RCB ಪವರ್ ಹಿಟ್ಟರ್ ಟಿಮ್ ಡೇವಿಡ್ – ಡೆತ್ ಓವರ್ NOT OUT ಕಿಂಗ್

RCB ಪವರ್ ಹಿಟ್ಟರ್ ಟಿಮ್ ಡೇವಿಡ್ – ಡೆತ್ ಓವರ್ NOT OUT ಕಿಂಗ್

18ನೇ ಸೀಸನ್ ಐಪಿಎಲ್​ನಲ್ಲಿ ಆರ್​ಸಿಬಿಯ ಸಕ್ಸಸ್​ಫುಲ್ ಜರ್ನಿಯಲ್ಲಿ ದಿ ಬೆಸ್ಟ್ ಫಿನಿಶರ್ ರೋಲ್ ಪ್ಲೇ ಮಾಡ್ತಿರೋದು ಟಿಮ್ ಡೇವಿಡ್. ಬ್ಯಾಟಿಂಗ್​ಗೆ ಅವಕಾಶ ಸಿಕ್ಕಾಗ್ಲೆಲ್ಲಾ ತಮ್ಮ ಪವರ್ ಹಿಟ್ಟಿಂಗ್ ಸ್ಕಿಲ್ ಪ್ರೂವ್ ಮಾಡಿದ್ದಾರೆ. ಹೀಗಾಗಿ ಮುಂದಿನ ಪಂದ್ಯಗಳಲ್ಲೂ ಅವ್ರಿಂದ ಗೇಮ್ ಚೇಂಜಿಂಗ್ ಪರ್ಫಾಮೆನ್ಸ್ ನಿರೀಕ್ಷೆ ಮಾಡ್ಬೋದು.

ಇದನ್ನೂ ಓದಿ : ಪಡಿಕ್ಕಲ್‌ ಗೆ ಕಾಡಿದ ಅನಾರೋಗ್ಯ.. ಕ್ರಿಕೆಟ್‌ ಬಿಡಲು ನಿರ್ಧರಿಸಿದ್ರಾ RCB ಬಾಯ್‌?

ಆರ್​ಸಿಬಿ ರೀ ಸ್ಟಾರ್ಟ್ ಟೈಮಲ್ಲಿ ಈಗಾಗ್ಲೇ ಸಾಕಷ್ಟು ಪ್ಲೇಯರ್ಸ್ ತಮ್ಮ ರಾಷ್ಟ್ರೀಯ ಪಂದ್ಯಗಳಿಗಾಗಿ ತಮ್ಮ ತಮ್ಮ ದೇಶಗಳಿಗೆ ವಾಪಸ್ ಆಗ್ತಿದ್ದಾರೆ. ಆರ್​ಸಿಬಿಯಿಂದಲೂ 5 ಪ್ಲೇಯರ್ಸ್ ಈ ಲಿಸ್ಟ್​ನಲ್ಲಿ ಇದ್ದಾರೆ. ಬಟ್ ಒಂದು ನೆಮ್ಮದಿಯ ವಿಚಾರ ಅಂದ್ರೆ ಟಿಮ್ ಡೇವಿಡ್ ಈ ಸೀಸನ್​ನ ಎಲ್ಲಾ ಪಂದ್ಯಗಳನ್ನೂ ಆಡ್ತಾರೆ. ಯಾಕಂದ್ರೆ ಡಬ್ಲ್ಯೂಟಿಸಿ ಫೈನಲ್​ಗಾಗಿ ಆಸ್ಟ್ರೇಲಿಯಾ ತಂಡ ಇವ್ರನ್ನ ಸೆಲೆಕ್ಟ್ ಮಾಡಿಲ್ಲ. ಪ್ರಸ್ತುತ ಸೀಸನ್​ನಲ್ಲಿ ಆರ್​ಸಿಬಿಯ ಈ ಸಕ್ಸಸ್​ಫುಲ್ ಜರ್ನಿಗೆ ಟಿಮ್ ಡೇವಿಡ್ ಕೂಡ ಕಾರಣ. ಮಿಡಲ್ ಆರ್ಡರ್ ಮತ್ತು ಡೆತ್ ಓವರ್​ಗಳಲ್ಲಿ ನಾಕೌಟ್ ಇನ್ನಿಂಗ್ಸ್ ಆಡುವ ಮೂಲಕ ಗೇಮ್ ಚೇಂಜಿಂಗ್ ಪರ್ಫಾಮೆನ್ಸ್ ಕೊಡ್ತಿದ್ದಾರೆ. ಅದ್ರಲ್ಲೂ ಸಿಕ್ಸ್, ಫೋರ್ ಗಳ ಮೂಲಕವೇ ಎದುರಾಳಿ ಬೌಲರ್ ಗಳನ್ನ ಡೀಲ್ ಮಾಡ್ತಿದ್ದಾರೆ.  ಮುಂಬೈ ಇಂಡಿಯನ್ಸ್ ಪರ ಐಪಿಎಲ್ ಕರಿಯರ್ ಆರಂಭಿಸಿದ್ದ ಟಿಮ್ ಡೇವಿಡ್ ಈ ಸೀಸನ್​ಗೂ ಮುನ್ನ 3 ಕೋಟಿ ರೂಪಾಯಿಗೆ ಆರ್​ಸಿಬಿ ಸೇರಿದ್ರು. ಅವ್ರ ಸಂಭಾವನೆಗಿಂತ್ಲೂ ಚೆನ್ನಾಗೇ ಪ್ರದರ್ಶನ ನೀಡ್ತಿದ್ದಾರೆ.

ಡೇಂಜರಸ್ ಟಿಮ್ ಡೇವಿಡ್!

ಎದುರಾಳಿ ತಂಡ                              ರನ್               ಬಾಲ್

ಚೆನ್ನೈ                                         22 *                 8

ಗುಜರಾತ್                                   32                   18

ಮುಂಬೈ                                      1*                   1

ದೆಹಲಿ                                       37*                  20

ಪಂಜಾಬ್                                   50*                  26

ರಾಜಸ್ಥಾನ                                   23                  15

ದೆಹಲಿ                                      19*                   5

ಚೆನ್ನೈ                                       02*                   03

ಟಿಮ್ ಡೇವಿಡ್ ಅವರ ಬ್ಯಾಟಿಂಗ್ ಹಾಗೇ ರನ್ಸ್ ನೋಡಿದ್ರೆ ಸಿಎಸ್​ಕೆ ವಿರುದ್ಧದ ಮ್ಯಾಚ್ ಬಿಟ್ರೆ ಉಳಿದೆಲ್ಲಾ ಕಡೆಯೂ 100+ ಸ್ಟ್ರೈಕ್​ರೇಟ್ ಹೊಂದಿದ್ದಾರೆ. ಓವರ್​ ಆಲ್ ಈ ಸೀಸನ್​ನಲ್ಲಿ 193ರ ಸ್ಟ್ರೈಕ್​ರೇಟ್​ನಲ್ಲಿ 186 ರನ್ ಕಲೆಹಾಕಿದ್ದಾರೆ. ಅದೆಲ್ಲಕ್ಕಿಂತ ಮೋಸ್ಟ್ ಇಂಪಾರ್ಟೆಂಟ್ ಅಂದ್ರೆ 11 ಮ್ಯಾಚ್​ಗಳ ಪೈಕಿ 8 ಪಂದ್ಯಗಳಲ್ಲಿ ಬ್ಯಾಟ್ ಬೀಸೋ ಅವಕಾಶ ಸಿಕ್ಕಿದೆ. ಈ ವೇಳೆ ಗುಜರಾತ್ ವಿರುದ್ಧದ ಪಂದ್ಯದಲ್ಲಿ ಔಟ್ ಆಗಿದ್ದು ಹಾಗೇ ರಾಜಸ್ಥಾನ ವಿರುದ್ಧದ ಪಂದ್ಯದಲ್ಲಿ ರನ್ ಔಟ್ ಆಗಿದ್ದು ಬಿಟ್ರೆ ಉಳಿದ ಆರು ಪಂದ್ಯಗಳಲ್ಲೂ ನಾಟೌಟ್ ಆಗಿ ಉಳಿದಿದ್ದಾರೆ. ಆರ್​ಸಿಬಿ ಪಾಲಿಗೆ ದಿ ಗ್ರೇಟ್ ಫಿನಿಶರ್ ಅಂತಾ ಕರೆಸಿಕೊಳ್ತಿರೋ ಟಿಮ್ ಡೇವಿಡ್ ತುಂಬಾ ಕ್ರೂಶಿಯಲ್ ಟೈಮಲ್ಲೇ ಪವರ್ ಹಿಟ್ಟಿಂಗ್ ಬ್ಯಾಟಿಂಗ್ ಪ್ರದರ್ಶನ ನೀಡ್ತಿದ್ದಾರೆ. ಹೀಗಾಗಿ ಆರ್​ಸಿಬಿ ಫ್ಯಾನ್ಸ್ ಹಾರ್ಟಲ್ಲಿ ಈಗಾಗ್ಲೇ ಟಿಮ್ ಡೇವಿಡ್ ಜಾಗ ಮಾಡ್ಕೊಂಡಾಗಿದೆ.

Shantha Kumari

Leave a Reply

Your email address will not be published. Required fields are marked *