರು. ಪರಿಣಾಮ 14.1 ಓವರ್‌ಗಳಲ್ಲಿ 101 ರನ್‌ಗಳಿಗೆ ಆಲೌಟ್ ಆಯ್ತು.

ಜಸ್ಟ್ 2 ವಿಕೆಟ್ ನಷ್ಟಕ್ಕೆ ಟಾರ್ಗೆಟ್ ಬೆನ್ನತ್ತಿದ ಬೆಂಗಳೂರು ಬ್ಯಾಟರ್ಸ್!

ಪಂಬಾಜ್ ನೀಡಿದ್ದ ಸ್ಕೋರ್ ನೋಡ್ದಾಗ ಇದು ಒನ್ ಸೈಡೆಡ್ ಮ್ಯಾಚ್ ಅನ್ನೋದು ಆಲ್ಮೋಸ್ಟ್ ಅಲ್ಲೇ ಡಿಸೈಡ್ ಆಗಿತ್ತು. ಸೋ ಆರ್​ಸಿಬಿ ಆಟಗಾರರು ಆರಾಮಾಗಿ ಚೇಸ್ ಮಾಡ್ತಾರೆ ಅನ್ನೋದು ಗೊತ್ತೇ ಇತ್ತು. ಅದ್ರಂತೆ ಫಿಲ್ ಸಾಲ್ಟ್ ಮತ್ತು ವಿರಾಟ್ ಕೊಹ್ಲಿ ಇನ್ನಿಂಗ್ಸ್ ಓಪನ್ ಮಾಡಿದ್ರು. 3 ಓವರ್​ಗಳಲ್ಲೇ 30 ಸ್ಕೋರ್ ಮಾಡಿದ್ರು. ಇವ್ರಿಬ್ರೆ ಮ್ಯಾಚ್ ಫಿನಿಶ್ ಮಾಡ್ತಾರೆ ಅನ್ಕೊಳ್ಳುವಾಗ್ಲೇ ವಿರಾಟ್ ವಿಕೆಟ್ ಉರುಳಿತ್ತು. ಆ ಬಳಿಕ ಮಯಾಂಕ್ ಸೆಟಲ್ ಆಗುವಷ್ಟ್ರಲ್ಲೇ ಔಟ್ ಆದ್ರು. ಬಟ್ ಫಿಲ್ ಸಾಲ್ಟ್ ಓಪನಿಂಗ್ ನಿಂದ್ಲೇ ಪಂಜಾಬ್ ಬೌಲರ್ಸ್ ಬೆಂಡೆತ್ತಿದ್ರು. ಜಸ್ಟ್ 27 ಎಸೆತಗಳಲ್ಲೇ 56 ರನ್ ಚಚ್ಚಿದ್ರು. ಹಾಗೇ ಕ್ಯಾಪ್ಟನ್ ಪಾಟಿದಾರ್ 8 ಬಾಲ್ ಗಳಲ್ಲೇ 15 ರನ್ ಗಳಿಸಿ ಲಾಸ್ಟಲ್ಲಿ ಸಿಕ್ಸ್ ಬಾರಿಸೋ ಮೂಲಕ ಮ್ಯಾಚ್ ಫಿನಿಶ್ ಮಾಡಿದ್ರು. ಅಲ್ಲಿಗೆ 8 ವಿಕೆಟ್​ಗಳ ಭರ್ಜರಿ ವಿಕ್ಟರಿಯೊಂದಿಗೆ ಆರ್​ಸಿಬಿ 18ನೇ ಸೀಸನ್​ನ ಫೈನಲ್​ಗೆ ಲಗ್ಗೆ ಇಟ್ಟಿದೆ.

ಜೋಶ್, ಸುಯಾಶ್ ಸುನಾಮಿ.. ದಯಾಳ್ ಬಿರುಗಾಳಿ!

ಆರ್​ಸಿಬಿ ಪರ ಕೃನಾಲ್ ಪಾಂಡ್ಯರನ್ನ ಹೊರತುಪಡಿಸಿ ಐವರು ವಿಕೆಟ್ ಬೇಟೆಯಾಡಿದ್ರು. ಅದ್ರಲ್ಲೂ ಸುಯಾಶ್ ಶರ್ಮಾ ಅಂತೂ ಹೀರೋ ಆದ್ರು. ಇಷ್ಟು ದಿನ ಆವರೇಜ್ ಪರ್ಫಾಮೆನ್ಸ್ ಬಂದ್ರೂ ಬಿಗ್ ಡೇ ಬಿಗ್ ಮ್ಯಾಚ್​ನಲ್ಲೇ ಪವರ್​ಫುಲ್ ಪರ್ಫಾಮೆನ್ಸ್ ಕೊಟ್ರು. ಹಾಗೇ ಇಂಜುರಿಯಿಂದ ಹೊರಗುಳಿದಿದ್ದ ಜೋಶ್ ಹೇಜಲ್​ವುಡ್ ಕಮ್ ಬ್ಯಾಕ್ ಕೂಡ ಆನೆ ಬಲ ಬಂದಂತಾಗಿತ್ತು. ಇದೇ ಕಾರಣಕ್ಕೆ ಪಂಜಾಬ್ ತಂಡ ಮೊದಲ 6 ಓವರ್​ಗಳಲ್ಲೇ ಪ್ರಮುಖ 4 ವಿಕೆಟ್‌ಗಳನ್ನು ಕಳೆದುಕೊಂಡಿದ್ದು 48 ರನ್​ಗಳನ್ನು ಕಲೆಹಾಕಿತ್ತು. ಇನ್ನು 60 ರನ್​ಗಳಿಗೆ 6 ವಿಕೆಟ್.. ಹಂಗೋ ಹಿಂಗೋ ತಿಣುಕಾಡಿ 100 ಕ್ರಾಸ್ ಮಾಡಿ ಆಲೌಟ್ ಆದ್ರು. ಆರ್​ಸಿಬಿ ಪರ ಸುಯಾಶ್ ಶರ್ಮಾ 17 ರನ್ ನೀಡಿ 3 ವಿಕೆಟ್ ಎಗರಿಸಿದ್ರು. ಹಾಗೇ ಜೋಶ್ ಹೇಜಲ್​ವುಡ್ 21 ರನ್ ನೀಡಿ 3 ವಿಕೆಟ್ ಕಿತ್ತು. ದಯಾಳ್ 2 ವಿಕೆಟ್ ಪಡೆದ್ರೆ ಭುವಿ ಹಾಗೇ ಶೆಫರ್ಡ್ ಕೂಡ ವಿಕೆಟ್ ಖಾತೆಗೆ ಹಾಕಿಕೊಂಡ್ರು. ಬೌಲಿಂಗ್ ಎಕಾನಮಿ ಕೂಡ 7ರ ಒಳಗೇ ಇತ್ತು.

ಫೈನಲ್ ಗೆ ಲಗ್ಗೆ ಇಟ್ಟಿರೋ ಆರ್ ಸಿಬಿಗೆ ಸಾಲು ಸಾಲು ಅಡ್ವಾಂಡೇಜ್!
ಯೆಸ್.. ಇಂಥಾದ್ದೊಂದು ಕಾರಣಕ್ಕಾಗಿರೋ ಆರ್​ಸಿಬಿ ಕ್ವಾಲಿಫೈಯರ್ 1ನಲ್ಲಿ ಆಡಿ ಫೈನಲ್​ಗೆ ಲಗ್ಗೆ ಇಡ್ಬೇಕು ಅಂತಾ ಆಸೆ ಪಟ್ಟಿದ್ದು. ಯಾಕಂದ್ರೆ ಈಗ ರೆಡ್ ಆರ್ಮಿಗೆ ಕಪ್ ಗೆಲ್ಲೋಕೆ ಸಾಲು ಸಾಲು ಅಡ್ವಾಂಡೇಜಸ್ ಸಿಗಲಿದೆ.

ಆರ್ ಸಿಬಿಗೆ ಬಿಗ್ ಅಡ್ವಾಂಟೇಜಸ್!  

ಕ್ವಾಲಿಫೈಯರ್ 1ನಲ್ಲೇ ಫಿನಾಲೆಗೆ ಲಗ್ಗೆ ಇಟ್ಟಿರೋ ಆರ್​ಸಿಬಿಗೆ ಸಾಕಷ್ಟು ಬೆನಿಫಿಟ್ಸ್ ಸಿಗುತ್ತೆ. ಲೀಗ್ ಹಂತದಲ್ಲಿ ಲಕ್ನೋ ವಿರುದ್ಧದ ಕೊನೇ ಮ್ಯಾಚಲ್ಲಿ 228 ರನ್​ಗಳನ್ನ ಚೇಸ್ ಮಾಡಿ ಕ್ವಾಲಿಫೈಯರ್ 1ಗೆ ಸೆಲೆಕ್ಟ್ ಆಗಿತ್ತು. ಸೋ ಅಲ್ಲಿ ಬಿಗ್ ಟಾರ್ಗೆಟ್​ನೇ ಚೇಸ್ ಮಾಡಿದ್ದು ದೊಡ್ಡ ಕಾನ್ಫಿಡೆನ್ಸ್ ನೀಡಿತ್ತು. ಇದೇ ಕಾರಣಕ್ಕೆ ಪಂಜಾಬ್ ವಿರುದ್ಧವೂ ಟಾಸ್ ಗೆಲ್ತಿದ್ದಂತೆ ಫಸ್ಟ್ ಫೀಲ್ಡಿಂಗ್​ನೆ ಸೆಲೆಕ್ಟ್ ಮಾಡಿಕೊಂಡ್ರು. ಎಷ್ಟೇ ಹೈಸ್ಕೋರ್ ಮಾಡಿದ್ರೂ ಚೇಸ್ ಮಾಡ್ತೇವೆ ಅನ್ನೋ ಮೂಡ್​ನಲ್ಲಿದ್ರು. ಬಟ್ ನಾವು ಬ್ಯಾಟಿಂಗ್ ಅಷ್ಟೇ ಅಲ್ಲ ಬೌಲಿಂಗ್​ನಲ್ಲೂ ಸೂಪರ್ ಡೂಪರ್ ಅನ್ನೋದನ್ನ ಪಂಜಾಬ್ ವಿರುದ್ಧ ಪ್ರೂವ್ ಮಾಡಿದ್ದಾರೆ. ಲಕ್ನೋ ವಿರುದ್ಧ ಕಾಸ್ಟ್ಲಿ ಆದ್ರೂ ನಮ್ಮ ಮಿಸ್ಟೇಕ್ಸ್​ನ ರಿಪೀಟ್ ಮಾಡಲ್ಲ ಅಂತಾ ಪಂಜಾಬ್​ ಮೇಲೆ ಪ್ರೂವ್ ಮಾಡಿದ್ರು.  ಸೋ ಪಂಜಾಬ್ ಪಡೆಯನ್ನ 101 ರನ್ ಗಳಿಗೆ ಆಲೌಟ್ ಮಾಡಿದ್ದು ಕಾನ್ಫಿಡೆನ್ಸ್ ಡಬಲ್ ಮಾಡಿದೆ. ಹಾಗೇ ಬೌಲಿಂಗ್ ಮತ್ತು ಬ್ಯಾಟಿಂಗ್​ನಲ್ಲಿ ಇಡೀ ಟೀಂ ಕಂಪ್ಲೀಟ್ ಆಗಿ ಫಿಟ್ ಌಂಡ್ ಫೈನ್ ಆಗಿದೆ. ಅಲ್ದೇ ಕ್ವಾಲಿಫೈಯರ್ 1ನಲ್ಲೇ ಗೆದ್ದಿರೋದರಿಂದ ಫೈನಲ್ ಪಂದ್ಯಕ್ಕೆ ಇನ್ನೂ ನಾಲ್ಕು ದಿನಗಳ ಟೈಂ ಸಿಗುತ್ತೆ. ಇಂಜುರಿ ಪ್ಲೇಯರ್ಸ್ ಗೆ ರಿಕವರಿಗೆ ಲಾಂಗ್ ಗ್ಯಾಪ್ ಆದಂಗಾಗುತ್ತೆ. ಪಂಜಾಬ್ ವಿರುದ್ಧದ ಪಂದ್ಯದಲ್ಲೂ ಹೊರಗುಳಿದಿದ್ದ ಟಿಮ್ ಡೇವಿಡ್ ಫೈನಲ್ ಮ್ಯಾಚ್ ವೇಳೆಗೆ ರಿಕವರ್ ಆಗ್ಬೋದು. ಅವ್ರೂ ಕೂಡ ಕಮ್ ಬ್ಯಾಕ್ ಮಾಡಿದ್ರೆ ತಂಡದ ಸ್ಟ್ರೆಂಥ್ ನೆಕ್ಸ್​​ಟ್ ಲೆವೆಲ್​​ನಲ್ಲಿರುತ್ತೆ. ಹಾಗೇ ಬ್ಯಾಕ್ ಟು ಬ್ಯಾಕ್ ವಿಕ್ಟರಿ ಮೂಲಕ ಫೈನಲ್​ಗೆ ಕಾಲಿಟ್ಟಿರೋದ್ರಿಂದ ಯಾವ ಟೆನ್ಷನ್ನೂ ಇರಲ್ಲ. ಹಾಗೇ ಟ್ರಾವೆಲ್ ಮಾಡ್ಬೇಕು ಅನ್ನೋ ಯಾವ ತಲೆಬಿಸಿಯೂ ಇರೋದಿಲ್ಲ. ಫೈನಲ್ ಮ್ಯಾಚ್ ವೇಳೆಗೆ ಕಂಪ್ಲೀಟ್ ರೆಸ್ಟ್ ತಗೊಂಡು ಪ್ರಾಕ್ಟೀಸ್ ಮಾಡಿ ಟೆನ್ಷನ್ ಫ್ರೀಯಾಗಿ ಕಣಕ್ಕಿಳಿಯಬಹುದು.  ಇಷ್ಟೆಲ್ಲಾ ಲಾಭಗಳು ಇದ್ಮೇಲೆ ಈಗಂತೂ ಆರ್​ಸಿಬಿ ಪ್ಲೇಯರ್ಸ್ ಌಂಡ್ ಫ್ಯಾನ್ಸ್ ನಿರಾಳರಾಗಿರ್ತಾರೆ. ಹಾಗೇ ಫೈನಲ್​ನಲ್ಲಿ ಕಾಂಪಿಟೇಟರ್ ಯಾರು ಅನ್ನೋದನ್ನ ಎದುರು ನೋಡ್ತಿದ್ದಾರೆ.

Shwetha M

Leave a Reply

Your email address will not be published. Required fields are marked *