ತವರಿನಲ್ಲಿ 3 ಮ್ಯಾಚ್.. ಹೊರಗೆ 2 ಮ್ಯಾಚ್ – ಆರ್ ಸಿಬಿ ಪ್ಲೇಆಫ್ ಗೆ ಇನ್ನೆರಡೇ ಹೆಜ್ಜೆ!

ಈ ಸೀಸನ್ನಲ್ಲಿ ಬೆಂಗಳೂರು ತಂಡ 9 ಪಂದ್ಯಗಳನ್ನ ಆಡಿದ್ದು ಅದ್ರಲ್ಲಿ 6ರಲ್ಲಿ ಗೆಲುವು ಕಂಡಿದೆ. ಮೂರರಲ್ಲಿ ಸೋಲನುಭವಿಸಿದೆ. ತವರಿನಿಂದ ಆಚೆ ಆಡಿರುವ ಎಲ್ಲಾ ಪಂದ್ಯಗಳನ್ನು ಗೆದ್ದು, ತವರಿನಲ್ಲೇ ಸತತ ಮೂರು ಸೋಲು ಕಂಡಿತ್ತು. ಆದರೆ ಗುರುವಾರ ಚಿನ್ನಸ್ವಾಮಿಯಲ್ಲಿ ಆರ್‌ಆರ್ ವಿರುದ್ಧ ಗೆದ್ದು ಬೀಗಿದೆ. ಈ ಮೂಲಕ ಪಾಯಿಂಟ್ಸ್ ಟೇಬಲ್‌ನಲ್ಲಿ ನಾಲ್ಕನೇ ಸ್ಥಾನದಿಂದ ಮೂರನೇ ಸ್ಥಾನಕ್ಕೆ ಏರಿದೆ. ಲೀಗ್ ಹಂತದಲ್ಲಿ ಇನ್ನು ಐದು ಪಂದ್ಯಗಳು ಬಾಕಿ ಇದ್ದು ನೆಕ್ಸ್ಟ್ ಟಾರ್ಗೆಟ್ ಡೆಲ್ಲಿ ಕ್ಯಾಪಿಟಲ್ಸ್!
ಇದನ್ನೂ ಓದಿ : 4 ಓವರ್.. 14 ಡಾಟ್ಸ್.. 4 ವಿಕೆಟ್.. ಹಳಿ ತಪ್ಪಿದ್ದ RCB ಗೆಲ್ಲಿಸಿದ್ದೇ JOSH – ಗೇಮ್ ಚೇಂಜರ್ ಹೇಜಲ್ ವುಡ್
ಆರ್ಸಿಬಿಗೆ ನೆಕ್ಸ್ಟ್ ಮ್ಯಾಚ್ ಇರೋದು ಡೆಲ್ಲಿ ಕ್ಯಾಪಿಟಲ್ಸ್.. ಏಪ್ರಿಲ್ 27 ಅಂದ್ರೆ ಇದೇ ಭಾನುವಾರ. ಈ ಪಂದ್ಯವನ್ನ ಆರ್ಸಿಬಿ ಗೆಲ್ಲೋದು ತುಂಬಾನೇ ಮುಖ್ಯ ಆಗುತ್ತೆ. ಯಾಕಂದ್ರೆ ಈಗಾಗ್ಲೇ ಡೆಲ್ಲಿ ತಂಡ ಚಿನ್ನಸ್ವಾಮಿಯಲ್ಲಿ ಬೆಂಗಳೂರು ತಂಡವನ್ನ ಸೋಲಿಸಿದೆ. ಈ ಸೋಲಿಗೆ ರಿವೇಂಜ್ ತೀರಿಸಿಕೊಳ್ಳಬೇಕು. ಹಾಗೇ ಪಾಯಿಂಟ್ಸ್ ಟೇಬಲ್‌ನಲ್ಲಿ ಎರಡನೇ ಸ್ಥಾನದಲ್ಲಿರುವ ಡೆಲ್ಲಿಗೆ ಸೋಲಿನ ಶಾಕ್ ಕೊಡೋ ಮೂಲಕ ಆರ್ಸಿಬಿ ಪವರ್ ಪ್ಲೇ ಹಾದಿಯನ್ನ ಸುಗಮ ಮಾಡಿಕೊಳ್ಳಬಹುದು.
ಸಾಮಾನ್ಯವಾಗಿ ಪ್ಲೇಆಫ್‌ನಲ್ಲಿ ಸ್ಥಾನ ಪಡೆಯಲು ಯಾವುದೇ ತಂಡಕ್ಕೆ 16 ಅಂಕಗಳು ಬೇಕಾಗುತ್ತವೆ. ಆದ್ದರಿಂದ ಐಪಿಎಲ್ 2025 ಪ್ಲೇಆಫ್‌ಗೆ ತಲುಪಲು, ಆರ್‌ಸಿಬಿ ಉಳಿದ 5 ಪಂದ್ಯಗಳಲ್ಲಿ 2 ಪಂದ್ಯಗಳನ್ನು ಗೆಲ್ಲಬೇಕಾಗುತ್ತದೆ. ಅಷ್ಟೇ ಅಲ್ಲದೆ ಉತ್ತಮ ನೆಟ್ ರನ್ ರೇಟ್ ಅನ್ನು ಕಾಯ್ದುಕೊಳ್ಳುವುದು ಕೂಡ ತುಂಬಾನೇ ಮುಖ್ಯ ಆಗುತ್ತೆ. ಪಾಯಿಂಟ್ಸ್ ಟೇಬಲ್‌ನಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಪಂಜಾಬ್ ಕಿಂಗ್ಸ್, ಲಕ್ನೋ ಸೂಪರ್ ಜೈಂಟ್ಸ್, ತಂಡಗಳು ಸಹ ಹಿಂದೆಯೇ ಇರುವುದರಿಂದ ಆರ್‌ಸಿಬಿ ಉತ್ತಮ ನೆಟ್ ರನ್ ರೇಟ್ ಕಾಯ್ದುಕೊಳ್ಬೇಕು.
ಸದ್ಯ 9 ಮ್ಯಾಚ್ ಆಡಿರೋ ಆರ್ಸಿಬಿಗೆ ಲೀಗ್ ಹಂತದಲ್ಲಿ 5 ಪಂದ್ಯಗಳನ್ನು ಬಾಕಿಯಿವೆ. ಮೂರು ಪಂದ್ಯಗಳು ತವರಿನಲ್ಲಿ ಹಾಗೂ ಉಳಿದ ಎರಡು ಪಂದ್ಯಗಳನ್ನು ತವರಿನಿಂದ ಆಚೆ ಆಡಲಿದೆ. ಏಪ್ರಿಲ್ 27ರಂದು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದ ದೆಹಲಿಯಲ್ಲಿ 10ನೇ ಪಂದ್ಯ ಆಡಿದ್ರೆ ಮೇ 3ರಂದು ಬೆಂಗಳೂರಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ತಮ್ಮ 11ನೇ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ. ಹಾಗೇ ಮೇ 9ರಂದು ಲಕ್ನೋ ಸೂಪರ್ ಜೇಂಟ್ಸ್ ವಿರುದ್ಧ ಏಕನಾ ಸ್ಟೇಡಿಯಮ್ನಲ್ಲಿ 12 ಪಂದ್ಯ ಆಡಲಿದೆ. ಮೇ 13ರಂದು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಬೆಂಗಳೂರಿನಲ್ಲೇ ಪಂದ್ಯ ನಡೆಯಲಿದೆ. ಮೇ 17ರಂದು ಆರ್‌ಸಿಬಿ ತವರಿನಲ್ಲೇ ಹಾಲಿ ಚಾಂಪಿಯನ್ ಕೆಕೆಆರ್ ವಿರುದ್ಧ ಸೆಣಸಲಿದೆ. ಸೋ ಐದು ಮ್ಯಾಚ್ಗಳಲ್ಲಿ ಎರಡಕ್ಕಿಂತ ಹೆಚ್ಚು ಮ್ಯಾಚ್ ಗೆದ್ರೆ ಡೈರೆಕ್ಟ್ ಪ್ಲೇಆಫ್ ಪಕ್ಕಾ ಆಗಿದೆ.
ಸದ್ಯ ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡರಲ್ಲೂ ಸೂಪರ್ ಸ್ಟ್ರಾಂಗ್ ಆಗಿ ಕಾಣ್ತಿರೋ ಆರ್ಸಿಬಿ ಮುಂದಿನ ಪಂದ್ಯಗಳಲ್ಲೂ ಗೆಲ್ಲೋ ಹೋಪ್ಸ್ ಮೂಡಿಸಿದೆ. ಅದ್ರಲ್ಲೂ ಕಿಂಗ್ ವಿರಾಟ್ ಕೊಹ್ಲಿ ಒಳ್ಳೆ ಫಾರ್ಮ್ನಲ್ಲಿದ್ದು ಆರೆಂಜ್ ಕ್ಯಾಪ್ ರೇಸ್ನಲ್ಲಿ ಸೆಕೆಂಡ್ ಪ್ಲೇಸ್ ನಲ್ಲಿದ್ದಾರೆ. ಜಿಟಿ ಆಟಗಾರ ಸಾಯಿ ಸುದರ್ಶನ್ ನಂಬರ್ 1 ಪ್ಲೇಸ್ನಲ್ಲಿದ್ದಾರೆ. ಎರಡನೇ ಸ್ಥಾನದಲ್ಲಿ ಕೊಹ್ಲಿ ಇದ್ದಾರೆ.

ನೋಡಿರಿ

