ಚೋಕರ್ಸ್ ಹಣೆಪಟ್ಟಿ ಕಳಚಿದ 2025 – RCB, HH, SA.. ಮತ್ತೆಷ್ಟು ತಂಡಗಳು?
ಫುಟ್ ಬಾಲ್ ನಲ್ಲೂ ಕಪ್ ಗೆದ್ದವರೆಷ್ಟು?

ಚೋಕರ್ಸ್ ಹಣೆಪಟ್ಟಿ ಕಳಚಿದ 2025 – RCB, HH, SA.. ಮತ್ತೆಷ್ಟು ತಂಡಗಳು?ಫುಟ್ ಬಾಲ್ ನಲ್ಲೂ ಕಪ್ ಗೆದ್ದವರೆಷ್ಟು?

ಟೀಂ ಗೇಮ್ ಗಳಲ್ಲಿ ಎಷ್ಟೇ ಟ್ಯಾಲೆಂಟ್ ಇದ್ರೂ ಕೆಲವೊಂದು ಸಲ ಗೆಲ್ಲಬೇಕು ಅಂದ್ರೆ ಅದೃಷ್ಟ ಕೂಡ ಜೊತೆಗಿರಬೇಕಾಗುತ್ತೆ. ಇಲ್ಲದಿದ್ರೆ ವೈಯಕ್ತಿಕ ಸಾಧನೆಗಳು ಉತ್ತುಂಗಕ್ಕೇರಿದ್ರೂ ಟ್ರೋಫಿ ಅನ್ನೋದು ಮಾಯಾ ಜಿಂಕೆಯಾಗಿಬಿಡುತ್ತೆ. ಕ್ರಿಕೆಟ್ ಮತ್ತು ಫುಟ್ ಬಾಲ್ ಈ ಎರಡೂ ಗೇಮ್​ಗಳಲ್ಲಿ ಜಗತ್ತನ್ನೇ ಗೆದ್ದ ಆಟಗಾರರು ಒಂದೇ ಒಂದು ಟ್ರೋಫಿ ಗೆಲ್ಲೋಕೂ ವರ್ಷಾನುಗಟ್ಟಲೆ ಕಾಯ್ಬೇಕಾಗುತ್ತೆ. ಆದ್ರೆ ಈ ವರ್ಷ ಅಂತಹ ಆಟಗಾರರಿಗೆ ಗೆಲುವಿನ ಸಿಹಿ ಸಿಕ್ಕಿದೆ. ವರ್ಷಾನುಗಟ್ಟಲೆ ಮಾಡಿದ ಪರಿಶ್ರಮಕ್ಕೆ ಫಲ ಸಿಕ್ಕಿದೆ.

ಇದನ್ನೂ ಓದಿ : 27 ವರ್ಷಗಳ ಬಳಿಕ ICC ಟ್ರೋಫಿ ಬರ ನೀಗಿಸಿಕೊಂಡ ದಕ್ಷಿಣ ಆಫ್ರಿಕಾ!

ಅತಿರೇಕದ ಸಂಭ್ರಮವಿಲ್ಲ. ಎದುರಾಳಿ ತಂಡವನ್ನ ಚೇಡಿಸಿದವರೂ ಅಲ್ಲ. ಸನ್ನಡತೆಯೇ ತುಂಬಿರೋ ಸೌತ್ ಆಫ್ರಿಕಾ ತಂಡದಲ್ಲಿ ಪ್ರತಿಭಾವಂತ ಆಟಗಾರರೇ ಇದ್ರೂ ಚಾಂಪಿಯನ್ ಪಟ್ಟ ಮಾತ್ರ ಮರೀಚಿಕೆಯಾಗಿತ್ತು. ಇದೀಗ ಒಂದಲ್ಲ ಎರಡಲ್ಲ ಬರೋಬ್ಬರಿ 27 ವರ್ಷಗಳ ಬಳಿಕ ದಕ್ಷಿಣ ಆಫ್ರಿಕಾ ಐಸಿಸಿ ಟ್ರೋಫಿಗೆ ಮುತ್ತಿಕ್ಕಿದೆ. ಅತ್ಯದ್ಭುತವಾದ ಪ್ರದರ್ಶನ ನೀಡಿದ್ರೂ ಹಲವು ಟೂರ್ನಿಗಳ ಸೆಮಿಫೈನಲ್, ಫೈನಲ್ ತಲುಪಿ ಅಲ್ಲಿ ಪಂದ್ಯ ಕೈ ಚೆಲ್ಲಿ ಚೋಕರ್ಸ್ ಎಂದೇ ಲೇಬಲ್ ಆಗಿದ್ದ ಸೌತ್ ಆಫ್ರಿಕಾ ತಂಡ ಆಸ್ಟ್ರೇಲಿಯಾ ತಂಡವನ್ನ ಮಣಿಸಿ ವಿಶ್ವ ಟೆಸ್ಟ್ ಚಾಂಪಿಯನ್ ಆಗಿದೆ. ಕ್ರಿಕೆಟ್ ಕಾಶಿ ಅಂತಾನೇ ಕರೆಸಿಕೊಳ್ಳೋ ಇಂಗ್ಲೆಂಡ್​ನ ಲಾರ್ಡ್ಸ್ ಮೈದಾನದಲ್ಲಿ ಜೂನ್ 14ರಂದು ಟೆಂಬಾ ಬವುಮಾ ನಾಯಕತ್ವದಲ್ಲಿ ಟ್ರೋಫಿ ಗೆದ್ದು ಬೀಗಿದ್ದಾರೆ. 1998ರಲ್ಲಿ ಏಕದಿನ ಚಾಂಪಿಯನ್ಸ್‌ ಟ್ರೋಫಿ ಗೆದ್ದಿರುವುದನ್ನು ಹೊರತುಪಡಿಸಿ ದಕ್ಷಿಣ ಆಫ್ರಿಕಾ ಬಳಿಕ ಯಾವುದೇ ಐಸಿಸಿ ಟ್ರೋಫಿ ಗೆದ್ದಿರಲಿಲ್ಲ. ಪರಿಣಾಮ ಕಳೆದ ಎರಡೂವರೆ ದಶಕಗಳಿಂದ ದಕ್ಷಿಣಾ ಆಫ್ರಿಕಾ ಕ್ರಿಕೆಟ್‌ ತಂಡ ಚೋಕರ್ಸ್‌ ಹಣೆಪಟ್ಟಿ ಕಟ್ಟಿಕೊಂಡಿತ್ತು. ಇದೀಗ ಆ ಲೇಬಲ್​ನಿಂದ ಹೊರ ಬಂದಿದೆ.

2008ರಲ್ಲಿ ಐಪಿಎಲ್ ಆರಂಭವಾದಾಗ್ಲಿಂದಲೂ ಟೂರ್ನಿಯಲ್ಲಿ ಆಡ್ತಿರುವಂತ ಬಲಿಷ್ಠ ಟೀಂ ರಾಯಲ್ ಚಾಲೆಂಜರ್ಸ್ ಬೆಂಗಳೂರು. ಈ ತಂಡದ ಪರವೂ ಜಗದ್ವಿಖ್ಯಾತ ಆಟಗಾರರು ಕಣಕ್ಕಿಳಿದಿದ್ದಾರೆ. ಆದ್ರೆ ಸತತ 17 ವರ್ಷಗಳ ಕಾಲ ಒಂದೇ ಒಂದು ಕಪ್ ಗೆಲ್ಲೋಕೂ ಸಾಧ್ಯವಾಗಿರಲಿಲ್ಲ. ಆದ್ರೆ ಈ ವರ್ಷ ಕೊನೆಗೂ ಟೈಟಲ್ ಗೆದ್ದಿದ್ದಾರೆ. ಚೊಚ್ಚಲ ಟ್ರೋಫಿಯನ್ನ ಎತ್ತಿ ಹಿಡಿದಿದ್ದಾರೆ. ಜೂನ್ ಮೂರರಂದು ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಮ್​ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಪಂಜಾಬ್ ಮತ್ತು ಬೆಂಗಳೂರು ತಂಡಗಳು ಮುಖಾಮುಖಿಯಾಗಿದ್ವು. ಈ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 6 ರನ್​ಗಳಿಂದ ಪಂಜಾಬ್ ತಂಡವನ್ನ ಸೋಲಿಸಿ ಕಪ್ ಗೆದ್ದು ಬೀಗಿತ್ತು.. ಲಾಲಿಪಾಪ್ ಟೀಂ ಅನ್ನೋ ಟೀಕೆಗಳಿಂದಲೂ ಹೊರ ಬಂದಿತ್ತು.

ಆಸ್ಟ್ರೇಲಿಯಾದಲ್ಲಿ ನಡೆಯುವ ಬಿಗ್ ಬ್ಯಾಷ್ ಲೀಗ್‌ನಲ್ಲೂ ಇಂಥದ್ದೇ ತಂಡ ವಿನ್ ಆಗಿದೆ. 7 ವರ್ಷಗಳ ನಂತರ ಬಿಗ್ ಬ್ಯಾಷ್ ಲೀಗ್‌ನ ಫೈನಲ್ ತಲುಪಿದ್ದ ಹೋಬರ್ಟ್ ಹರಿಕೇನ್ಸ್ ತಂಡ ಚೊಚ್ಚಲ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಅದೂ ಕೂಡ 13 ವರ್ಷಗಳ ಬಳಿಕ ಚೊಚ್ಚಲ ಟ್ರೋಫಿ ಗೆಲ್ಲೋ ಮೂಲಕ. ಆಸ್ಟ್ರೇಲಿಯಾದಲ್ಲಿ ನಡೆದ ಬಿಗ್ ಬ್ಯಾಷ್ ಲೀಗ್‌ನ ಫೈನಲ್​ ಪಂದ್ಯದಲ್ಲಿ ಡೇವಿಡ್ ವಾರ್ನರ್ ನಾಯಕತ್ವದ ಸಿಡ್ನಿ ಥಂಡರ್ ಮತ್ತು ಹೋಬರ್ಟ್ ಹರಿಕೇನ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯವನ್ನು ಹೋಬರ್ಟ್ ಹರಿಕೇನ್ಸ್ ತಂಡ ಏಕಪಕ್ಷೀಯವಾಗಿ ಗೆದ್ದುಕೊಳ್ಳುವಲ್ಲಿ ಯಶಸ್ವಿಯಾಯಿತು.

ದಕ್ಷಿಣ ಆಸ್ಟ್ರೇಲಿಯಾ ತಂಡವು ಶೆಫೀಲ್ಡ್ ಶೀಲ್ಡ್ ಫೈನಲ್‌ನಲ್ಲಿ ಗೆಲ್ಲೋ ಮೂಲಕ 29 ವರ್ಷಗಳ ಪ್ರಶಸ್ತಿ ಬರಗಾಲಕ್ಕೆ ಅಂತ್ಯ ಹಾಡಿತ್ತು. ಮಾರ್ಚ್ 29 ರಂದು ನಡೆದ ಶೆಫೀಲ್ಡ್ ಶೀಲ್ಡ್ ಫೈನಲ್‌ನಲ್ಲಿ ಕ್ವೀನ್ಸ್‌ಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ  ಗೆದ್ದು ಬೀಗಿತ್ತು. ಇನ್ನು ಇಷ್ಟೇ ಅಲ್ದೇ ಪ್ಯಾರಿಸ್ ಸೇಂಟ್ ಜರ್ಮೈನ್ 1993ರ ಬಳಿಕ ಯುಸಿಎಲ್ ಅನ್ನು ಗೆದ್ದುಕೊಂಡಿತು. ಸೋ ಇದಿಷ್ಟು ಕ್ರಿಕೆಟ್ ಟೀಂಗಳ ಕಥೆಯಾದ್ರೆ ಫುಟ್​ಬಾಲ್​ನಲ್ಲೂ ಇಂಥದ್ದೇ ಅಚ್ಚರಿಯ ರಿಸಲ್ಟ್​ಗಳು ಬಂದಿದೆ.

ಇಡೀ ಜಗತ್ತಿನಲ್ಲೇ ಅತ್ಯಂತ ಪ್ರಸಿದ್ಧವಾದ ಕ್ರೀಡೆ ಅಂದ್ರೆ ಫುಟ್​ಬಾಲ್. ಕಾಲ್ಚೆಂಡಿನಾಟದಲ್ಲೂ ಕೂಡ ಸಾಕಷ್ಟು ತಂಡಗಳಿಗೆ ಟ್ರೋಫಿ ಅನ್ನೋದು ಮರೀಚಿಕೆಯಾಗಿತ್ತು. ಆದ್ರೆ ಈ ವರ್ಷ ಇಂತಹ ಹಲವು ತಂಡಗಳು ಚೊಚ್ಚಲ ಟ್ರೋಫಿಗೆ ಮುಕ್ಕಿಕ್ಕಿದೆ. ಸ್ಪೆಷಾಲಿಟಿ ಅಂದ್ರೆ 100 ವರ್ಷಗಳ ಬಳಿಕ ಕಪ್ ಗೆದ್ದವರೂ ಇದ್ದಾರೆ.

ಫುಟ್ ಬಾಲ್ ನಲ್ಲೂ ನೀಗಿದ ಕಪ್ ಬರ!

ಕ್ರಿಸ್ಟಲ್ ಪ್ಯಾಲೇಸ್ ತಂಡವು ಮ್ಯಾಂಚೆಸ್ಟರ್ ಸಿಟಿಯನ್ನು ಸೋಲಿಸಿ ವಿನ್

164 ವರ್ಷಗಳ ಇತಿಹಾಸದಲ್ಲೇ ಮೊದಲ ಪ್ರಮುಖ ಟ್ರೋಫಿ ಗೆಲುವು

ಜಿಯೋರ್ಡಿ ಪಾರ್ಟಿಯಲ್ಲಿ ಡ್ಯಾನ್ ಬರ್ನ್ ಮತ್ತು ಅಲೆಕ್ಸಾಂಡರ್ ಇಸಾಕ್

ನ್ಯೂಕ್ಯಾಸಲ್ ಯುನೈಟೆಡ್ ತಂಡವು ತನ್ನ 70 ವರ್ಷಗಳ ಬಳಿಕ ದೇಶೀಯ ಟ್ರೋಫಿ

ಮ್ಯಾಂಚೆಸ್ಟರ್ ಯುನೈಟೆಡ್ ವಿರುದ್ಧ ಟೊಟೆನ್ಹ್ಯಾಮ್ ಹಾಟ್ಸ್‌ ಪರ್ ಗೆಲುವು

ಅರ್ಜೆಂಟೀನಾದಲ್ಲಿ ಐತಿಹಾಸಿಕ ತಂಡವಾದ ಪ್ಲಾಟೆನ್ಸ್ 120 ವರ್ಷಗಳ ಬಳಿಕ

ಮೇ ತಿಂಗಳಲ್ಲಿ ಜೆಂಕ್ ವಿರುದ್ಧ ಯೂನಿಯನ್ ಸೇಂಟ್-ಗಿಲ್ಲೊಯಿಸ್ ತಂಡ ವಿನ್

Shantha Kumari

Leave a Reply

Your email address will not be published. Required fields are marked *