ಆರ್​ಸಿಬಿ ಭವಿಷ್ಯ ಈ ತಂಡಗಳ ಮೇಲೆ ನಿಂತಿದ್ಯಾ? – ಬೆಂಗಳೂರು ತಂಡದ ಮುಂದೆ ಸಾಲು ಸಾಲು ಸವಾಲು! 

ಆರ್​ಸಿಬಿ ಭವಿಷ್ಯ ಈ ತಂಡಗಳ ಮೇಲೆ ನಿಂತಿದ್ಯಾ? – ಬೆಂಗಳೂರು ತಂಡದ ಮುಂದೆ ಸಾಲು ಸಾಲು ಸವಾಲು! 

ಫಸ್ಟ್ ಆಫ್​ನಲ್ಲಿ ಸತತ ಸೋಲು ಕಂಡ್ರೂ ಸೆಕೆಂಡ್ ಆಫ್ ನಲ್ಲಿ ಆರ್​ಸಿಬಿ ಥೂಫಾನ್ ನಂತೆ ಎದ್ದು ಬಂದಿದೆ. ಸತತ ನಾಲ್ಕು ಪಂದ್ಯಗಳಿಂದ ಎದುರಾಳಿ ಪಡೆ ವಿರುದ್ಧ ರಣರೋಚಕ ಗೆಲುವು ಸಾಧಿಸಿದೆ. ಪ್ಲೇ ಆಫ್​ಗೆ ಹೋಗೋದು ಕಷ್ಟಸಾಧ್ಯವಿದ್ರೂ ಆಸೆ ಮಾತ್ರ ಇನ್ನೂ ಜೀವಂತವಾಗಿದೆ. ಸದ್ಯ ಫಾಫ್ ನೇತೃತ್ವದ ಆರ್​ಸಿಬಿ ತಂಡವು 5 ಪಂದ್ಯಗಳನ್ನು ಗೆದ್ದುಕೊಂಡು 10 ಪಾಯಿಂಟ್ಸ್​ ಗಳಿಸಿದೆ. 10 ಪಾಯಿಂಟ್ಸ್ ಗಳಿಸಿರುವ ಆರ್​ಸಿಬಿ ಪಾಯಿಂಟ್ಸ್ ಟೇಬಲ್​​ನಲ್ಲಿ 7ನೇ ಸ್ಥಾನದಲ್ಲಿದೆ. ಖುಷಿಯ ವಿಚಾರ ಏನೆಂದರೆ ನೆಟ್ ರನ್​ ರೇಟ್​ ಸದ್ಯ ಚೆನ್ನಾಗಿಯೇ ಇಟ್ಟುಕೊಂಡಿರುವ ಆರ್​ಸಿಬಿ ಮುಂದೆ ಎರಡು ಪಂದ್ಯಗಳು ಎದುರಾಗಲಿದೆ. ಭಾನುವಾರ ರಿಷಬ್ ಪಂತ್ ನೇತೃತ್ವದ ಡಿಸಿ ವಿರುದ್ಧ ಆರ್​ಸಿಬಿ ಸೆಣಸಾಡಲಿದೆ. ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್​ ವಿರುದ್ಧ ಆರ್​ಸಿಬಿ ಸೆಣಸಾಟ ನಡೆಸಲಿದೆ. ಈ ಎರಡೂ ಪಂದ್ಯಗಳನ್ನು ಆರ್​ಸಿಬಿ ಗೆಲ್ಲಬೇಕು. ಆಗ ಮಾತ್ರ ಆರ್​ಸಿಬಿ ಪಾಯಿಂಟ್ಸ್ 14ಕ್ಕೇ ಏರಿಕೆ ಆಗಲಿದೆ. 14 ಅಂಕ ಗಳಿಸಿದರೂ ಆರ್​ಸಿಬಿ ಭವಿಷ್ಯ ಹೈದರಾಬಾದ್, ಚೆನ್ನೈ, ಡೆಲ್ಲಿ ಕ್ಯಾಪಿಟಲ್ಸ್, ಲಕ್ನೋ ಸೂಪರ್ ಪಂದ್ಯಗಳ ಫಲಿತಾಂಶವನ್ನು ಅವಲಂಭಿಸಿರುತ್ತದೆ.

ಇದನ್ನೂ ಓದಿ: ಧೋನಿ LOSS.. ಕೊಹ್ಲಿಗೆ LUCK – CSK ಸೋತಿದ್ದಕ್ಕೆ RCBಗೆ ಪ್ಲೇಆಫ್

RCB ಮುಂದೆ ಸವಾಲು! 

ಪಾಯಿಂಟ್ಸ್ ಟೇಬಲ್​ನಲ್ಲಿ ಮೊದಲ 2 ಸ್ಥಾನದಲ್ಲಿ ಕೊಲ್ಕತ್ತಾ ಹಾಗೂ ರಾಜಸ್ಥಾನ್​ ತಂಡಗಳು ಉಳಿಯೋದು ಬಹುತೇಕ ಕನ್​ಫರ್ಮ್​. ಇದೀಗ ಉಳಿದ 2 ಸ್ಥಾನಗಳಲ್ಲಿ ಪ್ಲೇ ಆಫ್​ಗೆ​ ಕ್ವಾಲಿಫೈ ಆಗೋ ರೇಸ್​ ಜೋರಾಗಿದೆ. 3 ಹಾಗೂ 4ನೇ ಸ್ಥಾನಕ್ಕಾಗಿ ಹಗ್ಗಜಗ್ಗಾಟ ತೀವ್ರಗೊಂಡಿದೆ. ಸನ್​ರೈಸರ್ಸ್​ ಹೈದ್ರಾಬಾದ್ ಮತ್ತು​ ಚೆನ್ನೈ ಸೂಪರ್​​ ಕಿಂಗ್ಸ್​,  ಸದ್ಯ 3 ಹಾಗೂ 4ನೇ ಸ್ಥಾನದಲ್ಲಿವೆ. ಈಗಾಗಲೇ 12 ಪಂದ್ಯಗಳನ್ನು ಆಡಿ 7 ಪಂದ್ಯಗಳನ್ನು ಗೆದ್ದಿರುವ ಹೈದರಾಬಾದ್ 14 ಅಂಕಗಳನ್ನು ಹೊಂದಿದೆ. ಇತ್ತ ಚೆನ್ನೈ 11 ಪಂದ್ಯಗಳನ್ನು ಆಡಿ 6 ರಲ್ಲಿ ಗೆದ್ದು 12 ಅಂಕಗಳೊಂದಿಗೆ ಪ್ಲೇ-ಆಫ್ ಲೆಕ್ಕಾಚಾರ ಹಾಕ್ತಿದೆ.  ಡಿಸಿ ಐದನೇ ಸ್ಥಾನದಲ್ಲಿದ್ರೆ ಎಲ್​ಎಸ್​ಜಿ 6ನೇ ಸ್ಥಾನದಲ್ಲಿದೆ. ಆಡಿದ 12 ಪಂದ್ಯಗಳಲ್ಲಿ 6 ಪಂದ್ಯ ಗೆದ್ದು 12 ಪಾಯಿಂಟ್ಸ್​ ಹೊಂದಿರೋ ಡೆಲ್ಲಿ ಕ್ಯಾಪಿಟಲ್ಸ್​, ಲಕ್ನೋ ಸೂಪರ್​ ಜೈಂಟ್ಸ್​ ತಂಡಗಳಿಗೆ ಇನ್ನೂ ಎರಡೆರಡು ಪಂದ್ಯಗಳು ಬಾಕಿ ಇವೆ. ಈ ಎರಡೂ ಪಂದ್ಯಗಳನ್ನ ಗೆದ್ರೆ ಪ್ಲೇ ಅಫ್​ ಕನಸು ಜೀವಂತವಾಗಿರಲಿದೆ. ಹೈದ್ರಾಬಾದ್​ ಹಾಗೂ ಚೆನ್ನೈ ಸೋಲು ಗೆಲುವಿನ ಮೇಲೆ ಭವಿಷ್ಯ ನಿರ್ಧಾರವಾಗಲಿದೆ. ಆರ್​ಸಿಬಿ ಕಥೆ ನೋಡೋದಾದ್ರೆ ಸತತ 4 ಪಂದ್ಯಗಳಲ್ಲಿ ಗೆದ್ದು ರಾಯಲ್​ ಕಮ್​ಬ್ಯಾಕ್​ ಮಾಡಿರುವ ಆರ್​​ಸಿಬಿ ಪಾಲಿಗೂ ಪ್ಲೇ ಆಫ್​ ಎಂಟ್ರಿಗೆ ಸಣ್ಣ ಅವಕಾಶವಿದೆ. ಉಳಿದ 2 ಪಂದ್ಯಗಳನ್ನೂ ಜಯಿಸಿ, ರನ್​ರೇಟ್ ಜಾಸ್ತಿ ಇದ್ದು, ಇತರೆ ತಂಡಗಳ ರನ್​ರೇಟ್ ಕಡಿಮೆ ಆದ್ರೆ ಆರ್​​ಸಿಬಿ ಪ್ಲೇ ಆಫ್​ಗೇರಲಿದೆ. ಪ್ರಮುಖವಾಗಿ ಆರ್​​ಸಿಬಿ ಎಂಟ್ರಿ ಕೊಡಬೇಕಂದ್ರೆ ಉಳಿದ ಪಂದ್ಯಗಳಲ್ಲಿ ಸಿಎಸ್​ಕೆ, ಹೈದ್ರಾಬಾದ್​, ಡೆಲ್ಲಿ ಹಾಗೂ ಲಕ್ನೋ ತಂಡಗಳು ಸೋಲಬೇಕಿದೆ.

ಇನ್ನು ಐಪಿಎಲ್​ನ ಬಾಸ್ ಅಂತಾನೇ ಕರೆಸಿಕೊಳ್ಳೋ ಕಿಂಗ್ ವಿರಾಟ್ ಕೊಹ್ಲಿ ಪ್ರತೀ ಸಲದಂತೆ ಈ ಸಲವೂ ಆರ್​ಸಿಬಿಯ ಆಪತ್​ಬಾಂಧವರಾಗಿದ್ದಾರೆ. ಏಕಾಂಗಿಯಾಗಿ ಹೋರಾಡಿ ತಂಡವನ್ನ ಗೆಲುವಿನ ದಡ ಮುಟ್ಟಿಸುತ್ತಿದ್ದಾರೆ. ಅದ್ರಲ್ಲೂ ಕಳೆದ ಪಂದ್ಯದಲ್ಲಿ ಧರ್ಮಶಾಲಾದಲ್ಲಿ ನಡೆದ ಪಂಜಾಬ್ ಕಿಂಗ್ಸ್ ಎದುರು ಭರ್ಜರಿ 92 ರನ್ ಚಚ್ಚಿದ್ರು. ಇದೇ ಅದ್ಭುತ ಇನ್ನಿಂಗ್ಸ್​ ಆರ್​ಸಿಬಿ ಗೆಲುವಿಗೆ ಕಾರಣವಾಗಿದೆ.

Shwetha M