4 ಪಂದ್ಯ ಗೆಲುವು.. 2 ಸವಾಲು – RCB ಪ್ಲೇ ಆಫ್ ಹಾದಿ ತೆರೆಯಿತಾ?
ಕೊಹ್ಲಿ LOGIC.. ಬೆಂಗಳೂರಿಗೆ CUP?

4 ಪಂದ್ಯ ಗೆಲುವು.. 2 ಸವಾಲು – RCB ಪ್ಲೇ ಆಫ್ ಹಾದಿ ತೆರೆಯಿತಾ?ಕೊಹ್ಲಿ LOGIC.. ಬೆಂಗಳೂರಿಗೆ CUP?

ಫಸ್ಟ್ ಆಫ್​ನಲ್ಲಿ ಬಾರೀ ನಿರಾಸೆ ಮೂಡಿಸಿದ್ದ ಆರ್​ಸಿಬಿ ಸೆಕೆಂಡ್ ಆಫ್​ನಲ್ಲಿ ಭರ್ಜರಿ ಕಮ್​ಬ್ಯಾಕ್ ಮಾಡಿದೆ. ಸತತ ನಾಲ್ಕು ಪಂದ್ಯಗಳಲ್ಲಿ ರಣರೋಚಕ ಜಯಭೇರಿ ಬಾರಿಸಿದೆ. ಅದ್ರಲ್ಲೂ ಗುರುವಾರದ ಪಂದ್ಯದಲ್ಲಿ ಪಂಜಾಬ್ ತಂಡವನ್ನ ಆಲ್​ಔಟ್ ಮಾಡಿದ ಆರ್​ಸಿಬಿ ಆಟಗಾರರು ಭರ್ಜರಿ 60 ರನ್​ಗಳ ಅಂತರದಿಂದ ಗೆದ್ದು  ಬೀಗಿದ್ದಾರೆ. ಈ ಮೂಲಕ ಪ್ಲೇ ಆಫ್​ ಕನಸನ್ನ ಇನ್ನೂ ಜೀವಂತವಾಗಿ ಇರಿಸಿಕೊಂಡಿದ್ದಾರೆ. ಇಲ್ಲಿ ಇನ್ನೊಂದು ಮುಖ್ಯವಾದ ವಿಚಾರ ಅಂದ್ರೆ ಮೇ 4ರಂದು ನಡೆದ ಗುಜರಾತ್ ವಿರುದ್ಧದ ಪಂದ್ಯದವರೆಗೂ ಪಾಯಿಂಟ್ಸ್ ಟೇಬಲ್​ನಲ್ಲಿ ಆರ್​ಸಿಇಬಿ 10ನೇ ಸ್ಥಾನದಲ್ಲಿತ್ತು. ಆದ್ರೆ ಗಿಲ್ ನೇತೃತ್ವದ ಜಿಟಿ ತಂಡವನ್ನ ಚಿನ್ನಸ್ವಾಮಿ ಅಂಗಳದಲ್ಲೇ ಸೋಲಿಸುವ ಮೂಲಕ 7ನೇ ಸ್ಥಾನಕ್ಕೆ ಜಿಗಿದಿತ್ತು. ಇದೀಗ ಪಂಜಾಬ್ ವಿರುದ್ಧದ ಪಂದ್ಯದಲ್ಲೂ ಗೆಲುವು ಸಾಧಿಸಿದ್ದು, ಪ್ಲೇ ಆಫ್​ ಚಾನ್ಸ್​ನ ದಿಢೀರ್ ಏರಿಕೆ ಮಾಡಿಕೊಂಡಿದೆ.

ಇದನ್ನೂ ಓದಿ: LSG ನಾಯಕತ್ವಗೆ ಕೆ‌ಎಲ್ ಗುಡ್ ಬೈ? – RCB ಗೆ ಬರ್ತಾರಾ ಕೆ.ಎಲ್ ರಾಹುಲ್?

ಪ್ಲೇ ಆಫ್ ಚಾನ್ಸ್ ದುಪ್ಪಟ್ಟು! 

ಐಪಿಎಲ್ ಸೀಸನ್ 17 ಆರಂಭದ ಪಂದ್ಯಗಳಲ್ಲಿ ಆರ್​ಸಿಬಿ ಪ್ರದರ್ಶನವೇನು ಚೆನ್ನಾಗಿರಲಿಲ್ಲ. ಪಂಜಾಬ್ ವಿರುದ್ಧದ ಗೆಲುವು ಬಿಟ್ರೆ ಸತತ 6 ಪಂದ್ಯಗಳನ್ನ ಕೈ ಚೆಲ್ಲಿಕೊಂಡಿತ್ತು. ಹೀಗಾಗಿ ಆರ್​ಸಿಬಿ ಪ್ಲೇ ಆಫ್ ಅವಕಾಶ ಜಸ್ಟ್ 3 ಪರ್ಸೆಂಟ್ ಅಷ್ಟೇ ಇತ್ತು. ಆದ್ರೆ ಗುರುವಾರದ ಗೆಲುವಿನಿಂದ ಆರ್‌ಸಿಬಿ ಪ್ಲೇ ಆಫ್‌ ಚಾನ್ಸ್‌ ಧಿಡೀರ್‌ ಏರಿಕೆಯಾಗಿದೆ. ನೋಡ ನೋಡುತ್ತಲೇ ಆರ್‌ಸಿಬಿ ಪ್ಲೇಆಫ್‌ ರೇಸ್‌‌ನಲ್ಲಿ ಮುಂದೆ ಮುಂದೆ ಹೋಗುತ್ತಿದೆ. ಧರ್ಮಶಾಲಾದಲ್ಲಿ ನಡೆದ 58ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನ ಆರ್​ಸಿಬಿ ಸೋಲಿಸಿದೆ. ಈ ಮೂಲಕ ಆರ್‌ಸಿಬಿ ಪ್ಲೇಆಫ್‌ ಹಾದಿ ಇನ್ನೂ ತೆರೆದಿದೆ. 3 ಪರ್ಸೆಂಟ್ ಇದ್ದ ಪ್ಲೇ ಆಫ್ ಚಾನ್ಸ್ ಇದೀಗ 16% ಗೆ ಏರಿಕೆಯಾಗಿದೆ. ಉಳಿದ ಎರಡು ಪಂದ್ಯಗಳನ್ನು ಉತ್ತಮ ರನ್‌ರೇಟ್‌‌ನೊಂದಿಗೆ ಗೆದ್ರೆ ಖಂಡಿತ ಆರ್‌ಸಿಬಿ ಒಂದು ಅವಕಾಶ ಇದ್ದೇ ಇರುತ್ತೆ. ಒಂದು ವೇಳೆ ಅಂದುಕೊಂಡಂತೆ 2 ಮ್ಯಾಚ್​ಗಳನ್ನ ಬಾರೀ ಅಂತರದಲ್ಲಿ ಗೆದ್ದು ಇತರೆ ತಂಡಗಳ ಸೋಲು ಗೆಲುವು ತಾಳೆ ಆದ್ರೆ ಆರ್‌ಸಿಬಿ ಪ್ಲೇಆಫ್‌ ಆಡೋದ್ರಲ್ಲಿ ಡೌಟೇ ಇಲ್ಲ. ಸದ್ಯ ಏಳನೇ ಸ್ಥಾನದಲ್ಲಿ ಇರುವ ಬೆಂಗಳೂರು ತಂಡ ನಾಲ್ಕನೇ ಸ್ಥಾನಕ್ಕೆ ಹೋಗಲಿದೆ ಎಂದು ನಿರೀಕ್ಷಿಸಲಾಗಿದೆ.

ಸದ್ಯದ ಪಾಯಿಂಟ್ಸ್ ಟೇಬಲ್​​ನಲ್ಲಿ ಕೋಲ್ಕತ್ತ ನೈಟ್ ರೈಡರ್ಸ್​, ರಾಜಸ್ಥಾನ್ ರಾಯಲ್ಸ್​ ಟಾಪ್​ನಲ್ಲಿವೆ. ಈ ಎರಡು ತಂಡಗಳು ಈಗಾಗಲೇ 16 ಅಂಕಗಳನ್ನು ಗಳಿಸಿರೋದ್ರಿಂದ ಪ್ಲೇ-ಆಫ್ ಹಾದಿ ಸುಗಮವಾಗಿದೆ. ಜೊತೆಗೆ ಹೈದರಾಬಾದ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್​ ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿ ಪ್ಲೇ-ಆಫ್ ಪ್ರವೇಶಿಸಲು ಪೈಪೋಟಿ ನಡೆಸುತ್ತಿವೆ. ಮತ್ತೊಂದೆಡೆ 2022ರಲ್ಲಿ ಚೊಚ್ಚಲ ಸೀಸನ್​ನಲ್ಲೇ ಚಾಂಪಿಯನ್ ಆಗಿದ್ದ ಗುಜರಾತ್ ಟೈಟನ್ಸ್ ತಂಡ ಪಾಯಿಂಟ್ಸ್ ಟೇಬಲ್‌ನಲ್ಲಿ ಕೊನೆಯ ಸ್ಥಾನದಲ್ಲಿದೆ. ಈ ತಂಡ ಪ್ಲೇ ಆಫ್‌ಗೆ ಬರೋ ಸಾಧ್ಯತೆ ಕಡಿಮೆ ಇದೆ. ಹಾಗೇ ಮುಂಬೈ ಇಂಡಿಯನ್ಸ್ ಹಾಗೂ ಪಂಜಾಬ್‌ ಕಿಂಗ್ಸ್‌ ಕೂಡ ರೇಸ್‌ನಿಂದ ಔಟ್‌ ಆಗಿದ್ದಾರೆ. ಆರ್‌‌ಸಿಬಿಯ ಹಾದಿ ಕಠಿಣವಾಗಿದ್ರೂ ತನ್ನ ಮುಂದಿನ 2 ಪಂದ್ಯಗಳನ್ನು ಗೆಲ್ಲಲೇಬೇಕಿದೆ. ಸದ್ಯ ಫಾಫ್ ಡುಪ್ಲೆಸಿಸ್ ನೇತೃತ್ವದ ಆರ್​ಸಿಬಿ ತಂಡವು ಆಡಿರುವ 12 ಪಂದ್ಯಗಳ ಪೈಕಿ 5 ಪಂದ್ಯಗಳನ್ನು ಗೆದ್ದಿದ್ದು 10 ಪಾಯಿಂಟ್ಸ್​ ಗಳಿಸಿದೆ. 10 ಪಾಯಿಂಟ್ಸ್ ಗಳಿಸಿರುವ ಆರ್​ಸಿಬಿ ಪಾಯಿಂಟ್ಸ್ ಟೇಬಲ್​​ನಲ್ಲಿ 7ನೇ ಸ್ಥಾನದಲ್ಲಿದೆ. ಖುಷಿಯ ವಿಚಾರ ಏನೆಂದರೆ ನೆಟ್ ರನ್​ ರೇಟ್​ ಉತ್ತಮವಾಗಿದೆ. ಮೇ 12ರಂದು ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಮೇ 18ರಂದು ಚೆನ್ನೈ ಸೂಪರ್ ಕಿಂಗ್ಸ್​ ವಿರುದ್ಧ ಆರ್​ಸಿಬಿ ಸೆಣಸಾಟ ನಡೆಸಲಿದೆ. ಈ ಎರಡೂ ಪಂದ್ಯಗಳನ್ನು ಆರ್​ಸಿಬಿ ಗೆಲ್ಲಬೇಕು. ಆಗ ಮಾತ್ರ ಆರ್​ಸಿಬಿ ಪಾಯಿಂಟ್ಸ್ 14ಕ್ಕೇ ಏರಿಕೆ ಆಗಲಿದೆ. 14 ಅಂಕ ಗಳಿಸಿದರೂ ಆರ್​ಸಿಬಿ ಭವಿಷ್ಯ ಹೈದರಾಬಾದ್, ಚೆನ್ನೈ, ಡೆಲ್ಲಿ ಕ್ಯಾಪಿಟಲ್ಸ್, ಲಕ್ನೋ ಸೂಪರ್ ಪಂದ್ಯಗಳ ಫಲಿತಾಂಶವನ್ನು ಅವಲಂಭಿಸಿರುತ್ತದೆ. ಫೈನಲಿ ಆರ್​ಸಿಬಿ ಪ್ಲೇ ಆಫ್​ಗೆ ಹೋಗ್ಬೇಕು ಅಂದ್ರೆ ಬರೀ ಆರ್​ಸಿಬಿ ಗೆದ್ರೆ ಸಾಕಾಗೋದಿಲ್ಲ. ಇತರೆ ತಂಡಗಳು ಸೋಲಬೇಕಾದ ಅವಶ್ಯತೆಯೂ ಇದೆ.

Shwetha M